ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನವಿರೋಧಿ ಬಿಳಿಮನೆ ವೆಬ್ಸೈಟ್

By Staff
|
Google Oneindia Kannada News

The White House website is oneway online
ನಾವು ನೇತು ಹಾಕಿರುವುದನ್ನು ನೀನು ಓದು, ನಿನ್ನ ಅಭಿಪ್ರಾಯ ನಮಗೆ ಬೇಡ ಎನ್ನುತ್ತಿದೆ ಶ್ವೇತಭವನದ ಹೊಸಮಾಧ್ಯಮ.

* ಶಾಮಿ

ಅಧಿಕಾರ ವಹಿಸಿಕೊಂಡ ಕ್ಷಣದಿಂದಲೇ ಕಾರ್ಯತತ್ಪರರಾದ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಕೈಗೊಂಡ ಹಲವು ನಿರ್ಣಯಗಳಲ್ಲಿ ಎರಡು ವಲಯಗಳು ಎದ್ದು ಕಾಣುತ್ತವೆ. 1) ಭಯೋತ್ಪಾದಕರನ್ನು ಬಗ್ಗು ಬಡಿಯಿರಿ ಇಲ್ಲವೇ ನಿಮ್ಮ ದೇಶಕ್ಕೆ ಸೇನೆಯೇತರ ಅಮೆರಿಕಾ ನೆರವನ್ನು ನಿಲ್ಲಿಸಲಾಗುತ್ತದೆ ಎಂಬ ಎಚ್ಚರಿಕೆಯನ್ನು ಪಾಕಿಸ್ತಾನಕ್ಕೆ ಕೊಟ್ಟದ್ದು. 2) ಒಬಾಮರ ಆಡಳಿತ ಆರಂಭವಾದ ಕೂಡಲೇ, ಅಂದರೆ ಜನವರಿ 20ರ ಮಂಗಳವಾರ ಮಧ್ಯಾನ್ಹವೇ ಶ್ವೇತಭವನದ ಅಂತರ್ ಜಾಲ ತಾಣಕ್ಕೆ ಹೊಸ ಸುಣ್ಣಬಣ್ಣ ಬಳಿದದ್ದು.

ಪಾಕಿಸ್ತಾನ ಸರಕಾರದ ಠೇಂಕಾರ ಈ ಎಚ್ಚರಿಕೆಯ ಮಾತುಗಳಿಂದ ಕಡಿಮೆಯಾದ ಲಕ್ಷಣಗಳು ಇಲ್ಲ. ಆದರೆ, ಮುಂಚೆಗಿಂತ ವೈಟ್ ಹೌಸ್ ವೆಬ್ ಸೈಟ್ ಈಗ ಸ್ಪಲ್ಪ ಚೆನ್ನಾಗಿ ಕಾಣಲಾರಂಭಿಸಿದೆ. ಲವಲವಿಕೆ ಇದೆ. ಕಣ್ಣಿಗೆ ತಂಪೆನಿಸುವ ಬಣ್ಣ ಬಳಸನಾಗಿದೆ. ಫೋಟೋಗಳು ತುಂಬಿಕೊಂಡಿದ್ದು ನೋಟ ಮತ್ತು ಮಾಟ ಬಳಕೆಗೆ ಯೋಗ್ಯವಾಗಿದೆ. ಇದಕ್ಕೆಲ್ಲ ಕಾರಣ ವೆಬ್ ಸೈಟಿನ ಉಸ್ತುವಾರಿಯನ್ನು blogger-in-chief of sorts ಮೆಕಾನ್ ಫಿಲಿಫ್ಸ್ ವಹಿಸಿಕೊಂಡಿರುವುದು. ಮೆಕಾನ್ ಅವರು ಶ್ವೇತಭವನಕ್ಕೆ ಹೊಸ ಮಾಧ್ಯಮದ ನಿರ್ದೇಶಕರೂ ಆಗಿರುತ್ತಾರೆ.

ಶ್ವೇತಭವನ ಅಂತರ್ ಜಾಲ ತಾಣ ಅನೇಕ ಮಾಹಿತಿಗಳನ್ನು ನೀಡುತ್ತದೆ. ಅವುಗಳಲ್ಲಿ ಮುಖ್ಯವಾದದ್ದು ಶ್ವೇತಭವನದ ನೌಕರರ ಬಗೆಗೆ, ಆಡಳಿತಾತ್ಮಕ ನೀತಿ ನಿಯಮಗಳು ಹಾಗೂ ಶ್ವೇತಭವನದ ಪ್ರಕಟಣೆ, ಒಟ್ಟಾರೆ ಅಮೆರಿಕಾ ಆಡಳಿತದ ಆಶೋತ್ತರಗಳನ್ನು ಬಿಂಬಿಸುವುದೇ ಆಗಿದೆ. ಇಷ್ಟೆಲ್ಲ ಇದ್ದರೂ ಶ್ವೇತಭವನದ ವೆಬ್ ಸೈಟ್ ಎದುರಿಸುತ್ತಿರುವ ಕೊರತೆಯೆಂದರೆ Online comments server. ಚಾರಣಿಗರ ಅಭಿಪ್ರಾಯ, ಒಲವು ನಿಲವು, ಕೋಪತಾಪಗಳನ್ನು ದಾಖಲಿಸಲು ಜಾಗಮಾಡಿಕೊಡುವ ಕಾಮೆಂಟ್ಸ್ ಅಂಕಣದ ಸಲಕರಣೆಯನ್ನು ಜೋಡಿಸಿಲ್ಲ.

Change has come to America; welcome to the the era of service ಎಂಬ ಘೋಷವಾಕ್ಯದಿಂದ ತೆರೆದುಕೊಳ್ಳುವ http://www.whitehouse.gov/ ವೆಬ್ ತಾಣಕ್ಕೂ ದಟ್ಸ್ ಕನ್ನಡ ಅಂತರ್ ಜಾಲ ತಾಣಕ್ಕೂ ಇರುವ ವ್ಯತ್ಯಾಸ ಇದೊಂದೇ!

The look and feel of the site and the navigation bar is changed for better but online commenting facility for the visitor is conspicuously blocked. The interactive tool is missing on the most wanted web portal today ಎಂದು ಕನ್ನಡ ವೆಬ್ ಜಾಲವನ್ನು ಹಾಗೂ ಅಮೆರಿಕಾ ಆಡಳಿತ ಮಾಹಿತಿಯನ್ನು ನಿತ್ಯ ತಡಕಾಡುವ ದಟ್ಸ್ ಕನ್ನಡ ಬಳಕೆದಾರರೊಬ್ಬರು ಹೇಳುತ್ತಾರೆ.

ಪೂರಕ ಓದಿಗೆ

ಕರಿಬಿಳಿ ಅಧ್ಯಕ್ಷರ ಕೊನೆಯ ಸಂಭಾಷಣೆಕರಿಬಿಳಿ ಅಧ್ಯಕ್ಷರ ಕೊನೆಯ ಸಂಭಾಷಣೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X