• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಮ್ಮ ಇಂಜಿನಿಯರುಗಳಿಗೆ ದೊಡ್ಡ ನಮಸ್ಕಾರ

By * ಎಸ್ಕೆ. ಶಾಮಸುಂದರ
|

Sir M Vishveshvaraya
ಕಳೆದ ವರ್ಷ 2011ರ ಸೆಪ್ಟೆಂಬರ್ 15ರಂದು, ಭಾರತ ಕಂಡ ಅತ್ಯಂತ ಮೇಧಾವಿ ಇಂಜಿನಿಯರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರ ಜನ್ಮ ದಿನದಂದು ಪ್ರಕಟವಾದ ಲೇಖನವನ್ನು ಓದುಗರಿಗಾಗಿ ಮತ್ತೆ ಪ್ರಸ್ತುತಪಡಿಸುತ್ತಿದ್ದೇವೆ. ಇದೇ ನೆಪದಲ್ಲಿ, ಸರ್ ಎಂವಿಯನ್ನು ಮತ್ತೆ ನೆನೆಯೋಣ.

ಈ ವರ್ಷದ ಇಂಜಿನಿಯರ್ಸ್ ದಿನಾಚರಣೆ ನಿಮಿತ್ತ ಒನ್ ಇಂಡಿಯ ಕನ್ನಡ ವಿಶೇಷ ಏನು ಸಾರ್ ಎಂದು ನಮ್ಮ ಆಫೀಸ್ ಬಾಯ್ ಮಂಜುನಾಥ ರೆಡ್ಡಿ ಬುಧವಾರ ಸಂಜೆ ಮನೆಗೆ ಹೋಗುವಾಗ ಕೇಳಿದ್ದ. ಓ! ಹೌದಲ್ಲ, ನೋಡೋಣ ರೆಡ್ಡಿ ಎಂದು ಹೇಳಿ, ನಾಳೆಯ ಮಹತ್ವವನ್ನು ಇಂದೇ ನೆನಪಿಸಿದ್ದಕ್ಕೆ ಅವನಿಗೆ ಮನಸ್ಸಿನಲ್ಲೇ ಒಂದು ಥ್ಯಾಂಕ್ಸ್ ಹೇಳಿಕೊಂಡು ಆಟೋ ಹತ್ತಿದ್ದೆ.

ಗುರುವಾರ ಬೆಳಗಾಮುಂಚೆ ಎದ್ದು ಇಂಜಿನಿಯರ್ಸ್ ಡೇ ಮಾಹಿತಿಗೆ ಗೂಗಲ್ ತಡಕಾಡಿದೆ. ಐಟಿ ಇಂಜಿನಿಯರುಗಳೇ ಕಂಡುಹಿಡಿದ ಇಂಟರ್ ನೆಟ್ಟಿನಲ್ಲಿ ಅಂಥದೇನೂ ಮಾಹಿತಿ ಸಿಗಲಿಲ್ಲ. ವಿಕಿಪೀಡಿಯದಲ್ಲಿ ಒಂದಿಷ್ಟು ಮಾಹಿತಿ ಶೇಖರವಾಗಿದ್ದು, ಅದರ ಪ್ರಕಾರ ಕೆಲವೇ ದೇಶಗಳಲ್ಲಿ ಈ ದಿನಾಚರಣೆಯನ್ನು ಆಚರಿಸಲಾಗುತ್ತದಂತೆ.

ಅರ್ಜೆಂಟೀನಾ, ಮೆಕ್ಸಿಕೊ, ಕೊಲಂಬಿಯ, ಇರಾನ್ ಮತ್ತು ಭಾರತದಲ್ಲಿ ಮಾತ್ರ ಇಂಜಿನಿಯರ್ಸ್ ಡೇ ಆಚರಿಸಲಾಗುತ್ತದೆ ಎಂಬ ಸಾಲುಗಳನ್ನು ಓದಿ ಅವಾಕ್ಕಾದೆ. ಎಲಾ ಇವನಾ, ವ್ಯಾಲಂಟೈನ್ಸುಗಳಿಗೆ ಇರೋ ಇಂಪಾರ್ಟೆನ್ಸ್ ಇಂಜಿನಿಯರುಗಳಿಗೆ ಇಲ್ಲವಾಯಿತೇ ಎಂದು ದಂಗಾದೆ. ಈ ಬಗ್ಗೆ ಸ್ವತಃ BE, ME, MSಗಳೇ ತಲೆಕೆಡಿಸಿಕೊಳ್ಳದೇ ಇರೋವಾಗ BA ಪರೀಕ್ಷೆ ಬರೆದಿರೋ ನನಗ್ಯಾಕೆ ತಲೆಬಿಸಿ ಅಂತ ಸುಮ್ಮನಾಗಿಬಿಟ್ಟೆ.

ಕರ್ನಾಟಕ ಸರಕಾರಿ ಕನ್ನಡ ನಿಘಂಟಿನ ಪ್ರಕಾರ ಇವತ್ತು ಸೆ. 15 ಗುರುವಾರ ಅಭಿಯಂತರ ದಿನಾಚರಣೆ. ಎಂಥ ಕನ್ನಡಪ್ರೇಮಿಗೂ ಅಭಿಯಂತರ ಪದಬಳಕೆ ವಿಚಿತ್ರವಾಗಿ ಕೇಳಿಸುತ್ತದೆ. 1983ರಲ್ಲಿ ಸುಬೇದಾರ್ ಛತ್ರಂ ರಸ್ತೆಯ ಗಂಗಾರಾಂ ಕಟ್ಟಡ ಬಿದ್ದು ನೂರಾರು ಜನ ಸತ್ತಾಗ 'ಮುಂಜಾನೆ' ದಿನಪತ್ರಿಕೆಯಲ್ಲಿ ನನ್ನ ಒಡನಾಡಿಗಳು "ಈ ಕಟ್ಟಡವನ್ನು ಕಟ್ಟಿದ್ದು ಅಭಿಯಂತರ ಅಲ್ಲ, ಅರಿಭಯಂಕರ" ಎಂದು ಗೇಲಿ ಮಾಡುತ್ತಿದ್ದದ್ದು ನೆನಪಾಯಿತು.

ನಮ್ಮ ಒನ್ ಇಂಡಿಯ ಕಾರ್ಪೋರೇಟ್ ಕಚೇರಿಯಲ್ಲಿ 130 ಜನ ಸಿಬ್ಬಂದಿ ಇದ್ದಾರೆ. ಅವರಲ್ಲಿ ಇಂಜಿನಿಯರುಗಳ ಲೆಕ್ಕ 26. ನಾನು ಬರೆದ ಕನ್ನಡ ಅಕ್ಷರಗಳನ್ನು ಅಂತರ್ ಜಾಲದಲ್ಲಿ ನೀವೀಗ ಓದುತ್ತಿದ್ದರೆ ಅದಕ್ಕೆ ಇಂಥ ಇಂಜಿನಿಯರುಗಳೇ ಕಾರಣ. ಸರಿ, ಅವರಿಗೆಲ್ಲ ಒಂದು ಥ್ಯಾಂಕ್ಸ್ ರೂಪದಲ್ಲಿ ಗ್ರೀಟಿಂಗ್ಸ್ ಕಳಿಸೋದಕ್ಕೆ ನಮ್ಮ ಕಚೇರಿಯ ಫೇಸ್ ಬುಕ್ ಯಮ್ಮರ್ ಪೇಜ್ ತೆಗೆದೆ. https://www.yammer.com/

All,

India is one among very few DEVELOPED countries which enjoys a dedicated a day to salute its Engineers.

Each country have their own day to celebrate the day. India Engineers day is celebrated on 15th September every year.

The day is the birth day of Sir Mokshagundam Visvesvarayya (1860-1961), (Popularly known as Sir MV). An eminent Indian engineer ('Mysore Engineer') from the College of Engineering, Pune and a Statesman born in Muddenahalli in Karnataka. The place is about 50 KM from Bangalore.

Wishing happy Engineers day to all Engineers in Oneindia/NetCore. Have a great day.

ಇದನ್ನು ಓದಿ ಲೈಕ್ ಬಟನ್ ಒತ್ತಿದನಂತರ ಒಬ್ಬ ಫ್ರೆಷರ್ ನನ್ನ ಬೇ ತನಕ ಬಂದು ವಿಶ್ವೇಶ್ವರಯ್ಯ ಅವರ ಬಗ್ಗೆ ಹೆಚ್ಚು ಮಾಹಿತಿ ಬೇಕು ಎಲ್ಲಿ ಸಿಕ್ಕತ್ತೆ ಎಂದು ವಿಚಾರಿಸಿದ. ನನಗೆ ತಿಳಿದಿರುವಷ್ಟು ಹೇಳಿ ಹೆಚ್ಚಿನ ಓದಿಗೆ ಇಂಟರ್ನೆಟ್ ನೋಡು, ಕನ್ನಡದಲ್ಲೇ ಬೇಕಿದ್ದರೆ ಇವತ್ತಿನ "ಕನ್ನಡಪ್ರಭ" ಓದು ಎಂದು ಸಂಚಿಕೆ ತೆಗೆದು ಕೈಗಿಟ್ಟೆ.

ನಾವು ನಿತ್ಯ ಬರೆಯುವ ಹಾಳೂಮೂಳೂ ಈಮೇಲು, ಎಸ್ಎಂಎಸ್ಸುಗಳನ್ನು ಅವಳಿಗೆ ತಲುಪಿಸುವುದು, ಅವಳು ಕಳಿಸುವ ಮೆಸೇಜುಗಳನ್ನು ತಪ್ಪದೇ ನಮ್ಮ ಮೊಬೈಲಿಗೆ ಡೆಲಿವರಿ ಮಾಡುವುದಕ್ಕೆ ತಾಂತ್ರಿಕ ಪರಿಕರಗಳನ್ನು ಸೃಷ್ಟಿಸುವವರು ಇಂಥ ಹುಡುಗರೇ. ಸದಾಕಾಲ ಅಪ್ಲಿಕೇಷನ್, ಪ್ರೊಗ್ರಾಮು, ಕೋಡಿಂಗ್, ಎಂಬೆಡ್ಡಿಂಗ್, ಬಗ್ಗು, ಪಿಎಚ್ ಪಿ, ಎಎಸ್ ಪಿ, ಸಿಸಿಎಸ್, ಸಿಎಂಎಸ್, ಸರ್ವರ್, ವೈರಸ್, ಡೌನ್ ಲೋಡ್ ಟೈಂ and ಟೆಸ್ಟಿಂಗ್ ಅಂತ ಕೆಲ್ಸ ಮಾಡ್ತಾನೇ ಇರ್ತಾರೆ, ಮಾಡ್ತಾನೇ ಇರ್ತಾರೆ.

ಈ ಹುಡುಗರ ಐಟಿ ಕಸುಬುದಾರಿಕೆ ಶುರುವಾಗಿ ಒಂದಿಪ್ಪತ್ತು ವರ್ಷವಾಗಿರಬಹುದು. ಲಾಂಗ್ ವೇ ಟು ಗೊ ಅನ್ಸತ್ತೆ. ಐಟಿ ಬಿಟಿ ಇಟೇಸ್ ಹುಡುಗ ಹುಡುಗಿಯರಿಗಿಂತ ತುಂಬಾ ಮುಂಚೆ ಇಟ್ಟಿಗೆ, ಗಾರೆ, ಮರಳು, ಸಿಮೆಂಟು ಇಟ್ಕೊಂಡು ಉರಿ ಬಿಸಿಲು ಮಳೆಯಲ್ಲಿ ನಿಂತು ಮಹೋನ್ನತವಾದ ನಿರ್ಮಾಣಗಳನ್ನು ಮಾಡಿದ ಇಂಜಿನಿಯರುಗಳನ್ನು ನಾವು ಇವತ್ತು ಸ್ಮರಿಸಬೇಕು.

ನಾನು ನೋಡಿ ಬೆರಗಾಗಿರುವ ಕೃಷ್ಣರಾಜಸಾಗರ ಅಣೆಕಟ್ಟು (1924), ಹೂವರ್ ಡ್ಯಾಂ (1935), ಗೋಲ್ಡನ್ ಗೇಟ್ ಬ್ರಿಡ್ಜ್ (1937), ಭಾಕ್ರಾ ನಾಂಗಲ್ ಅಣೆಕಟ್ಟು (1963) ಮುಂತಾದ ಮಹೋನ್ನತ aquatic ಸಾಹಸಕ್ಕೆ ಕೈಹಾಕಿ ಗೆದ್ದ ಸಿವಿಲ್ ಇಂಜಿನಿಯರುಗಳಿಗೆ ಅಭಿನಂದನೆ ಮತ್ತು ಧನ್ಯವಾದಗಳನ್ನು ನಾವೆಲ್ಲ ಕೂಡಿ ಅರ್ಪಿಸೋಣ.

ಧನ್ಯವಾದ ಅರ್ಪಣೆಯ ಈ ತಂಪನೆ ಹೊತ್ತಿನಲ್ಲಿ ಕಡುಬಡವರಿಗೆ ಈಗಲೋ ಆಗಲೋ ಬೀಳತ್ತೆ ಎನಿಸುವ "ಆಸರೆ" ಗೃಹ ಕಟ್ಟಿಕೊಡುವ, ಪುತಪುತನೆ ಉದುರುವ ಹೌಸಿಂಗ್ ಬೋರ್ಡ್ ಮನೆಗಳನ್ನು ಕಟ್ಟುವ, ಇಲ್ಲದ ನದಿಗೆ ಸುಳ್ಳುಸುಳ್ಳೇ ಸೇತುವೆ ಕಟ್ಟುವ ಛೀಫ್ ಎಕ್ಸಿಕ್ಯುಟಿವ್ ಇಂಜಿನಿಯರುಗಳನ್ನು ಮತ್ತು ರಸ್ತೆಗೆ ಟಾರ್ ಹಾಕ್ರೋ ಎಂದರೆ ಅಲ್ಲೇ ಗಣಿಗಾರಿಕೆ ಮಾಡ್ತೀನಿ ಅನ್ನೋ ಮುನ್ಸಿಪಾಲ್ಟಿ ಇಂಜಿನಿಯರ್ ಗಳನ್ನು ನೆನಪಿಸಿಕೊಳ್ಳಬಾರದು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India is one among very few DEVELOPED countries which enjoys a dedicated a day to salute its Engineers. This day marks the Bday of eminent Mysore Engineer 'Bharata Ratna' Sir MV (Mokshagundam Vishveshvaraya). Happy India Engineers Day, 15th September.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more