• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಈತ ಕನ್ನಡ ಪ್ರೇಮಿ! ಜೊತೆಗೆ ಜಯಲಲಿತಾ ಭಕ್ತ!

By Staff
|


ಜಯಲಲಿತಾ ಪಕ್ಷದ ಬಂಟ, ಅಪ್ಪಟ ಕನ್ನಡಿಗ. ಕಚೇರಿಯಲ್ಲಿ ಎದುರಿಗೆ ಕೂತು ಈತ ಜಯಲಲಿತಾ, ರಾಜಕಾರಣ, ಕನ್ನಡ ಸಾಹಿತ್ಯ, ಕನ್ನಡ ಪ್ರೀತಿ, ಕನ್ನಡ ಚಳವಳಿ, ತಮಿಳರ ಶ್ರಮ ಎಂದು ಮಾತಾಡುತ್ತಲೇ ಇದ್ದರು.

Krishna Raju : Karnataka Fan and Jayalalitha Followerಅವರ ಹೆಸರು ಕೃಷ್ಣರಾಜು ಅಂತ. ಈ ಹೆಸರನ್ನು ಕನ್ನಡದವರು, ತೆಲುಗಿನವರು, ತಮಿಳಿನವರು ಮತ್ತು ಉತ್ತರ ಭಾರತದವರೂ ಮಕ್ಕಳಿಗೆ ಇಡುತ್ತಾರೆ. ಹಾಗಾಗಿ ಕೃಷ್ಣರಾಜು ಎಂಬೋ ವ್ಯಕ್ತಿ ಯಾವ ಕಡೆಯವರು ಎಂದು ಜಲ್ದಿ ಊಹಿಸುವುದು ಕಷ್ಟ.

‘ನಿಮ್ಮೂರು ಯಾವುದು ಸ್ವಾಮಿ’ ಅಂತ ನಾನೇ ಕೇಳಿಬಿಟ್ಟೆ. ‘ಕಡೂರು ಸಾರ್‌’ ಅಂದಿತು ಆಸಾಮಿ. ‘ಇಲ್ಲೀತನಕ? ಪೇಪರ್‌ನವರಿಗೆ ಎಲ್ಲ ಡಿಟೇಲ್ಸ್‌ ಕೊಟ್ಟೆ ಸಾರ್‌. ಮೆಜಿಸ್ಟಿಕ್‌ ಏರಿಯಾದಲ್ಲಿ ತಮಟೆ ಬಾರಿಸಿಕೊಂಡು ಕೂಗಿದರೆ ಜನ ಕೇಳ್ತಾರೆಯೇ? ನನ್ನಂಥವರನ್ನು ಯಾರೂ ಸೀರಿಯಸ್‌ ಆಗಿ ತೊಗೊಳಲ್ಲ . ಯಾರೋ ಹೇಳಿದರು, ಅದಕ್ಕೆ ನಿಮ್ಮ ಹತ್ರ ಬಂದೆ’ ಅಂದರು ದಟ್ಸ್‌ಕನ್ನಡ ಕಚೇರಿಯ ನನ್ನ ಕ್ಯೂಬಿಕಲ್‌ ಬಳಿ ಕೈಕಟ್ಟಿ ನಿಂತ ಕೃಷ್ಣ ರಾಜು ಕೆ.

ಆಮೇಲೆ ಅಲ್ಲಿಇಲ್ಲಿ ಇವರ ವಿವರ ಸಂಗ್ರಹಿಸಿಕೊಂಡೆ. ಈತ ಅಪ್ಪಟ ಕನ್ನಡಿಗ, ಅನುಮಾನವೇ ಬೇಡ. ಕನ್ನಡದಲ್ಲೇ ಓದಿ ಬೆಳೆದವ. ಓದಿದ್ದು ಸಾಕಾಗಲಿಲ್ಲ ಎಂದು ಅಂಚೆ ಮೂಲಕ ಕನ್ನಡ ಎಂಎ ಪಾಸ್‌ ಮಾಡಿಕೊಂಡವ. ಕನ್ನಡ ನೆಲದಲ್ಲಿ ಹುಟ್ಟಿ ಸತ್ತ ಅನೇಕ ಚಳವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದಾತ. ಕನ್ನಡದಲ್ಲಿ ನಿರರ್‌ಗಳವಾಗಿ ಮೃದು ಮಾತು, ಕನ್ನಡ ಕವಿ ಕಾವ್ಯ ಪರಂಪರೆಯ ಬಗ್ಗೆ ಅಪಾರ ಗೌರವ ಮತ್ತು ಕನ್ನಡಿಗರು ಎಲ್ಲಾ ಕ್ಷೇತ್ರದಲ್ಲೂ ಮುಂದೆ ಬರಲಿ ಎನ್ನುತ್ತಾ ತನ್ನದೇ ಆದ ವರಸೆಗಳನ್ನು ಕೂಲ್‌ಆಗಿ ವಿವರಿಸುವವ. ಮತ್ತು ಅಣ್ಣಾ ಡಿಎಂಕೆ ಪಕ್ಷದ ಕರ್ನಾಟಕ ಕಾರ್ಯಕರ್ತ. ಅಂದಹಾಗೆ ತಮಿಳು ಗೆಳೆಯರ ಬಳಗದಲ್ಲಿ ಕೆಆರ್‌ಕೆ ಎಂದು ಜನಜನಿತರಾದ ಇವರನ್ನು ಕನ್ನಡ ಮಿತ್ರರು ಕವಿರತ್ನಕಾಳಿದಾಸ ಎಂದು ಕರೆಯುತ್ತಾರೆ.

ಜಯಲಲಿತಾ ನಂಟು :

ಪಕ್ಕದ ತಮಿಳುನಾಡಿನ ವಿದ್ಯಮಾನಗಳಲ್ಲಿ ತುಂಬ ಆಸಕ್ತಿ ಇಟ್ಟುಕೊಂಡಿದ್ದ ಯುವಕ ಕೃಷ್ಣರಾಜು( 56) ಎಂಜಿಆರ್‌ ಚಿತ್ರಗಳನ್ನು ನೋಡುತ್ತ ನೋಡುತ್ತ ಪಕ್ಷ ಸೇರಿಕೊಂಡುಬಿಟ್ಟ. ಆಗ 1972. ಅಲ್ಲಿಂದ ಇಲ್ಲೀತನಕ ಪಕ್ಷದ ಕರ್ನಾಟಕ ಘಟಕದಲ್ಲಿ ಒಂದಲ್ಲ ಒಂದು ಪದವಿಯಲ್ಲಿ ಪಾರ್ಟಿ ಕೆಲಸ ಮಾಡಿಕೊಂಡು ಬಂದಿರುವವ. ಸದ್ಯಕ್ಕೆ ಜಯಲಲಿತಾ ಪಕ್ಷದ ಕರ್ನಾಟಕ ಶಾಖೆಯ ಸೆಕ್ರೆಟರಿ. ರಾಜ್ಯದಲ್ಲಿ ಅವರ ಪಕ್ಷದ 800 ಕಚೇರಿಗಳಿವೆ. 80.000 ಕಾರ್ಯಕರ್ತರಿದ್ದಾರೆ.

ಮೊನ್ನೆ ತಾನೆ ಜೈಲಿನಿಂದ ಬಿಡುಗಡೆ ಆಗಿ ಬಂದ ರಾಜು ಕರ್ನಾಟಕದ ಬಗ್ಗೆ, ಎಐಡಿಎಂಕೆ ಬಗ್ಗೆ, ಮತ್ತು ತಮ್ಮ ಬಗೆಗೆ ಹೇಳಿಕೊಂಡರು. ಎನ್‌ಡಿಎ ಸರಕಾರ ಕೇಂದ್ರದಲ್ಲಿ ಇದ್ದಾಗ ಮೈತ್ರಿಸರಕಾರದ ಪಾಲುದಾರರಾಗಿದ್ದ ವಾಜಪೇಯಿ ಮುಂದೆ ಜಯಲಲಿತಾ ಎಂಟು ಅಂಶಗಳ ಕೋರಿಕೆ ಮಂಡಿಸಿದ್ದರು. ಅದರಲ್ಲಿ ಒಂದಂಶ ಕನ್ನಡಕ್ಕೆ ರಾಷ್ಟ್ರೀಯ ಭಾಷೆ ಸ್ಥಾನಮಾನ ಕೊಡಬೇಕು ಎನ್ನುವುದಾಗಿತ್ತು.

ವಾಜಪೇಯಿ ಜಯಲಲಿತಾ ಮಾತಿಗೆ ಸೊಪ್ಪುಹಾಕಲಿಲ್ಲ. ಅದೇ ಕಾರಣವಾಗಿ ಎಐಡಿಎಂಕೆ ಎನ್‌ಡಿಎ ಜತೆ ಮೈತ್ರಿ ಮುರಿದುಕೊಂಡು ಸರಕಾರದಿಂದ ಹೊರನಡೆದುಬಂದದ್ದು ಬೇರೆ ವಿಷಯ. ಆದರೆ ಪಕ್ಷದ ಕರ್ನಾಟಕ ಘಟಕ ಕನ್ನಡದ ಬಾವುಟ ಹಿಡಿದುಕೊಂಡು ಕೃಷ್ಣರಾಜು ನೇತೃತ್ವದಲ್ಲಿ ರಾಷ್ಟ್ರೀಯ ಭಾಷೆ ಸ್ಥಾನಮಾನಕ್ಕಾಗಿ ಕರ್ನಾಟಕದಾದ್ಯಂತ ಚಳವಳಿ ನಡೆಸಿತು. ಆಗ ಇಸವಿ 2000. ರಸ್ತೆ ತಡೆ, ರೈಲು ತಡೆ ನಡೆಸಿದ್ದಕ್ಕಾಗಿ ಪೊಲೀಸರು ರಾಜು ಮತ್ತು ಅವರ ಸಂಗಡಿಗರನ್ನು ಬಂಧಿಸಿದ್ದರು. ಮೊಕದ್ದಮೆಗಳು ದಾಖಲಾಗಿದ್ದವು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more