ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬದುಕು ನಿಮ್ಮದು ಅಲ್ಲಿ ತಮಾಷೆಯಿರಲಿ ಉಡಾಫೆ ಬೇಡ

By Staff
|
Google Oneindia Kannada News

ಹೊಸವರ್ಷಕ್ಕೆ ಎಲ್ಲರೂ ನಿರ್ಣಯಗಳನ್ನು ಕೈಗೊಳ್ಳುವವರೇ. ಮಿತ್ರನೊಬ್ಬನಿಗೆ ನಿನ್ನದೇನಪ್ಪಾ ರೆಸೊಲ್ಯೂಷನ್ನೂ ಅಂತ ಕೇಳಿದ್ದಕ್ಕೆ ಆತ 1024 X 768 ಅಂದ! ಹೊಸವರುಷಕ್ಕೆ ನಿರ್ಣಯ ಕೈಗೊಳ್ಳುವುದು ಕೆಲವರಿಗೆ ತಮಾಷೆ, ಕೆಲವರಿಗೆ ಮುಂದಿನ ಹಸನಾದ ಬದುಕಿಗೆ ಬರೆದಿಡುವ ಮುನ್ನುಡಿ. ಒಬ್ಬೊಬ್ಬರ ಜೀವನ ಒಂದೊಂದು ರೀತಿ. ಏನೇ ಆಗಲಿ ಮುಂದಿನ ದಾರಿ ಸ್ಪಷ್ಟವಿರಲಿ. ಸಾಗಿ ಬಂದ ದಾರಿಗಿಂತ ಸಾಗಬೇಕಾದ ದಾರಿ ಅತ್ಯಂತ ನಿಚ್ಚಳವಾಗಿರಲಿ. ಕ್ರಮಿಸಬೇಕಾದ ದಾರಿ, ಶ್ರಮಿಸಬೇಕಾದ ಕಾರ್ಯ ಎರಡೂ ಒಂದಕ್ಕೊಂದು ಪೂರಕ. ಮುನ್ನಡೆಯಬೇಕಾದ ದಾರಿಯ ಬಗ್ಗೆ ಸ್ಪಷ್ಟ ನಿರ್ಧಾರವಿರದಿದ್ದರೆ ಪಯಣ ಸುಸೂತ್ರವಾಗಿ ಸಾಗದು. ಬದುಕು ನಿಮ್ಮದು ಅಲ್ಲಿ ತಮಾಷೆಯಿರಲಿ ಆದರೆ ಉಡಾಫೆ ಬೇಡ. ಸಾಗಿಬಂದ ದಾರಿಯತ್ತ ಒಂದು ನೋಟ ಬೀರಿ ಮುಂದಿನ ಹೆಜ್ಜೆಯತ್ತ ದೃಷ್ಟಿ ಹರಿಸೋಣ. ದೃಷ್ಟಿ ನೇರವಾಗಿದ್ದಷ್ಟು ದಾರಿ ಸ್ಪಷ್ಟವಾಗುತ್ತ ಹೋಗುತ್ತದೆ. ಎಲ್ಲರಿಗೂ ಒಳ್ಳೆಯದಾಗಲಿ.

ದಟ್ಸ್‌ಕನ್ನಡ ಓದುಗರಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.

ಶಾಮ್

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X