• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎಸ್‌.ಕೆ. ಶಾಮಸುಂದರ

By Staff
|

ಅಂತರ್ಜಾಲದಿಂದ ಪ್ರಪಂಚ ಚಿಕ್ಕದಾಯಿತು. ಅಂಗೈಯಲ್ಲಿ ಆಕಾಶ ಹಿಡಿಯಲು ಸಾಧ್ಯವಾಯಿತು(?) ಎನ್ನುವ ಮಾತನ್ನು ಒಂದು ಕಡೆ ಒಪ್ಪೋಣ. ಆದರೆ ಅಂತರ್ಜಾಲದ ಎಲ್ಲಾ ಸಾಧ್ಯತೆಗಳನ್ನು ಕನ್ನಡಿಗರು ಬಳಸಿಕೊಂಡಿದ್ದಾರೆಯೆ? ಕನ್ನಡಿಗರಿಗೆ ಅಂತರ್ಜಾಲದ ನಿಧಿ ದಕ್ಕಿದೆಯೆ? -ಉತ್ತರ ಆಶಾದಾಯಕವಾಗಿಲ್ಲ. ಹೀಗೆಂದು ನಿರಾಸೆಯೂ ಬೇಕಿಲ್ಲ. ಅಲ್ಲಲ್ಲಿ ಕನ್ನಡ ಮನಸ್ಸುಗಳು ಜಾಗೃತಗೊಂಡಿವೆ. ಇನ್ನಷ್ಟು ಜಾಗೃತಿಗಾಗಿ ಕನ್ನಡ ಕೊಂಡಿ(ಲಿಂಕ್ಸ್‌ )ಗಳತ್ತ ಗಮನ ನೀಡೋಣ...

 • ಎಸ್‌.ಕೆ. ಶಾಮಸುಂದರ
 • S.K. Shama Sundara - Editor kannada.oneindia.comಸಾರ್ವಜನಿಕ ಮತ್ತು ಸಮುದಾಯ ಉಪಯೋಗಕ್ಕೆ ಬಳಸುವ ಕನ್ನಡ-ಕರ್ನಾಟಕ ಸಂಬಂಧಿ ವೆಬ್‌ ಪುಟಗಳಲ್ಲಿ, ಸಾಮಾನ್ಯವಾಗಿ Kannada Links ಎಂಬ ನೀಲಿ ಅಕ್ಷರಗಳ ಲಿಂಕ್‌ ಇರುತ್ತದೆ. ನೀವೆಲ್ಲ ನೋಡಿರುತ್ತೀರಿ. ಕನ್ನಡಕ್ಕಾಗಿ ನಾವಲ್ಲದೆ ಇತರರೂ ಶ್ರಮಿಸುತ್ತಿದ್ದಾರೆ ಎನ್ನುವುದನ್ನು ಬಿಂಬಿಸುವುದು ಮತ್ತು ಅವರ ವೆಬ್‌ಮನೆಗೆ ದಾರಿ ತೋರಿಸುವುದೇ ಆ ಕೈಮರದ ಉದ್ದೇಶ.

  ಕರ್ನಾಟಕದ ಮೈಮನಗಳ ಸುಳಿಯನ್ನು, ಅಂತರ್‌ಜಾಲದಲ್ಲಿ ಇಡಿಯಾಗಿ ಹಿಡಿದಿಡುವುದು ಕಷ್ಟ. ದುಸ್ಸಾಧ್ಯವೇನಲ್ಲದಿದ್ದರೂ ಅಂತಹ ವ್ಯವಸ್ಥೆ ಕಲ್ಪಿಸಿಕೊಳ್ಳುವುದಕ್ಕೆ ಕನ್ನಡಿಗರಿಗೆ ಏಕೋ ಮನಸ್ಸಿಲ್ಲ. ಇದ್ದರೂ ಕಿಸೆಯಿಂದ ವ್ಯಾಲೆಟ್‌ ಅಥವಾ ಕಂಕುಳಿನಿಂದ ವ್ಯಾನಿಟಿಬ್ಯಾಗ್‌ ತೆಗೆಯುವುದಿಲ್ಲ. ಯಾಕೆಂದರೆ, ಕನ್ನಡ ಭಾಷೆ ಮಾರುಕಟ್ಟೆ ಪ್ರೇಮಿ ಅಲ್ಲ!

  ಇರದುದರ ಆಸೆ ಬಿಟ್ಟು ಇದ್ದುದನ್ನೇ ಹಂಚಿಕೊಳ್ಳುವ ಮನೋಭಾವ ದೊಡ್ಡದು. ರಾಜಕೀಯ, ಭೂಗೋಳ, ಮಾನವಿಕ, ತಿಂಡಿತಿನಿಸು, ವಿದ್ಯಾಭ್ಯಾಸ, ಉದ್ಯೋಗ, ಮದುವೆ, ಮುುಂಜಿ, ವಿಚ್ಛೇದನ, ಕಲ್ಪನಾ ಸಾಮ್ರಾಜ್ಯ, ಧರ್ಮ, ಚಲನಚಿತ್ರ, ಸಂಗೀತ, ನಮ್ಮ ರಾಜ್ಯದ ಜೀವನ ಶೈಲಿಯಲ್ಲಿ ಕಂಡುಬರುತ್ತಿರುವ ತಿರುವು, ಏರುಪೇರು, ಕಷ್ಟ ಸುಖ, ಯೋಗ ಭೋಗ ಮತ್ತೆಲ್ಲವನ್ನೂ ಸಾಧ್ಯವಾದಷ್ಟು ವೆಬ್‌ಪುಟಗಳಲ್ಲಿ ಅಡಕ ಮಾಡುವುದಕ್ಕೆ ಅನೇಕ ಉತ್ಸಾಹಿಗಳು ಪ್ರಯತ್ನಿಸಿದ್ದಾರೆ. ಅದನ್ನು ಮುಕ್ತ ಮನಸ್ಸಿನಿಂದ ಹಂಚಿಕೊಳ್ಳುವ ಪ್ರಯತ್ನವೇ Kannada Links.

  ಅವನ ಆತ್ಮರತಿ ಎಂದು ನೀವು ದೂಷಿಸಿದರೆ ನನಗೆ ಚಿಂತೆಯಿಲ್ಲ. ನಮ್ಮ ಕನ್ನಡ ಚಾರಣಿಗರ ತವರುಮನೆ. ಜಗತ್ತನ್ನು ಒಂದೇ ಉಸಿರಲ್ಲಿ ಸುತ್ತಿ ಬಂದರೂ ಕೊನೆಗೊಮ್ಮೆ ಮನೆಯಲ್ಲಿ ಮನವಾಗುವ ಮನೆ. ಜಯನಗರದಲ್ಲಿದ್ದರೂ ಕೈಬೀಸಿ ಕರೆಯುವ ಹೆತ್ತಮನೆ.

  ತಾಯಪ್ಪನಹಳ್ಳಿಯಲ್ಲಿ ಒಳ್ಳೆ ಟೀ ಎಲ್ಲಿ ಸಿಗುತ್ತದೆ? ಗಂಜಾಂ ನಾಗಪ್ಪನವರ ಅಂಗಡಿಯಲ್ಲಿ ಇಟ್ರಡ್ಯೂಸ್‌ ಮಾಡಿರುವ ಡೈಮಂಡ್‌ ಝುಂಕಿಯ ಬೆಲೆ ಎಷ್ಟು ? ಕಣ್ಣು ದಾನ ಮಾಡಬೇಕು ಯಾರು ತಗೊತಾರೆ? ವಿಳಾಸ ಕೊಡುತ್ತೀರಾ ? ಎಂಬಂತಹ ಮಾಹಿತಿಗಳು ಇಂಟರ್‌ನೆಟ್‌ನಲ್ಲಿ ದಕ್ಕಬೇಕು.. ಆಡುತ್ತಾ ಆಡುತ್ತಾ ಕಳೆದು ಹೋಗುವ ಒಂದು ಮಗುವನ್ನು ಅಂತರ್ಜಾಲದಲ್ಲಿ ಬಲೆಬೀಸಿ ಹುಡುಕಿ ಕರೆತರುವಂತಾಗಬೇಕು. ಕಳೆದುಕೊಂಡವಳನ್ನು ಹುಡುಕಬೇಕು, ಹೃದಯ ತುಂಬಿ ಬಂದವಳನ್ನು ಕಣ್ಣಾಲಿಗಳಲ್ಲಿ ಜೋಪಾನ ಮಾಡಬೇಕು. ಆ ಶಕ್ತಿ ಈ ಮಾಧ್ಯಮಕ್ಕೆ ಇದೆ. ಕನ್ನಡದಲ್ಲೇ ಈ ಸೌಲಭ್ಯ ಪ್ರಾಪ್ತಿಯಾಗುವ ದಿವಸಗಳು ಬೇಗ ಬರಲಿ ಎಂದು ಆಶಿಸುತ್ತಾ ವಿಷಯಕ್ಕೆ ಬರುತ್ತೇನೆ.

  ಕನ್ನಡ ಮತ್ತು ಕರ್ನಾಟಕದೊಂದಿಗೆ ಬಾಂಧವ್ಯ ಇಟ್ಟುಕೊಂಡಿರುವ ವೆಬ್‌ ಕರ್ಮಚಾರಿಗಳಲ್ಲಿ ಒಂದು ಮನವಿ. ನಿಮ್ಮ ವೆಬ್‌ ಪುಟಗಳಲ್ಲಿ ಲಿಂಕ್‌ ಅನ್ನು ದಯಮಾಡಿ ನಮೂದಿಸಿರಿ. ಈಗಾಗಲೇ ವೆಬ್‌ಸೈಟು, ಬ್ಲಾಗು, ಕನ್ನಡ ಗ್ರೂಪ್ಸ್‌ ಮುಂತಾದ 137 ಜಾಗಗಳಲ್ಲಿ ನಮ್ಮ ವೆಬ್‌ ಸೈಟ್‌ಗೆ ಲಿಂಕ್‌ ಕೊಡಲಾಗಿದೆ. ಆದರೆ, ಸಾಂಸ್ಥಿಕ ಕಾರಣಗಳಿಂದಾಗಿ ನಮ್ಮ ತಾಣದ ನಾಮಧೇಯ(URL) ಎರಡು ಬಾರಿ ಬದಲಾಗಿದೆ. ಇತ್ತೀಚಿನ ಹೆಸರಿನನ್ವಯ ಲಿಂಕ್‌ಗಳನ್ನು ಸೂಕ್ತವಾಗಿ ಮಾರ್ಪಾಟು ಮಾಡುವ ಅಗತ್ಯವಿದೆ.

  ನಿಮ್ಮ Links ಪೇಜಿಗೆ ಹೋಗಿ ನೋಡಿ. ಅಲ್ಲಿ ಅಂತಲೋ ಅಂತಲೋ ನಮ್ಮ ತಾಣ ನಮೂದಾಗಿದ್ದರೆ. ದಯವಿಟ್ಟು ಬದಲಾಯಿಸಿ. ಈಗಲೇ.

  ಈಗ ನಮ್ಮ ಹೆಸರು ಅಂತ.

  ಅಂದಹಾಗೆ ನಿಮ್ಮ ವೆಬ್‌ಸೈಟ್‌ ಹೆಸರು ನಮ್ಮಲ್ಲಿ ಇಲ್ಲವಾ ? ಜಾಲಾಡಿ, ನನಗೆ ಬರೆಯಿರಿ.

  Thank you for choosing ThatsKannada

  ಮುಖಪುಟ / ಅಂಕಣಗಳು

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more