ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆಲ್ ಫೋನಿನಲ್ಲಿ ದಟ್ಸ್ ಕನ್ನಡ ಓದುವ ಸಂಭ್ರಮ

By * ಶಾಮ್
|
Google Oneindia Kannada News

ನೀವು ಕನ್ನಡಿಗರಾಗಿದ್ದರೆ ಮತ್ತು ದಟ್ಸ್ ಕನ್ನಡ ಸುದ್ದಿಗಳನ್ನು ಮೊಬೈಲ್ ನಲ್ಲಿ ಓದುವ ಚಡಪಡಿಕೆ ನಿಮ್ಮಲ್ಲಿದ್ದರೆ, ಈ ನೂತನ ಸಾಫ್ಟ್ ವೇರ್ ಅಪ್ಲಿಕೇಷನ್ ಬಳಸಿ ಅಂಗೈಯಲ್ಲೇ ಸುದ್ದಿ ಸಮಾಚಾರಗಳನ್ನು ಓದುವ ಸಂತಸ ನಿಮ್ಮದಾಗುತ್ತದೆ. ಮಾತೃಭಾಷೆಯಲ್ಲಿ, ಅದೂ, ಸೆಲ್ ಫೋನಿನಲ್ಲಿ, ಅದೂ ದಟ್ಸ್ ಕನ್ನಡ ಸುದ್ದಿಗಳನ್ನು ಓದುವ ಸಂಭ್ರಮ!

ಬಹುಸಂಸ್ಕೃತಿ ಮತ್ತು ಬಹುಭಾಷೆಗಳ ಆಗರವಾಗಿರುವ ಭಾರತದಲ್ಲಿ ಮೊಬೈಲ್ ಮಾರುಕಟ್ಟೆ ಅತಿ ವೇಗವಾದ ಬೆಳವಣಿಗೆ ಕಂಡಿದೆ. ಏಷ್ಯಾದಲ್ಲಿರುವ 650 ಮಿಲಿಯನ್ ಗ್ರಾಹಕರಲ್ಲಿ ಕೇವಲ ಶೇ.12ರಷ್ಟು ಜನ ಮಾತ್ರ ಸರಾಗವಾಗಿ ಇಂಗ್ಲಿಷ್ ಓದಬಲ್ಲರು. ದೇಶದ ಬಹುತೇಕ ಮೊಬೈಲ್ ಬಳಕೆದಾರರು ನಾನಾ ಕಾರಣಗಳಿಂದಾಗಿ ಸುದ್ದಿಗಳನ್ನು ತಮ್ಮ ಮಾತೃಭಾಷೆಯಲ್ಲಿಯೇ ಓದಲು ಇಷ್ಟಪಡುತ್ತಾರೆ. ಈ ಬಳಗಕ್ಕೆ ಕನ್ನಡವನ್ನು ಸೇರ್ಪಡೆ ಮಾಡಿರುವುದು ನಿಮ್ಮ ಅಚ್ಚುಮೆಚ್ಚಿನ ದಟ್ಸ್ ಕನ್ನಡ ಡಾಟ್ ಕಾಮ್ ನ ಹೆಮ್ಮೆ.

ಪ್ರಾದೇಶಿಕ ಭಾಷೆಯಲ್ಲಿ ಸುದ್ದಿಗಳನ್ನು ಓದಲು ಮತ್ತು ಬಳಸಲು ಅನೇಕ ಅಡೆತಡೆಗಳು ಎದುರಾಗಿವೆ. ಮುಖ್ಯವಾಗಿ ಕನ್ನಡ ಲಿಪಿಗಳು ಗೋಚರಿಸದೆ ಚೌಕಾಕಾರದ ಖಾಲಿ ಡಬ್ಬಿಗಳು ಕಾಣಿಸುವುದನ್ನು ನೀವು ಗಮನಿಸಿರುತ್ತೀರಿ. ಇಂಥ ಸಮಸ್ಯೆಗಳನ್ನು ಗುರುತಿಸಿ, ನಿವಾರಿಸಿ ಅವುಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳುವುದೇ ಬೃಹತ್ ಕೆಲಸ. ಇದನ್ನು ಮನಗಂಡಿರುವ ಒನ್ ಇಂಡಿಯಾ ಹೊಸತೊಂದು ಅಪ್ಲಿಕೇಷನ್ ಬಿಡುಗಡೆ ಮಾಡಿದ್ದು, ಪ್ರಾದೇಶಿಕ ಭಾಷೆಯನ್ನು ಮೊಬೈಲಿನಲ್ಲಿ ಓದುವಾಗ ಎದುರಾಗುವ ಎಲ್ಲಾ ತಾಪತ್ರಯಗಳನ್ನು ತೊಡೆದುಹಾಕಿದೆ.

ಮೊಬೈಲ್ ಫೋನಿನಲ್ಲಿ ಸರಾಗವಾಗಿ ಕನ್ನಡ ಸುದ್ದಿ ಓದುಕೊಳ್ಳುವುದಕ್ಕೆ ನೀವು ಮಾಡಬೇಕಿರುವ ಕೆಲಸ ತುಂಬ ಸಿಂಪಲ್. ಮೊದಲು ಇಲ್ಲಿ ಕ್ಲಿಕ್ಕಿಸಿ ಆನಂತರ ಒಂದು ಅಪ್ಲಿಕೇಷನ್ ಅನ್ನು ಡೌನ್ ಲೋಡ್ ಮಾಡಿಕೊಳ್ಳಿ. ನೆನಪಿರಲಿ ಇದು ಉಚಿತ.

ಅಪ್ಲಿಕೇಷನ್ ಒಂದು ಬಾರಿ ಇನ್ ಸ್ಟಾಲ್ ಆದರೆ, ದಟ್ಸ್ ಕನ್ನಡ ಸುದ್ದಿಗಳನ್ನು ನೀವಲ್ಲ, ಕನ್ನಡ ಸುದ್ದಿಗಳು ನಿಮ್ಮನ್ನೇ ಹಿಂಬಾಲಿಸಿಕೊಂಡು ಬರುತ್ತವೆ. ಸುದ್ದಿಗಳು ಮಾತ್ರವಲ್ಲ ಸಿನೆಮಾ, ಅಡುಗೆ, ಆರೋಗ್ಯ, ಎನ್ಆರ್ಐ, ನಗೆಹನಿ, ಕಾಮಸೂತ್ರ ಮುಂತಾದವುಗಳನ್ನು ನಿಮ್ಮ ಮೊಬೈಲ್ ಹ್ಯಾಂಡ್ ಸೆಟ್ಟಿನಲ್ಲಿಯೇ ಓದಿ ಆನಂದಿಸಬಹುದು.

ಇದರರ್ಥ, ನಿಮ್ಮ ನೆಚ್ಚಿನ ದಟ್ಸ್ ಕನ್ನಡ ಅಂತರ್ಜಾಲದಲ್ಲಿ ಪ್ರಕಟವಾಗುವ ಎಲ್ಲ ಕನ್ನಡ ಸುದ್ದಿಗಳನ್ನು ಓದಲು ಡೆಸ್ಕ್ ಟಾಪ್ ಮುಂದೆ ಇರಲೇಬೇಕಿಲ್ಲ. ಬ್ಲಾಕ್ ಬೆರ್ರಿ, ನೋಕಿಯಾ, ಸೋನಿ ಎರಿಕ್ ಸನ್, ಸ್ಯಾಮ್ಸಂಗ್ ಸೆಟ್ ಯಾವುದೇ ಆಗಿರಲಿ ನಿಮ್ಮ ಮೊಬೈಲಿನಲ್ಲಿ ಇಂಟರ್ನೆಟ್ ಸಂಪರ್ಕ (ಜಿಪಿಆರ್ಎಸ್) ಇದ್ದರೆ ನೀವು ಎಲ್ಲೇ ಇದ್ದರೂ, ಹ್ಯಾಂಡ್ ಸೆಟ್ಟಿನಲ್ಲಿ ಕನ್ನಡ ಭಾಷೆ ಇಲ್ಲದಿದ್ದರೂ ಕನ್ನಡ ಓದಬಹುದು.

ನಿಮ್ಮ ಸೆಲ್ ಫೋನಿನಲ್ಲಿ ಕನ್ನಡ ಓದಿದ ಸಂತಸವನ್ನು ನಮ್ಮೊಂದಿಗೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ. ಕನ್ನಡಕ್ಕೆ ಸಂಬಂಧಿಸಿದ ಇಂಥ ಹೊಸ ಹೊಸ ಪ್ರಯೋಗಗಳಿಗೆ ಮತ್ತು ಸೇವೆಗಳಿಗೆ ದಟ್ಸ್ ಕನ್ನಡ ಸದಾ ಸಿದ್ಧ. ಮತ್ತೇನಾದರೂ ಪ್ರಶ್ನೆಗಳಿದ್ದರೆ ನಮಗೆ ಬರೆಯಿರಿ. ವಿಳಾಸ : [email protected]

ಓದುಗರ ಗಮನಕ್ಕೆ : ಉಚಿತ ಅಪ್ಲಿಕೇಷನ್ ಇಲ್ಲಿ ಡೌನ್ ಲೋಡ್ ಮಾಡಿಕೊಳ್ಳಿ.

ಮೊಬೈಲಲ್ಲಿ ದಟ್ಸ್ ಕನ್ನಡ ಸುದ್ದಿ ಓದುವ ಮೊದಲು ಕೆಲ ಸೂಚನೆಗಳನ್ನು ಓದಿರಿ.

1) ನಿಮ್ಮ ಮೊಬೈಲಲ್ಲಿ ಜಿಪಿಆರ್ಎಸ್ ಸೌಲಭ್ಯ ಇರಬೇಕು.
2) ನಂತರ, ಜಿಪಿಆರ್ಎಸ್ ಅನ್ನು ಸೇವಾ ಸಂಸ್ಥೆಯಿಂದ ಆಕ್ಟಿವೇಟ್ ಮಾಡಿಸಿಕೊಳ್ಳಿ.
3) ಜಿಪಿಆರ್ಎಸ್ ಆಕ್ಟಿವೇಟ್ ಆದನಂತರ ಅಪ್ಲಿಕೇಷನ್ ಡೌನ್ ಲೋಡ್ ಮಾಡಿಸಿಕೊಂಡು, ಸುದ್ದಿ ಕನ್ನಡದಲ್ಲಿ ಓದಲು ಪ್ರಾರಂಭಿಸಿ.

English summary
If you are a kannadiga and crave to read thatskannada news on your cell phone, here is an application that brings news tip on your fingertips. Oneindia Newshunt brings you thatsKannada news on your mobile.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X