• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎಸ್‌.ಕೆ. ಶಾಮಸುಂದರ

By Staff
|

ಟೀವಿಯಿಂದ ಕಣ್ಣುಕೀಳದಂತೆ ವೀಕ್ಷಕರನ್ನು ತಮ್ಮ ಧಾರವಾಹಿಗಳ ಮೂಲಕ ಸೀತಾರಾಂ ಕಟ್ಟಿಹಾಕಿದ್ದಾರೆ. ಕಿರುತೆರೆಯ ಅಗ್ರಗಣ್ಯ ನಾಯಕನೆಂಬ ಪಟ್ಟವನ್ನು ದಕ್ಕಿಸಿಕೊಂಡಿರುವ ಕರೀಕೋಟಿನ ವಕೀಲ ಸೀತಾರಾಂ, ‘ಮಾಯಾಮೃಗ’ದ ಡಿವಿಡಿಗಳ ನೆಪದಲ್ಲಿ ಅಮೆರಿಕಾಕ್ಕೆ ಹೊರಟ್ಟಿದ್ದಾರೆ. ಅಲ್ಲಿಂದ ಮತ್ತಷ್ಟು ಸರಕನ್ನು ಇಲ್ಲಿಗೆ ತಂದು, ಪ್ರೇಕ್ಷಕರನ್ನು ಮತ್ತಷ್ಟು ಮೋಡಿ ಮಾಡುತ್ತಾರಾ?...

S.K.Shama Sundara ಎಸ್‌.ಕೆ. ಶಾಮಸುಂದರ

shami.sk@greynium.com

All Set : TNS to USಕಿರುತೆರೆಯಲ್ಲಿ ಪ್ರಸಾರವಾದ ಮೆಗಾ ಧಾರಾವಾಹಿಯಾಂದನ್ನು ಡಿವಿಡಿಯಲ್ಲಿ ಹಿಡಿದಿಡುವ ಪ್ರಯತ್ನ ಕನ್ನಡ ಸಂದರ್ಭದಲ್ಲಿ ಇದೇ ಮೊದಲು! ಒಂದು ಮಾಧ್ಯಮದಿಂದ ಇನ್ನೊಂದು ಮಾಧ್ಯಮಕ್ಕೆ ಜಿಗಿಯುವ ಈ ಪ್ರಯತ್ನ ಬಹುಶಃ ಭಾರತದಲ್ಲಿ ಒಂದು ದಾಖಲೆ. ಇಂಥ ದಾಖಲೆಯನ್ನು ಸ್ಥಾಪಿಸಲು ಕಾರಣರ್ತರಾದ ಅಮೆರಿಕನ್ನಡಿಗರ ಕನ್ನಡ ಪ್ರೇಮ ....ಅದೂ ಒಂದು ಮೈಲಿಗಲ್ಲು!!

ನಾಲಕ್ಕು ವರ್ಷಗಳ ಹಿಂದೆ ಬೆಂಗಳೂರು ದೂರದರ್ಶನದಲ್ಲಿ ಮೆಗಾ ಧಾರಾವಾಹಿಯಾಗಿ ಮಿಂಚಿದ ‘ಮಾಯಾಮೃಗ ’ ‘ಮಿಂಚಿಮರೆಯಾಗುವ’ ಪ್ರಸಂಗವಲ್ಲ. 435 ಸಂಚಿಕೆಗಳ ಈ ಧಾರಾವಾಹಿಗೆ ಮೆಗಾ ಡಿವಿಡಿ ಮೂಲಕ ಪುನರ್‌ಜನ್ಮ ಕೊಡುತ್ತಿರುವ ಮೆಗಾ ಕನ್ನಡ ಪ್ರೇಮಿಗಳಿಗೆ ನನ್ನ ಶುಭಕಾಮನೆಗಳು ಎಂದರು ಸೀತಾರಾಮ್‌.

ಕನ್ನಡದಲ್ಲಿ ಎಷ್ಟೋ ಧಾರಾವಾಹಿಗಳು ಬಂದುಹೋಗಿವೆ. ಆದರೆ, ಧಾರಾವಾಹಿಯನ್ನು ಡಿವಿಡಿ ಮಾಡಿ ಮಾರಾಟಮಾಡಬಹುದು ಎಂಬ ಕಲ್ಪನೆ ಸಹ ನನಗಿರಲಿಲ್ಲ. ಕನ್ನಡ ಟಿವಿ ಮಾಧ್ಯಮದಿಂದ ಡಿವಿಡಿ ಮಾಧ್ಯಮಕ್ಕೆ ಗ್ರೇಟ್‌ ಲೀಪ್‌ ಮಾಡುತ್ತಿರುವವರು ಕನ್ನಡ ಉತ್ಸಾಹಿ ಅಮೆರಿಕನ್ನರು ಎಂದರು ಸೀತಾರಾಮ್‌.

ಈ ಮುಂಚೆ ತಮ್ಮ ‘ ಮತದಾನ ’ ಸಿನಿಮಾ ಕೂಡ ಡಿವಿಡಿಗೆ ಪರಿವರ್ತನೆಯಾಗಿ ಅಮೆರಿಕದಾದ್ಯಂತ ಸುಳಿದಾಡಿತ್ತು. ಆ ಯೋಜನೆಯನ್ನು ಕೈಗೆತ್ತಿಕೊಳ್ಳುವ ಸಾಹಸ ಮಾಡಿದವರೇ ಇದೀಗ ಮಾಯಾಮೃಗವನ್ನು ಡಿವಿಡಿ ಮಾಡಿಸಿ ಕನ್ನಡಿಗರ ಮನೆಮನೆ ತಲುಪಿಸಲು ಶ್ರಮಿಸುತ್ತಿದ್ದಾರೆ ಎಂದರು ಸೀತಾರಾಮ್‌.

ಅಮೆರಿಕಾದಲ್ಲಿ ಕನ್ನಡ ಡಿವಿಡಿ.ನೆಟ್‌ ಎನ್ನುವ ಸಂಸ್ಥೆಯಾಂದಿದೆ. ಅವರ ಆಸಕ್ತಿಯಿಂದ ಈ ಡಿವಿಡಿ ಜನ್ಮತಾಳಿದೆ. ಡಿವಿಡಿಯ ಬಿಡುಗಡೆ ಮತ್ತು ಆ ನೆಪದಲ್ಲಿ ಅಮೆರಿಕಾದ ಉದ್ದಗಲಕ್ಕೂ ಪ್ರವಾಸ. ಪ್ರವಾಸ ನೆಪದಲ್ಲಿ ಕನ್ನಡ ಕೂಟಗಳಿಗೆ ಭೇಟಿ, ಭೇಟಿಯ ನೆಪದಲ್ಲಿ ಅಮೆರಿಕನ್ನಡಿಗರೊಂದಿಗೆ ನೇರ-ಮುಕ್ತ ಮುಖಾಮುಖಿಗೆ ಈಗ ವೇದಿಕೆ ಸಿದ್ಧವಾಗಿದೆ, ಇದೇ ಮೇ 30ರಂದು ನ್ಯೂಯಾರ್ಕ್‌ ಫ್ಲೈಟ್‌ ಹತ್ತುತ್ತಿದ್ದೇನೆ ಎಂದರು ಸೀತಾರಾಮ್‌.

ಏರೋಪ್ಲೇನ್‌ ಹತ್ತುವ ಮುಂಚೆ ಪ್ರವಾಸದ ಉದ್ದೇಶವನ್ನು ವಿವರಿಸುವ ಸುದ್ದಿಗೋಷ್ಠಿ, ಮಂಗಳವಾರ ಬೆಂಗಳೂರಿನಲ್ಲಿತ್ತು. ಅಮೆರಿಕಾದಲ್ಲಿ ಸೀತಾರಾಮ್‌ ಜೊತೆಜೊತೆಯಲಿ ಇರುವೆನು ನಾನೆಂದು... ಎನುವ ನಾಟಕ ಅಕಾಡೆಮಿ ಅಧ್ಯಕ್ಷ ಕಪ್ಪಣ್ಣ ಕೂಡ ಸುದ್ದಿಗೋಷ್ಠಿಗೆ ಆಗಮಿಸಿದ್ದರು.

ಪ್ರಶ್ನೋತ್ತರ ಪೂರ್ಣ ಪಾಠ :

ವರದಿಗಾರ : ಮನ್ವಂತರ , ಮುಕ್ತ ಧಾರಾವಾಹಿಗಳನ್ನು ಬಿಟ್ಟು ನೀವು ಮಾಯಾಮೃಗವನ್ನೇಕೆ ಸೆಲೆಕ್ಟ್‌ ಮಾಡಿದಿರಿ?

ಟಿಎನ್‌ಎಸ್‌ : ಮಾಯಾ ಮೃಗ ನನ್ನದು, ಅಮೆರಿಕನ್ನಡಿಗರು ಕೊಡಿ ಅಂತ ಕೇಳಿದರು, ಕೊಟ್ಟೆ. ‘ಮನ್ವಂತರ ‘ , ‘ ಮುಕ್ತ ’ ಧಾರಾವಾಹಿಗೆ ನಾನೊಬ್ಬ ನಿರ್ದೇಶಕ ಅಷ್ಟೆ. ಅದರ ಹಕ್ಕುಗಳು ಟಿವಿ ಸಂಸ್ಥೆಗೆ( ಈಟಿವಿ) ಸೇರಿದೆ .

ವರದಿಗಾರ : ಅಮೆರಿಕಾದಲ್ಲಿ ಎಲ್ಲಿಗೆ ಹೋಗುತ್ತೀರಿ? ಎಷ್ಟು ದಿನ ಇರುತ್ತೀರಿ?

ಟಿಎನ್‌ಎಸ್‌ : ನೋಡಿ

ವರದಿಗಾರ : ಮನ್ವಂತರ ಧಾರಾವಾಹಿ ನಂತರ ಕರ್ನಾಟಕದ ಅನೇಕ ಸ್ಥಳಗಳಲ್ಲಿ ಪ್ರೇಕ್ಷಕರ ಜೊತೆ ನೀವು ಸಂವಾದ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದೀರಿ. ನಿಮ್ಮ ಧಾರಾವಾಹಿಗಳನ್ನೇ ನೋಡದ ಜನರ ಜತೆ ಏನೂಂತ ಸಂವಾದ ನಡೆಸುತ್ತೀರಿ?

ಟಿಎನ್‌ಎಸ್‌ : ಪರಸ್ಪರ ಹಂಚಿಕೊಳ್ಳಬೇಕಾಗಿರುವ ಅನೇಕ ವಿಚಾರಗಳಿವೆ. ಅದು ಕೇವಲ ಸಿನಿಮಾಗೆ, ಧಾರಾವಾಹಿಗೇ ಸೀಮಿತವಾಗಿರಬೇಕಾದ್ದಿಲ್ಲ. ಕರ್ನಾಟಕದಲ್ಲಿ, ವಿಶೇಷವಾಗಿ ಬೆಂಗಳೂರಿನಲ್ಲಿ ಕನ್ನಡಕ್ಕೆ ಬೆಂಕಿ ಬಿದ್ದಿದೆ, ಇನ್ನೊಂದೆಡೆ ( ಅಮೆರಿಕಾ, ಆಸ್ಟ್ರೇಲಿಯಾ) ಕರ್ನಾಟಕದ ಬಗ್ಗೆ ಸಾಮಾಜಿಕ ಕಾಳಜಿ ಮತ್ತು ಕನ್ನಡ ಸಂಸ್ಕೃತಿಯ ಬಗೆಗೆ ಅನನ್ಯವಾದ ಪ್ರೀತಿ ಮತ್ತು ಶ್ರದ್ಧೆ ಜಾಗೃತವಾಗುತ್ತಿರುವ ಬಗ್ಗೆ ಓದಿದ್ದೇನೆ, ಕೇಳಿದ್ದೇನೆ. ಒಟ್ಟಾರೆಯಾಗಿ ಕನ್ನಡದ ದುಃಖ ಮತ್ತು ಸಂಭ್ರಮಗಳನ್ನು ಏಕಕಾಲಕ್ಕೆ ಅಮೆರಿಕನ್ನಡಿಗರೊಡನೆ ಹಂಚಿಕೊಳ್ಳಲು ಉತ್ಸುಕನಾಗಿದ್ದೇನೆ.

*

ಸ್ವಭಾವತಃ ಸೀತಾರಾಮ್‌ ಮಿತಭಾಷಿ. ತಮ್ಮ ಸಿದ್ಧಾಂತಗಳನ್ನು , ಬದಲಾವಣೆಗೆ ತುಡಿಯುತ್ತಿರುವ ಅಥವಾ ಕುದಿಯುತ್ತಿರುವ ಮನಸ್ಸನ್ನು ಅಷ್ಟು ಸುಲಭಕ್ಕೆ ಮಾತುಗಳಲ್ಲಿ ಬಿಚ್ಚಿಡುವವರಲ್ಲ. ಅದೇನಿದ್ದರೂ ನನ್ನ ಸಿನಿಮಾ ಅಥವಾ ಧಾರಾವಾಹಿಗಳಲ್ಲಿ ಕಾಣಸಿಗುತ್ತದೆ, ಸಾಧ್ಯವಾದರೆ, ಸಾಧ್ಯಮಾಡಿಕೊಂಡು, ಸದ್ಯಕ್ಕೆ ಮಾಯಾಮೃಗ ಡಿವಿಡಿ ನೋಡಿ ಎನ್ನುತ್ತಾರೆ. ದೂರದಿಂದಲೆ ಜೀವಹಿಂಡುವ ಶಕ್ತಿಗಳ ಬಗ್ಗೆ ನಾವು ಜಾಗೃತರಾಗುವುದು ಯಾವಾಗ ಎಂತಲೂ ಪ್ರಶ್ನಿಸುತ್ತಾ ಆ ಕತೆಯನ್ನು ಆಮೇಲೆ ಹೇಳುತ್ತೇನೆ ಕೇಳಿ ಎಂದೂ ನೆನಪಿಸುತ್ತಾರೆ.

ಆದರೆ, ಕಪ್ಪಣ್ಣ ವಾಚಾಳಿ. ನಾಟಕಕಾರ. ನಿಂತಲ್ಲೆ ಅಭಿನಯ ಶೂರ. ಒಂದು ಪಾನ್‌ ಪರಾಗ್‌ ಸಿಕ್ಕಿಬಿಟ್ಟರೆ ಥೇಟ್‌ ಗುಬ್ಬಿವೀರಣ್ಣ. ಥಿಯೇಟರ್‌ಗೆ ಹೋಗುವ ಅವಶ್ಯಕತೇಯೆ ಇರುವುದಿಲ್ಲ.

ನಾಟಕ ಅಕಾಡೆಮಿಯ ಅಧ್ಯಕ್ಷ ಗಿರಿ ಮುಗಿಯುವುದರೊಳಗೆ ಏನಾದರೊಂದು ಅರ್ಥಪೂರ್ಣ ಕಾರ್ಯಕ್ರಮ ಹಾಕಿಕೊಳ್ಳಬೇಕು ಎಂದು ಅವರು ಕನವರಿಸುವುದುಂಟು. ಇಂಥ ಕಪ್ಪಣ್ಣರಿಗೆ ಏಸೊಂದು ಕನಸುಗಳಿವೆ. ನನಸಾಗಲು ಕಪ್ಪಣ್ಣನವರು ಅಮೆರಿಕಾದಿಂದ ವಾಪಸ್ಸು ಬರಲಿ ಅಂತ ಕನಸುಗಳು ಕರ್ನಾಟಕದಲ್ಲಿ ಅವರಿಗಾಗಿ ಕಾಯುತ್ತವೆ.

Thank you for choosing Thatskannada.com

shami.sk@greynium.com

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more