• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತುಂಬಿದ ಸಭಾಂಗಣದಲ್ಲಿ ಯಜಮಾನರು ಇರಲಿಲ್ವಾ?

By Staff
|

ಅಪ್ಪಟ ಕನ್ನಡ ಕಾರ್ಯಕ್ರಮಗಳ ಮಧ್ಯೆ, ಕರಿಬೇವು ಸೊಪ್ಪಿನಂತೆ ಇಂಗ್ಲಿಷ್‌ ಅಥವಾ ಹಿಂದಿ ಬೆರೆಸುವುದು ಕೆಲವರಿಗೆ ಫ್ಯಾಷನ್‌! ಮೊನ್ನೆ ಗೋಖಲೆ ಸಂಸ್ಥೆಯಲ್ಲಿ ಆದದ್ದು ಇದೇ. ಹದಿನಾರಾಣೆ ಕನ್ನಡ ಕಾರ್ಯಕ್ರಮದಲ್ಲಿ ಹಿಂದಿ ಪ್ರಾರ್ಥನೆ ಬೇಕಿತ್ತಾ ಎನ್ನುವುದು ಸದ್ಯದ ಪ್ರಶ್ನೆ. ಈ ಬಗ್ಗೆ ಧ್ವನಿ ಎತ್ತುವವರಿಗೆ ಸಿಕ್ಕುವ ಉಡುಗೊರೆ ಇದೇನಾ ಅನ್ನೋದು ಮೂಲಭೂತ ಪ್ರಶ್ನೆ. ಈ ಪ್ರಕರಣದಿಂದ ಕಲಿತ ಪಾಠವೇನು ಅನ್ನೋದು ಮುಂದುವರಿದ ಪ್ರಶ್ನೆ.

Nightmarish incident at the function of anavarana of Aavaranaಹಿರಿಯ ಕಾದಂಬರಿಕಾರ ಎಸ್‌.ಎಲ್‌. ಭೈರಪ್ಪನವರ ಹೊಸ ಕಾದಂಬರಿ ‘ಆವರಣ’ ಕುರಿತು, ಕನ್ನಡಿಗರೇ ಹೆಚ್ಚಾಗಿರುವ ಬೆಂಗಳೂರಿನ ಬಸವನಗುಡಿಯಲ್ಲಿ ಒಂದು ಸಂವಾದ(seminar-open house)ಏರ್ಪಾಟಾಗಿತ್ತು. ಸಂವಾದ ನಡೆದದ್ದುಮಾರ್ಚ್‌ 18 ಶನಿವಾರ. ಬೆಳಗಾದರೆ ಸರ್ವಜಿತ್‌ ಸಂವತ್ಸರದ ಸವಾರಿಯಲ್ಲಿ ಉಗಾದಿ ಹಬ್ಬ.

‘ಆವರಣ’ ಕಾದಂಬರಿಯನ್ನು ನಾನು ಓದಿಲ್ಲ. ಹ್ಯಾರಿ ಪಾಟರ್‌ ನಂತರ ಬೆಂಗಳೂರಿನಲ್ಲಿ ವೇಗವಾಗಿ ಬಿಕರಿಯಾಗುತ್ತಿರುವ ಪುಸ್ತಕವೆಂದರೆ ‘ಆವರಣ’ ಎನ್ನುತ್ತಾರೆ ಪುಸ್ತಕ ವ್ಯಾಪಾರಿಗಳು. ಭಯೋತ್ಪಾದನೆ, ಧರ್ಮ, ಮತ್ತು ವಿಧ್ವಂಸಕ ಕೃತ್ಯಗಳಿಗೆ ಕೈಹಾಕುವವರ ಮನಸ್ಥಿತಿಯನ್ನು ಮನುಕುಲದ ಚರಿತ್ರೆಯೋ ಎಂಬಂತೆ ನಿರ್ಭೀಡೆಯಿಂದ ದಾಖಲಿಸುವ ಸನ್ನಾಹವೇ ಆ ಕಾದಂಬರಿಯ ವಸ್ತು ಎಂದು ಕೇಳಪಟ್ಟಿದ್ದೇನೆ.

‘ಆವರಣ’ ಒಂದು ಕಾದಂಬರಿಯೇ ಅಲ್ಲ ಅದೊಂದು wonderful argument ಎಂದು ಬಣ್ಣಿಸುವವರನ್ನೂ ಕಂಡಿದ್ದೇನೆ. ಕನ್ನಡದಲ್ಲಿ ಮೂಡಿಬಂದ ಇಂತಹ ಬಹು ಚರ್ಚಿತ ಕೃತಿಯ ವಸ್ತು-ವಿನ್ಯಾಸದ ಬಗ್ಗೆ ಕಲೆತು, ಚಿಂತನ ಮಂಥನ ನಡೆಸುವ ಉಮೇದು ಸ್ವಾಗತಾರ್ಹ.

ಅಂತಹ ಒಂದು ಉಮೇದಿಗೆ ಶನಿವಾರ ವೇದಿಕೆ ಕಲ್ಪಿಸಿದವರು ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ ಮತ್ತು ಅಭಿಜ್ಞಾನ ಪ್ರಕಾಶನ. ಗೋಖಲೆ ಸಾರ್ವಜನಿಕ ಸಂಸ್ಥೆ ಬೆಂಗಳೂರಿನ ಅತ್ಯಂತ ಹಳೆಯ, ಘನತೆವೆತ್ತ ಸಂಸ್ಥೆಗಳಲ್ಲೊಂದು. ಈ ಸಂಸ್ಥೆಯಲ್ಲಿ ಜರುಗಿದ , ಸಭೆಗಳು, ಭಾಷಣಗಳು, ಚರ್ಚೆಗಳು, ಸಮಾಲೋಚನೆಗಳು ಕರ್ನಾಟಕದ ಸೌಮ್ಯ ಇತಿಹಾಸದ ಒಂದು ಭಾಗವೇ ಆಗಿದೆ. ಇಲ್ಲಿ ಜರಗುವ ಬಹುತೇಕ ಸಭೆಗಳು ತೂಕದ ಕಾರ್ಯಕ್ರಮಗಳೇ ಆಗಿರುತ್ತವೆ.

ಗೋಖಲೆ ಸಂಸ್ಥೆಯಲ್ಲಿ ಕಾಂಜಿಪಿಂಜಿ ಕಾರ್ಯಕ್ರಮ ನಡೆಸುವುದಕ್ಕೆ ಆಡಳಿತ ವರ್ಗ ಅವಕಾಶ ನೀಡಿದ ಉದಾಹರಣೆಯಿಲ್ಲ. ಗಂಭೀರ ಸ್ವರೂಪದ ಕಾರ್ಯಕ್ರಮಗಳು ಈ ಒಂದು 100 ವರ್ಷದಲ್ಲಿ ಈ ಸಭಾಂಗಣದಲ್ಲಿ ಸಾವಿರಾರು ನಡೆದುಹೋಗಿವೆ. ಕನ್ನಡಮಹಾಮಹಿಮರೆಲ್ಲರೂ ಇಲ್ಲಿ ಒಂದಲ್ಲ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿದವರೇ ಆಗಿರುತ್ತಾರೆ.

ಸಂಸ್ಥೆಯ ಹಿನ್ನೆಲೆ ಮತ್ತು ಹೆಗ್ಗಳಿಕೆ ಹೀಗಿರುವಾಗ ಹಾಗೂ ಕನ್ನಡವನ್ನು ಮನಸೋಇಚ್ಛೆ ಪ್ರೀತಿಸುವವರೇ ಬಹುತೇಕ ಪಾಲುಗೊಳ್ಳುವ ಪರಂಪರೆ ಇಲ್ಲಿ ಬೆನ್ನಗಂಟಿಕೊಂಡಿರುವಾಗ ‘ಆವರಣ’ ಸಂವಾದ ಕಾರ್ಯಕ್ರಮಕ್ಕೆ ಪ್ರಾರ್ಥನಾ ಗೀತೆಯಾಗಿ ಹಿಂದಿ ಹಾಡೊಂದನ್ನು ಹೇಗೆ ಆಯ್ಕೆ ಮಾಡಿಕೊಳ್ಳಲಾಯಿತು? ಸೋಜಿಗ ಮತ್ತು ಚರ್ಚಾಸ್ಪದ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more