ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೆಲುವು ಗೆಲುವನ್ನೇ ಹುಟ್ಟಿಸುತ್ತದೆ

By Shami
|
Google Oneindia Kannada News

Renuka, Bangalore
ಸಕ್ಸಸ್ ಬ್ರೀಡ್ಸ್ ಸಕ್ಸಸ್ ಇಂಗ್ಲಿಷ್ ಕನ್ನಡ ಅನುವಾದ ಮಾಲಿಕೆಯ ಮೊದಲ ಕಂತು ಇಲ್ಲಿದೆ. ಗೆಲುವಿನ ಕತೆಗಳನ್ನು ಕನ್ನಡಕ್ಕೆ ತರುವ ನಮ್ಮ ಕರೆಗೆ ಓಗೊಟ್ಟ ಯುವತಿ ರೇಣುಕಾ ಮಾಡಿರುವ ಅನುವಾದ ಪ್ರಕಟಿಸಲಾಗಿದೆ. ನಮ್ಮ ಯುವ ಬರಹಗಾರರು ಬರೆದದ್ದನ್ನು ಎಡಿಟ್ ಮಾಡದೆ, ಅವರು ಬರೆದದ್ದನ್ನು ಬರೆದ ಹಾಗೆ ಇಲ್ಲಿ ಪ್ರಕಟಿಸಲಾಗುತ್ತದೆ. ಕನ್ನಡ ಭಾಷೆಯನ್ನು ಬಳಸುವ ಕಲೆ ಅವರಲ್ಲಿ ಅರಳಲಿ - ಸಂಪಾದಕ

* ರೇಣುಕ, ಬೆಂಗಳೂರು.

ಒಬ್ಬ ರೈತನಿದಾನೆ ಅವನು(ರು) ತುಂಬಾ ಉತ್ತಮ ಗುಣಮಟ್ಟದ ಬೆಳೆಯನ್ನು ಬೆಳೆಯುತ್ತಿದ್ದರು. ಅವರ ಹೊಲದಲ್ಲಿ ಪ್ರಶಸ್ತಿ ಗೆಲ್ಲಬಹುದಾದ ಜೋಳದ ಬೆಳೆ ಇರುತ್ತಿತ್ತು. ಪ್ರತಿ ವರ್ಷ ಅವನು ತಮ್ಮ ಜೋಳದ ಬೆಳೆಯನ್ನು ರಾಜ್ಯಮಟ್ಟದಲ್ಲಿ ಸ್ಪರ್ಧಿಸುತ್ತಿದ್ದರು. ಅಲ್ಲಿ ಅವರಿಗೆ ಸನ್ಮಾನ ಮತ್ತು ಪ್ರಶಸ್ತಿಗಳನ್ನು ಲಭಿಸುತ್ತಿತ್ತು. ಒಂದು ದಿನ ಪತ್ರಕರ್ತರೊಬ್ಬರು ಸಂದರ್ಶನ ಮಾಡಿದಾಗ ಅವರಿಗೆ ಒಂದು ಹೊಸ ಕೂತುಹಲಕರವಾದ ವಿಷಯ ತಿಳಿಯಿತು. ರೈತ ಬೆಳೆಯುವ ಜೋಳದ ಬಗ್ಗೆ. ರೈತ ತಮ್ಮ ಜೋಳದ ಬೀಜವನ್ನು ಅವರ ಪಕ್ಕದವರಿಗೆ ಹಂಚುವುದನ್ನು ಪತ್ರಕರ್ತರು ಗಮನಿಸಿದರು.

ಪರ್ತಕರ್ತರು ಆ ರೈತನನ್ನು ಕೇಳಿದರು "ನೀವು ಹೇಗೆ ನಿಮ್ಮ ಒಳ್ಳೆ ಗುಣಮಟ್ಟದ ಬೀಜವನ್ನು ನಿಮ್ಮ ಪಕ್ಕದವರಿಗೆ ಕೊಡುತ್ತಿರಾ ಅವರು ನಿಮ್ಮ ಜೊತೆ ಪ್ರತಿವರ್ಷ ಸ್ಪರ್ಧಿಸಿದರೆ?"

ಅದಕ್ಕೆ ಆ ರೈತ ಹೇಳುತ್ತಾರೆ "ಯಾಕೆ ತಮ್ಮ , ನಿನಗೆ ಗೋತಿಲ್ವ?" ಸುಗ್ಗಿಯಲ್ಲಿ ಫಲವತ್ತಾದ ಬೀಜದ ಬೆಳೆಯೆಲ್ಲ ಗಾಳಿ ತೂರಿಕೊಂಡು ಹೋಗುವ ಹಾಗೆ ಮಾಡುತಲ್ವ , ಆಕಸ್ಮಾತ್ ನನ್ನ ಪಕ್ಕದವನು ಕೆಳದರ್ಜೆಯ ಮತ್ತು ಕೆಳಮಟ್ಟದ ಜೋಳ ಬೆಳೆದರೆ ಅದರ ಬಹು ಪರಾಗಸ್ಪರ್ಶದಿಂದ ನನ್ನ ಬೆಳೆಯ ಗುಣಮಟ್ಟ ಕಡಿಮೆ ಆಗುತ್ತೆ, ನಾನು ಒಳ್ಳೆ ಬೆಳೆ ಬೆಳೆಯಬೇಕೆಂದರೆ ಅದಕ್ಕೆ ನಾನು ನನ್ನ ಪಕ್ಕದವರೂ ಸಹ ಒಳ್ಳೆ ಬೆಳೆ ಬೆಳೆಯುವ ಹಾಗೆ ಮಾಡಲೇಬೇಕು.

ಜೀವನಕ್ಕೆ ಸಂಬಂಧಿಸಿರುವ ಅದ್ಭುತವಾದ ಒಳ ಸತ್ಯಾಂಶವನ್ನು ಹೇಳಿದರು. ಎಲ್ಲಿಯವರೆಗೆ ಅವರ ಪಕ್ಕದ ಬೆಳೆಗಾರರ ಬೆಳೆಯು ಒಳ್ಳೆ ಗುಣಮಟ್ಟವನ್ನು ಹೊಂದಿರುವುದಿಲ್ಲವೋ ಅಲ್ಲಿಯವರೆಗೆ ಅವನ(ರೈತ) ಬೆಳೆಯ ಗುಣಮಟ್ಟವು ಉತ್ತಮವಾಗಿರುವುದಿಲ್ಲ. ಇದು ಸಹ ಜೀವನದ ಇನ್ನೊಂದು ಆಳವಾದ ಸತ್ಯಾಂಶದ ಭಾಗ.

ಯಾರು ಉತ್ತಮ ಗುಣಮಟ್ಟದಲ್ಲಿ ಇರಬೇಕು ಅಂತ ಆರಿಸಿಕೊಳ್ಳುತ್ತಿರೋ ಅವರು ಖಂಡಿತವಾಗಿ ಅವರ ಪಕ್ಕದಲ್ಲಿರುವವರಿಗೆ ಮತ್ತು ಸಹದ್ಯೋಗಿಗಳಿಗೂ ಸಹ ನೆಮ್ಮದಿಯಿಂದ ಇರಲು ಸಹಾಯ ಮಾಡಬೇಕು. ಯಾರು ಚೆನ್ನಾಗಿ ಬದುಕ ಬಯಸುತ್ತಾರೊ ಅವರು ಬೇರೆಯವರ ಬದುಕನ್ನು ಸಹ ಚೆನ್ನಾಗಿರುವ ಹಾಗೆ ಸಹಾಯ ಮಾಡಬೇಕು. ಜೀವನದ ಬೆಲೆಯನ್ನು ಅವನು ಎಷ್ಟು ದಿನ ಇದ್ದ ಅನ್ನೊದರ ಮೇಲೆ ಅಳೆಯಲ್ಲ ಅವನು ಎಷ್ಟು ಜನರನ್ನು ಮುಟ್ಟಿದ ಅನ್ನೊದರ ಮೇಲೆ ಅಳಿಯುತ್ತಾರೆ.

ಈ ಕತೆಯಿಂದ ನಾವು ಕಲಿಯಬೇಕಾದ ನೀತಿ : ಗೆಲುವು ಒಬ್ಬನಿಂದ ಆಗೋದಲ್ಲ ಅದು ಭಾಗವಹಿಸುವುದರಿಂದ ಮತ್ತು ಗುಂಪಿನ ವಿಧಾನದಿಂದಲೇ ಆಗುವಂತಹುದು. ಆದ್ದರಿಂದ ಒಳ್ಳೆ ಅಭ್ಯಾಸಗಳನ್ನ, ಉಪಾಯಗಳನ್ನ, ಹೊಸ ಜ್ಞಾನವನ್ನ ನಿಮ್ಮ ಗುಂಪಿನ ಸದಸ್ಯರೊಂದಿಗೆ ಮತ್ತು ಸಹದ್ಯೋಗಿಗಳೊಂದಿಗೆ ಹಂಚಿಕೊಳ್ಳಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X