ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಟ್ಸ್‌ಕನ್ನಡ ಗೂಗಲ್ ಡೆಸ್ಕ್‌ಟಾಪ್ ಗ್ಯಾಡ್ಜೆಟ್ಸ್

By ಎಸ್.ಕೆ. ಶಾಮ ಸುಂದರ
|
Google Oneindia Kannada News


ThatsKannada presents gadget for Google Desktop ನಮ್ಮ ಅಂತರ್ಜಾಲದ ಪುಟಗಳಲ್ಲಿ ಸುದ್ದಿ ಸ್ಫೋಟ ಅಂದರೆ ಬ್ರೇಕಿಂಗ್ ನ್ಯೂಸ್, ಬೆಂಗಳೂರು, ಕರ್ನಾಟಕದ ಸಮುದಾಯ ಸುದ್ದಿಗಳು, ಕನ್ನಡ ಪ್ರಪಂಚದ ಆಗುಗೋಗುಗಳು, ಜಿಲ್ಲಾ ವಾರ್ತೆಗಳು, ಮನರಂಜನೆ, ವಿಚಾರಧಾರೆ, ವಾಗ್ವಾದ, ಸಿನಿಮಾ, ಫೋಟೋ ಸ್ಟೂಡಿಯೊ ಮುಂತಾದ ಹತ್ತಾರು ವಿಭಾಗಗಳಿವೆ. ವಿಭಾಗಗಳಿಗೆ ಪೂರಕವಾದ ಹಲವಾರು ಉಪ ವಿಭಾಗಗಳು ಇರುತ್ತವೆ. ಎಲ್ಲ ವಿಭಾಗಗಳಲ್ಲೂ ಪ್ರತಿದಿನ ಹೊಸಹೊಸ ವಿಚಾರ ಪ್ರಕಟವಾಗಬೇಕೆಂಬುದು ನಮ್ಮ ಅಪೇಕ್ಷೆ. ಆದರೆ, ಎಲ್ಲ ವಿಭಾಗಗಳೂ, ಎಲ್ಲ ಉಪ ವಿಭಾಗಗಳಲ್ಲೂ ಓದುವ ಹೊಸ ಸಾಮಗ್ರಿ ಯಾವುದೆಂದು ಹುಡುಕುವುದು ಬಲೇ ಕಷ್ಟದ ಕೆಲಸ.

ಆದಕಾರಣ, ಅಂದಂದು ಪ್ರಕಟವಾದ ಸುದ್ದಿ ಲೇಖನಗಳನ್ನು ಆ ಕ್ಷಣದಲ್ಲೇ ತಿಳಿಯಬಹುದಾದ ಸಾಧನ ಸಲಕರಣೆಯೊಂದನ್ನು ದಟ್ಸ್‌ಕನ್ನಡ ಸಾದರಪಡಿಸುತ್ತಿದೆ. ಅದರ ಹೆಸರು "ದಟ್ಸ್‌ಕನ್ನಡ ಗೂಗಲ್ ಡೆಸ್ಕ್‌ಟಾಪ್ ಗ್ಯಾಡ್ಜೆಟ್ಸ್" ಈ ಸೇವೆಯನ್ನು ನಮ್ಮ ವಾಹಿನಿಯ ವಾಚಕ ವೃಂದಕ್ಕೆ ಸಮರ್ಪಿಸಲು ಸಂತೋಷಪಡುತ್ತೇವೆ. ನಿಮ್ಮ ಕಂಪ್ಯೂಟರ್ ತೆರೆಯಮೇಲೆ ಸದಾ ಹಾಜರಾಗುವ "ಸೈಡ್ ಬಾರ್" ಸಲಕರಣೆ ಇದಾಗಿರುತ್ತದೆ. ತನ್ಮೂಲಕ ನಮ್ಮ ತಾಣದ ಇತ್ತೀಚಿನ ಪ್ರಕಟಣೆಗಳತ್ತ ಕಣ್ಣಾಡಿಸಲು ನಿಮಗೆ ಯಾವಾಗಲೂ ಸಾಧ್ಯವಾಗುತ್ತಿರುತ್ತದೆ.

ದಟ್ಸ್‌ಕನ್ನಡ ವಾಹಿನಿಯ ಪ್ರಮುಖ ವಿಭಾಗಗಳಾದ ವಾರ್ತೆ, ಕನ್ನಡ ಚಲನಚಿತ್ರ, ಅಂಕಣ ವಿಭಾಗಗಳಲ್ಲಿ ನಿಮಗೆ ಇಷ್ಟವಾದ ಹೊಸದಾಗಿ ಪ್ರಕಟವಾದ ಲೇಖನಗಳನ್ನು ವೆಬ್‌ಸೈಟ್ ತೆರೆಯದೇ ಓದುವ ಸೌಲಭ್ಯ ನಿಮ್ಮದಾಗಲಿದೆ. ಆ ಸೌಲಭ್ಯವನ್ನು ಗೂಗಲ್ ಡೆಸ್ಕ್‌ಟಾಪ್ ಒದಗಿಸುತ್ತದೆ. ಈ ಸಲಕರಣೆಯನ್ನು ತಾವುಗಳು ಡೌನ್‌ಲೋಡ್ ಮಾಡಿಕೊಂಡು ತಮಗೆ ಬೇಕಾದ ವಿಭಾಗದ ಕಿಟಕಿಯನ್ನು ತೆರೆದಿಟ್ಟುಕೊಂಡು ನಿಮ್ಮ ದೈನಂದಿನ ಕಂಪ್ಯೂಟರ್ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳುತ್ತಿರಬಹುದು. ಇದರ ಜೊತೆಗೆ ನಿಮಗಿಷ್ಟವಾದ ಬಗೆಬಗೆಯ ಗ್ಯಾಡ್ಜೆಟ್‌ಗಳನ್ನು ನೀವು ಡೆಸ್ಕ್‌ಪಾಟ್‌ನಲ್ಲಿ ಅಳವಡಿಸಿಕೊಳ್ಳಬಹುದು.

ಇದರೊಂದಿಗೆ ದಟ್ಸ್‌ಕನ್ನಡ ಗ್ಯಾಡ್ಜೆಟ್‌ನ್ನು ಐಗೂಗಲ್‌ಗೆ ಅಳವಡಿಸಿಕೊಂಡು ಗೂಗಲ್ ಮುಖಪುಟದಲ್ಲಿಯೇ ದಟ್ಸ್‌ಕನ್ನಡ ಓದುವ ಸವಲತ್ತು ನಿಮ್ಮದಾಗಲಿದೆ.

ಈ ಗ್ಯಾಡ್ಜೆಟ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಲು ನೀವು ಮಾಡಬೇಕಾದುದಿಷ್ಟು :

ದಟ್ಸ್‌ಕನ್ನಡ ಗೂಗಲ್ ಡೆಸ್ಕ್‌ಟಾಪ್ ಗ್ಯಾಡ್ಜೆಟ್ :

https://www.oneindia.com/gadgets/ ಪುಟಕ್ಕೆ ಹೋಗಿ ಗೂಗಲ್ ಡೆಸ್ಕ್‌ಟಾಪ್‌ಗಾಗಿ ಒನ್‌ಇಂಡಿಯಾ ಗ್ಯಾಡ್ಜೆಟ್‌ ಚಿತ್ರವನ್ನು ಕ್ಲಿಕ್ಕಿಸಿ. ನಂತರ ನಿಮ್ಮ ಫೆವರಿಟ್ ದಟ್ಸ್‌ಕನ್ನಡ ಡೆಸ್ಕ್‌ಟಾಪ್ ಗ್ಯಾಡ್ಜೆಟ್ ಡೌನ್‌ಲೋಡ್ ಮಾಡಿಕೊಂಡು ಇನ್‌ಸ್ಟಾಲ್ ಮಾಡಿಕೊಳ್ಳಿ.

ಐಗೂಗಲ್‌ಗಾಗಿ ದಟ್ಸ್‌ಕನ್ನಡ ಗ್ಯಾಡ್ಜೆಟ್ :

https://www.oneindia.com/gadgets/ ಪುಟಕ್ಕೆ ಹೋಗಿ ಐಗೂಗಲ್‌ಗಾಗಿ ಒನ್‌ಇಂಡಿಯಾ ಗ್ಯಾಡ್ಜೆಟ್‌ ಚಿತ್ರವನ್ನು ಕ್ಲಿಕ್ಕಿಸಿ. ನಂತರ ಒನ್ಇಂಡಿಯಾ-ದಟ್ಸ್‌ಕನ್ನಡ ಗ್ಯಾಡ್ಜೆಟ್‌ನ್ನು ಐಗೂಗಲ್‌ಗೆ ಸೇರಿಸಿಕೊಳ್ಳಿ. ಈಗ ಗೂಗಲ್ ಮುಖಪುಟದಲ್ಲಿಯೇ ನಿಮ್ಮ ನೆಚ್ಚಿನ ದಟ್ಸ್‌ಕನ್ನಡದಲ್ಲಿ ಪ್ರಕಟವಾದ ಎಲ್ಲ ಹೊಸ ಲೇಖನಗಳನ್ನು ದಟ್ಸ್‌ಕನ್ನಡಕ್ಕೆ ಹೋಗದೆಯೇ ಓದಬಹುದು.

ಪ್ರಯೋಜನಗಳು :

1) ನಿಮ್ಮ ಅತ್ಯಮೂಲ್ಯ ಸಮಯ ಉಳಿತಾಯವಾಗುತ್ತದೆ.
2) ಹೊಸಹೊಸ ಲೇಖನಗಳನ್ನು ಹುಡುಕುವ ತಾಪತ್ರಯ ತಪ್ಪಲಿದೆ.
3) ನಿಮಗಿಷ್ಟವಾದ ಇತರ ಗ್ಯಾಡ್ಜೆಟ್‌ಗಳನ್ನು ಡೆಸ್ಕ್‌ಟಾಪ್‌ಗೆ ಅಳವಡಿಸಿಕೊಳ್ಳಬಹುದು.
4) ವಿಪರೀತ ಕೆಲಸಗಳ ಮಧ್ಯೆ ನೀವು ಮಾಡಬೇಕಾದ ಪ್ರಮುಖ ಕೆಲಸಗಳನ್ನು ಡೆಸ್ಕ್‌ಟಾಪ್ ಗ್ಯಾಡ್ಜೆಟ್‌ನಲ್ಲಿ ಬರೆದಿಟ್ಟುಕೊಳ್ಳಬಹುದು.

ಈ ಹೊಸ ಸೇವೆಗಳ ಪ್ರಯೋಜನ ಪಡೆಯಲು ಯಾವುದೇ ತೊಂದರೆ ಕಂಡುಬಂದರೆ ಅಥವ ಈ ಸೇವೆ ಪ್ರಯೋಜನಕಾರಿ ಎಂದು ಕಂಡುಬಂದರೆ ನಮ್ಮನ್ನು ಸಂಪರ್ಕಿಸಲು ಮರೆಯಬೇಡಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X