ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಟ್ಸ್‌ಕನ್ನಡದಿಂದ ಕನ್ನಡ ಎಸ್ಎಂಎಸ್ ಸೇವೆ

By * ಶಾಮ್
|
Google Oneindia Kannada News

Get SMS in Kannadaಅಂತರಜಾಲತಾಣದ ನಮ್ಮ ಮನೆಯಿಂದ ಚಿಮ್ಮುವ ಸುದ್ದಿ ಸಮಾಚಾರಗಳನ್ನು ನಿಮ್ಮ ಸೆಲ್ ಫೋನ್ ಮುಖಾಂತರ ಥಟ್ ಅಂತ ತಿಳಿಯುವ ಸೇವೆ ಆರಂಭವಾಗಿದೆ. ಅಂಗೈನಲ್ಲಿ ನುಲಿಯುವ ಸೆಲ್ ಫೋನು ಮೂಲಕ ಮಾಹಿತಿ, ಮನರಂಜನೆ, ಹಾಡು, ಶಾಪಿಂಗ್, ಬ್ಯಾಂಕಿಂಗ್, ಜೀವವಿಮೆ ಇನ್ನು ಮುಂತಾದ ಅನೇಕ ರೀತಿಯ ಸೇವೆಗಳನ್ನು ಕಂಡಿರುವ ನೀವು ಈಗ ಕಾಣುತ್ತಿರುವುದು ಕನ್ನಡ ಅಂತರಜಾಲದಿಂದ ಹೊರಹೊಮ್ಮುವ ಸುದ್ದಿಗಳ ಕಿರುಪರಿಚಯವನ್ನು.

ಸೆಲ್ ಫೋನ್‌ನಲ್ಲಿ ನುಗ್ಗಿ, ನುಸುಳಿ ಬರುವ ಎಸ್ಎಂಎಸ್ ಸಮಾಚಾರಗಳೆಲ್ಲವೂ ಇಂಗ್ಲಿಷ್‌ನಲ್ಲಿರುವುದು ಲೋಕವಿದಿತ. ಆದರೆ, ಪ್ರಪ್ರಥಮಬಾರಿಗೆ ಕನ್ನಡ ವಾರ್ತೆ, ಸುದ್ದಿಸ್ಫೋಟ, ಮನರಂಜನೆಯ ಮತಾಪುಗಳು ಸೆಲ್ ಫೋನಿನಲ್ಲಿ ಅದೂ ಮುದ್ದಾದ ಕನ್ನಡ ಅಕ್ಷರಗಳಲ್ಲಿ ಮೂಡಿಬರುವುದು ನಿಜಕ್ಕೂ ಸಂತಸದ ಬೆಳವಣಿಗೆ. ಆಧುನಿಕ ಸಂಪರ್ಕ ಸಲಕರಣೆಗಳ ಮೂಲಕ ಕನ್ನಡದ ಪರಿಮಳ ಹರಡುವ ದಟ್ಸ್‌ಕನ್ನಡ ವೆಬ್ ತಾಣದ ಇನ್ನೊಂದು ವೈಶಿಷ್ಟ್ಯ.

ಮುಖ್ಯವಾಗಿ ನಿಮ್ಮ ಸೆಲ್ ಫೋನಿನಲ್ಲಿ ಕನ್ನಡ ಫಾಂಟುಗಳು ಇರಬೇಕು. ಫಾಂಟು ಇದೆಯಾ ಇಲ್ಲವಾ? ಡೈರೆಕ್ಟರಿಗೆ ಹೋಗಿ ತೆರೆದು ನೋಡಿ. ಆನಂತರ ದಟ್ಸ್‌ಕನ್ನಡದ ವಾರ್ತೆ ಮತ್ತು ಕನ್ನಡ ಚಿತ್ರರಂಗದ ಸಮಾಚಾರಗಳನ್ನು ಎಸ್ಎಂಎಸ್ ಮುಖಾಂತರ ಸ್ವೀಕರಿಸಲು ಪ್ರತ್ಯೇಕವಾದ ಎರಡು ನೊಂದಣಿಗಳ ಮೂಲಕ ನಿಮ್ಮದಾಗಿಸಿಕೊಳ್ಳಿರಿ. ನೆನಪಿರಲಿ, ಈ ಸೇವೆ ಸಂಪೂರ್ಣವಾಗಿ ಉಚಿತ. ಇಂದೇ ನೊಂದಾಯಿಸಿಕೊಳ್ಳಿ. ನಿಮ್ಮ ಸ್ನೇಹಿತರಿಗೂ ಈ ವಿಷ್ಯ ತಿಳಿಸಿ.

ನಿಮ್ಮ ಬಳಿ ಇರುವ ಸೆಲ್ ಫೋನಿನ ಮಾದರಿಗೆ ಕನ್ನಡ ಫಾಂಟ್ ಸೌಲಭ್ಯ ಇರುವುದೆಂದು ಭಾವಿಸುತ್ತೇವೆ. ಯಾವ ಮೊಬೈಲುಗಳಲ್ಲಿ ಕನ್ನಡ ಎಸ್ಎಂಎಸ್ ಬರುತ್ತದೆ, ಯಾವುದರಲ್ಲಿ ಬರುವುದಿಲ್ಲ ಎಂಬುದನ್ನು ನಾವು ನೀಡಿರುವ ಮೊಬೈಲ್ ಮಾಡೆಲ್ ಪಟ್ಟಿಯಲ್ಲಿ ನೋಡಿಕೊಳ್ಳಿ. ಆ ಪಟ್ಟಿಯಲ್ಲಿರದ ಮೊಬೈಲ್ನಲ್ಲೂ ಕನ್ನಡ ಎಸ್ಎಂಎಸ್ ಬಂದರೆ ಸಂತೋಷ. ನಿಮ್ಮ ಸಂತೋಷವೇ ನಮ್ಮ ಸಂತೋಷ.

ಎಸ್ಎಂಎಸ್ ಪಡೆಯು ಬಗೆ ಮತ್ತು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ

See www.oneindia.com/sms/ for list of mobile handsets that support Indian language fonts.

ಸೂಚನೆ : ಈ ಸೇವೆ ಭಾರತ ವಾಸಿಗಳಿಗೆ ಮಾತ್ರ ಲಭ್ಯ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X