ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಯಿಲ್ಲಿ ಸಂಭವಿಸುವವರು ಯಾರು?

By * ಶಾಮ್
|
Google Oneindia Kannada News

C Ashwath (courtesy : stephenprayog.com)
ಕನ್ನಡ ಸುಗಮ ಸಂಗೀತ ಕ್ಷೇತ್ರದ ಪಿತಾಮಹರು ಪಿ ಕಾಳಿಂಗರಾಯರು. ಐದೋ ಆರೋ ಪೆಗ್ ಗುಂಡು ಹಾಕಿ 'ಬ್ರಹ್ಮ ನಿಂಗೆ ಜೋಡಿಸ್ತೀನಿ ಎಂಡ ಮುಟ್ಟಿದ ಕೈನ' ಎಂದು ಹಾಡುತ್ತಿದ್ದರೆ ಇಡೀ ಸಂಗೀತ ಸಭೆಗೆ ಕಿಕ್ ಹೊಡೆಯುತ್ತಿತ್ತು. ಗಂಟಲು ತುಂಬಿ ಉಕ್ಕಿ ಹರಿದ ಆ ಹಾಡಿನ ಸಾಹಿತ್ಯ, ರಾಗ ಮತ್ತು ಲಯದಿಂದಾಗಿ ಶ್ರೋತೃಗಳಿಗೆ ಖರ್ಚಿಲ್ಲದೆ ಅಮಲು.

ಆನಂತರದ ಹಾಡು 'ಇಳಿದು ಬಾ ತಾಯೆ ಇಳಿದು ಬಾ' ಹಾಡುತ್ತಿದ್ದರೆ ಗಂಗೆ ಧರೆಗಿಳಿದು ಬರಲೇಬೇಕು. ಎಂಡ ಎಂಬ ಶಬ್ದ ಕೇಳಿದರೆ ಇರಿಸುಮುರುಸು ಪಟ್ಟುಕೊಳ್ಳುವ ರಸಿಕ ವರ್ಗಕ್ಕೆ ಅಂಬಿಕಾತನಯದತ್ತರ ಗೀತೆ ಆಲಿಸಿದ ನಂತರವೇ ಎಂಡದ ಮೈಲಿಗೆಯಿಂದ ಮುಕ್ತಿ.

ರಾಯರು ಕಾಲವಾದನಂತರ ಆ ಸ್ಥಾನವನ್ನು ತುಂಬಿದವರು ಮೈಸೂರು ಅನಂತಸ್ವಾಮಿಗಳು. ರತ್ನನ ಪದಗಳಿಗೆ ಜೀವ ಮತ್ತು ಜೀವಾತ್ಮ ತುಂಬಿದ ಗಾಯಕರು ಅವರು. ಹಾರ್ಮೋನಿಯಂ ನುಡಿಸುತ್ತಾ ಎದೆ ತುಂಬಿ ಹಾಡುತ್ತಿರುವ ಸ್ವಾಮಿಗಳ ಚಿತ್ರ ನಮ್ಮ ಕಣ್ಣುಂದೆ ಹಾಗೇ ಇರುತ್ತದೆ. ರಾಜು ಅನಂತಸ್ವಾಮಿಯವರು ಖಾಲಿಯಾದ ತಂದೆಯ ಸ್ಥಾನವನ್ನು ಇನ್ನೇನು ತುಂಬಿದರು ಎನ್ನುವಾಗಲೇ ಮದಿರೆಯ ಪಾಲಾಗಿದ್ದು ವಿಧಿ ನಿಯಾಮಕ.

ಕನ್ನಡದ ಪದ್ಯಗಳಿಗೆ ರಾಗ ಮಾಧುರ್ಯ ಬೆರೆಸುವ ಅನೇಕ ಸುಗಮ ಸಂಗೀತ ಗಾಯಕ ಗಾಯಕಿಯರು ನಮ್ಮೊಡನಿದ್ದಾರೆ. ಆದರೆ ಸಮಕಾಲೀನ ಸಂದರ್ಭದಲ್ಲಿ ಅವರ್ಯಾರೂ ಅಶ್ವಥ್ ಅವರು ಏರಿದ ಎತ್ತರಕ್ಕೆ ಏರಲಿಲ್ಲ. ಅದಕ್ಕೆ ಕಾರಣಗಳು ಕನಿಷ್ಠ ಮೂರು. ಶಿಶುನಾಳಾಧೀಶರನ್ನು ಅವರು ಕನ್ನಡಿಗರ ಮನೆಗೆ ಕರೆತಂದದ್ದು, ಇನ್ನೊಂದು ಉಳುವ ಯೋಗಿಯ ರೇರೇರೇ ರಾ ಕಂಚಿನ ಕಂಠ. ಮತ್ತೊಂದು ಅಶ್ವಥ್ ಅವರು ತಮಗೆ ತಾವೇ ಕೊಟ್ಟುಕೊಂಡ ನೆಗೆಟಿವ್ ಟಚ್.

ಅವರ ಹಾಡುಗಳನ್ನು ಜನ ಇಷ್ಟಪಟ್ಟು ಕೇಳುತ್ತಿದ್ದರು ನಿಜ, ಆದರೆ ಅವರ ಕೆಲವು ಮಾತುಗಳು, ಕೆಲವು ಸ್ಟೇಟ್ ಮೆಂಟುಗಳು ಚರ್ಚೆಗೆ ವಸ್ತುಗಳಾಗುತ್ತಿದ್ದವು. ಅನೇಕ ವೇಳೆ ಅಶ್ವಥ್ ಅವರು ಖಡಾಖಂಡಿತವಾಗಿ ಮಾತನಾಡುತ್ತಿದ್ದರು. ಅವರ ಮಾತುಗಳಲ್ಲೇ ವೈರುಧ್ಯಗಳೂ ತಾಂಡವವಾಡುತ್ತಿದ್ದವು. ಹಾಗಾಗಿ ಅವರು ಡಿಬೇಟಬಲ್ ಆದರು, ಸುಗಮ ಸಂಗೀತದ ಮಾಳಿಗೆಯಮೇಲೆ ಇನ್ ಎವಿಟಬಲ್ ಆದರು.

ಮುಂದೆ ಇಲ್ಲಿ ಬಾಯಿಲ್ಲಿ ಸಂಭವಿಸುವವರು ಯಾರು?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X