ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್

By * ಶಾಮ್
|
Google Oneindia Kannada News

Kannada news SMS in english
ಮೊಬೈಲ್ ಬಳಕೆದಾರರಿಗೆ ಕನ್ನಡ ಸುದ್ದಿಗಳನ್ನು ಎಸ್ಎಮ್ಎಸ್ ಮುಖಾಂತರ ದಟ್ಸ್ ಕನ್ನಡ ತಲುಪಿಸುತ್ತಿರುವುದು ನಮ್ಮ ಓದುಗರಿಗೆ ತಿಳಿದ ವಿಚಾರ. ಈ ನಮ್ಮ ಸೇವೆಯನ್ನು ಬಳಕೆದಾರರು ತುಂಬು ಹೃದಯದಿಂದ ಸ್ವೀಕರಿಸಿದ್ದಾರೆ. ಆದರೆ, ಅನೇಕ ಮೊಬೈಲ್ ಹ್ಯಾಂಡ್ ಸೆಟ್ ಗಳು ಕನ್ನಡ ಅಕ್ಷರಗಳಿಗೆ ಬೆಂಬಲ ನೀಡದ ಕಾರಣ ಸಾವಿರಾರು ಓದುಗರು ಮೋಬೈಲಲ್ಲಿ ಕನ್ನಡ ಓದುವ ಅವಕಾಶದಿಂದ ವಂಚಿತರಾಗಿದ್ದಾರೆ.

ಕನ್ನಡ ಓದಬಯಸುವ ಪ್ರತಿ ಮೊಬೈಲ್ ಬಳಕೆದಾರರಿಗೆ ತಾಜಾ ಕನ್ನಡ ಸುದ್ದಿಗಳನ್ನು ತಲುಪಿಸಬೇಕೆಂಬ ಒತ್ತಾಸೆ ನಮ್ಮದು. ಈ ಕಾರಣದಿಂದಾಗಿ ಆಂಗ್ಲ ಲಿಪಿಯಲ್ಲಿಯೇ ದಟ್ಸ್ ಕನ್ನಡ ಸುದ್ದಿ ಸಂದೇಶಗಳನ್ನು ನೀಡುವ ಉದ್ದೇಶದಿಂದ ಹೊಸ ಪದ್ಧತಿಯನ್ನು ಮೈಟುಡೆ.ಕಾಂ ಪ್ರಾರಂಭಿಸಿದೆ. ಕನ್ನಡ ಲಿಪಿ ಸಪೋರ್ಟ್ ಮಾಡ ಮೊಬೈಲ್ ಬಳಕೆದಾರರ ಆಗ್ರಹದ ಮೇರೆಗೆ ಈ ಹೆಚ್ಚುವರಿ ಸೇವೆಯನ್ನು ಪ್ರಾರಂಭಿಸಲಾಗಿದೆ.

ಮೊಬೈಲನ್ನು ಲಕ್ಷಾನುಲಕ್ಷ ಕನ್ನಡ ಭಾಷಿಗರು ಉಪಯೋಗಿಸುತ್ತಿದ್ದಾರೆ. ಮಾತೃಭಾಷೆಯಲ್ಲಿಯೇ ಸುದ್ದಿಗಳನ್ನು ಓದಬೇಕೆಂಬ ಆಸೆ ಅವರದು. ಸುದ್ದಿ ಸಂದೇಶಗಳು ಕನ್ನಡದಲ್ಲಿ ಬಂದರೂ ಹ್ಯಾಂಡ್ ಸೆಟ್ ನಲ್ಲಿ ಸೆಟ್ ಇರದ ಕಾರಣ ಇದರಿಂದ ವಂಚಿತರಾಗುತ್ತಿದ್ದಾರೆ. ಕಂಗ್ಲಿಷ್ (ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಬರಹ) ಸುದ್ದಿ ಸಂದೇಶಗಳು ಈ ಕೊರತೆಯನ್ನು ನಿವಾರಣೆ ಮಾಡಲಿದೆ. ಈ ಸದವಕಾಶವನ್ನು ಕನ್ನಡ ಓದುಗರು ಬಳಸಿಕೊಳ್ಳುತ್ತಾರೆಂಬ ಸದಾಶಯ ನಮ್ಮದು.

ಈ ಸೇವೆಯ ಶುಲ್ಕ ಕೂಡ ರು.10, ಅದೂ ತಿಂಗಳಿಗೆ (ಇಂದೇ ಚಂದಾದಾರರಾಗಿ 7 ದಿನಗಳ ಉಚಿತ ಎಸ್ಎಮ್ಎಸ್ ಪಡೆಯಿರಿ). ಈ ಹಣವನ್ನು ನೀವು ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ನೆಟ್-ಬ್ಯಾಂಕಿಂಗ್ ಖಾತೆ, ಚೆಕ್ ಮುಖಾಂತರ, ಫೋನ್ ಮುಖಾಂತರ ಕ್ರೆಡಿಟ್ ಕಾರ್ಡ್ ಬಳಸಿ ಅಥವಾ ಮತ್ತಿತರ ಪ್ರಿಪೇಯ್ಡ್ ಕ್ಯಾಷ್ ಕಾರ್ಡ್ ಬಳಸಿ ಪಾವತಿಸಬಹುದಾಗಿದೆ.

ಚಂದಾದಾರರಾಗುವುದು ಸುಲಭ

ಮೊಬೈಲ್ ಮೂಲಕ ONE-KNNEWSENG ಸಂದೇಶವನ್ನು 09212 012345 ನಂಬರಿಗೆ ಕಳಿಸಿ, ಅಷ್ಟೇ. ಈ ಸೌಲಭ್ಯ ಭಾರತದಲ್ಲಿ ಮಾತ್ರ ಲಭ್ಯ. ಕನ್ನಡ ಸುದ್ದಿಗಳ ಬಗ್ಗೆ ಹೆಚ್ಚಿನ ವಿವರ ತಿಳಿಯಲು ಸಂದರ್ಶಿಸಿ.

ಚಂದಾದಾರರಾಗಿ ಮತ್ತು ದಿನಕ್ಕೆ ನಾಲ್ಕು ಬಾರಿ ಕನ್ನಡ ಸುದ್ದಿಗಳನ್ನು ಮತ್ತು ಎರಡು ಬಾರಿ ಸಿನೆಮಾ ಸುದ್ದಿಗಳನ್ನು ಮೊಬೈಲಿನಲ್ಲಿ ಪಡೆಯಿರಿ. ಈ ಸುದ್ದಿಗಳನ್ನು ನೀಡುತ್ತಿರುವುದು, ನಿಮ್ಮ ಅಚ್ಚುಮೆಚ್ಚಿನ ಕನ್ನಡ ಬಂಟ ದಟ್ಸ್ ಕನ್ನಡ.

ಮೊಬೈಲಲ್ಲಿ ಕನ್ನಡ ಇಲ್ಲವೆ? ಚಿಂತಿಸಬೇಡಿ.

English summary
Receive kannada news in english. Subscribe to mytoday sms service.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X