• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಿರ್ವಾತದಿಂದಗಾಳಿ ಬೆಳಕಿನ ಪ್ರಸ್ತಭೂಮಿಗೆ

By Staff
|

ಟ್ಯಾಬ್ಲಾಯ್ಡ್ ಪತ್ರಿಕೆ ಎಂದೊಡನೆಯೇ ನಿಮ್ಮ ಭಿತ್ತಿಯಲ್ಲಿ ಯಾವ ಚಿತ್ರಗಳು ಮೂಡುತ್ತವೆಯೋ ನಾವು ಕಾಣೆವು. ಆದರೆ ಲಂಕೇಶ್‌ ಪತ್ರಿಕೆ ಎಂದಾಕ್ಷಣ 20 ವರ್ಷ ಟೀಕೆ-ಟಿಪ್ಪಣಿ ಅಂಕಣವನ್ನು ಸತತ ಓದಿದವರಿಗೆ ಏನೆಲ್ಲ ನೆನಪಾಗುವುದು ಸತ್ಯ.. ಲಂಕೇಶ್ ಕಣ್ಮರೆಯಾದನಂತರ ಕರ್ನಾಟಕದ ಪ್ರಜ್ಞಾವಂತ ಪರಿಸರದಲ್ಲಿ ನಿಚ್ಚಳವಾದ ನಿರ್ವಾತ ಉಂಟಾದದ್ದು ಅಷ್ಟೇ ಸತ್ಯ. ಈ ನಿರ್ವಾತವನ್ನು ಅಳಿಸಿ ಅಲ್ಲಿ ಗಾಳಿ ಬೆಳಕು ತುಂಬುವ ಪ್ರಯತ್ನ ಆರಂಭವಾಗಿದೆ. ಲಂಕೇಶ್‌ ಮತ್ತು ಡಿ.ಆರ್‌. ನಾಗರಾಜ್‌ ಚಿಂತನಾ ಶಾಲೆಯಲ್ಲೇ ಕಲಿತ ನಟರಾಜ್‌ ಹುಳಿಯಾರ್ , ಹೌದು, ನೀವು ಅಂದುಕೊಂಡದ್ದು ಸರಿ. ಕೊಳಾಯಿಯಿಂದ ಅವರು ಕೊಳಕ್ಕೆ ಜಿಗಿದಿದ್ದಾರೆ. ನಾಕೂ ದಿಕ್ಕಿನ ಬಾಗಿಲು ತೆರಕೊಂಡಿವೆ. ಗಾಳಿ ಬೆಳಕು ಆಡುತ್ತದೆ! - (ಸಂಪಾದಕ)


Nataraj Huliyar on a paradigm shiftಹು ಲ ನಟರಾಜ್ - ಎಂದರೆ ಯಾರು ಎಂಬ ಪ್ರಶ್ನೆ ಸಹಜ. ನಟರಾಜ್ ಹುಳಿಯಾರ್ ಒಂದು ಕಾಲಕ್ಕೆ ವ್ಯಂಗ್ಯ ಚಿತ್ರಕಾರರಾಗಿದ್ದರು ಎಂಬ ವಿಷಯ ಅನೇಕರಿಗೆ ಗೊತ್ತಿಲ್ಲ (ಅವರಿಗೂ ಮರೆತುಹೋಗಿರಬಹುದು). ಹು ಲ ನಟರಾಜ್ ಎಂಬ ಹೆಸರಿನಲ್ಲಿ ಪತ್ರಿಕೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಈ ಕಾರ್ಟೂನಿಸ್ಟ್ ಇಂದು ಕನ್ನಡದ ಮಹತ್ವದ ವಿಮರ್ಶಕ. ಡಿ ಆರ್ ನಾಗರಾಜ್ ಚಿಂತನಾ ಕ್ರಮದ ಮುಂದುವರಿಕೆ.

ತಿಪಟೂರಿನ ಹುಳಿಯಾರಿನ ಈ ಹುಡುಗ ಪಲ್ಲಾಗಟ್ಟಿ ಅಡವಪ್ಪ ಕಾಲೇಜಿನಿಂದ ಕ್ರೈಸ್ಟ್ ಕಾಲೇಜಿನ ಕನ್ನಡ ಸಂಘದ ಸ್ಪರ್ಧೆಗಳಲ್ಲಿ ಗೆಲ್ಲುತ್ತಿದ್ದ. ತಾಜಾ ಅನುಭವ, ನೇರವಂತಿಕೆ, ಉಕ್ಕುತ್ತಿದ್ದ ಯೌವನಕ್ಕೆ ಕೊಟ್ಟ ಮಾತು ಇವರ ಸ್ಪೆಷಾಲಿಟಿಯಾಗಿತ್ತು.

ನಂತರ ಎಂಎ ಇಂಗ್ಲಿಷ್‌ಗಾಗಿ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ವಲಸೆ. ಅಲ್ಲಿಯವರೆಗೂ ಸಂಗಾತಿಯಾಗಿದ್ದ ಕವಿತೆಯನ್ನು ಪಕ್ಕಕ್ಕೆ ಸರಿಸಿ ಹುಳಿಯಾರ್ ಕಥೆಯತ್ತ ಮುಖ ಮಾಡಿ ನಿಂತರು. ಪ್ರಜಾವಾಣಿ ಕಥಾ ಸ್ಪರ್ಧೆಯಲ್ಲೂ ಗೆದ್ದರು. “ಮತ್ತೊಬ್ಬ ಸರ್ವಾಧಿಕಾರಿ” ಕಥಾ ಸಂಕಲನ ಎದ್ದು ಬಂತು. ಕ್ಲೀಷೆ ನಟರಾಜ್ ಗೆ ಸದಾ ಇರಿಸುಮುರಿಸು ತರಿಸುವ ವಿಷಯ. ಆ ಕಾರಣಕ್ಕಾಗಿಯೇ ಇರಬೇಕು, ನೋಟದಲ್ಲಿ ಹೊಸತನವಿರಲಿ, ಒಂದಷ್ಟು ಗಾಳಿ ಬೆಳಕು ಆಡಲಿ ಎಂದು ನಿರ್ಧರಿಸಿದರು.

ಲಂಕೇಶರ ಒಡನಾಟ, ಡಿ ಆರ್ ನಾಗರಾಜರ ಅಖಾಡ ನಟರಾಜ್ ಹುಳಿಯಾರ್ ಒಳಗಿನ ಗಂಭೀರ ವಿಮರ್ಶಕನನ್ನು ಒರೆಗೆ ಹಚ್ಚಿತು. ನಟರಾಜ್ ವ್ಯಕ್ತಿತ್ವದಲ್ಲಿರುವ ತುಂಟತನ, ಆರೋಗ್ಯಕರ ವ್ಯಂಗ್ಯ ಅವರ ಬರಹಗಳನ್ನೂ ಹೊಸದಾಗಿ ರೂಪಿಸಿತು. ಲಂಕೇಶರ ಅಡ್ಡೆಯಲ್ಲಿ ತಮಗೆ ಆ ವೇಳೆಗೇ ಇದ್ದ ಸಾಮಾಜಿಕ ನೋಟವನ್ನು ಪಳಗಿಸಿಕೊಂಡರು. ಡಿಆರ್, ವಿಮರ್ಶೆಗೆ ಬೇಕಾಗಿದ್ದ ಪರಿಕರಗಳನ್ನು ಸಾಣೆ ಹಿಡಿದರು.

ಬೆಂಗಳೂರು ವಿವಿಯ ಕನ್ನಡ ವಿಭಾಗದಲ್ಲಿ ತೌಲನಿಕ ಅಧ್ಯಯನ ಬೋಧಿಸುವ ಹುಳಿಯಾರ್, ಡಿಆರ್ ಅಡಿ ಆಫ್ರಿಕನ್ ಸಾಹಿತ್ಯದ ಸಂಶೋಧನೆ ನಡೆಸಿದರು. “ರೂಪಕಗಳ ಸಾವು” ಕವಿತೆಗಳ ಸಂಕಲನ ಸಹ ಅದಾಗಲೇ ಬಂದಿತ್ತು.

ಚಿತ್ರಕಲಾ ಪರಿಷತ್ತಿನ ವಿದ್ಯಾರ್ಥಿನಿ ಅನಿತಾರನ್ನು ಬುಟ್ಟಿಗೆ ಹಾಕಿಕೊಂಡ ಹುಳಿಯಾರ್, ಮಗನಿಗೆ ಇಟ್ಟ ಹೆಸರು ಷೋಯೆಂಕಾ. ಆಫ್ರಿಕಾದ ಹಾಡಿಗೆ ನಟರಾಜ್ ಮಾರುಹೋದ ರೀತಿ ಇದು. ಜಾತಿಗಳನ್ನು ಕಿತ್ತೊಗೆಯುವುದರ ಮೂಲಕವೇ ಪಂಪ ಕನಸಿದ ಮಾನವನನ್ನು ಸೃಷ್ಠಿಸಲು, ಅಂತರ್ಜಾತೀಯ ವಿವಾಹಗಳ ವೇದಿಕೆ “ಮಾನವ ಮಂಟಪ”ಕ್ಕೆ ಕೈ ಜೋಡಿಸಿದರು. ಜಾಗತೀಕರಣದ ಮಧ್ಯೆ ಹಳ್ಳಿಯ ಹುಡುಗರು ಎದುರಿಸುತ್ತಿರುವ ತಲ್ಲಣಗಳಿಗೆ ಒಂದು ಕಾಲುದಾರಿಯನ್ನಾದರೂ ನಿರ್ಮಿಸ ಬೇಕೆಂದು ಇಂಗ್ಲಿಷ್ ಕಲಿಕೆಯ ಪರವಾಗಿ ನಿಂತರು.

ಲಂಕೇಶ್ ಪತ್ರಿಕೆ ನೀಡಿದ್ದ ಒಂದು ಆರೋಗ್ಯಕರ ಕಣ್ಣೋಟ ಇಲ್ಲವಾಗುತ್ತಿರುವುದು ನಟರಾಜ್ ಗೆ ಎಲ್ಲೋ ಗಾಳಿ ಬೆಳಕು ಇಲ್ಲವಾಗುತ್ತಿದೆ ಎನಿಸಿರಬೇಕು. ಆ ಕಾರಣಕ್ಕಾಗಿಯೇ ಆದದ್ದಾಗಲಿ ಎಂದು ಅಥವಾ ಆದದ್ದೆಲ್ಲಾ ಒಳಿತೇ ಆಯಿತು ಎಂಬಂತೆ ಪತ್ರಿಕೋದ್ಯಮಕ್ಕೆ ಜಿಗಿದಿದ್ದಾರೆ. “ಕನ್ನಡ ಟೈಮ್ಸ್” (ಟೈಮ್ಸ್ ಆಫ್ ಇಂಡಿಯಾದ ಕನ್ನಡ ರೂಪವಲ್ಲ) ಟ್ಯಾಬ್ಲಾಯ್ಡ್ ಆರಂಭವಾಗಿದೆ. ಈ ಕನ್ನಡ ಟೈಮ್ಸ್ ನಿಂದಾಗಿ ಗಾಳಿ ಬೆಳಕು ಮತ್ತೆ ಆಡುತ್ತಿದೆ.

ಲಂಕೇಶ್ ಪತ್ರಿಕೆಗೆ ನಟರಾಜ್ ಹುಳಿಯಾರ್ ಬರೆದ ಅಂಕಣ “ಗಾಳಿ ಬೆಳಕು” ಈಗಾಗಲೇ ಪುಸ್ತಕವಾಗಿದೆ. ಅದಕ್ಕೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಬಂದಿದೆ. ಇವರ ಕೃತಿಗಳಿಗೆ ಬಿ ಎಂ ಇನಾಮದಾರ್ ಪ್ರಶಸ್ತಿ, ಕಥೆಗಳ ಅನುವಾದಕ್ಕಾಗಿ ದೆಹಲಿಯ ಪ್ರತಿಷ್ಠಿತ “ಕಥಾ” ಪ್ರಶಸ್ತಿ ಕೂಡ ಲಭಿಸಿದೆ. ಹಂಬಲ ತೇರಿನ ಭೂಮಿ ಅವಧಿ ಬ್ಲಾಗಿನೊಳಗೆ ನಟರಾಜ್‌ ವಾರಕ್ಕೊಮ್ಮೆ "ಗಾಳಿ ಬೆಳಕು” ಅಂಕಣ ಬರೆಯುತ್ತಿದ್ದಾರೆ. ನಂತರ ಕನ್ನಡ ಟೈಮ್ಸ್ ನಲ್ಲಿ ಅದು ಮುದ್ರಿತವಾಗಲಿದೆ.

ನಟರಾಜ್‌ ಹುಳಿಯಾರ್‌ ಅವರನ್ನು ಈ ಮೂಲಕವೂ ತಲುಪಬಹುದು : natarajhuliyar@gmail.com

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more