ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ್ಯೂಸ್ ಹಂಟ್ ನಲ್ಲಿ ಕನ್ನಡ ವಾರ್ತೆಗಳು

By Prasad
|
Google Oneindia Kannada News

Read Kannada news on your mobile
ಬೆಂಗಳೂರು, ಅ. 26 : ಪ್ರಾದೇಶಿಕ ಭಾಷೆಯಲ್ಲಿ ನಂ.1ನೇ ಸ್ಥಾನದಲ್ಲಿರುವ ಒನ್ ಇಂಡಿಯಾ ಪೋರ್ಟಲ್ ಕನ್ನಡ ಸೇರಿದಂತೆ ಭಾರತದ ಐದು ಪ್ರಾದೇಶಿಕ ಭಾಷೆಗಳಲ್ಲಿ ಸುದ್ದಿಗಳನ್ನು ಮೊಬೈಲಲ್ಲಿ ಬಿತ್ತರಿಸುತ್ತಿದೆ. ಈಗ ಹೊಸದಾಗಿ ಬಿಡುಗಡೆ ಮಾಡಿರುವ ನ್ಯೂಸ್ ಹಂಟ್ ಅಪ್ಲಿಕೇಷನ್ ಕನ್ನಡ ಅಕ್ಷರದ ಬೆಂಬಲವಿಲ್ಲದ ಮೊಬೈಲ್ ನಲ್ಲಿಯೂ ಕನ್ನಡ ಸುದ್ದಿಗಳನ್ನು ಓದುವುದನ್ನು ಸಾಧ್ಯವಾಗಿಸಿದೆ.

ಜಿಪಿಆರ್ಎಸ್ ಎನೇಬಲ್ ಆಗಿರುವ 1500 ಮಾದರಿಯ ಹ್ಯಾಂಡ್ ಸೆಟ್ ಗಳಲ್ಲಿ ಕನ್ನಡ ಭಾಷೆಯಲ್ಲಿ ಎಲ್ಲ ತಾಜಾ ಸುದ್ದಿಗಳನ್ನು ಓದುವುದು ಸಾಧ್ಯವಿದೆ. ಈ ಹೊಸ ಅಪ್ಲಿಕೇಷನ್ ಸಹಾಯದಿಂದ ಅತಿ ವೇಗವಾಗಿ ಅಭಿವೃದ್ಧಿ ಹೊಂದಿರುವ ಅಂಡ್ರಾಯ್ಡ್ ಮೊಬೈಲ್ ಪ್ಲಾಟ್ ಫಾರಂನಲ್ಲಿಯೂ ನಿಮ್ಮ ನೆಚ್ಚಿನ ಕನ್ನಡ ಸುದ್ದಿಗಳನ್ನು ಓದುವ ಸವಲತ್ತು ಜಾಗತಿಕ ಕನ್ನಡಿಗರದಾಗಲಿದೆ. ಎಲ್ಲೇ ಇದ್ದರೂ ಕೈಯಲ್ಲಿ ಮೊಬೈಲ್ ಇದ್ದರೆ ಸಿನೆಮಾ ಮತ್ತು ಇತರ ಸುದ್ದಿಗಳು ನಿಮ್ಮನ್ನು ತಲುಪಲಿವೆ.

ಒನ್ ಇಂಡಿಯಾ ಸಿಇಓ ಬಿಜಿ ಮಹೇಶ್, "ಭಾರತದಲ್ಲಿ ಶೇ. 12ರಷ್ಟು ಜನ ಮಾತ್ರ ಇಂಗ್ಲಿಷ್ ಸರಾಗವಾಗಿ ಓದಬಲ್ಲವರಾಗಿದ್ದಾರೆ. ಉಳಿದವರಿಗೆ ಪ್ರಾದೇಶಿಕ ಭಾಷೆಯಲ್ಲಿಯೇ ಸುದ್ದಿಗಳನ್ನು ಓದಲು ಇಷ್ಟಪಡುತ್ತಾರೆ. ಇತ್ತೀಚಿನ ದಿನಗಳಲ್ಲಿ 1ನೇ ಮತ್ತು 2ನೇ ಹಂತದ ನಗರಗಳಲ್ಲಿ ಮೊಬೈಲಲ್ಲಿ ಪ್ರಾದೇಶಿಕ ಭಾಷೆಯಲ್ಲಿ ಸುದ್ದಿ ಓದುವವರ ಸಂಖ್ಯೆ ಹೆಚ್ಚಾಗುತ್ತಿದೆ. ಬೆಲೆ ಕಡಿಮೆಯಾಗಿರುವುದು ಮತ್ತು ಪ್ರತಿಯೊಬ್ಬರ ಕೈಯಲ್ಲಿ ಮೊಬೈಲ್ ನಲಿದಾಡುತ್ತಿರುವುದು ಇದಕ್ಕೆ ಕಾರಣ. ಈ ನ್ಯೂಸ್ ಹಂಟ್ ಅಪ್ಲಿಕೇಷನ್ ಮೊಬೈಲಲ್ಲಿ ಕನ್ನಡ ಸುದ್ದಿ ಓದುವ ಸುಖವನ್ನು ಮತ್ತಷ್ಟು ಹಿತವಾಗಿಸಿದೆ" ಎಂದು ಅಭಿಪ್ರಾಯಪಟ್ಟಿದ್ದಾರೆ.

ಏರ್ ಟೆಲ್ ಲೈವ್, ವೊಡಾಫೋನ್ ಲೈವ್, ಏರ್ ಸೆಲ್ ವ್ಯಾಪ್, ಐಡಿಯಾ ಫ್ರೆಶ್ ಮುಂತಾದ ಜಿಪಿಆರ್ಎಸ್ ಸಂಪರ್ಕ ಇರುವ ಯಾವುದೇ ಮೊಬೈಲಲ್ಲಿ ನ್ಯೂಸ್ ಹಂಟ್ ಅಪ್ಲಿಕೇಷನ್ ಕೆಲಸ ಮಾಡುತ್ತದೆ. ಒನ್ ಇಂಡಿಯಾ ಕನ್ನಡ ಸುದ್ದಿಗಳನ್ನು ಓದಲು ಈ ಕೊಂಡಿ ಕ್ಲಿಕ್ಕಿಸಿ ಅಪ್ಲಿಕೇಷನ್ ಡೌನ್ ಲೋಡ್ ಮಾಡಿಕೊಳ್ಳಿ. ಮೊಬೈಲ್ ಬಳಕೆದಾರ ಜಿಪಿಆರ್ಎಸ್ ಪ್ಲಾನ್ ಗೆ ಮಾತ್ರ ಹಣ ವ್ಯಯಿಸಬೇಕು. ಅದು ಬಿಟ್ಟರೆ ನೀವು ಓದಲಿರುವ ಕನ್ನಡ ಸುದ್ದಿಗಳು ಉಚಿತ ಉಚಿತ ಉಚಿತ.

ಡೌನ್ ಲೋಡ್ ಮಾಡುವುದು ಹೀಗೆ

1. 57333ಗೆ oneindia ಎಂದು ಟೈಪಿಸಿ ಎಸ್ಎಮ್ಎಸ್ ಕಳಿಸಿ. ಅಥವಾ
2. ಮೊಬೈಲಿನಲ್ಲಿನ ಬ್ರೌಸರ್ ಸಹಾಯದಿಂದ http://oneindia.newshunt.com ಬ್ರೌಸ್ ಮಾಡಿ.

ಇತ್ತೀಚೆಗೆ ಬಂದಿರುವ ವರದಿಗಳ ಪ್ರಕಾರ, 2008ರ ಅಕ್ಟೋಬರ್ ತಿಂಗಳ ಅಂಕೆಸಂಖ್ಯೆಗಳಿಗೆ ಹೋಲಿಸಿದರೆ 2009 ಅಕ್ಟೋಬರ್ ತಿಂಗಳಲ್ಲಿ ಭಾರತದಲ್ಲಿ ವೆಬ್ ಸೈಟ್ ಗಳಲ್ಲಿ ಸುದ್ದಿ ಓದುವವರ ಸಂಖ್ಯೆಯಲ್ಲಿ ಶೇ.37ರಷ್ಟು ಏರಿಕೆ ಕಂಡುಬಂದಿದೆ. ಅಂದರೆ, ಭಾರತದಲ್ಲಿ 15.8 ಮಿಲಿಯನ್ ಓದುಗರು ಆ ತಿಂಗಳಲ್ಲಿ ಪ್ರಾದೇಶಿಕ ಭಾಷಾ ಸುದ್ದಿ ಪೋರ್ಟಲ್ ಗಳನ್ನು ಓದಿದ್ದಾರೆ.

ಇಟರ್ನೋ ಇನ್ಫೋಟೆಕ್ ಕಂಪನಿಯ ಸಹಕಾರದೊಂದಿಗೆ ನ್ಯೂಸ್ ಹಂಟ್ ಅಪ್ಲಿಕೇಷನ್ ಅಭಿವೃದ್ಧಿಪಡಿಸಲಾಗಿದೆ. ನೋಕಿಯಾ ಎಸ್60, ಎಸ್40, ಎನ್97 ಟಚ್ ಸ್ಕ್ರೀನ್ ನೋಕಿಯಾ ಹ್ಯಾಂಡ್ ಸೆಟ್ ಗಳಲ್ಲಿ ಸುದ್ದಿಗಳನ್ನು ತಲುಪಿಸುವಲ್ಲಿ ಇಟರ್ನೋ ಹೆಚ್ಚಿನ ಕೆಲಸ ಮಾಡಿದೆ. ಐಪೋನ್, ಅಂಡ್ರಾಯ್ಡ್ ಮತ್ತು ಬ್ಲಾಕ್ ಬೆರಿ ಗಳಲ್ಲಿ ಕೂಡ ಈ ಹೊಸ ಅಪ್ಲಿಕೇಷನ್ ಬಳಕೆ ಸಾಧ್ಯವಿದೆ ಎಂದು ಇಟರ್ನೋ ಪ್ರಕಟಿಸಿದೆ.

ಒನ್ ಇಂಡಿಯಾ ಬಗ್ಗೆ : ನೆಟ್ ಕೋರ್ ಇಂಡಿಯಾ ಪ್ರೈ.ಲಿ. ಮಾಲಿಕತ್ವದ ಒನ್ ಇಂಡಿಯಾ ಪೋರ್ಟಲ್ ಭಾರತದ ಇಂಟರ್ನೆಟ್ ಬಳಕೆದಾರರಿಗೆ ಇಂಗ್ಲಿಷ್ ಮತ್ತು ಪ್ರಾದೇಶಿಕ ಭಾಷೆಗಳಲ್ಲಿ ಸುದ್ದಿ, ಮಾಹಿತಿ ಮತ್ತು ವ್ಯಾಪಾರವನ್ನು ನೀಡುತ್ತ ಬಂದಿದೆ. 2006ರಲ್ಲಿ ಪ್ರಾರಂಭವಾದ ಈ ಸಂಸ್ಥೆ ಭಾರತ ಮತ್ತವಲ್ಲ ಎನ್ಆರ್ಐ ಸಮುದಾಯದಲ್ಲಿಯೂ ಜನಪ್ರಿಯತೆಯನ್ನು ಗಳಿಸಿಕೊಂಡಿದೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ :
ಆಕೃತಿ ಭಾರ್ಗವ, ಸಾರ್ವಜನಿಕ ಸಂಪರ್ಕಾಧಿಕಾರಿ, ನೆಟ್ ಕೋರ್
[email protected]
+91 9871220114

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X