ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾರ್ವಜನಿಕರ ಅವಗಾಹನೆಗೆ ಒಂದು ಖಾಸಗಿ ಬದುಕು...

By Staff
|
Google Oneindia Kannada News


ಕಾಫಿಶಾಪ್‌ನಲ್ಲಿ ಒಂದು ಕಾಫಿ, ಎರಡು ಸಿಗರೇಟ್‌ ಎಳೆಯುವಷ್ಟರಲ್ಲಿ ಒಂದು ಅನಿರೀಕ್ಷಿತ ಭೇಟಿಯ ಅನುಭವಗಳನ್ನು ಮೆಮೋರಿಪ್ಯಾಡ್‌ನಲ್ಲಿ ಚಕಚಕ ಬರೆದುಕೊಂಡೆ. ನಿಜ ಹೇಳಬೇಕೆಂದರೆ ನಾನು ಅವರ ಈ ಪರಿಯ ಬದುಕನ್ನು ವಿಷದೀಕರಿಸಬಾರದಿತ್ತು. ಅವರು ಇದನ್ನೆಲ್ಲ ಓದುವುದಿಲ್ಲ ಎಂಬ ಖಾತ್ರಿಯಿಂದ ಬರೆಯಲು ಕುಳಿತೆ!

Lifes like thatನಮ್ಮಪ್ಪನಿಗೂ ಎಲ್ಲ ಅಪ್ಪಂದಿರ ಹಾಗೆ ನಾನೂ ಕಂಪ್ಯೂಟರ್‌ ಕಲಿಯಬೇಕು ಅನ್ನೋ ಆಸೆಯಿತ್ತು. ಅವರಾಸೆಯೇ ನನ್ನಾಸೆ ಅಂದುಕೊಂಡು ಅದನ್ನೇ ಕಲಿತೆ. ಕಲಿತ ತಕ್ಷಣವೇ ನನಗೆ ಅಮೆರಿಕಾದ ಕಂಪನಿಯಾಂದು ಬೆಂಗಳೂರಿನಲ್ಲಿ ಕೆಲಸ ಕೊಟ್ಟಿತು. ಕಂಪನಿಯವರು ಒಂದೆರಡು ವರ್ಷಗಳಲ್ಲೇ ನನ್ನನ್ನು ಅಮೆರಿಕಕ್ಕೆ ಕರೆಸಿಕೊಂಡರು.

ಅಮೆರಿಕಾಕ್ಕೆ ಹೋಗುವುದು ನನ್ನ ಆಸೆ ಆಗಿರಲಿಲ್ಲ. ನಮ್ಮಪ್ಪ ಅಮ್ಮ ತೀರ ಬಡವರು. ಅವರು ನನ್ನನ್ನು ಬೆಳೆಸುವುದಕ್ಕೆ ಎಷ್ಟು ಕಷ್ಟ ಪಟ್ಟಿದ್ದಾರೆ ಅನ್ನೋದನ್ನು ನಾನು ಮರೆಯುವ ಹಾಗೇ ಇರಲಿಲ್ಲ. ನಮ್ಮ ಹಳ್ಳಿಯ ಪೋಸ್ಟ್‌ಮ್ಯಾನ್‌ ಆಗಿದ್ದ ಅಪ್ಪ, ಮಳೆಬಿಸಿಲೆನ್ನದೆ ಸೈಕಲ್ಲು ತುಳಿಯುತ್ತಾ ದಿನಕ್ಕೆ ಐವತ್ತು ಕಿಲೋಮೀಟರ್‌ ಸುತ್ತುತ್ತಿದ್ದರು. ಅದರಿಂದಲೋ ಏನೋ ಅವರಿಗೆ ಉಬ್ಬಸ ಬೇರೆ ಬಂದಿತ್ತು. ಅವರ ಸಂಪಾದನೆಯಲ್ಲಿ ಅವರು ಕಟ್ಟಿಸಿದ್ದು ಕೇವಲ ಒಂದು ಬೆಡ್‌ರೂಮಿನ ಪುಟ್ಟ ಮನೆಯನ್ನು. ನಾನಾದರೂ ಅಮೆರಿಕಾದಲ್ಲಿ ದುಡಿದು ಅವರನ್ನು ಸುಖವಾಗಿಡಬೇಕು ಅಂದುಕೊಂಡಿದ್ದೆ.

ಅಮೆರಿಕಾ ಆರಂಭದಲ್ಲಿ ನನಗೆ ಅಂಥ ಸುಖ ಕೊಡಲಿಲ್ಲ . ವಾರಕ್ಕೊಮ್ಮೆ ನಮ್ಮ ಮನೆಗೆ ಅಗ್ಗದ ಅಂತರರಾಷ್ಟ್ರೀಯ ಕರೆಕಾರ್ಡುಗಳನ್ನು ಬಳಸಿ ಫೋನ್‌ ಮಾಡುತ್ತಿದ್ದೆ. ಮನೆಗೆ ಹೋಗಬೇಕು ಅನ್ನಿಸುತ್ತಿತ್ತು. ಅಮ್ಮನ ಮುಖ ಆಗಾಗ ನೆನಪಾಗುತ್ತಿತ್ತು. ಆಗೆಲ್ಲ ಫೋನ್‌ ಮಾಡಿ ಸಮಾಧಾನ ಮಾಡಿಕೊಳ್ಳುತ್ತಿದ್ದೆ.

ಹೀಗೆ ಎರಡು ವರ್ಷ ಕಳೆಯಿತು.

ಮ್ಯಾಕ್‌ಡೋನಾಲ್ಡ್‌ ಬರ್ಗರ್‌ ಅಭ್ಯಾಸವಾಯ್ತು. ದಿನಾ ಪತ್ರಿಕೆ ನೋಡುತ್ತಾ ರುಪಾಯಿ ಮೌಲ್ಯ ಕುಸಿದಾಗ ಸಂತೋಷಪಡುತ್ತಿದ್ದೆ. ಅಮೆರಿಕಾದ ಒಂದು ಡಾಲರ್‌ ಎಂದರೆ ಭಾರತದ ಮೂವತ್ತೆಂಟು ರುಪಾಯಿ ಎಂದು ಹಿಗ್ಗುತ್ತಿದ್ದೆ. ಅದೇ ಹೊತ್ತಿಗೆ ನನಗೆ ಮದುವೆಯಾಗಬೇಕು ಅನ್ನಿಸಿತು. ಅಮ್ಮನಿಗೆ ಹುಡುಗಿ ನೋಡುವಂತೆ ಕಾಗದ ಬರೆದೆ. ಅತ್ಯಂತ ಕಡಿಮೆ ಖರ್ಚಿನಲ್ಲಿ ಭಾರತಕ್ಕೆ ಹೋಗುವ ದಾರಿ ಕಂಡುಕೊಂಡು, ಅಂಥದೊಂದು ಫ್ಲೈಟ್‌ನಲ್ಲಿ ಸ್ವದೇಶಕ್ಕೆ ಬಂದಿಳಿದೆ.

ಅಮ್ಮ ಅಪ್ಪ ಹುಡುಗಿಯರ ಫೋಟೋ ರಾಶಿ ಹಾಕಿಕೊಂಡಿದ್ದರು. ಒಂದು ಹುಡುಗಿಯನ್ನು ನೋಡಿ ಮೆಚ್ಚಿಕೊಂಡು ಮದುವೆಯಾಗಿ ಒಂದೇ ವಾರದೊಳಗೆ ಅಮೆರಿಕಾಕ್ಕೆ ವಾಪಸ್ಸೂ ಬಂದುಬಿಟ್ಟೆ. ಅಮ್ಮ- ಅಪ್ಪನ ಆರೋಗ್ಯದತ್ತ ಒಂದು ಕಣ್ಣಿಡುವಂತೆ ಪಕ್ಕದ ಮನೆಯವರಿಗೆ ಹೇಳಿದ್ದೆ.

ಅವಳು ಅಮೆರಿಕಾಕ್ಕೆ ಬಂದಳು. ಒಂದು ತಿಂಗಳು ಹನಿಮೂನು ನಡೆಯಿತು. ಚಂದ್ರ ಕರಗುತ್ತಾ ಬಂದ, ಜೇನು ಕಹಿಯಾಗತೊಡಗಿತು. ನಾನು ಆಫೀಸಿಗೆ ಹೋದಾಗ ಆಕೆಗೂ ಒಂಟಿತನ ಕಾಡುತ್ತಿತ್ತು. ವಾರಕ್ಕೊಂದೆರಡು ದಿನ ತವರಿಗೆ ಫೋನ್‌ ಮಾಡತೊಡಗಿದಳು. ಈ ನಡುವೆ ಭಗವಂತ ಇಬ್ಬರು ಮುದ್ದಾದ ಮಕ್ಕಳನ್ನು ಕೊಟ್ಟ. ಒಂದು ಗಂಡು ಒಂದು ಹೆಣ್ಣು. ಖರ್ಚು ಮತ್ತಷ್ಟು ಹೆಚ್ಚಾಯಿತು. ಅಪ್ಪ- ಅಮ್ಮ ಮೊಮ್ಮಕ್ಕಳನ್ನು ನೋಡಬೇಕು ಬಾರೋ .. ಎಂದರೂ ಹೋಗುವುದಕ್ಕಾಗಲಿಲ್ಲ.

ಕೆಲಸದ ಒತ್ತಡವೂ ದುಡ್ಡಿನ ತೊಂದರೆಯೂ ಸೇರಿ ಭಾರತಕ್ಕೆ ಮರಳುವುದು ಕನಸೇ ಆಯಿತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X