ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಪಾಸನ ಸಂಸ್ಥೆಯ ಸಾಮಾಜಿಕ ಮುಖ

By Staff
|
Google Oneindia Kannada News

ಭಾರತ ಹಾಗೂ ಹೊರದೇಶಗಳಲ್ಲಿರುವ ಮಿತ್ರರು ಹಾಗೂ ಹಿತೈಷಿಗಳ ಉದಾರ ದೇಣಿಗೆಯಿಂದ ತನ್ನ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ.

ನೊಂದ ಮನಕ್ಕೆ ಒಂದಿಷ್ಟು ನೆಮ್ಮದಿ, ಉತ್ಸಾಹ ತುಂಬುವ ಉಪಾಸನ ಪ್ರತಿಷ್ಠಾನ ನಿಜಕ್ಕೂ ಸಮಾಜಮುಖಿ. ಅದು ಭಾರತ ಹಾಗೂ ಹೊರದೇಶಗಳಲ್ಲಿರುವ ಮಿತ್ರರು ಹಾಗೂ ಹಿತೈಷಿಗಳ ಉದಾರ ದೇಣಿಗೆಯಿಂದ ತನ್ನ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ. ನೀಡಿದ ದೇಣಿಗೆಗೆ ರಸೀತಿ ಕೊಡಲಾಗುತ್ತದೆ. ದಾನಿಗಳು ರಸೀತಿ ಮೂಲಕ ತೆರಿಗೆ ವಿನಾಯ್ತಿ ಪಡೆಯಬಹುದು.

ಆಡಳಿತ, ಸಂಪರ್ಕ ಹಾಗೂ ಲೆಕ್ಕಪತ್ರ ವ್ಯವಹಾರವನ್ನು ಪ್ರತಿಷ್ಠಾನದ ಟ್ರಸ್ಟಿಗಳೇ ನೋಡಿಕೊಳ್ಳುತ್ತಾರೆ. ಹಾಗಾಗಿ, ದಾನರೂಪವಾಗಿ ಬಂದ ಹಣ ಹಾಳಾಗದೇ ಅಗತ್ಯ ಇರುವವರಿಗೆ ತಲುಪುತ್ತದೆ. ಎಲ್ಲ ದೇಣಿಗೆಯನ್ನು ಬ್ಯಾಂಕ್‌ನಲ್ಲಿ ಡಿಪಾಸಿಟ್‌ ಇಡಲಾಗುತ್ತದೆ. ಇದರಿಂದ ಬರುವ ಬಡ್ಡಿಯಿಂದ ಅಗತ್ಯ ಇರುವವರಿಗೆ ನೆರವು ನೀಡಲಾಗುತ್ತದೆ.

ನೀವು ಎರಡು ಬಗೆಯಲ್ಲಿ ದಾನಮಾಡಬಹುದು :

ಮಗುವೊಂದರ ಶಿಕ್ಷಣಕ್ಕೆ ಪ್ರಾಯೋಜಕರಾಗುವ ದೇಣಿಗೆ : ಇದಕ್ಕೆ ಆರಂಭಿಕ ಕೊಡುಗೆಯಾಗಿ 500 ಯುಎಸ್‌ ಡಾಲರ್‌ ಅಥವಾ ತತ್ಸಮಾನ ರೂಪಾಯಿಗಳನ್ನು ನೀಡಬೇಕು. ಅಲ್ಲದೆ ಪ್ರತಿವರ್ಷ 100 ಯುಎಸ್‌ ಡಾಲರ್‌ನಂತೆ ಮುಂದಿನ 15 ವರ್ಷಗಳವರೆಗೆ ನೀಡಬೇಕು ಅಥವಾ ಮಗು ಪದವಿ ಮುಗಿಸುವತನಕ ನೀಡಬೇಕು.

ಆನಂತರ ಈ ಪ್ರಾಯೋಜಕತ್ವ ಮತ್ತೊಂದು ಹೊಸ ಮಗುವಿಗೆ ನೆರವಾಗಲಿದೆ. ಇದಕ್ಕೆ ದಾನಿಗಳು ಮತ್ತೆ ದುಡ್ಡು ನೀಡಬೇಕಿಲ್ಲ. ಪ್ರಾಯೋಜಕತ್ವವಹಿಸಿದ್ದಕ್ಕೆ ಪ್ರಮಾಣಪತ್ರ ನೀಡಲಾಗುವುದು. ಮಗುವಿನ ಪ್ರಗತಿಯ ಕುರಿತು ನಿಯಮಿತವಾಗಿ ವರದಿ ನೀಡಲಾಗುವುದು.

ಸಾಮಾನ್ಯ ದೇಣಿಗೆ : ದಾನಿಗಳು ಒಂದು ಸಲದ ದೇಣಿಗೆ ನೀಡಬಹುದು ಅಥವಾ ತಮ್ಮಿಂದ ಸಾಧ್ಯವಾದಾಗಲೆಲ್ಲ ನೀಡಬಹುದು. ಈ ಬಗೆಯ ದೇಣಿಗೆಯನ್ನು ಸಾಮಾನ್ಯ ದೇಣಿಗೆ ಎಂದು ಪರಿಗಣಿಸಲಾಗುತ್ತಿದ್ದು, ವಿದ್ಯಾರ್ಥಿಗಳ ತುರ್ತು ವೈದ್ಯಕೀಯ ಹಾಗೂ ಇತರ ಅಗತ್ಯಗಳಿಗೆ ಭಾಗಶಃ ಬಳಸಲಾಗುವುದು(ಪ್ರಾಯೋಜಕತ್ವವಿಲ್ಲದೆ).

ನಿಮ್ಮ ದೇಣಿಗೆಯನ್ನು ಸ್ವಿಫ್ಟ್‌ ಟ್ರ್ಯಾನ್ಸ್‌ಫರ್‌ ಕೋಡ್‌ ಬಳಸಿ, ನೇರವಾಗಿ ನಮ್ಮ ಬ್ಯಾಂಕ್‌ ಖಾತೆಗೆ ಸಲ್ಲಿಸಬಹುದು.

NAME : Upasana Foundation (R)
A/C NO. : SB 8698
BANK : Canara Bank
BRANCH : Kalasa
SWIFT CODE : CNRBINBBRFM
KENTO NO. : 9534587

ಪ್ರತಿಷ್ಠಾನಕ್ಕೆ ದಾನಿಗಳು ಈ ಬಗೆಯಲ್ಲಿ ಹಣ ಕಳುಹಿಸುವುದರಿಂದ ಬ್ಯಾಂಕ್‌ ಕಮೀಷನ್‌, ಡಿಡಿ ಮತ್ತು ಚೆಕ್‌ಗಳ ವೆಚ್ಚ ಉಳಿಸಬಹುದು. ದಾನಿಗಳು ಕ್ರಾಸ್‌ ಮಾಡಿದ ಚೆಕ್‌ ಅಥವಾ ಡಿಡಿಗಳನ್ನೂ ಕಳುಹಿಸಬಹುದು. ಡಿಡಿ ಅಥವಾ ಚೆಕ್‌ಗಳನ್ನು ಉಪಾಸನಾ ಫೌಂಡೇಷನ್‌(ರಿ), ಸಂಸೆ ಹೆಸರಿನಲ್ಲಿ ಕಳುಹಿಸಬೇಕು.

ಉಪಾಸನಾ ಪ್ರತಿಷ್ಠಾನದ ವಿಳಾಸ :

Upasana Foundation (R),
Mavinakombe,
Samse
Karnataka,
India
Pin-577124.

ಉಪಾಸನ : ಪಶ್ಚಿಮ ಘಟ್ಟದಲ್ಲೊಂದು ಮೌಂಟನ್‌ ಹೌಸ್‌!</a><br>Also Visist : <a href=www.upasana.de" title="ಉಪಾಸನ : ಪಶ್ಚಿಮ ಘಟ್ಟದಲ್ಲೊಂದು ಮೌಂಟನ್‌ ಹೌಸ್‌!
Also Visist : www.upasana.de" />ಉಪಾಸನ : ಪಶ್ಚಿಮ ಘಟ್ಟದಲ್ಲೊಂದು ಮೌಂಟನ್‌ ಹೌಸ್‌!
Also Visist : www.upasana.de

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X