ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಮೆಂಟಿಗರ ಮೇಲೊಂದು ಕಾಮೆಂಟ್

By Super Admin
|
Google Oneindia Kannada News

SK Shama Sundara
ಸಹೃದಯ ಓದುಗರಿಗೆ ದಟ್ಸ್ ಕನ್ನಡ ಒದಗಿಸಿರುವ ಮುಕ್ತವಾದ ಕಾಮೆಂಟ್ ಸ್ಪೇಸನ್ನು ಬಹುಶಃ ಯಾವ ಅಂತರ್ಜಾಲ ತಾಣವೂ ನೀಡಿರಲಾರದು. ಸುದ್ದಿಗಳಿಗೆ, ಲೇಖನಗಳಿಗೆ ತಮಗನ್ನಿಸಿದಂತೆ ಓದುಗರು ಅಷ್ಟೇ ಮುಕ್ತವಾಗಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಹೊಗಳಿದ್ದಾರೆ, ತೆಗಳಿದ್ದಾರೆ, ತಪ್ಪಾದಾಗ ಎಚ್ಚರಿಸಿದ್ದಾರೆ, ಕೆಲವರು ಇಲ್ಲಸಲ್ಲದ್ದನ್ನೂ ಬರೆದಿದ್ದಾರೆ. ಏನೇ ಆಗಲಿ, ಅದು ನಿಮ್ಮ ಸ್ಥಳ. ಅದನ್ನು ಸ್ವಚ್ಛವಾಗಿಟ್ಟುಕೊಳ್ಳಿ ಎಂಬುದು ನಮ್ಮ ವಿನಮ್ರ ಪ್ರಾರ್ಥನೆ.

* ಸಂಪಾದಕ

ಕಾಮೆಂಟಿಗ್ಗರಿಗೆ ಯಾವುದೇ ಕಷ್ಟಕರವಾದ ನಿಯಮಗಳನ್ನು ನಮ್ಮಲ್ಲಿ ಹೇರಿಲ್ಲವಾದರೂ, ಕೆಲವು ಸಾರ್ವಜನಿಕ ಆರೋಗ್ಯ ರಕ್ಷಣಾ ದೃಷ್ಟಿಯಿಂದ ಪಾಲಿಸಲೇಬೇಕಾದ ನಿಯಮಗಳನ್ನು ಪಾಲಿಸಲೇಬೇಕು. ಪ್ರತಿಕ್ರಿಕೆಯೆಗಳು ವಿಮರ್ಶಾತ್ಮಕವಾಗಿದ್ದರೂ ಸೃಜನಶೀಲವಾಗಿರಲಿ. ವ್ಯಕ್ತಿಕೇಂದ್ರಿತವಾಗಿದ್ದರೂ ಗೌರವಯುತವಾಗಿರಲಿ. ಕಾಮೆಂಟ್ ಓದುವ ಸಹೃದಯರಿಗೂ, ಕಾಮೆಂಟ್ ಎಡಿಟ್ ಮಾಡುವ ನಮ್ಮ ತಂತ್ರಜ್ಞರಿಗೂ ಕಿರಿಕಿರಿಯಾಗಬಾರದು ಎಂಬುದನ್ನು ಎಲ್ಲರೂ ಮನಗಂಡರೆ ಸಾರ್ಥಕ.

ಕಾಮೆಂಟಿಗರಲ್ಲಿ ಹಲವರು ಖ್ಯಾತರು, ಕುಖ್ಯಾತರಾಗಿ ಹೋಗಿದ್ದಾರೆ. ಯಾರು ಯಾವ ಕ್ಯಾಟೆಗರಿ ಅಂತ ಸೂಚಿಸುವ ಕೆಲಸಕ್ಕಿಳಿಯದೆ, ಕೆಲವರ ಹೆಸರನ್ನು ಧೈರ್ಯವಾಗಿ ಹೆಸರಿಸಬಹುದು. ನಮ್ಮ ಕಾಮೆಂಟಿಗರಲ್ಲಿ ನಾಗರಾಜ ರಾವ್, DM Sagar, Paaaaaaaaaaaaaaartha, ಹಳ್ಳಿ ಹೈದ, ತಿಮ್ಮ, ಅಮೆರಿಕನ್ನಡಿಗ ಮುಂತಾದವರು ನಾನಾ ಕಾರಣಕ್ಕೆ ಪ್ರಸಿದ್ಧಿ ಪಡೆದಿದ್ದಾರೆ. ಸಮಾಜದ ಎಲ್ಲಾ ಬಗೆಯ ಆಗುಹೋಗುಗಳಿಗೆ ಸದಾ ಸ್ಪಂದಿಸುತ್ತಾ ನಮ್ಮ ಕಾರ್ಯಕ್ಕೆ ಸ್ಫೂರ್ತಿ ನೀಡುವ, ನಮ್ಮನ್ನು ಬೈದು ಬುದ್ಧಿ ಹೇಳುವ ಎಲ್ಲಾ ಸಹೃದಯಕಾಮೆಂಟಿಗರಿಗೆ ನಮ್ಮ ಅನಂತಾನಂತ ವಂದನೆಗಳು.

ಸೂಚನೆಗಳು

ದಯವಿಟ್ಟು ಇನ್ಮುಂದೆ ಕಾಮೆಂಟ್ ಮಾಡುವ ಮುನ್ನ ಈ ಕೆಳಗಿನ ಅಂಶಗಳನ್ನು ಮನದಲ್ಲಿಟ್ಟುಕೊಂಡು, ಮನಸೋ ಇಚ್ಛೆ ಕಾಮೆಂಟ್ ಮಾಡಿ. ಎಷ್ಟಾದರೂ ಅದು ನಿಮಗೆ ಮೀಸಲಾದ ಜಾಗ. ಮೀಸಲಾತಿ ಹಕ್ಕು ಚಲಾಯಿಸಿ...

* URL, ವೆಬ್ ತಾಣ ವಿಳಾಸಗಳನ್ನು ಹಾಕಬೇಡಿ. ಉದಾ: http://www.xyz.com or www.rgy.com ಹೂಂ ಹೇಗೆ ಹಾಕಿದರೂ ಕಾಮೆಂಟ್ ಸ್ವೀಕರಿಸುವುದಿಲ್ಲ. ಆಮೇಲೆ ಸಿಟ್ಟು ಮಾಡಿಕೊಂಡು ಅದನ್ನೇ ಇಪ್ಪತ್ತು ಸಾರಿ ಹಾಕಬೇಡಿ.
* ದಯವಿಟ್ಟು ಒಂದು ಭಾಷೆಯನ್ನು ಬಳಸಿ ಅಥವಾ ಹಲವು ಭಾಷೆಗಳನ್ನು ಸರಿಯಾಗಿ ಬಳಸಿ.
ಉದಾ: ನಾನು ಕನ್ನಡಿಗ, I m kannadiga, i m ಕನ್ನಡಿಗ
ಹೀಗೆ ಬೇಡ: ನಾನು kannadiga ಬಟ್ ಲಿವಿಂಗ್ ಇನ್ ಕೇರಳ; but avanu keraladalli vasamaadta iddane avanu kannadiga alla
* ವ್ಯಾಕರಣ ದೋಷ, ಪದ ಬಳಕೆ ಬಗ್ಗೆ ಚಿಂತಿಸಬೇಡಿ. ಭಾಷೆ ಸ್ವಚ್ಛವಾಗಿದ್ದರೆ ಸಾಕು.
* ಗೂಗಲ್ ಕನ್ನಡ ಟೂಲ್ ಬಳಸಿ ಕನ್ನಡದ್ದೇ ಕಾಮೆಂಟ್ ಮಾಡಬಹುದು. ಅದನ್ನು ಸಮರ್ಪಕವಾಗಿ ಬಳಸಿ.
* ತೀರಾ ದೊಡ್ಡದಾದ ಕಾಮೆಂಟ್ ಹಾಕುವ ಮನಸ್ಸಾದರೆ ದಯವಿಟ್ಟು ಮೇಲ್ ಮಾಡಿ. ಅದನ್ನು ಪರಿಶೀಲಿಸಿ ಪ್ರಕಟಿಸಲಾಗುವುದು.
* ಉದ್ದುದ್ದ ಕಾಮೆಂಟ್ ಓದಲು ಕಷ್ಟ . ಅಲ್ಲದೆ ಕಾಮೆಂಟ್ ಬಾಕ್ಸ್ ಗೆ ಪರಿಮಿತಿ ಕೂಡ ಇರುತ್ತದೆ.
* ಗೌಡರು, ಸ್ವಾಮೀಜಿಗಳು, ಯಡಿಯೂರಪ್ಪ, ರಾಜ್ ಕುಟುಂಬ, ಮೂರ್ತಿಗಳು ಎಲ್ಲ ನಮ್ಮವರೇ. ಯಾರದೇ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸುವಾಗ ಸಭ್ಯವಾದ ರೀತಿಯಲ್ಲಿ ಎಚ್ಚರಿಕೆ, ಸಲಹೆ ಸೂಚನೆ ನೀಡುವುದು ನಿಮ್ಮೆಲ್ಲರ ಹೊಣೆಯಾಗಿದೆ ಎಂಬುದನ್ನು ಮರೆಯಬೇಡಿ.
* ಆರೋಗ್ಯಕರ ಚರ್ಚೆ ಬೆಳೆಸಿ, ಕೆಲ ಕಾಮೆಂಟಿಗರಿಗೆ ಹೆದರಿ, ತಮ್ಮ ಹೆಸರಿನಲ್ಲಿ ಕಾಮೆಂಟ್ ಮಾಡುವುದಿರಲಿ, ಬೇನಾಮಿ ಹೆಸರಿನಲ್ಲೂ ಅಭಿಪ್ರಾಯ ಮಂಡಿಸಲು ಹೆದರಿದ್ದೇವೆ ಎಂದು ಅನೇಕರು ನೊಂದು ಪತ್ರ ಬರೆದಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X