• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪಾಪಣ್ಣನ ಕತೆಯಿಂದ... ನಮ್ಮೂರಿನ ಸುನಂದಕ್ಕನ ಕತೆವರೆಗೆ...

By Staff
|

ಕತೆ ಅಂದ್ರೆ ಎಲ್ಲರಿಗೂ ಇಷ್ಟ. ಮಕ್ಕಳಿಗೆ ಕತೆ ಅಂದ್ರೆ ಪ್ರಾಣ! ಆದರೆ ಏನ್‌ ಮಾಡೋದು, ಕತೆ ಹೇಳುವುದಕ್ಕೂ ಮತ್ತು ಕೇಳುವುದಕ್ಕೂ ಈಗ ಯಾರಿಗೂ ಸಮಯವಿಲ್ಲ . ಇಂತಹ ಕಾಲದಲ್ಲೂ, ನಮ್ಮ ಐಟಿ ಅನುಕೂಲಗಳನ್ನು ಬಳಸಿಕೊಂಡು, ಕತೆ ಹೇಳೋದಕ್ಕೆ ಸುನಂದಕ್ಕ ರೆಡಿಯಿದ್ದಾರೆ! ಕೇಳೋದಕ್ಕೆ ನೀವು ರೆಡಿನಾ?

ThatsKannada editor S.K. Shama Sundaraಒಂದು ಊರಿನಲ್ಲಿ ಒಬ್ಬ ರೈತ ಇದ್ದ. ಅವನ ಹೆಸರು ಪಾಪಣ್ಣ ಅಂತ. ಅವನಿಗೆ ಅವಳಿ ಜವಳಿ ಹೆಣ್ಣು ಮಕ್ಕಳಿದ್ದರು ಲಕ್ಷ್ಮಿ, ಸರಸ್ವತಿ ಅಂತ ಅವರ ಹೆಸರು. ಇಬ್ಬರೂ ನೋಡುವುದಕ್ಕೆ ಮುದ್ದುಮುದ್ದಾಗಿದ್ದರು.

ಪಾಪಣ್ಣ ಪಕ್ಕದ ಹೊಲದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ. ದಿನವಿಡೀ ಮೈಮುರಿದು ದುಡಿದು ಸೂರ್ಯ ಮುಳುಗುವ ಹೊತ್ತಿಗೆ ಮನೆಗೆ ಬರುತ್ತಿದ್ದ. ಮನೆಯ ಅಂಗಳಕ್ಕೆ ಬರುವಾಗ ಅವನ ಮಕ್ಕಳು ಹಟ್ಟಿಯಲ್ಲಿ ಆಡುವುದನ್ನು ನೋಡುತ್ತಿದ್ದಂತೆಯೇ ಆಯಾಸ ಎಲ್ಲ ಮರೆಯಾಗುತ್ತಿತ್ತು.

ಪಾಪಣ್ಣನ ಹೆಂಡತಿ ಹೆಸ್ರು ನೀಲಮ್ಮ. ಬರೀ ಮಾತುಗಾತಿ. ಬಡವಳಾದರೂ ಕೆಲಸಕ್ಕೆ ಹೋಗುತ್ತಿರಲಿಲ್ಲ. ಕುತ್ತಿಗೆಯಲ್ಲಿ ಒಂದು ಹಿತ್ತಾಳೆ ತಾಳಿಕೂಡ ಇರಲಿಲ್ಲ . ಕತ್ತಿಗೆ ಒಂದು ಅರಿಶಿನದ ಕೊಂಬು ಕಟ್ಟಿಕೊಂಡಿದ್ದಳು. ತುಂಬಾ ಬಡತನ. ಜತೆಗೆ ಸೋಮಾರಿತನ. ಮನೆಯಲ್ಲಿ ಬೆಳಿಗ್ಗೆ ಮುದ್ದೆ ಕೂಡಿಸಿ ಸಾರು ಕುದಿಸಿದರೆ ಅವತ್ತಿನ ಅವಳ ಕೆಲಸ ಮುಗಿಯಿತು. ಅವಳಿಗೆ ಊರಿನ ಎಲ್ಲರ ವಿಚಾರ ಬೇಕು. ಬೆಳಗ್ಗಿನಿಂದ ಸಂಜೆತನಕ ಅವರಿವರ ಮನೆ ಜಗಲಿಯ ಮೇಲೆ ಕುಳಿತು ಹರಟೆ ಕೊಚ್ಚುವುದೆಂದರೆ ಅವಳಿಗೆ ಪಂಚಪ್ರಾಣ.

ಪಾಪಣ್ಣ ಏನಾದರೂ ಬುದ್ಧಿ ಹೇಳಲು ಹೋದರೆ ಅವನಿಗೆ ಎದುರು ಮಾತನಾಡುತ್ತಿದ್ದಳು. ಮಹಾ ಸಿಡುಕಿ. ಗಂಡ ಎಷ್ಟು ದುಡಿದರೂ ಅವಳಿಗೆ ತೃಪ್ತಿ ಅಂತಾನೇ ಇಲ್ಲ. ಅಷ್ಟೇ ಅಲ್ಲ, ಪಾಪಣ್ಣನಿಗೆ ‘ನೀನು ಸೋಮಾರಿ’ ಅಂತನೂ ಬಯ್ತಾಇದ್ಲು.

ಹೀಗಿರಬೇಕಾದರೆ ಒಂದು ದಿವಸ ಏನಾಯ್ತಪ್ಪಾ ಅಂದರೆ, ಇದ್ದಕ್ಕಿದ್ದಂತೆ ಪಾಪಣ್ಣ ಹುಷಾರು ತಪ್ಪಿ ಕಾಯಿಲೆ ಬಿದ್ದ. ಅವರ ಹಳ್ಳಿ ಸುತ್ತ ಮುತ್ತ ಎಲ್ಲೂ ಆಸ್ಪತ್ರೆನೇ ಇಲ್ಲಾ ! ಒಂದೇ ಒಂದು ಇತ್ತು. ಆಲ್ಲಿಗೆ ಹೋಗಕ್ಕೆ ಏಳು ಮೈಲಿ ದೂರ ಎತ್ತಿನ ಗಾಡಿಕಟ್ಟಿಕೊಂಡು ಹೋಗಬೇಕು. ಬೇಗ ಹೋಗೋಣ ಅಂದ್ರೆ ಹಳ್ಳಿಯಲ್ಲಿ ಯಾವ ಬಸ್ಸುಯಿಲ್ಲ ಗಿಸ್ಸು ಇಲ್ಲ..

ಆಮೇಲೆ , ಆಮೇಲೇನಾಯ್ತು?.....ಯಾರಾದರೂ ಹೀಗೆ ಕಥೆ ಹೇಳ್ತಾಯಿದ್ರೆ ಕೇಳ್ತನೇ ಇರ್ತೀರಾ ಅಲ್ವಾ? ಕೇಳ್ತನೇ ಇರೋಣ ಅನ್ಸತ್ತೆ ಅಲ್ವಾ? ಹೌದು. ನೀವೇನೋ ಆಸಕ್ತಿಯಿಂದ ಕೇಳ್ತೀರಿ ಆದರೆ ಹೇಳುವವರಾರು? ಕಥೆಗಳು ಇರುವವರೆಗೂ ಕೇಳುಗರಿರುತ್ತಾರ ನಿಜ, ಕೇಳುಗರಿರುವವರೆಗೂ ಕಥೆಗಳು ಇರುತ್ತವೆ ನಿಜ. ಆದರೆ, ಹೇಳುವವರ ಕೇಳುವವರ ನಡುವೆ ಸಾಮೀಪ್ಯ ಇರಬೇಕಲ್ಲ!

ಕಥೆ ಹೇಳುವವರ ಮತ್ತು ಕೇಳುವರ ನಡುವಿನ ಕಥಾಕಾರಣ ಸಂಬಂಧಗಳು LKG UKGಗೆ admit ಆದ ನಂತರ ಉಂಟಾದ ಪರಿಸ್ಥಿತಿ ಇದು. ಅಜ್ಜಿ ಒಂದು ಕಡೆ ಮಕ್ಕಳು ಮೊಮ್ಮಕ್ಕಳು ಇನ್ನೊಂದು ಕಡೆ. ಅಜ್ಜಿ ಗೋಣಿಕೊಪ್ಪಲಲ್ಲೇ ಉಳಿದು ಮಕ್ಕಳು Bishop Cotton school ಸೇರಿದಮೇಲೆ ಈ ನಮ್ಮ ಭಾರತ, ಈ ನಮ್ಮ ಕರ್ನಾಟಕ, ಈ ನಮ್ಮ ಕನ್ನಡದಲ್ಲಿ ತುಂಬಿತುಳುಕಿರುವ ಚೆಂದದ ಕಥೆಗಳು ಅಷ್ಟರಮಟ್ಟಿಗೆ ಮೂಲೆಗುಂಪಾದವು. ಕಥೆ ಹೇಳುವವರು ಒಂದು ಕಡೆ, ಕೇಳುವ ಕಿವಿಗಳು ಇನ್ನೊಂದು ಕಡೆ ಆಗಿರುವುದರಿಂದ ಮತ್ತು ಎಲ್ಲರಿಗೂ ಪಾಪ ಅವರವರ ಕಥೆಗಳೇ ಮುಖ್ಯವಾಗಿರುವುದರಿಂದ ಪಾಪಣ್ಣ, ನೀಲಮ್ಮ ಮತ್ತು ಅವರ ಎರಡು ಮಕ್ಕಳ ಕತೆಗಳನ್ನು ಮುಂದುವರೆಸುವವರು ಯಾರು?

ಕಾಲ ಒಂದು ಸುತ್ತು ಹಾಕಿ ಮತ್ತೆ ಮನೆಬಾಗಿಲಿಗೆ ಬಂದು ನಿಲ್ಲುವ ಹೊತ್ತಿಗೆ ಏನೆಲ್ಲ ಬದಲಾವಣೆ ಆಗಿರುತ್ತದೆ. ಆದರೆ ಕತೆ ಆಮೇಲೇನಾಯ್ತು? ಎನ್ನುವ ನಮ್ಮ ಕುತೂಹಲ ಮಾತ್ರ ಸದಾ ಜೀವಂತ. ಆಧುನಿಕ ಪ್ರಪಂಚದ ರೀತಿರಿವಾಜುಗಳ ನಡುವೆಯೂ ಮಕ್ಕಳ ಕಥೆಗಳು, ಮತ್ತೆ ಕನ್ನಡ ಮಕ್ಕಳ ಮನಸ್ಸನ್ನು ಅರಳಿಸಲು ಸಿದ್ಧವಾಗಿವೆ. ಇದೀಗ ಕಂಪ್ಯೂಟರ್‌ನಲ್ಲಿ ಇಣುಕುತ್ತಿವೆ. ಮಾಧ್ಯಮವೇನೋ ಬದಲಾಗಿರಬಹುದು. ಆದರೆ ಕಥೆ ಹೇಳುವ ಕಲೆ ಮತ್ತು ಕೇಳುವ ಕಿವಿಗಳ ತನ್ಮಯತೆ ಬದಲಾಗಿಲ್ಲ ಎಂಬುದಕ್ಕೆ ಇಲ್ಲೊಂದು ಉದಾಹರಣೆಯಿದೆ.

ಇತ್ತೀಚೆಗೆ ನಮ್ಮ ವೆಬ್‌ ಪುಟಗಳಲ್ಲಿ ಒಂದು ಜಾನಪದ ಕಥೆ ಪ್ರಕಟವಾಗಿತ್ತು. ಆ ಕಥೆಯ ಹೆಸರು ‘ಹೆಂಡತಿಗೆ ಪಾಠ ಕಲಿಸುವುದು ಹೇಗೆ?’ ಅಂತ. ಕಥೆಯನ್ನು ಓದಿ ತುಂಬಾ ಸಂತೋಷ ಹೊಂದಿದ ನಮ್ಮ ಓದುಗರೊಬ್ಬರು ಆ ಕತೆಯನ್ನು ಇಂಟರ್‌ನೆಟ್ಟಿನೊಳಗಿರುವ ಟೀವಿ ಚಾನೆಲ್‌ಗೆ ಹಾಕಿದ್ದಾರೆ.

ಅಲ್ಲಿ ಪ್ರೀತಿಯಿಂದ ಕಥೆಯನ್ನು ಹೇಳುತ್ತಾ ಹೋಗುವ ಅವರ ಹೆಸರು ಸುನಂದ. ಕಥೆ ಕೇಳುವವರಿಗೆ ಸುನಂದ ಅಕ್ಕ, ಚಿಕ್ಕಮ್ಮ, ಅತ್ತೆ, ಸ್ನೇಹಿತೆಯಂತೆ ಪ್ರೀತಿಪಾತ್ರರಾಗುತ್ತಾರೆ. ನಾನಂತೂ ಕೇಳಿ ಆನಂದಿಸಿದೆ. ಆ ಕತೆ ಕೇಳಿದ ನಂತರ ಇನ್ನೊಂದು ಕಥೆ ಹೇಳು ಅಕ್ಕಾ ? ಎಂದು ಕೇಳಬೇಕೆನಿಸಿತು. ಹೆಂಡತಿಗೆ ಪಾಠ ಕಲಿಸುವುದು ಹೇಗೆ? ಕಥೆಯನ್ನು ಕೇಳಲು ಈಗ ನೀವು ರೆಡಿಯಾಗಿ. ಮನೆಯಲ್ಲಿ ಎಲ್ಲರನ್ನೂ ಕರೆಯಿರಿ. ವಾಲ್ಯೂಂ ಜಾಸ್ತಿ ಮಾಡಿ. ಯಾರೂ ಗಲಾಟೆ ಮಾಡಬೇಡಿ.

ಕ್ಲಿಕ್‌ ಮಾಡಿ : http://www.youtube.com/watch?v=qI4E5I2d2N0

ಯುಟ್ಯೂಬ್‌ನಲ್ಲಿ ಮಕ್ಕಳ ಕಥೆ, ಕವನಗಳಲ್ಲದೆ ರಾಗಿಬೀಸುವಪದ, ಸೋಬಾನಪದ, ಲಾವಣಿ ಮುಂತಾದ ಅಪರೂಪವಾಗುತ್ತಿರುವ ಕನ್ನಡ ಹಾಡುಹಸೆಗಳನ್ನು ನೀವು ರೆಕಾರ್ಡ್‌ಮಾಡಬಹುದು. ಹಾಗೆ ಮಾಡುವವರು ನನಗೆ ಲಿಂಕ್‌ ಕಳಿಸಿಕೊಟ್ಟರೆ ಕನ್ನಡಿಗರೊಂದಿಗೆ ಅದನ್ನು ನಮ್ಮ ವೆಬ್‌ಸೈಟ್‌ ಮುಖಾಂತರ ಹಂಚಿಕೊಳ್ಳುವ ಸಂತೋಷ ನನ್ನದು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more