• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ಜೀ ಕನ್ನಡ’ ಚಾನೆಲ್‌ನಲ್ಲಿ ಮುದ್ದು ಕೃಷ್ಣ!

By Staff
|


ನವೆಂಬರ್‌ ಬರುತ್ತಿದೆ.. ಎಲ್ಲರಿಗೂ ಕನ್ನಡ ರಾಜ್ಯೋತ್ಸವ ನೆನಪಾಗುತ್ತಿದೆ! ಈ ಪ್ರಯುಕ್ತ ರಾಶಿರಾಶಿ ಕನ್ನಡ ಕಾಯಕ್ರಮಗಳು ರೂಪುಗೊಳ್ಳುತ್ತಿವೆ...

Suvarna Namana on Zee TV by Y.K. Muddukrishnaಗಾಯಕರು, ಸಂಘಟಕರು ಮತ್ತು ಕನ್ನಡ ಸಂಸ್ಕೃತಿ ಚಟುವಟಿಕೆಗಳಲ್ಲಿ ಸದಾ ತೊಡಗಿಕೊಳ್ಳುವವರು ಆಗಿರುವ ವೈ.ಕೆ. ಮುದ್ದುಕೃಷ್ಣ, ಅಬಕಾರಿ ಇಲಾಖೆಯ ಮುಖ್ಯಸ್ಥರಾಗಿ ಕೆಲಸ ಮಾಡಿದವರು. ಸರಕಾರಿ ಸೇವೆಯಿಂದ ನಿವೃತ್ತಿ ಆದ ಮೇಲೆ ಏನು ಮಾಡುತ್ತಿದ್ದಾರೆ? ಪ್ರತಿದಿನ ಜಯನಗರ ಕಾಸ್ಮೋಪಾಲಿಟನ್‌ ಕ್ಲಬ್ಬಿಗೆ ಹೋಗುತ್ತಾರೆ ಎನ್ನುವುದನ್ನು ಬಿಟ್ಟರೆ..? ಬೇರೇನು ಕೆಲಸ? ಇನ್ಯಾವುದು ಹವ್ಯಾಸ?

ನಿನ್ನೆ ಭಾನುವಾರ(ಅ.15) ಬೆಳಗ್ಗೆಬೆಳಗ್ಗೆನೇ ನಾನೂ ಕಾಸ್ಮೋಗೆ ಹೋಗಿದ್ದೆ. ನಟ, ನಿರ್ದೇಶಕ ನಿರ್ಮಾಪಕ ಚಂದ್ರಶೇಖರ್‌ ಅವರೊಂದಿಗೆ ಬೆಳಗ್ಗೆ ಹರಟೆ ಕೊಚ್ಚುವ ಕಾರ್ಯಕ್ರಮ ಹಾಕಿಕೊಂಡಿದ್ದೆ. ಚಂದ್ರಶೇಖರ್‌ ಅಂದರೆ ಯಾರಪ್ಪಾ? ಸ್ವಲ್ಪ ಕನ್‌ಫ್ಯೂಜ್‌ ಆಗಬಹುದು. ಅವರು ಎಡಕಲ್ಲು ಗುಡ್ಡದಮೇಲೆ, ವಂಶವೃಕ್ಷ, ನಮ್ಮ ಮಕ್ಕಳು ಮುಂತಾದ 70 ಚಿತ್ರಗಳ ಚಂದ್ರು ಅಂದರೆ ಸರಿಯುತ್ತಿರುವ ತಲೆಮಾರಿನ ಮಂದಿಗೆ ಹೊಳೆಯಬಹುದು.

ಇತ್ತಿತ್ತಲಾಗಿ ನಿರ್ಮಾಣವಾಗುತ್ತಿರುವ ಒಳ್ಳೆಯ ಸಿನಿಮಾ ಪ್ರೇಕ್ಷಕರಿಗೆ ‘ಪೂರ್ವಾಪರ ’ ಚಂದ್ರು ಅಂದರೆ ಬೇಗ ಗೊತ್ತಾಗತ್ತೆ. ಚಂದ್ರು ಜತೆಗೆ ಹರಟೆ ಹೊಡೆದು ಕಾರಿಡಾರ್‌ಗೆ ಬಂದಾಗ ಅಲ್ಲೇ ಕುಳಿತಿದ್ದ ಮುದ್ದುಕೃಷ್ಣ ಕಣ್ಣಿಗೆ ಬಿದ್ದರು. ಕನ್ನಡಪ್ರಭ ಪತ್ರಿಕೆಯನ್ನು ಮಡಿಚಿಟ್ಟು ಮಾತಿಗೆ ನಿಂತರು.

ಇನ್ನೇನು ಬರಲಿರುವ ಕನ್ನಡ ರಾಜ್ಯದ ಸುವರ್ಣ ಮಹೋತ್ಸವಕ್ಕೆ ತಮ್ಮದೆ ಆದ ಶೈಲಿಯಲ್ಲಿ ಮುದ್ದುಕೃಷ್ಣ ತಯಾರಾಗುತ್ತಿದ್ದಾರೆ. ಜೀ- ಕನ್ನಡ ಚಾನೆಲ್‌ಗೋಸ್ಕರ ‘ಸುವರ್ಣ ನಮನ’ ಶೀರ್ಷಿಕೆಯಲ್ಲಿ ಸಂಗೀತ ಸೌರಭ ಕಾರ್ಯಕ್ರಮ ಸಿದ್ಧಪಡಿಸಲು ಅವರೀಗ ಅಣಿಯಾಗುತ್ತಿದ್ದಾರೆ. 30ಮಂದಿ ಸಂಗೀತಗಾರರನ್ನು ಕಲೆಹಾಕಿ ಗಾನ ಸುಧೆಯನ್ನು ಹರಿಸುವ ಮಹತ್ವಾಕಾಂಕ್ಷೆಯ ಕಾರ್ಯಕ್ರಮದ ಶೂಟಿಂಗ್‌ ಅಕ್ಟೋಬರ್‌ 25ರಿಂದ ಆರಂಭವಾಗಲಿದೆ..

ಮೂವತ್ತು ಮಂದಿ ಗಾಯಕ-ಗಾಯಕಿಯರಲ್ಲಿ ಹಿರಿಯರಿದ್ದಾರೆ, ಕಿರಿಯರಿದ್ದಾರೆ, ನುರಿತವರಿದ್ದಾರೆ, ಪಂಡಿತರಿದ್ದಾರೆ, ಪಾರಂಗತರಿರುತ್ತಾರೆ ಎಂದ ಮುದ್ದುಕೃಷ್ಣ ಸಂಗೀತ ಸಂಗೀತ ಪ್ರಕಾರಗಳ ಪಟ್ಟಿ ಮಾಡಿದರು. ಕರ್ನಾಟಕ, ಹಿಂದೂಸ್ತಾನಿ ಶಾಸ್ತ್ರೀಯ, ಸುಗಮ ಸಂಗೀತ, ಜಾನಪದ ಸಂಗೀತ, ಭಕ್ತಿ ಸಂಗೀತ, ಹೀಗೆ ಪ್ರತಿಯಾಂದು ವಿಭಾಗದಲ್ಲೂ ಐವರು ಪರಿಣತರನ್ನು ಆಯ್ದು ಅವರ ಸಂಗೀತ ಕಾರ್ಯಕ್ರಮಗಳನ್ನು ರೆಕಾರ್ಡ್‌ ಮಾಡಲಾಗುತ್ತದೆ.

ನಾಡಿನ ಐವರು ಶ್ರೇಷ್ಠ ಕವಿಗಳನ್ನು ಹೆಕ್ಕಿ ಅವರಿಂದ ಕಾವ್ಯ ವಾಚನ, ಐದು ನಾಡಗೀತೆಗಳಿಗೆ ನೃತ್ಯ ಸಂಯೋಜನೆ ಸೆರೆಹಿಡಿಯಲಾಗುತ್ತದೆ. ಒಟ್ಟಿನಲ್ಲಿ ಸುವರ್ಣ ಕರ್ನಾಟಕದ ಸಂಭ್ರಮವನ್ನು ಗೀತ-ಸಂಗೀತದಲ್ಲಿ ಅಡಕ ಮಾಡುವ ‘ಸುವರ್ಣ ನಮನ’ ವನ್ನು ನೀವು ನವೆಂಬರ್‌ 1ರಂದು ಬುಧವಾರ ಜೀ- ಟಿವಿಯಲ್ಲಿ ನೋಡಿ-ಕೇಳಿ ಆನಂದಿಸಲಿದ್ದೀರಿ. ಆಲ್‌ ದಿ ಬೆಸ್ಟ್‌..

ಓಹ್‌..ಒಂದ್ನಿಮಿಷ. ಕಾರ್ಯಕ್ರಮ ಎರಡೂವರೆ ಗಂಟೆ ಕಾಲ ಇರುತ್ತದೆ. ನೀವು ಸಮಯ ಮಾಡಿಕೊಳ್ಳಿ. ಅಥವಾ ರೆಕಾರ್ಡ್‌ ಮಾಡುವಂತೆ ಸ್ನೇಹಿತರಿಗೆ ಹೇಳಿಟ್ಟಿರಿ.

ಅಂದಹಾಗೆ, ಮುದ್ದುಕೃಷ್ಣ ಸುಗಮ ಸಂಗೀತ ಅಕಾಡೆಮಿಯ ಸ್ಥಾಪಕ ಅಧ್ಯಕ್ಷರು. ಮಂಡ್ಯದಿಂದ ಆರಂಭಗೊಂಡ ಅಕಾಡೆಮಿಯ ವಾರ್ಷಿಕ ಉತ್ಸವ ಕಳೆದ ಬಾರಿ ಶಿವಮೊಗ್ಗೆಯಲ್ಲಿ ಇತ್ತು. ಈ ಬಾರಿ ಫೆಬ್ರವರಿ ಎರಡನೇ ಶನಿ-ಭಾನುವಾರ ವಾರ್ಷಿಕೋತ್ಸವ ಹಾಸನದಲ್ಲಿ ಏರ್ಪಾಟಾಗುತ್ತದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more