ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಗ್ ಐಡಿಯಾಸ್ ಫಾರ್ ಇಂಡಿಯಾ ಫಲಿತಾಂಶ ಪ್ರಕಟ

By * ಶಾಮ್
|
Google Oneindia Kannada News

Rajesh Jain
ರಾಜೇಶ್ ಜೈನ್ ಅವರ ಎಮರ್ಜಿಕ್ ಬ್ಲಾಗ್ ನಲ್ಲಿ ಏರ್ಪಡಿಸಲಾಗಿದ್ದ ಬಿಗ್ ಐಡಿಯಾಸ್ ಫಾರ್ ಇಂಡಿಯಾ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದೆ. ನಾನಾ ಕ್ಷೇತ್ರಗಳಲ್ಲಿ ಭಾರತ ಸುಧಾರಿಸುವ ಬಗೆ ಹೇಗೆ ಎಂಬ ಬಗ್ಗೆ 150ಕ್ಕೂ ಹೆಚ್ಚು ಮಂದಿ ತಮ್ಮ ಸಲಹೆ ಸೂಚನೆಗಳನ್ನು ದಾಖಲಿಸಿದ್ದಾರೆ.

ಇವುಗಳಲ್ಲಿ ಅತ್ಯುತ್ತಮವಾದ 10 ಐಡಿಯಾಗಳಿಗೆ ಬಹುಮಾನ ಘೋಷಿಸಲಾಗಿದೆ. ಬಹುಮಾನಿತರ ಹೆಸರುಗಳನ್ನು ಮತ್ತು ಅವರು ನೀಡಿರುವ ಸಲಹೆಗಳನ್ನು ನೋಡಲು ನೀವೀಗ ಎಮರ್ಜಿಕ್ ಬ್ಲಾಗಿಗೆ ವಾಪಸ್ ಹೋಗಬಹುದು - ಸಂಪಾದಕ.

ಭಾರತಕ್ಕೆ ನಿಮ್ಮ ಹೆಲ್ಪ್ ಬೇಕಾಗಿದೆ

ಕಾಯಾ ವಾಚಾ ಮನಸಾ ಭಾರತ ಸಮಾಜವನ್ನು ಸುಧಾರಿಸಲಿಕ್ಕಾಗಿ ಇಲ್ಲೊಂದು, ಹೀಗೊಂದು ಸ್ಪರ್ಧೆ ಆರಂಭವಾಗಿದೆ. ಶಿಕ್ಷಣ, ಆರೋಗ್ಯ, ಮೂಲಭೂತ ಸೌಕರ್ಯ, ಆಡಳಿತ, ಉದ್ಯೋಗ, ಆರೋಗ್ಯ, ಉದ್ಯಮ.. ಹೀಗೆ ಹಲವು ಕ್ಷೇತ್ರಗಳಲ್ಲಿ ಸಕಾರಾತ್ಮಕ ಬದಲಾವಣೆ ತರಲು ಆಸಕ್ತಿವುಳ್ಳವರಿಗೆ ಮಾತ್ರ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಪ್ರವೇಶಾವಕಾಶವಿದೆ. ಅರ್ಹತೆ: ನೀವು ಭಾರತೀಯರಾಗಿರತಕ್ಕದ್ದು!

ಸ್ಪರ್ಧೆಯಲ್ಲಿ ಬಹುಮಾನ, ಉಡುಗೊರೆ, ಗಿಫ್ಟ್ ಹ್ಯಾಂಪರುಗಳು ಇವೆ. ಆದರೆ ಅದು 'ಕ್ಯಾರೆಟ್' ಅಲ್ಲ. ನಿಮ್ಮೊಂದಿಗೆ ನೀವೇ ಕಾಂಪಿಟಿಷನ್ನಿಗೆ ಇಳಿಯಬೇಕಾದ ಆಟ. ವಿಶ್ರಾಂತಿಯಿಲ್ಲದ ಈ ಓಟದಲ್ಲಿ ಗೆದ್ದವನೇ ಧೋನಿ. ಸೋತರೆ ಸಂಗಕ್ಕಾರ. ಸ್ಪರ್ಧೆಯನ್ನು ಪ್ರಾಯೋಜಿತಗೊಳಿಸಿರುವ ಭಾರತೀಯನ ಹೆಸರು ರಾಜೇಶ್ ಜೈನ್. ಕ್ರೀಡಾಂಗಣ: ದಿ ಎಮರ್ಜಿಕ್ ಬ್ಲಾಗ್.

ಸಾಮಾಜಿಕ ಕಳಕಳಿವುಳ್ಳ ಕೆಲವೇ ಭಾರತೀಯ ಬ್ಲಾಗುಗಳಲ್ಲಿ ಎಮರ್ಜಿಕ್ ಪ್ರಮುಖವಾದದ್ದು. ಉದಾತ್ತ ಹಾಗೂ ಕ್ರಿಯಾತ್ಮಕ ಚಿಂತನೆಗಳನ್ನು ಅಂತರ್ಜಾಲದಲ್ಲಿ ತೇಲಿಬಿಟ್ಟು ದಡದಲ್ಲಿ ವಿಶ್ರಾಂತಿ ಪಡೆಯುವ ಮೊಗವೀರ ಇವರಲ್ಲ. ದೋಣಿಯ ಜತೆಗೆ ಹುಟ್ಟುಹಾಕುತ್ತ ಸಾಗುವ ನಾವಿಕ. ಈ ಬ್ಲಾಗಿಗನ ಹೆಸರನ್ನು ನೀವು ಎಲ್ಲೊ ಒಂದು ಕಡೆ ಕೇಳಿರಲಿಕ್ಕೂ ಸಾಕು. ನೆಟ್ ಕೋರ್? ಸಮಾಚಾರ್? ಖೇಲ್? ಖೋಜ್? ಬಾವರ್ಚಿ? ಸಿಫಿ?

ಸ್ಪರ್ಧೆಯ ಸ್ವರೂಪ ಹದಿಮೂರು ಆವರಣಗಳಲ್ಲಿ ತೆರೆದುಕೊಂಡಿದೆ. ಒಂದೊಂದೂ ವಿಷಯಗಳ ಮೇಲೆ ಕಣ್ಣಾಡಿಸುತ್ತಾ ಬನ್ನಿ. ನಿಮ್ಮ ಅನಿಸಿಕೆಯನ್ನು ಎಮರ್ಜಿಕ್ ಬ್ಲಾಗ್ ತಾಣದಲ್ಲೇ ದಾಖಲಿಸಿ. ಅಂದಹಾಗೆ, ಸ್ಪರ್ಧೆಯ ಫಲಿತಾಂಶವನ್ನು ಇದೇ ಏಪ್ರಿಲ್ ಕೊನೆಯ ವಾರದಲ್ಲಿ ಪ್ರಕಟಿಸಲಾಗುತ್ತದೆ. ಭಾರತೀಯರು ನೀಡುವ ನಾನಾ ನಮೂನೆಯ ಸಲಹೆಗಳನ್ನು ಓದಲಿಕ್ಕೂ ನೀವು ತಾಣಕ್ಕೆ ಭೇಟಿ ಕೊಡುತ್ತಿರಿ.

ಅತ್ಯುತ್ತಮ ಸಲಹೆಗಳನ್ನು ಬರೆದ ಹತ್ತು ಮಂದಿ ವಿಜೇತರ ಹೆಸರುಗಳನ್ನು ತಾಣದಲ್ಲಿ ಪ್ರಕಟಿಸಲಾಗುತ್ತದೆ. ಬಹುಮಾನ ಪುಸ್ತಕ ರೂಪದಲ್ಲಿರುತ್ತದೆ. ಖ್ಯಾತ ಅರ್ಥಶಾಸ್ತ್ರಜ್ಞ ಅತಾನು ಡೇ ಅವರ ಕೃತಿ Transforming India: The Road to India"s Development ನಿಮ್ಮದಾಗಿಸಿಕೊಳ್ಳಿ. ಬನ್ನಿ, ನೋಡಿ, ಭಾಗವಹಿಸಿ. ಜೈ ಹಿಂದ್.

English summary
Oneindia-Kannada invites you to yield to 'Big ideas for India' contest. Dont give it up! The online contest is presented to we, the Indians, to participate in the 'yagna' to transform our country. The contest is an online, ongoing enterprise by the Emergic, Rajesh Jains Blog.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X