• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕನ್ನಡ-ಕರ್ನಾಟಕ ಬ್ಲಾಗಿಗಳೇ.. ಬನ್ನಿ, ಸೇರಿಕೊಳ್ಳಿ

By Staff
|

‘ಬ್ಲಾಗ್‌.. ಬ್ಲಾಗ್‌.. ಬ್ಲಾಗ್‌.. ಎಲ್ನೋಡಿ ಬ್ಲಾಗ್‌’ ಎನ್ನುವ ದಿನಗಳಲ್ಲಿ ನಾವಿದ್ದೇವೆ. ಜೊತೆಗೆ ಅಂತರ್ಜಾಲದಲ್ಲಿ ಕನ್ನಡ ಬ್ಲಾಗ್‌ಗಳ ಫಸಲು ಖುಷಿನೀಡುವಂತಿದೆ. ಅವುಗಳನ್ನೆಲ್ಲ ಒಂದೆಡೆ ಕಾಣುವ ಹಂಬಲ ನಮ್ಮನಿಮ್ಮೆಲ್ಲರದು. ಬನ್ನಿ, ನಮ್ಮ ಜತೆ ನೀವೂ ಹೆಜ್ಜೆಹಾಕಿ.

Are you a blogger? Join the partyಒಮ್ಮೆ ನೋಡಿದರೆ ಮತ್ತೆ ನೋಡಬೇಕು ಎನಿಸುವಂಥ ಬ್ಲಾಗುಗಳು ಆಗೊಂದು ಈಗೊಂದು ಎಲ್ಲೋ ಒಂದು ಎಂಬಂತೆ ನನ್ನ ಕಣ್ಣಿಗೆ ಬೀಳುತ್ತಿದ್ದವು. ಓದಿ ಮುಂದೆ ಮುಂದೆ ಹೋಗುತ್ತಿದ್ದೆ. ಹಾಗೆ ಸುಮ್ಮನೇ.

ಈಗ ಹಾಗೆನುವಂತಿಲ್ಲ. ತನ್ನನ್ನು ತಾನು ತೋಡಿಕೊಳ್ಳುವ ಹಂಬಲ ಹಾಗು ಇಂಟರ್‌ನೆಟ್ಟಿನ ಅನುಕೂಲಗಳನ್ನು ತಾನೂ ದಕ್ಕಿಸಿಕೊಳ್ಳಬೇಕೆಂಬ ತುಡಿತ ಕನ್ನಡ ಬಳಗದಲ್ಲಿ ಹೆಚ್ಚಾಗುತ್ತಿರುವುದು ನಿಚ್ಛಳವಾಗಿದೆ. ಇ-ಕನ್ನಡಿಗರ ಸಂಖ್ಯೆ ಬೆಳೆಯುತ್ತಿದೆ.

ಕನ್ನಡದಲ್ಲಿ ಕನ್ನಡಿಗರಿಂದ ಕನ್ನಡಿಗರಿಗೋಸ್ಕರ ಚೆಂದ ಕಾಣಿಸುವ ಬ್ಲಾಗುಗಳು ಅಂತರ್‌ಜಾಲದಲ್ಲಿ ಹಾಗೆ ಸುಮ್ಮನೆ ತೇಲಿ ಬರುತ್ತಿವೆ. ಯಾವುದೋ ಹಕ್ಕಿ ಕುಕ್ಕಿ ಬಿಟ್ಟ ಗೇರುಬೀಜ ನೇತ್ರಾವತಿಯಲ್ಲಿ ತೇಲಿ ಬರುತ್ತಿರುವ ಹಾಗೆ..

ಕವಿತೆಯಿಂದ ಕಬಡ್ಡಿ ಆಟದತನಕ ವಿವಿಧ ವಿಷಯ ಆಸಕ್ತಿ ಮತ್ತು ಉದ್ದೇಶಗಳನ್ನು ತಂತಾನೆ ಫಲಿಸಿಕೊಳ್ಳುವ ಬ್ಲಾಗುಗಳ ಮಹಾಪೂರ ಉಕ್ಕಿಬರಲಿ. ನಾನಂತೂ ಈ ದಡದಲ್ಲಿ ನಿಂತು, ಆ ಸಂಭ್ರಮವನ್ನು ನೋಡುತ್ತಿರುತ್ತೇನೆ, ನಿಮ್ಮ ಸಹವಾಸದಲ್ಲಿ.

ಕನ್ನಡಿಗರು ಕಟ್ಟಿಕೊಂಡ ಬ್ಲಾಗುಗಳನ್ನು ಬಿಡಿಸಿಕೊಂಡು ಬಂದು ಬುಟ್ಟಿಗೆ ಹಾಕುವ ಕೆಲಸ ನನಗಿರಲಿ. ಕರ್ನಾಟಕದ ಬಗ್ಗೆ, ಕನ್ನಡದ ಬಗೆಗೆ ಹಾಗೂ ನಿಮ್ಮ ಬಗೆಗೆ ನೀವೇ ಬರೆದು ಪ್ರಕಾಶಿಸಿದ ಬ್ಲಾಗ್‌ ವಿಳಾಸಗಳನ್ನು ನಮಗೆ ಕಳುಹಿಸಿಕೊಡಿ. ದಟ್ಸ್‌ಕನ್ನಡ ಅಂಗಳದ ಮೂಲಕ ನಿಮ್ಮ ಬ್ಲಾಗಿನ ಬೋಗನ್‌ವಿಲ್ಲ ಜಗತ್ತಿಗೆಲ್ಲ ಹಬ್ಬಲಿ.

ಬ್ಲಾಗಿನ ಲಿಂಕ್‌ ಜತೆಗೆ ನಿಮ್ಮ ಬ್ಲಾಗಿನ ಬಗ್ಗೆ ನೀವು ಹೇಳಲೇಬೇಕಾದ ಎರಡು ಮಾತು ಬರೆಯುವುದನ್ನು ಮರೆಯಬೇಡಿ. ಇಮೇಲ್‌ ವಿಳಾಸ, ನಿಮ್ಮ ಭಾವಚಿತ್ರವೂ ನಮಗೆ ಬೇಕು. ಆಗಬಹುದಾ?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more