• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ರತಿಕ್ರಿಯೆ : ನಕ್ಸಲ್ ಚಳವಳಿ ಮತ್ತು ಹಾವಳಿಮುಗ್ಧ ಯುವಕರ ಪ್ರಾಣಹರಣಕ್ಕೆ ಯಾರು ಹೊಣೆ?

By Staff
|

ನಮಸ್ಕಾರ ದಟ್ಸ್ ಕನ್ನಡ ಅವರೇ,

ಕರ್ನಾಟಕದಲ್ಲಿ ನಕ್ಸಲೀಯರ ವಿಷಯ ಕುರಿತಾಗಿ ತಾವು ಪ್ರತಿಕ್ರಿಯೆ ಕೇಳಿದ್ದೀರಿ. ಇಲ್ಲಿದೆ ನನ್ನ ಪ್ರತಿಕ್ರಿಯೆ.

ಸಮಾಜವಾದ ಮತ್ತು ಸಮತಾವಾದ ಬಹಳ ಹಳೆಯ ಉದಾತ್ತ ಧ್ಯೇಯಗಳು. ಅವುಗಳೊಂದಿಗೆ ಉಗ್ರವಾದಿಗಳು ಸೇರಿಕೊಂಡಾಗ ನಕ್ಸಲತೆ ಹುಟ್ಟಿಕೊಂಡಿತು. ಮತಾಭಿಮಾನ ಒಂದು ಒಳ್ಳೆಯ ಧ್ಯೇಯವೇ. ಆದರೆ, ಅದರ ಅಂಧಾನುಕರಣೆ ಮಾಡಿದಾಗ ಮೂಲಭೂತವಾದಿಗಳು ಹುಟ್ಟಿಕೊಳ್ಳುತ್ತಾರೆ.

The trouble torn areaಸಮ ದೄಷ್ಟಿಯಿಂದ ಚಿಂತನೆ ಮಾಡುವ ಬುದ್ಧಿ ಜೀವಿಗಳ ಅಗತ್ಯ ನಮ್ಮ ಸಮಾಜಕ್ಕೆ ಇದೆ. ದುರದೃಷ್ಟವಶಾತ್, ಇಂದಿನ ಬುದ್ಧಿಜೀವಿಗಳು ಎಂದು ಕರೆಯಲ್ಪಡುವ ವ್ಯಕ್ತಿಗಳು ಕೆಂಪು, ಹಸಿರು ಅಥವಾ ಕೇಸರಿ ಬಣ್ಣದ ಕನ್ನಡಕ ತೊಟ್ಟು ಜಗತ್ತನ್ನು ನೋಡುತ್ತಾರೆ ಮತ್ತು ಆ ಬಣ್ಣದ ಜಗತ್ತಿನ ಬಗ್ಗೆ ಮಾತ್ರ ಚಿಂತಿಸುತ್ತಾರೆ.

ಕಾರ್ಮಿಕರ ಒಕ್ಕೂಟ ಅಥವಾ ದಲಿತರ ಒಕ್ಕೂಟ ಎನ್ನಿಸಿಕೊಳ್ಳುವ ಅಧಿಕೃತ ಸಂಘಟನೆಗಳು ಸಮಾಜವಾದವನ್ನು ಪ್ರತಿಪಾದಿಸುತ್ತಾ ಇವೆ. ಈ ಕ್ಷೇತ್ರದಲ್ಲಿ ಕೆಂಪು ಕನ್ನಡಕ ತೊಟ್ಟ ಬುದ್ಧಿಜೀವಿಗಳು ಉಗ್ರಗಾಮಿಗಳನ್ನು ಸೃಷ್ಟಿಸುತ್ತಿದ್ದಾರೆ ಮತ್ತು ಅವರನ್ನು ಸಂಘಟಿಸುತ್ತಾ ಅವರ ಕೈಗೆ ಶಸ್ತ್ರಾಸ್ತ್ರಗಳನ್ನು ಕೊಟ್ಟು, ತರಬೇತಿ ನೀಡಿ, ಸಮಾಜ ವ್ಯವಸ್ಥೆ ವಿರುದ್ಧ ಹೋರಾಡಲು ಪ್ರೋತ್ಸಾಹಿಸುತ್ತಾ ಇದ್ದಾರೆ.

ಕೈಯ್ಯಲ್ಲಿ ಬಂದೂಕುಗಳು ಬಂದಮೇಲೆ. ಅವನ್ನು ಉಪಯೋಗಿಸಿ ಇತರರ ಮನ ಒಲಿಸುವ ಮತ್ತು ತಮ್ಮನ್ನು ಎದುರಿಸುವರ ಮೆಲೆ ಗುಂಡು ಹಾರಿಸುವ ತವಕ ಈ ಯುವಜನರಿಗೆ ಸಹಜವಾಗಿ ಉಂಟಾಗಿದೆ.

ಪರವಾನಗಿ ಇಲ್ಲದೆ ಬಂದೂಕು ಹೊಂದಿರುವವರು ಕಾನೂನಿನ ದೄಷ್ಟಿಯಲ್ಲಿ ಶಿಕ್ಷಾರ್ಹರು. ಬಂದೂಕು ಹೊಂದಿರುವ ಉಗ್ರರು ತಮ್ಮ ಬಂದೂಕು ಕಸಿಯಲು ಬರುವ ಆರಕ್ಷಕರ ಕಡೆಗೆ ಗುಂಡು ಹಾರಿಸುತ್ತಾರೆ. ಆಗ, ಆರಕ್ಷರು ಸುಮ್ಮನೆ ಇರಲು ಸಾಧ್ಯವೆ? ಗುಂಡಿನ ಚಕಮಕಿಗೆ ಇದು ಕಾರಣ.

ಮೂಲತಃ ಮನುಷ್ಯ ಕೆಟ್ಟವನಲ್ಲ. ಆತ ಭಾವಜೀವಿ. ಸಂಘ ಜೀವಿ ಮತ್ತು ಶಾಂತಿ ಪ್ರಿಯ. ರಾಜಕೀಯ ಬಣಗಳನ್ನು ಓಲೈಸುವ ವ್ಯಕ್ತಿಗಳು ಇಂದು ಮಲೆನಾಡಿನ ಮುಗ್ಧ ಯುವಜನರ ಭಾವನೆಗಳನ್ನು ಕೆಣಕುತ್ತಿದ್ದಾರೆ. ಹಿಂಸೆಯ ದಾರಿ ಹಿಡಿಯುವಂತೆ ಮಾಡುತ್ತಾ ಇದ್ದಾರೆ. ಅವರನ್ನು ವನವಾಸಕ್ಕೆ ಸೆಳೆದು, ಸಮವಸ್ತ್ರ ಮತ್ತು ತರಬೇತಿ ನೀಡಿ, ಅವರಕೈಗೆ ಬಂದೂಕು ಕೊಟ್ಟು ಇಂದಿನ ಸರಕಾರ ಮತ್ತು ಕಾನೂನು ವ್ಯವಸ್ಥೆಯ ವಿರುದ್ಧ ಹೋರಾಡುವಂತೆ ಹುರಿದುಂಬಿಸುತ್ತಾ ಅವರನ್ನು ಪ್ರಾಣಾಪಾಯಕ್ಕೆ ಗುರಿ ಮಾಡುತ್ತಾ ಇದ್ದಾರೆ.

ಒಂದುಕಡೆಗೆ ಈ ಮುಗ್ಧ ಯುವಕ ಯುವತಿಯರು ಹೋರಾಡಿ ಪ್ರಾಣಾರ್ಪಣೆಗೈಯ್ಯುತ್ತಾ ಇದ್ದರೆ, ಇವರನ್ನು ಪ್ರಚೋದಿಸುವ ಪ್ರಮುಖ ವ್ಯಕ್ತಿಗಳು ಯಾರ ಕಣ್ಣಿಗೂ ಬೀಳದೇ ಬೇರೆಲ್ಲೋ ರಾಜಕೀಯ ಮಾಡುತ್ತಾ ಸುಖವಾಗಿಯೇ ಇದ್ದಾರೆ. ಹಳ್ಳಿಗಾಡಿನ ಮುಗ್ಧ ಯುವಜನರು ಈ "ನಕ್ಸಲ ಚಳುವಳಿ" ಎಂಬ ರಾಜಕೀಯದ ಚದುರಂಗದ ಆಟದಲ್ಲಿ "ಉರುಳುತ್ತಾ ಇರುವ ದಾಳಗಳು".

ಇವರನ್ನು ಪ್ರಚೋದಿಸುವವ "ರಾಜಕೀಯದ ವ್ಯಕ್ತಿಗಳು" ಈ ಚದುರಂಗದಾಟವನ್ನು ನಿಲ್ಲಿಸಲಿ. ಇನ್ನಾದರೂ, ಈ ಯುವಕ ಯುವತಿಯರನ್ನು ಹಿಂಸೆಯ ಮಾರ್ಗ ತುಳಿಯಲು ಬಿಡದೆ, ಶಾಂತರೀತಿಯಿಂದ ಮಾತುಕತೆಯ ಮೂಲಕ ತಮ್ಮ ಮಲೆನಾಡಿನ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಅವಕಾಶ ಮಾಡಿಕೊಡಲಿ.

ಉಗ್ರಗಾಮಿ ತತ್ವಗಳಿಗೆ ಶರಣಾದ ಈ ಯುವಕ ಯುವತಿಯರು ಪಶ್ಚಿಮ ಘಟ್ಟಗಳ ಕಾಡುಗಳಲ್ಲಿ ವಾಸಿಸುತ್ತಾ ನಾಡಿನ ಕಾನೂನು ವ್ಯವಸ್ಥೆಯ ಇದುರು ಹೋರಾಡುವ ಬದಲು ಶಾಂತ ರೀತಿಯಿಂದ "ಉಪವಾಸ ಸತ್ಯಾಗ್ರಹ" ನಡೆಸಿ ತಮ್ಮ ನಿಲುವನ್ನು ಪ್ರತಿಪಾದಿಸುವ ಪ್ರಯತ್ನವನ್ನು ಯಾಕೆ ಮಾಡಬಾರದು?

ಬೆಕ್ಕಿಗೆ ಗಂಟೆ ಕಟ್ಟುವವರಾರು?

ಇಂತೀ

ಶೇಷಪ್ಪ ಕರಡಿಮನೆ, ಕಳಸ

(ಮಲೆನಾಡಿನ ವಿದ್ಯಾವಂತ ರೈತ)

ನಿತ್ಯಹರಿದ್ವರ್ಣ‌ ವನದಲ್ಲಿ ಮೃತ್ಯುಚುಂಬನ!

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more