ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ವರ್ಣಮಾಲೆ ಮರೆತವರುಂಟೆ?

By * ಶಾಮ್
|
Google Oneindia Kannada News

Dr. HS Venketesh Murthy
77ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇನ್ನು ಕೇವಲ 9 ದಿನ ಬಾಕಿ. ಈ ಸಂಭ್ರಮಕ್ಕೆಂದು 'ವಿಜಯ ಕರ್ನಾಟಕ" ಪತ್ರಿಕೆ ದಿನವೂ ಕನ್ನಡ ಸಾಹಿತ್ಯ, ಸಂಸ್ಕೃತಿ, ಪರಂಪರೆ ಕುರಿತು ಒಂದು ಪುಟವನ್ನು ಪ್ರಕಟಿಸುತ್ತಿದೆ. ಈ ಹಿಗ್ಗಿಗೆ ಖ್ಯಾತ ಕವಿ ಎಚ್‌ಎಸ್‌ವಿ ಅವರು ಹಾಡಿದ ಒಂದು ಸುಗ್ಗಿಗೀತೆ ನಿಮ್ಮ ಗಮನಕ್ಕೆ.

ಡಾ.ಎಚ್ಎಸ್ ವೆಂಕಟೇಶಮೂರ್ತಿ ಅವರ ಉದ್ದಾಮ ಲೇಖನ ಇವತ್ತಿನ (27 ಜನವರಿ 2011) ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟವಾಗಿದೆ. ಕನ್ನಡ ಭಾಷೆ ಕುರಿತಾದ ಕಳವಳಗಳು ಮತ್ತು ಕನ್ನಡಿಗರ ಮನೋಸ್ಥಿತಿಯನ್ನು ಚಿತ್ರಿಸುವ ಮನೋಜ್ಞ ಬರಹ ಇದಾಗಿದೆ. ಪತ್ರಿಕೆಯ ಮುಖಪುಟದಲ್ಲಿ ಕಾಣಿಸಿರುವ ಈ ಲೇಖನವನ್ನು ಕನ್ನಡ ಭಾಷಿಕರು ಓದಬೇಕೆಂದು ನಾವು ಬಯಸುತ್ತೇವೆ. ಸ್ಯಾಂಪಲ್ಲಿಗಾಗಿ ಲೇಖನದ ಒಂದು ಪಂಕ್ತಿಯನ್ನು ತಮ್ಮ ಅವಗಾಹನೆಗಾಗಿ ಇಲ್ಲಿ ಕೊಡಲಾಗಿದೆ.

"ಭಾಷೆಯನ್ನು ಕಳೆದುಕೊಳ್ಳುವುದೆಂದರೆ ದೀರ್ಘವಾದ ಒಂದು ಪರಂಪರೆ ಮತ್ತು ಭಾವ ಸಂಸ್ಕೃತಿಯನ್ನು ಕಳೆದುಕೊಳ್ಳುವುದೆಂದು ನಾವು ಯೋಚಿಸಿಯೇ ಇಲ್ಲ. ಐವತ್ತು ಅಕ್ಷರಗಳನ್ನು ನಮ್ಮ ಮಕ್ಕಳು ಕಳೆದುಕೊಂಡರೆಂದರೆ ನಮ್ಮ ಸಾವಿರಾರು ವರ್ಷದ ಸಾಹಿತ್ಯ ಸಂಸ್ಕೃತಿ, ವೈಚಾರಿಕ ಪರಂಪರೆ ಎಲ್ಲವನ್ನೂ ನಮ್ಮ ಮಕ್ಕಳು ತಕ್ಷಣವೇ ಕಳೆದುಕೊಳ್ಳುತ್ತಾರೆ. ಪರಂಪರೆಯೊಂದನ್ನು ಶೋಧಿಸುತ್ತಾ, ಪರಿಭಾವಿಸುತ್ತಾ, ಒಪ್ಪುತ್ತಾ, ವಿರೋಧಿಸುತ್ತಾ ತಮ್ಮ ಮನಸಿನ ಆಕಾಶವನ್ನು ವಿಸ್ತರಿಸಿಕೊಳ್ಳುವ ಅವಕಾಶವನ್ನೇ ಅವರು ಕಳೆದುಕೊಳ್ಳುತ್ತಾರೆ. ಆಗ ಅವರು ಸ್ವದೇಶದಲ್ಲೇ ಪರದೇಶಿಗಳಾಗುತ್ತಾರೆ"

ಲೇಖನದ ಪೂರ್ಣ ಓದಿಗೆ ಪತ್ರಿಕೆಯ ಅಂತರ್ ಜಾಲ ತಾಣಕ್ಕೆ ಭೇಟಿಕೊಡಿ. [ 77ನೇ ಕನ್ನಡ ಸಾಹಿತ್ಯ ಸಮ್ಮೇಳನ ]

English summary
The moment our kids forget 50 Kannada alphabets, they lose age old Kannada language, history, culture and the kannadaness. An eye opening aticle by Dr. H.S. Venkatesh Murthy on Kannada daily Vijaya karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X