ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಅವರೆಕಾಳು ಪೊಂಗಲ್‌’ ಅನ್ನೋದು ನಿಜಕ್ಕೂ ಇದೆಯಂತೆ!

By Staff
|
Google Oneindia Kannada News


ಬೇಕಾದವರು, ತಮಗೆ ಬೇಕಾದಂತೆ ಅಡುಗೆ ಮಾಡುತ್ತಾರೆ! ತಿನ್ನೋರು ತಿನ್ತಾರೆ.. ಬಿಡೋರು ಬಿಡ್ತಾರೆ, ನಿಮ್ಮದೇನು ತಕರಾರು? ಅವರೆಕಾಳು ಪೊಂಗಲ್‌ ಬಗ್ಗೆ ಗೇಲಿ ಮಾಡೋದು ಸರೀನಾ ಅನ್ನೋದು ಕೆಲವರ ದೂರು... ದೂರಿಗೆ ಸೊಪ್ಪು ಹಾಕುತ್ತ, ಅಡುಗೆ ಮನೆಯ ಪ್ರಯೋಗಗಳತ್ತ ನಾನೀಗ ಕಣ್ಣು ನೆಟ್ಟಿದ್ದೇನೆ!

ಪೊಂಗಲ್‌ ವಿಷಯವಾಗಿ ನಿನ್ನೆ ನಾನು ಬರೆದ ಕೆಲವು ಅಭಿಪ್ರಾಯಗಳಿಂದ ಕೆಲವರು ಮನಸ್ಸಿಗೆ ಒಂಥರಾ ಬೇಜಾರು ಮಾಡಿಕೊಂಡಂತಿದೆ. ನೀವು ತುಂಬಾ ಟಾಂಟ್‌ ಮಾಡಿದ್ದೀರಾ. ಆದರೆ ಅವರೆಕಾಳು ಹಾಕಿ ಪೊಂಗಲ್‌ ಮಾಡಬಹುದು ಮತ್ತು ತಿನ್ನ ಬಹುದೆಂಬುದೂ ಗೊತ್ತಿಲ್ಲ ವಾ ನಿಮಗೆ? ಅಂತ ಕೇಳಿದ ಮಹನೀಯರು ಮತ್ತು ಮಹಿಳೆಯರ ದೊಡ್ಡ ಬಳಗವೇ ನನ್ನ ಕಣ್ಣುಮುಂದಿದೆ. ಆ ಬರಹದ ಲಿಂಕ್‌ ಹಂಚಿಕೊಂಡು ತಮ್ಮತಮ್ಮಲ್ಲೆ ಚರ್ಚೆ ಕೂಡ ಮಾಡಿಕೊಂಡಿದ್ದಾರೆ.

ಈ ಅವರೆಕಾಳು ಪೊಂಗಲ್‌ನ ಚರ್ಚೆಗಳು ಸಂಜಯನಗರದಲ್ಲಿ ಹುಟ್ಟಿ, ರಾಜಾಜಿನಗರಕ್ಕೆ ಹೋಗಿ ಅಲ್ಲಿಂದ ಒಹಾಯೋಗೆ ತೆರಳಿ ಅಲ್ಲಿಂದ ಹೆಸರು ಗೊತ್ತಿಲ್ಲದ ಊರುಗಳಿಗೆ ಉರುಳಿ ಮತ್ತೆ ಮೈಸೂರಿಗೆ ಬಂದು ಅಲ್ಲಿಂದ ಬೆಂಗಳೂರಿಗೆ ತಲುಪಿ ನನಗೆ ಸಿಗುವ ಹೊತ್ತಿಗೆ ರಾತ್ರಿ 11.30. ಆಗ ನಾನು ಟೆಕ್ಸಾಸ್‌ನಲ್ಲಿರುವ ಓದುಗರೊಬ್ಬರ ಬಳಿ ಮೇಲ್‌ ಮಾತುಕತೆ ನಡೆಸಿದ್ದೆ. ಅವರೂ ಮೈಸೂರಿನವರೆ. ಅವರೂ ಅವರೆಕಾಳು ಪೊಂಗಲ್‌ ಮಾಡ್ತಾರಂತೆ ರೀ!!

ಅಬ್ಬಾ ! ನಮಗೆ ಗೊತ್ತಿಲ್ಲದೆ ಇರುವ ವಿಚಾರಗಳು ಎಷ್ಟೊಂದು ಇರತ್ತೆ ಅಲ್ಲವಾ ! ಏನೇ ಆಗಲಿ, ಸದ್ಯ ಈ ಅವರೆಕಾಳು ಪೊಂಗಲ್‌ ಜಿಜ್ಞಾಸೆ UNO ತನಕ ಹೋಗಲಿಲ್ಲವಲ್ಲ.

ಪೊಂಗಲ್‌ ರೆಸಿಪಿ ನೆಪದಲ್ಲಿ , ನನಗೆ ನಿನ್ನೆಯಿಂದ ಸಿಕ್ಕವರಲ್ಲಿ ಅನೇಕರು ... ಬಹಳಷ್ಟು ಜನ ಮೈಸೂರು ಪ್ರಾಂತ್ಯ ಮೂಲದವರು ಎಂಬ ಸಂಗತಿಯನ್ನು ಗುರ್ತು ಹಾಕಿಕೊಂಡಿದ್ದೇನೆ. ಮೈಸೂರು ಕಡೆ ಈ ರೆಸಿಪಿ ತುಂಬ ಸಾಮಾನ್ಯ ಎಂದು ತಿಳಿಸುವ ಒಂದು ಪ್ರತಿಕ್ರಿಯೆ ಹೀಗಿದೆ :

Hello Sir,

I read the article about Avarekalu Pongal and learnt that they havent heard about it. As for as I know it is a common dish in Mysore region and we make this during the avarekalu season (back home. It is a must on Sankranthi day. This is one of my favorite dish. This goes well with kootu and Chutney (mixed vegitable curry called Kootu in Mysore Style)

If you need the recipe, I can send you as Sankranthi is coming up soon. Also we can find Avarekalu in USA too.

Regards
Sandhya

ಇನ್ನೂ ಕೆಲವು ಪ್ರತಿಕ್ರಿಯೆ ಗಮನಿಸಿ :

Dear Shyam,

Good evening.

Was curious about Avarekalu pongal. was it khara pongal or sihi pongal? even if it is a sihi pongal, it will not surprise me because my friends sister at Tirthahalli prepares a payasam from Cauliflower. She professes that it tastes good.

Well Take care and enjoy

Malathi S, Bangalore

*

ಶಾಮ್‌,

ನಿಮ್ಮ ಆರ್ಟಿಕಲ್‌ ವಿಚಾರಾನ ನಮ್ಮ ಭಾವ ದ್ವಾರಕಿ ಫೋನ್‌ನಲ್ಲಿ ಓದಿ ಹೇಳಿದರು. ಅವರೆಕಾಳು ಪೊಂಗಲ್‌ ಅಷ್ಟೇ ಅಲ್ಲ ಅವರೆಕಾಳು ಪಾಯಸ (ಅಯ್ಯೋ ಶಿವನೆ) ಮಾಡುವವರೂ ಇದ್ದಾರೆ, ನನಗೆ ಗೊತ್ತು. ಒಬ್ಬೊಬ್ಬರ ರುಚಿ ಒಂದೊಂಥರಾ ಇರತ್ತೆ. ನೀವು ಬರೆದಿರೋದು ನೋಡಿದರೆ ಈ ಟೈಪ್‌ ಅಡುಗೆ ಮಾಡುವವರಿಗೆ ಟೇಸ್ಟೇ ಇಲ್ಲ ಅಂತ ಅರ್ಥ ಬರತ್ತೆ.

ಆಯ್ತು, ನೀವು ಪೊಂಗಲ್‌ ಬಗ್ಗೆ ಅದೇನು ಬರೀತೀರೋ ನನಗೂ ಓದಿ ಹೇಳಿ, ನಾಳೆ ಊರಿಗೆ ಹೋಗ್ತಿದೀವಿ. ಶನಿವಾರ ರಾತ್ರಿ ಮಾಡ್ತೀವಿ.

-ಸುಧಾ, ಭದ್ರಾವತಿ

*

ಹೊರಗೂ ದುಡಿಯುವ ಒಳಗೂ ದುಡಿಯುವ ಹೆಣ್ಣುಮಕ್ಕಳು ಬಿಡುವು ಮಾಡಿಕೊಂಡು ಕನ್ನಡದ ಅಡುಗೆ ಶೈಲಿಯ ಬಗೆಗೆ ಇಂಟರ್‌ನೆಟ್ಟಿನಲ್ಲಿ ಚರ್ಚಿಸುವುದು ಸಂತೋಷ. ಯಾಕೆಂದರೆ, ಅವರ ಮಕ್ಕಳಂತೂ ರೋಟಿ ಕರಿ, ಪನ್ನೀರ್‌ ಮಖನ್‌, ಗೋಬಿ ಮಚೂರಿ, ಚಿಕನ್‌ ಹೈದರಾಬಾದಿ, ಶುಶ್ಮ ಕೊಲ್ಹಾಪುರಿ ತಿಂದುಕೊಂಡು ಎಲ್ಲೋ ಹಾಯಾಗಿರುತ್ತಾರೆ. ಹಾಗಂತ ಮನೆಯಲ್ಲಿ ಹೆಂಗಸರು ಒಲೆ ಹೊತ್ತಿಸದೆ ಇರುವುದಕ್ಕೆ ಆಗಲ್ಲ. ಮನೆಯೆಂದಮೇಲೆ ಸಮಯಕ್ಕೆ ಸರಿಯಾಗಿ ಪದಾರ್ಥಗಳು ಸಿದ್ಧವಾಗುತ್ತಿರಲೇಬೇಕು. ಅದೊಂದು ಎಂದೂ ಆಫ್‌ ಆಗದ ಎಂಜಿನ್ನು. ಕುಟುಂಬ ಜೀವನ ಎತ್ತಿನ ಗಾಡಿ.

ನಿನ್ನೆ ಹೀಗೇ ಆಯಿತು. ಸಂಜೆ ನನ್ನ ಆ ಸ್ನೇಹಿತರಿಗೆ ಫೋನು ಮಾಡಿ, ಆ ಅವರೆಕಾಳು ಪೊಂಗಲ್‌ ರೆಸಿಪಿ ವಿಷಯ ಕೇಳೋಣಾಂತ ಟ್ರೆೃ ಮಾಡಿದೆ. ಒಂದಲ್ಲ ನಾಕು ಸಲ ಮಾಡಿದೆ. ಫೋನು ರಿಸೀವ್‌ ಮಾಡಲೇ ಇಲ್ಲ. ಕೊನೆಗೆ ರಾತ್ರಿ ಒಂಭತ್ತು ಗಂಟೆಗೆ ಅವರಿಂದ sms ಬಂತು.

my mother inlaw is not well, I am attending to her in sevakshetra hospital. need to go home and cook... later

ನಾಳೆದಿವಸ ಈ ಬಗ್ಗೆ , ಅಂದರೆ ಅವರೆಕಾಳು ಪೊಂಗಲ್‌ ಮಾಡುವುದು ಹೇಗೆ ಎಂಬ ಬಗ್ಗೆ ಬರೆದು ತಿಳಿಸುತ್ತೀನೀಂತ ನಿನ್ನೆ ನಿಮ್ಮ ಹತ್ರ ಕಮಿಟ್‌ ಆಗಿದ್ದಕ್ಕೋಸ್ಕರ ಇಷ್ಟೆಲ್ಲ ಹೇಳಲೇಬೇಕಾಯಿತು. ಅವರನ್ನು ಮತ್ತೆ ಸಂಪರ್ಕಿಸಿ ಖಂಡಿತ ರೆಸಿಪಿ ಬರೆದು ನಿಮಗೆ ಕೊಡುತ್ತೀನಿ. ಮಾಡುವಿರಂತೆ.. ಅಲ್ಲಿಯತನಕ ... ಹ್ಯಾಪಿ ವೀಕ್‌ ಎಂಡ್‌-ನಮಸ್ಕಾರ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X