ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ಲಾಗ್‌ಮಂಡಲದಲ್ಲಿ ಗಾಳಿಪಟ ಚಿತ್ರವಿಮರ್ಶೆ

By ಶಾಮಿ
|
Google Oneindia Kannada News

Galipata director Yograj Bhatಕನ್ನಡ ಚಲನಚಿತ್ರಗಳನ್ನು ನೋಡುವುದು ಮತ್ತು ಚಿತ್ರದ ಬಗೆಗೆ ಜಟಾಪಟಿ ಚರ್ಚೆ ಮಾಡುವುದು ಇತ್ತೀಚಿನ ಹೊಸ ಟ್ರೆಂಡು. ಕಾಫಿ ಡೆ ಒಳಗೆ ಕುಳಿತು ಕಾಫಿ ಹೀರುವಾಗ, ಗರುಡಾ ಮಾಲ್ ನಲ್ಲಿ ಅಡ್ಡಾಡುತ್ತಿರುವಾಗಲೂ ಛಾಯಾಗ್ರಹಣವಂತೆ, ನಿರ್ದೇಶನವಂತೆ, ಪ್ರಿಂಟ್ ಎಷ್ಟು ಹಾಕಿದ್ದಾರಂತೆ, ರಿಲೀಜ್ ಯಾವಾಗಂತೆ, ಬಾಕ್ಸ್ ಆಫೀಸು ಹಿಟ್ ಅಂತೆ ಕಂತೆ, ಸಿನಿಮಾಗಿಂತ ವಿಮರ್ಶೆ ಚೆನ್ನಾಗಿದೆಯಂತೆ, ವಿಮರ್ಶೆಗಿಂತ ಸಿನಿಮಾ ಚೆನ್ನಾಗಿದೆಯಂತೆ ಎಂಬಂತಹ ಶಬ್ದಗಳು ಕಿವಿಗೆ ಬೀಳುತ್ತಿರುವುದು ಸಾಮಾನ್ಯಸಂಗತಿಯಾಗಿದೆ.

ಉತ್ತಮ , ಮಧ್ಯಮ, ಅಧಮ.. ಮೂರೂ ದರ್ಜೆ ಚಿತ್ರಗಳ ಬಗೆಗೆ ತಮ್ಮ ಜತೆಗಾರ ಕನ್ನಡಿಗರು ಗಂಭೀರ ಮಾತುಕತೆ ನಡೆಸುತ್ತಿರುವುದನ್ನು ಕೇಳುವುದಕ್ಕೇ ಚೆಂದ. ಅಂತೂ ಚಿತ್ರರಂಗಕ್ಕೆ ಶುಭ ಕಾಲ ಬಂದೈತೆ ಎಂದರ್ಥ. ಯಾಕೆಂದರೆ, ಉದಾಸೀನಕ್ಕಿಂತ ಟೀಕೆಗಳೇ ಮೇಲು ! ಬ್ಲಾಕ್‌ನಲ್ಲಿ ಟಿಕೆಟ್ ಖರೀದಿಸಿ, ಪೂರ್ತಿ ಸಿನಿಮಾ ನೋಡಿ , ಪರಸ್ಪರ ಅಭಿಪ್ರಾಯ ಸಂಗ್ರಹಣೆ ಮಾಡಿ, ಚರ್ಚೆ ಗೋಷ್ಠಿಗಳಲ್ಲಿ ಕನ್ನಡ ಚಿತ್ರಗಳು ಜೀವಂತವಾಗಿರುವುದು ಅತ್ಯಂತ ಸ್ವಾಗತಾರ್ಹ ಬೆಳವಣಿಗೆ. ಕನ್ನಡಿಗರ ಮೊಬೈಲುಗಳಲ್ಲೂ ಚಿತ್ರದ ಹಾಡುಗಳ ರಿಂಗ್ ಟೋನ್ ಗಳು ರಿಂಗಿಣಿಸುತ್ತಿರುವುದು ಕನ್ನಡ ಚಿತ್ರಗೀತೆಗಳು ಪಾಪ್ಯುಲರ್ ಆಗಲು ಸಹಾಯಕವಾಗಿವೆ.

ನಿಮಗೆಲ್ಲ ತಿಳಿದಿರುವ ಹಾಗೆ 'ಮುಂಗಾರು ಮಳೆ' ಚಿತ್ರರಂಗಕ್ಕೆ ನವಚೈತನ್ಯ ಕೊಟ್ಟಿತು. ಈ ನವೋಲ್ಲಾಸವನ್ನು ಕಾಪಿಟ್ಟುಕೊಳ್ಳುವ ಹೊಣೆ ಸೃಜನಶೀಲ ಚಿತ್ರಕರ್ಮಿಗಳಿಗೆ ಬಿಟ್ಟ ವಿಷಯ. ಇದೇ ಯೋಗರಾಜ ಭಟ್, ಇದೇ ಗಣೇಶ್ ಅವರ ಹೊಸ ಚಿತ್ರ , ಈ ವಾರ ತೆರೆಕಂಡ 'ಗಾಳಿಪಟ' ನಾನಾ ಕಾರಣಗಳಿಂದಾಗಿ ಸುದ್ದಿಯಲ್ಲಿದೆ. ಗಾಳಿಪಟವನ್ನು ನೋಡುವುದರ ಜೊತೆ ಅದರ ಬಗ್ಗೆ ಒಪಿನೀಯನ್ ಕೊಡುವುದೇ ಒಂಥರಾ ಫ್ಯಾಷನ್ ಆಗಿದೆ. ಪತ್ರಿಕೆಗಳಲ್ಲಿ ಪತ್ರಕರ್ತರು ಬರೆದ ವಿಮರ್ಶೆಗಳು ಬರುತ್ತವೆಯೇ ಹೊರತು ಅಲ್ಲಿ ಜನಸಾಮಾನ್ಯರ ಅಭಿಪ್ರಾಯಗಳಿಗೆ ಜಾಗವಿಲ್ಲ. ಸಾಮಾನ್ಯ ನೋಡುಗರ ಅಭಿಪ್ರಾಯ ಅಭಿವ್ಯಕ್ತಪಡಿಸಲು ಬ್ಲಾಗ್ ಉತ್ತಮ ವೇದಿಕೆ ಕಲ್ಪಿಸಿಕೊಟ್ಟಿದೆ.

ಈ ಮಧ್ಯೆ, ಚಿತ್ರದ ಬಗೆಗೆ ಅನೇಕ ಮಾಧ್ಯಮಗಳಲ್ಲಿ ಅವರರವರ ಭಾವಕ್ಕೆ ತಕ್ಕಂತೆ ಅಭಿಪ್ರಾಯಗಳು ಮೂಡಿರುತ್ತವೆ. ಅಂತೆಯೇ, ಬ್ಲಾಗುಗಳಲ್ಲಿಯೂ ಗಾಳಿಪಟದ ವಿಮರ್ಶೆಗಳು ಹರಿದಾಡುತ್ತಿವೆ. ಪತ್ರಿಕೆಯಲ್ಲಿನ ವಿಮರ್ಶೆಗಳನ್ನು ಚಿತ್ರ ನಿರ್ಮಾಪಕರು ಮತ್ತು ನಿರ್ದೇಶಕರು ಗಂಭೀರವಾಗಿ ಪರಿಗಣಿಸುತ್ತಾರೆಯೇ ಹೊರತು, ಬ್ಲಾಗ್‌ಗಳತ್ತ ಅವರ ಗಮನ ಹರಿಯುವುದೇ ಇಲ್ಲ ಎನ್ನುವುದು ಅಷ್ಟೇ ಸತ್ಯ. ಆದರೆ, ಚಿತ್ರಕರ್ಮಿಗಳು ಬ್ಲಾಗ್‌ಗಳನ್ನೂ ನೋಡಲಿ, ಸಾಧ್ಯವಾದರೆ ತಿದ್ದಿಕೊಳ್ಳಲಿ. ಅಂತರ್ಜಾಲಿಗಳು ಆಗಸದಲ್ಲಿ ಹಾರಿಬಿಟ್ಟ ಗಾಳಿಪಟದ ದಾರದಗುಂಟ ವಿಮರ್ಶೆಯ ಕರೆಂಟು ಹರಿಸಿದ್ದಾರೆ. ಅರ್ಜೆಂಟಿಗೆ ಆಯ್ದ ಕೆಲವು ಬ್ಲಾಗುಗಳು ಇಲ್ಲಿವೆ. ಓದಿ.

1) ಕರ್ಣನಮಾತು

ಚಿತ್ರ ನೋಡಿದ ಮೇಲೆ ನನಗಂತೂ ತುಂಬ ಬೇಜಾರಯಿತು , ಚಿತ್ರದಲ್ಲಿ ಎಲ್ಲಾ ಇದ್ದರೂ ಏನೊ ಒಂದು ಕಳೆದುಕೊಂಡಿರುವ ಅನುಭವ, ಇದು ಒಂಥರ a mobile with all features but without SIM card. ಆದರೂ "ಗಾಳಿಪಟ" "ಹಾರುತ್ತ" ಇದೆ ಬಹುಶಃ "ಗಣೇಶ"ನ ಮಹಿಮೆ ಇರಬೇಕು. ಗಣೇಶ ಮತ್ತು ಸುಂದರವಾದ ತಾಣಗಳಿದ್ದರೆ ಚಿತ್ರ ಹಿಟ್ ಆಗುತ್ತೆ ಅಂತ ಭಟ್ಟರು ನಂಬಿದ್ದರಾಂತ ಕಾಣುತ್ತೆ. ಭಟ್ಟರೆ ಸ್ವಲ್ಪ ಚಿತ್ರಕಥೆ ಮೇಲೂ ಕೆಲ್ಸಾ ಮಾಡ್ರಿ.

2) ರವೀಶ್ ಕುಮಾರ್.ಕಾಂ

But having said all these it is surely one-time-watch movie if you forget everything and just enjoy the scenic beauty of Malnad.

To conclude, Indian cricket team"s win at Perth in 3rd test against Australia thus breaking Aussies 16 match win streak made up for the slight disappointment of the much hyped movie!!!

3) ಕೆಂಡಸಂಪಿಗೆ

'ಗಾಳಿಪಟ' ಮತ್ತೊಂದು 'ಮುಂಗಾರು ಮಳೆ' ಆಗಲಿದೆಯೇ? ಈ ಪ್ರಶ್ನೆಗೆ ಉತ್ತರ ನೀಡಲು ತಿಳಿದಿರುವುದು ಪ್ರೇಕ್ಷಕ ಮಹಾಪ್ರಭುವಿಗೆ ಮಾತ್ರ. ಆದರೆ 'ಗಾಳಿಪಟ'ದ ಕಥೆ ಏನಿರಬೇಕು, ಹೇಗಿರಬೇಕು ಮತ್ತು ಅದನ್ನು ಹೇಗೆ ಹೇಳಬೇಕು ಎಂಬ ವಿಷಯದಲ್ಲಿ ಯೋಗರಾಜ್ ಭಟ್ಟರಿಗೆ ಯಾವ ಸಂಶಯವೂ ಇಲ್ಲ. ಇಡೀ ಚಿತ್ರ ನಿರ್ದೇಶಕನ ಹಿಡಿತದಲ್ಲಿದೆ. ಒಂದೆರಡು ಕಡೆ ಗೋಲ್ಡನ್ ಸ್ಟಾರ್ ಗಣೇಶ್ ಕಾಣಿಸಿಬಿಡುವುದರಿಂದ ನೋಡುಗನಿಗೆ ಆಗುವ ಕಿರಿಕಿರಿಯನ್ನು ಹೊರತು ಪಡಿಸಿದರೆ ಭಟ್ಟರು ಗೆದ್ದಿದ್ದಾರೆ.

4) ನಾನು ಶಂದೆ.ಕಾಂ

The movie could have been better if all the departments had blended together seamlessly, as it was in Mungaaru Male. But in Gaalipata some stuffs such as cinematography and comedy stand out very evidently. Overall it"s a watchable movie, but not worth the hype.

5) ಅಭಿಷೇಕ್

GUYS - THIS IS ONLY FOR FUN! DONT TAKE THIS AS MY SERIOUS REVIEW PLS. Maja Maadi

Nana makklu.. ee movie noDi already 24 hours aaythu innu idhu yaava concept mele maadiro movie antha yochane maaDadre, THALEge yenenenenenenenenooooo hoLiyatthe !No.1 ! I thought this is a fun filled story… Movie start aagode FUN inda,… Fitting iDodrinda.. Aadre adhu yellu Continue aago haage kaaNalla…

6) ಇದುವೆ ಜೀವನ

But what really highlights of the movie are:

Yogaraj Bhat's unconventionally scripted dialogues. I am full of praises for this man's great ability to discover beautiful places and share them on silver screen beautifully, so much so that you plan your next vacation to those places!

Ratna Velu's magical spell behind the camera (Man you gotta see those waterfall scenes in this movie! You will be swept off your feet). All credits to the best cinematographer of the south India.

Jayanth Kaykini, Hrudayashiva and Yogaraj Bhat's lyrical magic powered by Hari Krishna's 'pied piper-ish' music, really command a big round of applause as they collectively manage to give that much needed 'feel' to this love story.

A couple of excellent audio tracks just make you life easier. I personally liked 'Minchaagi Neenu baralu' sung by Sonu Nigam and the title track 'Gaalipata' which is a very lively track.

7) ಚುಂ- ಬನವಾಸಿ

ಚಿತ್ರದ ಬಗ್ಗೆ ತಪ್ಪು ಅಭಿಪ್ರಾಯಗಳು ಹೀಗೆ ಮೂಡಬಹುದು, ಆದರೆ ಯಾವ ಅಭಿಪ್ರಾಯವೂ ಗಟ್ಟಿ ಇಲ್ಲಾ. ಸುಮ್ಮನೇ ಮೊಸರಲ್ಲಿ ಕಲ್ಲು ಹುಡುಕುವ ಕೆಲ್ಸ ಅಷ್ಟೇ ...

* ಚಿತ್ರ ಮುಂಗಾರು ಮಳೆ ತರ ಇಲ್ಲಾ.
* 3 ಹುಡುಗರ ಕಥೆಗೆ ದಿಲ್ ಚಾಹತಾ ಹೈ ಸ್ಪೂರ್ತಿ.
* ನಿರ್ದೇಶನದ ಮೇಲೆ ಹಿಡಿತ ಇಲ್ಲಾ
* ಹಂದಿಯಲ್ಲಿ ವರಾಹಾ ಅವತಾರ ಕಾಣುವುದು ಸರಿಯಾ ?
* ಕುಂಟನಿಗೆ ಕಾಲು ಬರುವುದು, ಬೆನ್ನಿಹೇನ್ ಪವಾಡವ ?
* ಜನರಿಗೆ ಭ್ರಮನಿರಸನ ಆಗುತ್ತದೆ...ವಗೈರಾ ...

8) ನೂರಾರು ಮಾತು

I had thought the era of fairy tales was over. But Yograj Bhat has woven a "nice" fairy tale around three friends, their love and a wild boar (???)!!! Yes that"s what the thin story line of Gaalipata is about. It"s a movie with a great concept of weaving these together. And Yograj Bhat does the weaving well and comes up with a nice entertaining fare.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X