ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಮೆಂಟ್ಸ್ ಪ್ಲೀಸ್; ತೋಚಿದ್ದು ಬರೆಯಲು ಮತ್ತೆ ಅವಕಾಶ!

By Super
|
Google Oneindia Kannada News

ನಮಸ್ಕಾರ,

ದಟ್ಸ್ ಕನ್ನಡ ಡಾಟ್ ಕಾಂ ಒದಗಿಸುವ ಅನೇಕ ಜನೋಪಯೋಗಿ ಮಾಹಿತಿ ಸಲಕರಣೆಗಳಲ್ಲಿ Online Comments ಕೂಡ ಒಂದು. ಪ್ರತಿಯೊಂದು ಪುಟಗಳಲ್ಲೂ ಲಭ್ಯವಿರುವ, ಓದುಗರು ಆ ಕ್ಷಣದಲ್ಲೇ ತಮ್ಮ ಅನಿಸಿಕೆಗಳನ್ನು ದಾಖಲಿಸಲು ಸುಲಭವಾಗುವ ಈ ಸಾಧನ , ಕನ್ನಡ ಜಾಲತರಂಗದ ಅತ್ಯಂತ ಜನಪ್ರಿಯ ಆನ್ಲೈನ್ ಹಲಗೆ ಬಳಪವೆಂದರೆ ಅತಿಶಯೋಕ್ತಿಯಲ್ಲ.

ಓದುಗರು ತಮ್ಮ ಸಂತಸ, ಆಕ್ರೋಶ, ಶುಭಾಶಯ ಮತ್ತು ಭಿನ್ನಾಭಿಪ್ರಾಯಗಳನ್ನು ಅಲ್ಲಲ್ಲೆ ಬರೆದು ತಿಳಿಸುವುದಕ್ಕಿಂತ ಮುಖ್ಯವಾಗಿ ಆರೋಗ್ಯಕರ ಚರ್ಚೆಗೆ ಆಸ್ಪದ ಕೊಟ್ಟ ನಮ್ಮ ಕಾಮೆಂಟ್ಸ್ ಸಲಕರಣೆಯನ್ನು ಅನೇಕ ವಾಚಕರು ಮೆಚ್ಚಿಕೊಂಡಿದ್ದಾರೆ. ಅದರ ಜೊತೆಜೊತೆಗೆ ದಕ್ಕಿದ ಸ್ವಾಂತಂತ್ರ್ಯವನ್ನು ಮನಬಂದಂತೆ ಬಳಸಿ ಕಣ್ಣಿಗೆ ರಾಚುವಂತೆ ಅನಿಸಿಕೆಗಳನ್ನು ಗೀಚಿದ ಮಹನೀಯರು ಮತ್ತು ಮಹಿಳೆಯರು ಅನೇಕರಿದ್ದಾರೆ.

ವಾಕ್ ಸ್ವಾತಂತ್ರ್ಯದ ಸದುಪಯೋಗ ಪಡೆದುಕೊಳ್ಳುವ ಎಲ್ಲರಿಗೂ ನಮ್ಮ ವಾಹಿನಿಯ ಪರವಾಗಿ ಮುಕ್ತ ಶುಭಕಾಮನೆಗಳು. ಆನ್ ಲೈನ್ ಕಾಮೆಂಟ್ಸ್ ಸೇವೆಯನ್ನು ಸಮರ್ಥವಾಗಿ ನಿಭಾಯಿಸುವ ಸರ್ವರ್ ದುರಸ್ತಿಯಿಂದಾಗಿ, ಕೆಲವು ದಿವಸಗಳಿಂದ ಈ ಬಹೂಪಯೋಗಿ ಆನ್ಲೈನ್ ಕಾಮೆಂಟ್ಸ್ ಸಾಧನವನ್ನು ತಡೆಹಿಡಿಯಲಾಗಿತ್ತು. ಮತ್ತೆ ನಿಮ್ಮಬಳಕೆಗೆ ಇಂದಿನಿಂದ ಸಿದ್ಧವಾಗಿದೆ ಎಂದು ತಿಳಿಸಲು ಹರ್ಷಿಸುತ್ತೇವೆ. ಹ್ಯಾಪಿ ಕಾಮೆಂಟಿಂಗ್.

English summary
Welcome back to thatskannada Comments arena
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X