• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗುರು-ದಕ್ಷಿಣೆ ಸಲ್ಲಿಸುವವರಿಗೆ ನಟ ಅಶ್ವಥ್‌ ವಿಳಾಸ

By Super
|

ನಾಡಿನ ಹಿರಿಯ ಕಲಾವಿದರು ಕಷ್ಟಕ್ಕೆ ಸಿಲುಕಿದರೆ, ನೋಡುತ್ತಾ ನಿಲ್ಲುವ ಜಾಯಮಾನ ಕನ್ನಡಿಗರದಲ್ಲ. ಅದರಲ್ಲೂ ಚಾಮಯ್ಯ ಮೇಷ್ಟ್ರು ಪಾತ್ರದ ಮೂಲಕ, ಎಲ್ಲರ ಎದೆಯಲ್ಲೂ ನಿಂತ ಅಶ್ವಥ್‌ರಂತಹ ಸಂಭಾವಿತರನ್ನು ಕೈಬಿಡುವ ಪ್ರಶ್ನೆಯೇ ಇಲ್ಲ... ಅವರ ಕಷ್ಟ ; ನಮ್ಮೆಲ್ಲರ ಕಷ್ಟವಲ್ಲವೇ? ಅವರಿಗೆ ನೆರವು ನೀಡುವುದು ನಮ್ಮೆಲ್ಲರ ಕರ್ತವ್ಯವೆಂದು ಭಾವಿಸುವ ಕಲಾಪ್ರೇಮಿಗಳಿಗಾಗಿ ಅಶ್ವಥ್‌ ವಿಳಾಸ, ಬ್ಯಾಂಕ್‌ ಖಾತೆ ಸಂಖ್ಯೆ ಮತ್ತಿತರ ಎಲ್ಲ ವಿವರಗಳು ಇಲ್ಲಿವೆ.

ಸರಿಸುಮಾರು 50 ವರ್ಷಗಳಿಂದ ಬೆಳ್ಳಿತೆರೆಯನ್ನು ಅಲಂಕರಿಸಿ, ಕನ್ನಡ ಚಿತ್ರ ಪ್ರೇಮಿಗಳಿಗೆ ಮುದನೀಡಿದ ಕಲಾವಿದ ಕೆ. ಎಸ್‌. ಅಶ್ವಥ್‌ ಈಗ ವಾನಪ್ರಸ್ಥ ಆಶ್ರಮವಾಸಿ. ಅಸಂಖ್ಯಾತ ಅಭಿಮಾನಿಗಳ ಹೆಮ್ಮೆಯ ಚಾಮಯ್ಯ ಮೇಷ್ಟ್ರರ ವಯಸ್ಸು 83. ಮೈಸೂರಿನಲ್ಲಿ ವಾಸ. ವಯೋಗುಣ ಮತ್ತು ದೈಹಿಕವಾದ ಕೆಲವು ವ್ಯಾಧಿಗಳಿಂದ ಅವರು ಬಳಲುತ್ತಿರುವ ಬಗ್ಗೆ ದಟ್ಸ್‌ಕನ್ನಡ ಪುಟಗಳಲ್ಲಿ ವರದಿಗಳನ್ನು ಪ್ರಕಟಿಸಲಾಗಿತ್ತು. ಈ ಸುದ್ದಿಗಳನ್ನು ಗಮನಿಸಿದ ಓದುವ ವರ್ಗದಿಂದ, ಹೃದಯಸ್ಪರ್ಶಿಯಾದ ಸಹಸ್ಪಂದನ ವ್ಯಕ್ತವಾಗುತ್ತಿದೆ, ಓತಪ್ರೋತವಾಗಿ. ನಿಜಕ್ಕೂ ಅಶ್ವಥ್‌ ಪುಣ್ಯಜೀವಿ.

ಅಶ್ವಥ್‌ ಅವರನ್ನು ಬಾಧಿಸುತ್ತಿರುವ ಕಾಯಿಲೆ vertebro basilar insufficiency. Essential hypertension NVH. ಕಾಯಿಲೆಯ ಸ್ಪರೂಪ ಸೂಕ್ಷ್ಮವಾದದ್ದೆ. ಅಧಿಕ ರಕ್ತದೊತ್ತಡ ಉಂಟುಮಾಡಬಹುದಾದ ತೀವ್ರತಮ ಹಾವಳಿಯನ್ನು ತಡೆಹಿಡಿಯಬೇಕು. ಅದು ವೈದ್ಯರ ಕೆಲಸ. ಹಿರಿಯ ಜೀವದ ಆರೋಗ್ಯ ಪರಿಸ್ಥಿತಿಯನ್ನು ಪ್ರೀತಿಯಿಂದ, ಎಚ್ಚರಿಕೆಯಿಂದ ಗಮನಿಸಿ ಚಿಕಿತ್ಸೆ ಮತ್ತು ಶುಶ್ರೂಷೆಯನ್ನು ಚಾಚೂತಪ್ಪದೆ ಮಾಡುವ ಜವಾಬ್ದಾರಿ ಅವರ ಮನೆಯವರದ್ದು, ಹತ್ತಿರ ಸಂಬಂಧಿಗಳದ್ದು ಮತ್ತು ವಿಶಾಲವಾಗಿರುವ ಅಭಿಮಾನಿ ಸಮೂಹದ್ದು.

ಅಶ್ವಥ್‌ ಅವರಿಗೆ ಇಬ್ಬರು ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣು ಮಕ್ಕಳು. ಹೆಣ್ಣುಮಕ್ಕಳು ತಮ್ಮ ತಮ್ಮ ಸಂಸಾರದೊಂದಿಗೆ ಮೈಸೂರಿನಲ್ಲೇ ನೆಲೆಸಿರುವರು. ಅಶ್ವಥ್‌ ಅವರ ಸರಸ್ವತೀಪುರಂ ಮನೆಯಲ್ಲಿ ಪತ್ನಿ ಶಾರದ ( 78) ಎರಡನೆ ಮಗ ಶಂಕರ್‌ ಅಶ್ವಥ್‌ ಹಾಗೂಅವರ ಕುಟುಂಬ ಇದೆ.

ಅಶ್ವಥ್‌ ಅವರದು ಲಾಗಾಯ್ತಿನಿಂದಲೂ ಮಧ್ಯಮವರ್ಗದ ಬದುಕು. ಸಿನಿಮಾದಲ್ಲಿದ್ದರೂ ಅಷ್ಟೆ ಎಲ್ಲಿದ್ದರೂ ಅಷ್ಟೆ. ಚಿತ್ರರಂಗದಲ್ಲಿ ಗ್ಲಾಮರ್‌ ಮತ್ತು ಥಳಕುಬಳುಕಿನ ಬಳ್ಳಿಗಳು ನಾಯಕ ನಾಯಕಿಯರ ಸುತ್ತಲೇ ಹಬ್ಬಿಕೊಳ್ಳುವುದು ವಾಸ್ತವ. ಆದಕಾರಣ ಪೋಷಕ ನಟರು, ನಟಿಯರು, ಚಿತ್ರಕಥೆ- ಸಂಭಾಷಣೆ ಗೀಚುವವರು ಮುಂತಾದವರದೆಲ್ಲ ಬಣ್ಣದ ಕೂಲಿಯ ಬದುಕು.

ಇದ್ದಕ್ಕಿದ್ದಂತೆ ಅಶ್ವಥ್‌ ಅವರು ಸುದ್ದಿ ಬಾಯಿಗೆ ಬೀಳುವುದಕ್ಕೆ ಕಾರಣವಾದವರು ಕರ್ನಾಟಕ ಸರಕಾರದವರು. ಮಂತ್ರಿ ಮಹದೇವಪ್ರಸಾದ್‌ ಅವರು ಇತ್ತೀಚೆಗೆ ಅಶ್ವಥ್‌ ಅವರ ಮನೆಗೆ ಹೋಗಿ ಆರೋಗ್ಯ ವಿಚಾರಿಸಿ ಅವರಿಗೆ ಮಾಸಾಶನ ಕೊಡುವ ಭರವಸೆ ವ್ಯಕ್ತಪಡಿಸಿದರು. ಹಿರಿಯನಟನ ಪರಿಸ್ಥಿಯನ್ನು ಓದಿ ಅರಿತ ನಮ್ಮ ಓದುಗರು ಅಕ್ಕರೆಯ ಚಾಮಯ್ಯ ಮೇಷ್ಟರಿಗೆ ಆರೋಗ್ಯ ಸುಧಾರಿಸಲೆಂದು ಹಾರೈಸತೊಡಗಿದರು.

ಅನೇಕ ಮಂದಿ ಓದುಗರು ಅಶ್ವಥ್‌ ಬೇಗ ಗುಣಮುಖರಾಗಲಿ ಮತ್ತು ಅವರ ಚಿಕಿತ್ಸೆ ಹಾಗೂ ಆರೈಕೆಗೆ ತಮ್ಮ ವತಿಯಿಂದ ಗುರು ದಕ್ಷಿಣೆ ಸಲ್ಲಿಸುವುದಾಗಿ ನನ್ನಲ್ಲಿ ಕೇಳಿಕೊಂಡರು. ದಟ್ಸ್‌ಕನ್ನಡ ಡಾಟ್‌ಕಾಮ್‌ ವತಿಯಿಂದ ಅಶ್ವಥ್‌ ಕ್ಷೇಮಾಭ್ಯುದಯ ನಿಧಿ ಸ್ಥಾಪಿಸಬೇಕಂದೂ ಅರಿಕೆ ಮಾಡಿಕೊಂಡರು.

ಗುರು ದಕ್ಷಿಣೆ ಸಲ್ಲಿಸುವವರು ನೇರವಾಗಿ ಅಶ್ವಥ್‌ ಅವರ ಮನೆಗೇ ತಲುಪಿಸಲಿ ಎನ್ನುವುದು ನನ್ನ ಅಭಿಲಾಷೆ. ಹಾಗಾಗಿ, ಓದುಗರ ಕೋರಿಕೆಯನ್ನು ನಾನು ಅವರ ಮಗ ಶಂಕರ್‌ ಅಶ್ವಥ್‌ ಅವರ ಬಳಿ ನಿವೇದಿಸಿಕೊಂಡೆ. ಸ್ವಾಭಿಮಾನಿ ತಂದೆಯ ಮನವೊಲಿಸಿ ಶಂಕರ್‌ ಅವರು ತಂದೆಯ ಬ್ಯಾಂಕ್‌ ಅಕೌಂಟ್‌ ವಿವರಗಳನ್ನು ಕೊಟ್ಟರು. ಗುರು ದಕ್ಷಿಣೆ ಸಲ್ಲಿಸಲು ಉತ್ಸುಕರಾಗಿರುವವರು ಈ ಕೆಳಕಂಡ ವಿವರಗಳನ್ನು ಗುರುತುಹಾಕಿಕೊಳ್ಳಬಹುದು.

ಮನೆ ವಿಳಾಸ :

ಕೆ. ಎಸ್‌. ಅಶ್ವಥ್‌,

ಮನೆ ನಂ. 92, ಕಲಾಶ್ರೀ,

4ನೇ ಮುಖ್ಯರಸ್ತೆ, ಸರಸ್ವತೀಪುರಂ,

ಮೈಸೂರು 570009

ದೂರವಾಣಿ : 08212543787

ಅಕೌಂಟ್‌ ವಿವರ :

K S Aswath

Canara Bank, Saraswathipuram, Mysore

A/c. No: 000000375

Branch Code No: CNRP0000876

MICR Code: 570015012

For more information:

Contact : Mr. Samshudhin ( Branch Manager)

Ph: +91-821-254 3118 or +91-821-254 3247

ಗೌರವಾನ್ವಿತ ವ್ಯಕ್ತಿ ಮತ್ತು ಹಿರಿಯಜೀವ ಅಶ್ವಥ್‌ ಅವರು ಶೀಘ್ರ ಗುಣಮುಖರಾಗಲಿ ಮತ್ತು ಅವರ ಬಗೆಗಿನ ನಿಮ್ಮ ಅಕ್ಕರೆಯ ಬಿಂದಿಗೆ ತುಂಬಲಿ ಎಂದು ದಟ್ಸ್‌ಕನ್ನಡ ಡಾಟ್‌ಕಾಂ ಹಾರೈಸುತ್ತದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Senior, aged, ailing artist K.S. Ashwat help line. The septuagenarian artist is suffering from vertebro basilar insufficiency. Essential hypertension NVH. His Mysore address and Bank account number for his fans use.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more