ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸಹನಿ ಹುಡುಕಾಟಕ್ಕೆ ಅಲಿಮೊನಿ ಬಲ

By * ಶಾಮ್
|
Google Oneindia Kannada News

What lies between alimony and new honey? (Courtesy : harleymedical.co.uk)
ಬದಲಾಗುತ್ತಿರುವ ಮನುಷ್ಯ ಸ್ವಭಾವಗಳು ಮತ್ತು ಜೀವನಶೈಲಿಗಳನ್ನು ಕುರಿತು ಅಧ್ಯಯನ ಮಾಡಿದ ಒಂದು ಸಮೀಕ್ಷೆ ತನ್ನ ವರದಿಯಲ್ಲಿ ಹೀಗೆ ಹೇಳುತ್ತದೆ: ಬ್ರಿಟನ್ನಿನಲ್ಲಿ ವಿಚ್ಛೇದನ ಪಡೆದುಕೊಂಡಿರುವ ಮಹಿಳೆಯರು ಈಚೀಚೆಗೆ ಪ್ಲಾಸ್ಟಿಕ್ ಕಾಸ್ಮೆಟಿಕ್ ಸರ್ಜರಿ ದವಾಖಾನೆಗಳಿಗೆ ನುಗ್ಗುವುದು ಹೆಚ್ಚಾಗಿದೆಯಂತೆ. ಅರೆ! ವಿಚ್ಛೇದನಕ್ಕೂ ಕಾಸ್ಮೆಟಿಕ್ ಚಿಕಿತ್ಸೆಗೂ ಏನು ಸಂಬಂಧ?

ಇದೆ, ಇದೆ. ಒಂಟಿ ಜೀವನ ತುಂಬಾ ಬೋರಲ್ಲವಾ. ಒಂಟಿ ಮಹಿಳೆಗೆ ಒಬ್ಬ ಜತೆಗಾರ ಅಂತ ಬೇಕಲ್ಲವಾ? ಅಂದಹಾಗೆ, ಬೋರು ಯಾವ ಪದ? boring, boredom ಪದಗಳ ಕನ್ನಡ ರೂಪಾಂತರನಾ? ತುಂಬಾ ಜನ ಕನ್ನಡಿಗರು ಈ ಪದ ಬಳಸುತ್ತಾರೆ. ಬಳಸಿ ಬಳಸಿ ಅವರಿಗೇ ಬೋರಾಗಿಬಿಟ್ಟಿರಬೇಕು. ನಮ್ಮ ಕನ್ನಡ ಮಿತ್ರರು ಇಷ್ಟಕ್ಕೇ ಬೋರುಹೊಡೆಸಿಕೊಂಡರೆ ಇನ್ನು ಡೈವೋರ್ಸ್ ಪಡೆದುಕೊಂಡು ಪುನರ್ ಮಿಂಗಲ್ಲಿಗಾಗಿ ಕಾಯುತ್ತಿರುವ ಸಿಂಗಲ್ಲುಗಳು ಅನುಭವಿಸುವ ಬೋರಿನ ಪ್ರಮಾಣ ಎಷ್ಟಿರಬೇಕು? ಲೆಕ್ಕ ಹಾಕಿ.

ಡೈವೋರ್ಸ್ ಆದನಂತರ ಅವಳಿಗೆ ಇನ್ನೊಬ್ಬ ಪ್ರಿಯಕರನ ಬಾಹುಬಂಧನದ ಆಶ್ರಯ ಬೇಡವಾ? ಅಂಥ ಗಂಡಿಗಾಗಿ ಆಕೆಯ ನಿಂತಲ್ಲೆ ನಿಲಲಾರದ ಹುಡುಕಾಟ ಅವ್ಯಾಹತವಾಗಿ ಸಾಗುತ್ತದೆ. ಒಂಟಿ ಮಹಿಳೆಗೆ ಒಬ್ಬ ಬಾಳಸಂಗಾತಿ ಅಥವಾ ಲಿವ್ ಇನ್ ರಿಲೇಷನ್ ಶಿಪ್ ಗೆ ಗಂಡುಪ್ರಾಣಿ ಬೇಕು. ಅದ್ಸರಿ, ಈ ಲಿವ್ ಇನ್ ರಿಲೇಶನ್ ಶಿಪ್ ಪದಕ್ಕೆ ಕನ್ನಡದಲ್ಲಿ ಏನಂತಾರೆ? ಜೊತೆಜೊತೆಯಲಿ ಎಂದು ಹೆಸರಿಸಬಹುದಾ? ಈ ವಿಚಾರವಾಗಿ ಯಾವುದಕ್ಕೂ ಯುಕೆಯಲ್ಲಿರುವ ಸುಕುಮಾರ್, ಜರ್ಮನಿಯ ಗುಂಡ, ಹಳ್ಳಿಯವ ಮುಂತಾದವರು ಒಂದು ಕಾಮೆಂಟ್ ಎಸೆದರೆ ಬೆಂಗಳೂರಿನಲ್ಲಿರುವ ನನ್ನಂತಹ ಹರುಕು ಮುರುಕು ಕನ್ನಡಿಗನ ಪ್ರಯೋಜನಕ್ಕೆ ಬರತ್ತೆ. (ಚಕ್ಕುಲಿಗೆ ಇನ್ನೊಂದು ಹೆಸರು ಮುರುಕು ಅಂತ!)

ಈಗ ಕೆಲವು ಅಂಕಿಅಂಶಗಳತ್ತ ಗಮನ ಹರಿಸೋಣ. ಬ್ರಿಟನ್ನಿನಲ್ಲಿ 40 ವರ್ಷ ಮೀರಿರುವ ಮತ್ತು ವಿಚ್ಛೇದನ ಪಡೆದಿರುವ ಮಹಿಳೆಯರ ಪೈಕಿ ಶೇಕಡಾ 9ರಷ್ಟು ಮಂದಿ ಕಾಸ್ಮೆಟಿಕ್ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಲು ಸಿದ್ಧರಾಗಿದ್ದಾರೆ. ಈ ಚಿಕಿತ್ಸೆಗೆ ಧಾವಿಸುವ ಮುಖ್ಯ ಆಕರ್ಷಣೆ ಅಲಿಯಾಸ್ ಪ್ರೇರಣೆಯೆಂದರೆ ತಾನು ಮತ್ತೆ Naturally beautiful ಆಗಿ, ಅಂದರೆ ಸಹಜಸೌಂದರ್ಯವತಿಯಾಗಿ, ಸಹಜಸುಕೋಮಲೆಯಾಗಿ, ಸಹಜಮುಗ್ಧ ಸ್ನಿಗ್ಧ ರೂಪವತಿಯಾಗಿ ಕಾಣಿಸಬೇಕು ಎನ್ನುವ ಆಸೆ ಅಥವಾ ಆಶಯ ಅಥವಾ ನಿರೀಕ್ಷೆ ಅಥವಾ ಆಕಾಂಕ್ಷೆ ಅಥವಾ ಬಯಕೆ ಅಥವಾ ಹಂಬಲ (ಯಾವುದಾದರೂ ಪದ ಬಳಕೆ ಮಾಡಬಹುದು ನಿಮ್ಮಿಷ್ಟ) ಅವಳಲ್ಲಿ ಮನೆ ಮಾಡಿರತ್ತೆ.

ಮದುವೆ ಬಂಧನದಿಂದ ಕಿತ್ತುಕೊಂಡು ಆಚೆಬಂದ ಮಹಿಳೆಯರಿಗೆ ತಮ್ಮ ಆಕರ್ಷಣೆಯ ಶಕ್ತಿ (The power to attract the opposite sex) ಮತ್ತೆ ವೃದ್ಧಿಸಬೇಕೆಂಬ ಬಯಕೆ huge ಎನ್ನುತ್ತಾರೆ ಹಾರ್ಲೆ ಮೆಡಿಕಲ್ ಗ್ರೂಪ್ ನ ನಿರ್ದೇಶಕಿ ಲಿಜ್ ಡೇಲ್. ಈ Harle Medical groupನ ಚಿಕಿತ್ಸಾಲಯಗಳು ಯುನೈಟೆಡ್ ಕಿಂಗ್ ಡಂನಲ್ಲಿ 28 ಊರುಗಳಲ್ಲಿವೆ. ಕಾಸ್ಮೆಟಿಕ್ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡರೆ ಆತ್ಮವಿಶ್ವಾಸ ಹೆಚ್ಚುತ್ತದೆ ಎಂದೂ ಮಹಿಳೆಯರು ಭಾವಿಸುತ್ತಾರೆ ಎಂದು ಲಿಜ್ ಡೇಲ್ ಅಭಿಪ್ರಾಯ ಸಂಗ್ರಹಣೆ ಆಧಾರ ಅವಲಂಬಿಸಿದ ವರದಿಯಲ್ಲಿ ಹೇಳಿದ್ದಾರೆ.

ಬಹುಮುಖ್ಯ ವಿಷಯ ಹೇಳುವುದನ್ನು (ಬರೆಯುವುದನ್ನು) ಮರೆತಿದ್ದೆ. ಪ್ಲಾಸ್ಟಿಕ್ ಕಾಸ್ಮೆಟಿಕ್ ಶಸ್ತ್ರ ಚಿಕಿತ್ಸೆ ತುಂಬಾ ದುಬಾರಿ ಬಾಬತ್ತು. ಅಷ್ಟೊಂದು ಯುರೋಗಳನ್ನು ಮಹಿಳೆಯರು ಹೇಗೆ ಹೊಂದಿಸುತ್ತಾರೆ? ವಿಚ್ಛೇದನ ಪಡೆದ ಮಾಜಿ ಗಂಡ ಅಥವಾ ಗಂಡಂದಿರಿಂದ ಅಪಾರ ಪ್ರಮಾಣದ ಪರಿಹಾರಧನಗಳನ್ನು ಅವರು ಪಡೆದಿರುತ್ತಾರೆ ಅಥವಾ ಪೀಕಿಸಿರುತ್ತಾರೆ (ಪಡೆಯುವುದು/ಕೀಳುವುದು Depends on Individual cases).

ಅಲಿಮೊನಿ ಪರಿಹಾರ ಧನಬಲದಿಂದ ಬ್ರಿಟನ್ನಿನಲ್ಲಿ ಪ್ಲಾಸ್ಟಿಕ್ ಕಾಸ್ಮೆಟಿಕ್ ಶಸ್ತ್ರ ಚಿಕಿತ್ಸೆ ಹೆಲ್ತ್ ಕೇರ್ ಇಂಡಸ್ಟ್ರಿಗೆ ಹೆಚ್ಚು ಗಿರಾಕಿಗಳು ಲಭ್ಯವಾಗುತ್ತಿದ್ದಾರೆ. ಇದರಿಂದಾಗಿ ಆಸ್ಪತ್ರೆಗಳ ಲಾಭಾಂಶ ಏರಿಕೆ ಆಗುತ್ತಿದೆ ಎಂದು ಸಮೀಕ್ಷಕರು ಹೇಳುತ್ತಾರೆ. ಇಲ್ಲಿ ಪರಿಪಾರ ಪದ ಪ್ರಯೋಗ ಒಂದೊಂದು ದೇಶ ಒಂದೊಂದು ಸಮಾಜ ಒಂದೊಂದು ಸನ್ನಿವೇಶದಲ್ಲಿ ಒಂದೊಂದು ಅರ್ಥವನ್ನು ಸೂಚಿಸುತ್ತದೆ ಎನ್ನುವುದನ್ನು ತಾವು ಗಮನದಲ್ಲಿ ಇಡಬೇಕು.

ಉತ್ತರ ಕರ್ನಾಟಕದಲ್ಲಿ ನೆರೆ ಹಾವಳಿಯಿಂದ ಮನೆ, ಬೆಳೆ ಕಳೆದುಕೊಂಡವರಿಗೆ ಸರಕಾರ ಕೊಡುವ ಪರಿಹಾರವೇ ಬೇರೆ, ಸರಕಾರಿ ಬಸ್ಸು ಅಪಘಾತಕ್ಕೆ ಈಡಾಗಿ ಪ್ರಯಾಣಿಕರು ಸತ್ತರೆ ಅವರ ಸಮೀಪ ಸಂಬಂಧಿಕರಿಗೆ ಕೆ ಎಸ್ ಆರ್ ಟಿ ಸಿ ಘೋಷಿಸುವ ಪರಿಹಾರವೇ ಬೇರೆ, ಅಂಗಡಿಯಾತ ತನಗೆ ಕಳಪೆ ವಸ್ತು ಮಾರಿದ್ದಾನೆ ಎಂದು ಗ್ರಾಹಕರ ವೇದಿಕೆಯಲ್ಲಿ ದಾವೆ ಹೂಡಿ, ವಾದ ವಿವಾದದಲ್ಲಿ ಗೆದ್ದಾಗ ನ್ಯಾಯಾಧೀಶರು ಆದೇಶಿಸುವ ಪರಿಹಾರವೇ ಬೇರೆ.

ಬ್ರಿಟನ್ನಿನ ವಿಚ್ಛೇದಿತ ಮಹಿಳೆ ತನ್ನ ಮಾಜಿ ಗಂಡನಿಂದ ಪಡೆಯುವ ಪರಿಹಾರಧನಕ್ಕೆ ಅಲಿಮೊನಿ ಎನ್ನುತ್ತಾರೆ. ಕರ್ನಾಟಕದಲ್ಲಿ ವಿಚ್ಛೇದನ ಪಡೆದುಕೊಂಡ ಮಹಿಳೆಯರು ನ್ಯಾಯಾಲಯದ ಆದೇಶದ ಪ್ರಕಾರ ಸ್ವೀಕರಿಸುವ ಹಣಕ್ಕೂ ಅದೇ ಹೆಸರು. ಇಂಗ್ಲಿಷ್ ಉಚ್ಛಾರ ನಿಯಮದ ಪ್ರಕಾರ ಅದು alimony. ನಾಲಗೆ ಹೊರಳುವಾಗ ಅಪ್ಪಿತಪ್ಪಿ ಅಲಿಮನಿ ಎಂದು ಉಚ್ಛರಿಸಿದರೆ, ಉಚ್ಛಾರದೋಷ ಅಥವಾ ಅರ್ಥ ವಿಕಲ್ಪವೇನೂ ಆಗದು!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X