ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುದ್ದಿ ಸಾರಂಗಿ : ಉಚಿತ ಕನ್ನಡ ಸಂಜೆಪತ್ರಿಕೆ

By ಎಸ್.ಕೆ. ಶಾಮ ಸುಂದರ
|
Google Oneindia Kannada News
Click on the image to see a newsletter sample page
ಸ್ಯಾಂಪಲ್ ಪುಟಕ್ಕಾಗಿ ಇಲ್ಲಿ ಕ್ಲಿಕ್ಕಿಸಿ
ಪ್ರತಿದಿನ ಮುಂಜಾನೆ ಮನೆಬಾಗಿಲಿಗೆ ಬಂದು ಬೀಳುವ ಕನ್ನಡ ಪತ್ರಿಕೆಯಂತೆ ನಿಮ್ಮ ಈ-ಮೇಲ್ ಬುಟ್ಟಿಗೆ ಸಾಯಂಕಾಲದ ಹೊತ್ತು ಒಂದು ಸುದ್ದಿಪತ್ರ ಬರುತ್ತದೆ. ಅದರ ಹೆಸರು "ಸುದ್ದಿಸಾರಂಗಿ". ಅಂದಂದಿನ ಸುದ್ದಿ ಸಮಾಚಾರಗಳನ್ನು ಒಟ್ಟುಮಾಡಿ, ಒಪ್ಪವಾಗಿ ಜೋಡಿಸಿ ಚುಟುಕಾಗಿ ಬಿತ್ತರಿಸುವ ಮತ್ತು ಆ ಮೂಲಕ ನಿಮ್ಮನ್ನು ಆನ್ಲೈನ್ ಓದಿಗೆ ಸಜ್ಜುಗೊಳಿಸುವ ಸಾಲಂಕೃತಸಮಾಚಾರಪತ್ರ "ಸುದ್ದಿಸಾರಂಗಿ"ಯನ್ನು ದಟ್ಸ್‌ಕನ್ನಡ ಬಳುವಳಿಯಾಗಿ ನೀಡುತ್ತಿದೆ, ಒಪ್ಪಿಸಿಕೊಳ್ಳಿರಿ.

ವಿಶೇಷ ಸಂದರ್ಭಗಳಲ್ಲಿ,ವಿಪರೀತ ಸನ್ನಿವೇಶಗಳಲ್ಲಿ ಸುದ್ದಿ ಸಂಕ್ಷೇಪಗಳನ್ನು ಯಾವ ಕ್ಷಣದಲ್ಲಾದರೂ ಸುದ್ದಿಸಾರಂಗಿಯ ಮೂಲಕ ನಿಮ್ಮ ಗಮನಕ್ಕೆ ತರಲಾಗುವುದು. ಸುದ್ದಿಸಾರಂಗಿ ಸಾಮಾನ್ಯವಾಗಿ ಪ್ರತಿದಿನ ಸಂಜೆ 6ರ ಹೊತ್ತಿಗೆ ನಿಮ್ಮ ಈ-ಮೇಲ್ ಕದ ತಟ್ಟುವುದು ವಾಡಿಕೆ. ದಟ್ಸ್‌ಕನ್ನಡ ಪತ್ರಿಕೆಯ ಫಾಂಟುಗಳನ್ನು ಯೂನಿಕೋಡ್‌ಗೆ ಪರಿವರ್ತಿಸಿರುವುದರಿಂದ ಸುದ್ದಿಸಾರಂಗಿಯ ಕನ್ನಡ ಓದುವುದಕ್ಕೂ ನಿಮಗೇನೂ ತೊಂದರೆಯಾಗುವುದಿಲ್ಲ. ಲಿಪಿ ಸಮಸ್ಯೆ ಉದ್ಭವವಾಗುವುದಿಲ್ಲ.

ಆಕಸ್ಮಾತ್ ಓದುವುದಕ್ಕೆ ನಿಮಗೇನಾದರೂ ತೊಂದರೆ ಆಯಿತು ಎಂದಿಟ್ಟುಕೊಳ್ಳಿ. ಆಗ, ಫಾಂಟ್ ಸಹಾಯದ ಪುಟ ನೋಡಬಹುದು. ಅಥವಾ, ನಿಮ್ಮ ತೊಂದರೆಗಳನ್ನು, ಸಲಹೆಗಳನ್ನು ನಮಗೆ ಬರೆದು ತಿಳಿಸಬಹುದು. ಮುಖ್ಯವಾಗಿ "ಸುದ್ದಿಸಾರಂಗಿ" ಉಚಿತವಾಗಿ ಲಭ್ಯವಾಗುವ ಕನ್ನಡ ಅಂತರ್ಜಾಲ ಸೇವೆಯಾಗಿರುತ್ತದೆ. ನೀವು ಇಂದೇ ಚಂದಾದಾರರಾಗಿರಿ. ನಿಮ್ಮ ಸ್ನೇಹಿತರಿಗೆ, ಸಹೋದ್ಯೋಗಿಗಳಿಗೆ ಮತ್ತು ಅಕ್ಕಪಕ್ಕದವರಿಗೆ ಈ ಸೇವೆಯನ್ನು ನಿರಂತರವಾಗಿ ಪಡೆಯುವಂತೆ ಪ್ರೇರೇಪಿಸಿ.

ಚಂದಾದಾರರಾಗುವುದು ಅತ್ಯಂತ ಸುಲಭ. ಇಲ್ಲಿಕೊಟ್ಟಿರುವ ಲಿಂಕನ್ನು ಕ್ಲಿಕ್ಕಿಸಿ, ನಂತರ ನಿಮ್ಮ ಇ-ಮೇಲ್ ವಿಳಾಸ ಸಮೂದಿಸಿ ಸಬ್‌ಸ್ಕ್ರೈಬ್ ಬಟನ್ ಒತ್ತಿರಿ. ಒಂದು ವೇಳೆ ಚಂದಾದಾರರು ಯಾವಾಗಲಾದರೂ ಪಟ್ಟಿಯಿಂದ ನಿಮ್ಮ ವಿಳಾಸವನ್ನು ತೆಗೆಯಬೇಕೆಂಬ ಅಪೇಕ್ಷೆ ಇದ್ದರೆ ಅದನ್ನೂ ತಿಳಿಸಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X