ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೆಲುವಿನಿಂದಲೇ ಗೆಲುವು ಮೂಡಿಬರುತ್ತದೆ

By Prasad
|
Google Oneindia Kannada News

Sandhya Darshini, Bengaluru
ಸಕ್ಸಸ್ ಬ್ರೀಡ್ಸ್ ಸಕ್ಸಸ್ ಆಂಗ್ಲ ಲೇಖನದ ಕನ್ನಡ ಅನುವಾದದ ಕೋರಿಕೆಗೆ ಅತ್ಯುತ್ತಮವಾದ ಪ್ರತಿಕ್ರಿಯೆ ದೊರೆತಿದೆ. ಈ ಅನುವಾದ ಸರಣಿಯ ಎರಡನೇ ಲೇಖನ ಇಲ್ಲಿದೆ. ಬೆಂಗಳೂರಿನ ಸಂಧ್ಯಾ ಅವರಿಗೆ ದಟ್ಸ್ ಕನ್ನಡಕ್ಕೆ ಸ್ವಾಗತ. ಕನ್ನಡದಲ್ಲಿ ಬರೆಯುವ ಕಲೆ ಮತ್ತಷ್ಟು ವರ್ಧಿಸಬೇಕು ಮತ್ತು ಹೊಸಹೊಸ ಯುವ ಲೇಖಕರಿಗೆ ಬರೆಯಲು ವೇದಿಕೆ ದೊರೆಯಬೇಕು ಎಂಬುದೇ ನಮ್ಮ ಆಶಯ. - ಸಂಪಾದಕ.

* ಸಂಧ್ಯಾ ದರ್ಶಿನಿ, ಬೆಂಗಳೂರು

ಒಂದು ಹಳ್ಳಿಯಲ್ಲಿ ಒಬ್ಬ ರೈತನಿದ್ದ. ಅವನು ತನ್ನ ಹೊಲದಲ್ಲಿ ತುಂಬಾ ಒಳ್ಳೆಯ ಗುಣಮಟ್ಟದ ಜೋಳವನ್ನ ಬೆಳೆಯುತ್ತಿದ್ದ. ಆತ ಬೆಳೆಯುತ್ತಿದ್ದ ಜೋಳ ಪ್ರತೀ ವರ್ಷ ರಾಜ್ಯಮಟ್ಟದಲ್ಲಿ ನಡೆಯುತ್ತಿದ್ದ "ಜೋಳ-ಮೇಳ"ದಲ್ಲಿ ಬಹುಮಾನ ಗೆಲ್ಲುತ್ತಿತ್ತು.

ಒಮ್ಮೆ ಸುದ್ದಿಗಾರನೊಬ್ಬ ಈ ರೈತನ ಸಂದರ್ಶನ ಮಾಡಿ ಅಚ್ಚರಿಯ ಸಂಗತಿಯೊಂದನ್ನ ತಿಳಿದುಕೊಂಡ. ರೈತ ತಾನು ಬೆಳೆಯುತ್ತಿದ್ದ ಉತ್ತಮ ಗುಣಮಟ್ಟದ ಜೋಳದ ಕಾಳುಗಳನ್ನು ತನ್ನ ಅಕ್ಕ-ಪಕ್ಕದ ರೈತರಿಗೂ ಹಂಚುತ್ತಿದ್ದ.

"ನಿಮ್ಮ ಅಕ್ಕ-ಪಕ್ಕದ ರೈತರು ಕೂಡ 'ಜೋಳ-ಮೇಳ'ದಲ್ಲಿ ಭಾಗವಹಿಸುವಾಗ ಅದ್ಹೇಗೆ ನೀವು ನಿಮ್ಮ ಉತ್ತಮವಾದ ಕಾಳುಗಳನ್ನ ಅವರೊಂದಿಗೆ ಹಂಚಿಕೊಳ್ಳಲು ಸಾಧ್ಯ?"ಎಂದು ವರದಿಗಾರ ಕೇಳಿದ.

ಅದಕ್ಕಾರೈತ "ಯಾಕಣ್ಣ? ನಿನಗೀ ವಿಷಯ ಗೊತ್ತಿಲ್ವಾ? ಹಣ್ಣಾಗಿ ಮಾಗುತ್ತಿರುವ ಜೋಳದ ಹೊಬಂಡನ್ನು ಗಾಳಿ ಎತ್ತಿ ಒಯ್ದು ಹೊಲದಿಂದ ಹೊಲಕ್ಕೆ ಹರಡುತ್ತದೆ. ನನ್ನ ಸುತ್ತ-ಮುತ್ತಲಿನ ಹೊಲಗಳಲ್ಲಿ ಒಳ್ಳೆಯ ಗುಣಮಟ್ಟದ ಜೋಳ ಬೆಳೆಯದಿದ್ದರೆ, ಒಂದು ತಳಿಯೊಂದಿಗೆ ಇನ್ನೊಂದು ತಳಿ ಕೂಡಿಕೊಂಡು, ಜೋಳದ ಗುಣಮಟ್ಟ ಕುಸಿಯಬಹುದು. ನಾನು ಒಳ್ಳೆಯ ಬೆಳೆ ತೆಗೆಯಬೇಕಾದರೆ ನನ್ನ ನೆರೆಯವರೂ ಒಳ್ಳೆಯದನ್ನೇ ಬೆಳೆಯಬೇಕು".

ಈ ರೈತ ಜೀವನದ ಸರಿಯಾದ ಒಳಾರ್ಥವನ್ನ ತಿಳಿಸಿಕೊಟ್ಟಿದ್ದ. ಈತನ ನೆರೆಹೊರೆಯವರು ಒಳ್ಳೆಯ ಜೋಳ ಬೆಳೆಯದೇ ಈತ ಒಳ್ಳೆಯ ಜೋಳವನ್ನು ಬೆಳೆಯಲು ಸಾಧ್ಯವಿಲ್ಲ. ಇದು ಜೀವನದ ಮತ್ತೊಂದು ಆಯಾಮ, ಮತ್ತೊಂದು ಹರವು.

ಯಾರು ನೆಮ್ಮದಿಯಾಗಿರಲು ಬಯಸುತ್ತಾರೋ, ಅವರು ತಮ್ಮ ನೆರೆ-ಹೊರೆಯವರೂ ನೆಮ್ಮದಿಯಾಗಿರಲು ನೆರವಾಗಬೇಕು. ಯಾರು ಒಳ್ಳೆಯ ರೀತಿ ಬದುಕಬೇಕೆಂದಿರುವರೋ , ಅವರು ಇತರರೂ ಒಳ್ಳೆಯ ರೀತಿಯಲ್ಲಿ ಬದುಕಲು ಅನುವು ಮಾಡಿಕೊಡಬೇಕು. ಜೀವನದ ಮೌಲ್ಯವಿರುವುದು ಎಷ್ಟು ಕಾಲ ಜೀವಿಸಿದರು ಎನ್ನುವುದರಲ್ಲಲ್ಲ, ತಮ್ಮ ಜೀವಿತದಲ್ಲಿ ಎಷ್ಟು ಜನರ ಮೇಲೆ ಪರಿಣಾಮ ಬೀರಿದರು ಎನ್ನುವುದರಲ್ಲಿ.

ಈ ಕಥೆಯಿಂದ ಕಲಿಯಬೇಕಾದ ಪಾಠ: ಒಬ್ಬಂಟಿಯಾಗಿ ಗೆಲ್ಲುವುದು ಕಷ್ಟದ ಮಾತು. ಹಲವಾರು ಬಾರಿ ಗೆಲುವು ಒಗ್ಗಟ್ಟಿನ ಕೆಲಸದಲ್ಲಿ ಮತ್ತು ಎಲ್ಲರ ಪಾಲ್ಗೊಳ್ಳುವಿಕೆಯಲ್ಲಿ ಅಡಗಿರುತ್ತದೆ. ಆದ್ಧರಿಂದ, ನಿಮ್ಮಲ್ಲಿರುವ ಒಳ್ಳೆಯ ಆಚಾರಗಳನ್ನು, ಆಲೋಚನೆಗಳನ್ನು ಮತ್ತು ನಿಮ್ಮಲ್ಲಿರುವ ತಿಳಿವಳಿಕೆಯನ್ನು ನಿಮ್ಮೊಡನೆ ಕೆಲಸ ಮಾಡುವವರೊಂದಿಗೆ ಹಂಚಿಕೊಳ್ಳಿ.

ಯಾರೋ ಹೇಳಿರುವಂತೆ: "ಗೆಲುವಿನಿಂದಲೇ ಗೆಲುವು ಮೂಡುತ್ತದೆ."

ರೇಣುಕಾ ಬರಹ : ಗೆಲುವು ಗೆಲುವನ್ನೇ ಹುಟ್ಟಿಸುತ್ತದೆರೇಣುಕಾ ಬರಹ : ಗೆಲುವು ಗೆಲುವನ್ನೇ ಹುಟ್ಟಿಸುತ್ತದೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X