• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎಸ್‌.ಕೆ. ಶಾಮಸುಂದರ

By Staff
|

ಮಳೆ ಬೀಳದಿದ್ದರೂ ಬರಗಾಲ ಬಿಸುಸುಯ್ಯದ ನಾಡು ಕ್ಯಾಲಿಫೋರ್ನಿಯ. ಭಾರತೀಯ ಚಿಂತನೆಗಳನ್ನು , ಕನ್ನಡದ ಕಸುವನ್ನು ಬಿಟ್ಟುಕೊಡದ ಕರಾವಳಿ ತೀರದ ಹೆಗ್ಗಳಿಕೆಯ ಬಗ್ಗೆ ಎರಡು ಮಾತು

S.K.Shama Sundara ಎಸ್‌.ಕೆ. ಶಾಮಸುಂದರ

shami.sk@greynium.com

Golden Gateಉತ್ತರ ಅಮೆರಿಕಾದ ಪಶ್ಚಿಮ ಕರಾವಳಿ ( ಪೆಸಿಫಿಕ್‌ ಸಮುದ್ರ) ತೀರದುದ್ದಕ್ಕೂ ಚಾಚಿಕೊಂಡಿರುವ ರಾಜ್ಯ ಕ್ಯಾಲಿಫೋರ್ನಿಯ. ಸಮುದ್ರದ ನೆಂಟಸ್ತನ ಇದ್ದರೂ ಉಪ್ಪಿಗೆ ಬರ ಎಂಬ ಗಾದೆಯ ಮಾತಿನ ಹಾಗೆ ಇಲ್ಲಿ ಮಳೆ ಸುರಿಯುವುದು ಕಡಿಮೆ. ಅಬ್ಬಬ್ಬಾ ಅಂದರೆ ವರ್ಷಕ್ಕೆ 8 ಇಂಚು ಮಳೆ ಬಿದ್ದರೆ ಪುಣ್ಯ. ಹಾಗಂತ ಕುಡಿಯುವ, ಮೈತೊಳೆಯುವ ನೀರಿನ ಅಭಾವ ತಲೆದೋರುವುದಿಲ್ಲ. ಹಿತ್ತಲಲ್ಲಿ ಕಿತ್ತಳೆ ಚಿಗುರದೆ ಬಾಡುವುದಿಲ್ಲ. ಅಭಾವ ಪೀಡಿತ ಪ್ರದೇಶ ಎಂದು ರಾಜ್ಯಪಾಲ ಷ್ವಾಜನಗರ್‌ ಘೋಷಿಸಿಲ್ಲ.!

ಸಮುದ್ರದ ಹಿನ್ನೀರು ಹರಿವಿನ ತಾಣವಾದ ಉತ್ತರ ಕ್ಯಾಲಿಫೋರ್ನಿಯವನ್ನು ಬೇ ಏರಿಯ ಎಂದೂ ಕರೆಯುತ್ತಾರೆ. ಹ್ಯಾಮಿಲ್‌ಟನ್‌ ಪರ್ವತದ ಕೆಳಗೆ ಮಲಗಿರುವ ಈ ನಗರಕ್ಕೆ ಭೌಗೋಳಿಕ ಸನ್ನಿವೇಶದಿಂದಾಗಿ ಆ ಹೆಸರು ಬಂದಿರಬಹುದು. ಆದರೆ, ಸಾಫ್ಟ್‌ವೇರ್‌ ಕಸುಬು, ಮಾರುಕಟ್ಟೆಯ ಮಧ್ಯಸ್ಥಿಕೆಯಿಂದಾಗಿ ಈ ಪ್ರದೇಶಕ್ಕೆ ಸಿಲಿಕಾನ್‌ ವ್ಯಾಲಿ ಎಂಬ ನಿಕ್‌ ನೇಮ್‌ ಕೊಟ್ಟಿದ್ದಾರೆ ಅಮೆರಿಕನರು. ನಾನು ಬೆಂಗಳೂರಿನ ಹೊರವಲಯದಲ್ಲಿ, ಆಗಾಗ ಕರೆಂಟು ಕೈಕೊಡುವ ಕೋಣನಕುಂಟೆಯಲ್ಲಿ ಕುಳಿತು ಪಿಸಿ 386 ರಲ್ಲಿ ಕನ್ನಡ ಅಕ್ಷರ ಕುಟ್ಟುತ್ತಿದ್ದರೆ ಸಿಲಿಕಾನ್‌ ವ್ಯಾಲಿಯಲ್ಲಿ ಭಾರತೀಯ ಸಂಜಾತ ಸಾಫ್ಟ್‌ವೇರ್‌ ಪಂಟರುಗಳು ಪಿಸಿ 7ರ ಬಗ್ಗೆ ಸಂಶೋಧನೆ ಮಾಡುತ್ತಿರುತ್ತಾರೆ. ವಿಶ್ವವಿಖ್ಯಾತ ಗೋಲ್ಡ್‌ ನ್‌ ಗೇಟ್‌ ಸೇತುವೆ, ಕ್ರುಕೆಡ್‌ ರೋಡು ಮತ್ತು ಸಾಫ್ಟವೇರ್‌ ದಿಗ್ಗಜಗಳ ನೆಲೆಯೆಂಬ ಪ್ರತಿಷ್ಟೆಯ ಜತೆಗೆ ಉತ್ತರ ಕ್ಯಾಲಿಫೋರ್ನಿಯ ಯಾವತ್ತೂ ಭೂಕಂಪದ ಭಯದಲ್ಲೇ ಬದುಕುದೂಡುವ ರಾಜ್ಯ. ಬೇ ಏರಿಯಾ ಭೂಮಿ ತಾಯಿಗೆ ನೆಮ್ಮದಿಯೆಂಬುದೇ ಇಲ್ಲ.

ಗ್ರೇಪ್‌ ವೈನ್‌ ದಕ್ಷಿಣ ಕ್ಯಾಲಿಫೋರ್ನಿಯಾ ಕೂಡ ಉತ್ತರ ಭಾಗದಂತೆ ಮಲ್ಟಿ ಲಿಂಗ್ಯುವಲ್‌, ಮಲ್ಟಿ ರೇಸಿಯಲ್‌, ಮಲ್ಟಿಪಲ್‌ ಟ್ರಾಫಿಕ್‌ ಹೆಜಾರ್ಡಸ್‌ ಜತೆಗೆ ಮಲ್ಟಿಮಿಲಿಯನರುಗಳನ್ನು ಪಾಪರ್‌ ಚೀಟಿಗಳನ್ನು ಸಾಕಿಕೊಂಡು ಇನ್ನು ಬೆಳೆಯಲಾರದಷ್ಟು ಉಬ್ಬಿಕೊಂಡ ನಗರ. ಡಿಸ್ನಿ ಲ್ಯಾಂಡ್‌, ಬೆವರ್‌ಲಿಹಿಲ್ಸ್‌, ಹಾಲಿವುಡ್‌ ಖ್ಯಾತಿಯ ಲಾಸ್‌ಏಂಜಲಿಸ್‌ ಸಮತಟ್ಟಾದ ಭೂ ಪ್ರದೇಶದಲ್ಲಿ ಹಲವು ಅಸಮತೋಲನಗಳನ್ನು ಬಚ್ಚಿಟ್ಟುಕೊಂಡ ನಗರ.

ಕ್ಯಾಲಿಫೋರ್ನಿಯದಲ್ಲಿ ಒಟ್ಟು ಸುಮಾರು 62 ಸಾವಿರ ಮಂದಿ ಭಾರತೀಯರಿದ್ದಾರೆ ಎಂದು ಇಸವಿ 2002ರಲ್ಲಿ ಓದಿದ್ದೆ.

ಹೊಸದಾಗಿ ಇಲ್ಲಿಗೆ ಬಂದು ಸೇರಿದವರ ಸಂಖ್ಯೆಯನ್ನು ಅದಕ್ಕೆ ಕೂಡಿ ಇಲ್ಲಿಂದ ಭಾರತಕ್ಕೆ ಮರಳಿದವರ ಸಂಖ್ಯೆಯನ್ನು ಅದರಿಂದ ಕಳೆದರೆ ನಮ್ಮವರ ಸಂಖ್ಯೆ 62 ಸಾವಿರಕ್ಕೇ ನಿಲ್ಲುತ್ತದೆ. ಈ ಜನ ಸಮುದಾಯದಲ್ಲಿ ಕನ್ನಡಿಗರ ಸಂಖ್ಯೆ ಎಷ್ಟು ಎನ್ನುವುದು ನನಗೆ ಗೊತ್ತಿಲ್ಲ. ಅಮೆರಿಕನ್‌ ಇಮಿಗ್ರೇಷನ್‌ ಇಲಾಖೆಯವರೂ ಲೆಕ್ಕ ಇಟ್ಟಂತೆ ಕಾಣುವುದಿಲ್ಲ.

ಸಂಖ್ಯೆ ಎಷ್ಟೇ ಇರಲಿ. ಗುಣಾತ್ಮಕವಾಗಿ ಅಮೆರಿಕಾ ಅರ್ಥವ್ಯವಸ್ಥೆಗೆ ಗಮನಾರ್ಹ ಕೊಡುಗೆ ನೀಡುವುದರಲ್ಲಿ ಕುಶಲಮತಿ ಕನ್ನಡಿಗರು ಯಾವತ್ತೂ ಹಿಂದೆ ಬಿದ್ದಿಲ್ಲ ಎನ್ನುವ ಸಂಗತಿ ನಿಮಗೆ ಗೊತ್ತಿರಲಿ.

ಉದ್ಯೋಗ-ನಿರುದ್ಯೋಗ, ಬಾಡಿಗೆ ಮನೆ - ಸಾಲದ ಮಠ, ಮದುವೆ- ವಿಚ್ಛೇದನ, ಹೆರಿಗೆ-ಗರ್ಭಪಾತ, ಮಕ್ಕಳ ಏಳಿಗೆಯ ಜತೆಗೆ ಹಾವಳಿ, ಡಾಲರ್ರು-ಸೆಂಟು ಮತ್ತೆಲ್ಲ ಬದುಕಿನ ಸಂಕೀರ್ಣಗಳಿಗೆ ಮೈಯಾಡ್ಡಿರುವ ಕನ್ನಡಿಗರು ಎಲ್ಲೋ ಒಂದು ಕಡೆ ಅಸಲಿ ಸಂತಸ ಕಾಣಲು ಕನ್ನಡಕ್ಕೆ ಮೊರೆ ಹೋಗುತ್ತಾರೆ. ಕನ್ನಡದಲ್ಲಿ ಮಾತಾಡುವವರನ್ನು ಹುಡುಕಿಕೊಂಡು ಹೋಗುತ್ತಾರೆ, ಕನ್ನಡ ಹಾಡು ಕೇಳುತ್ತಾ ಕರ್ನಾಟಕ ಊಟದ ರುಚಿಗೆ ಇಂಟರ್‌ನೆಟ್ಟ್‌ ಜಾಲಾಡುತ್ತಾರೆ.

ಇವರು ಕಟ್ಟಿಕೊಂಡ ಕನ್ನಡ ಕೂಟಗಳು ವಾರದಿಂದ ವಾರಕ್ಕೆ ಸುದ್ದಿ ಮಾಡುವುದೊಂದು ವಿಶೇಷ. ಸಾಹಿತ್ಯವೋ ಸಂಗೀತವೋ, ಭಜನೆಯೋ, ಸಿನಿಮಾನೋ, ನಾಟಕಾನೋ ಅಂತೂ ಕನ್ನಡದ ವಾಸನೆ ಮೂಗಿಗೆ ಬಡಿಯದಿದ್ದರೆ ಕೆಲವರಿಗೆ ತಿಂದ ಬೇಗಲ್‌ಜೀರ್ಣವಾಗುವುದಿಲ್ಲ. ಅಮೆರಿಕಾ-ಭಾರತದ ಒಡನಾಟ ಹೆಚ್ಚಾಗಿರುವ ಈ ದಿನಗಳಲ್ಲಂತೂ ಕ್ಯಾಲಿಫೋರ್ನಿಯಾದಲ್ಲಿ ಕಾರ್ಯಕ್ರಮಗಳ ಸುರಿಮಳೆ. ಹಬ್ಬ ಹರಿದಿನ, ವಾರ್ಷಿಕೋತ್ಸವಗಳ ನಡುವೆ ಭಾರತದಿಂದ ಆಗಮಿಸುವ ಗಣ್ಯರ ಸತ್ಕರಿಸುವುದು, ಅವರಿಂದ ಹೊಸ ವಿಷಯ ತಿಳಿಯಲು ಆಸೆಪಡುವುದು , ಅವರಿಂದ ಹಾಡಿಸುವುದು, ಹಾಡಿ ಹೊಗಳುವುದು ಸಾಮಾನ್ಯ ಎನಿಸುವಷ್ಟು ಸಲೀಸು.

ಇಲ್ಲಿನ ಕನ್ನಡಿಗರ ಸಾಂಸ್ಕೃತಿಕ ಚಟುವಟಿಕೆಗಳು ಹೊರಪ್ರಪಂಚಕ್ಕೆ ಗೊತ್ತಾಗಬೇಕಾದರೆ ಇಂಟರ್‌ನೆಟ್ಟೇ ಗತಿ ಎನ್ನುವಂತಾಗಿದೆ. ಇಂಟರ್‌ನೆಟ್‌ ಅಂದರೆ ಇಂಗ್ಲಿಷ್‌ ಅಲ್ಲ ಸ್ವಾಮಿ. ಕನ್ನಡ. ಕನ್ನಡಕ್ಕಾಗೆ ಮೀಸಲಾಗಿರುವ ಒಂದು-ಒಂದೂವರೆ ವೆಬ್‌ಸೈಟಿನಲ್ಲಿ ಕನ್ನಡಿಗರ ಚಟುವಟಿಕೆಗಳು ಪ್ರತಿಫಲಿಸಬೇಕು. ಈ ಕಾರಣದಿಂದಾಗಿಯೇ ಕ್ಯಾಲಿಫೋರ್ನಿಯಾ ಕನ್ನಡಿಗರ ಕನ್ನಡ ಕಲರವಗಳು www.thatskannada.com ನಲ್ಲಿ ಹೇರಳವಾಗಿ ಬೆಳಕು ಕಂಡಿವೆ, ಕಾಣುತ್ತಿವೆ. ಅನೇಕ ಕನ್ನಡಿಗರು, ಕನ್ನಡತಿಯರು ತನ್ನಲ್ಲಿನ ಬರಹಗಾರನನ್ನು ಬಡಿದೆಬ್ಬಿಸಿದ್ದಾರೆ. ಕೆಲವೊಮ್ಮೆ ಬರೆಯುವುದಕ್ಕೆ ನೂಕುನುಗ್ಗಲಾಗುವುದೂ ಉಂಟು.

ಒಂದು ಸಣ್ಣ ಕಾರ್ಯಕ್ರಮ ನಡೆದರೆ ಅದನ್ನು ವೆಬ್‌ಸೈಟಿನಲ್ಲಿ ದಾಖಲು ಮಾಡಲು ನಾಲಕ್ಕು ಲೇಖಕರು ಸಿದ್ಧರಾಗಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಸಂತೋಷದ ಸಮಾಚಾರ. ಎಲ್ಲರಿಗೂ ಅವಕಾಶ ಕೊಡುವ ದೃಷ್ಟಿ, ಮತ್ತು ಬರಹಗಳ ಗುಣಮಟ್ಟ ಎರಡನ್ನೂ ಗಮನದಲ್ಲಿಟ್ಟು ನಮ್ಮ ವೆಬ್‌ಸೈಟಿನಲ್ಲಿ ಲೇಖನ, ಕವನ, ವರದಿ, ಪ್ರಬಂಧ ಮುಂತಾದ ಅಕ್ಷರ ಅನುಸಂಧಾನ ಏಕಪ್ರಕಾರವಾಗಿ ಸಾಗುತ್ತದೆ.

ಇಂತಹ ಪರಿಸ್ಥಿಗೆ ಉದಾಹರಣೆಯಾಗಿ ನಿಮ್ಮ ಮುಂದೆ ಇವತ್ತು ಎರಡು ವರದಿಗಳನ್ನು ಪ್ರಸ್ತುತಪಡಿಸುತ್ತಿದ್ದೇನೆ. ಅಮೆರಿಕ ಕನ್ನಡಿಗರಿಗೆ ಈ ಹೊತ್ತು ತಿಳಿದಿರುವ ಹಾಗೆ ಕರ್ನಾಟಕದ ಮೂವರು ಗಣ್ಯರು ಅಮೆರಿಕಾ ಪ್ರವಾಸದಲ್ಲಿದ್ದಾರೆ. ಹಿರಿತೆರೆ-ಕಿರುತೆರೆ ಪ್ರತಿನಿಧಿಸುವ ಸೀತಾರಾಮ್‌, ಸರಕಾರದ ಕುರ್ಚಿಯಲ್ಲಿ ಕುಳಿತು ರಂಗಭೂಮಿ ಪ್ರತಿನಿಧಿಸುವ ಕಪ್ಪಣ್ಣ ಆಲಿಯಾಸ್‌ ಶ್ರೀನಿವಾಸ್‌, ಅರುವತ್ತು ಮಳೆಗಾಲದ ಕವಿ , ಚಿನ್ನಾರಿ ಮುತ್ತ ಎಚ್‌.ಎಸ್‌. ವೆಂಕಟೇಶಮೂರ್ತಿ, ಅಮೆರಿಕಾದಲ್ಲಿ ರಾಜಾಕುಳ್ಳ ದ್ವಾರಕೀಶ್‌ ಅವರುಗಳು ಈಗಷ್ಟೆ ಪಶ್ಚಿಮ ಕರಾವಳಿ ತೀರದ ಪ್ರವಾಸ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಆ ಎರಡು ಕಾರ್ಯಕಾರ್ಯಕ್ರಮಗಳ ಚಿತ್ರ-ಲೇಖನಗಳ ಸಾರಸಂಗ್ರಹವನ್ನು ನಮ್ಮ ವೆಬ್‌ಸೈಟಿನಲ್ಲಿ ಸಾದರಪಡಿಸಲಾಗಿದೆ. ಲಾಸ್‌ಏಂಜಲಿಸ್‌ನಿಂದ ವರದಿ ಕಳಿಸಿದವರು ಕನ್ನಡ ಕಂಠೀರವ ವಲ್ಲೀಶ ಶಾಸ್ತ್ರಿ ಆಲಿಯಾಸ್‌ ಮವಾಸು ಮತ್ತು ಕುಪರ್ಟಿನೋದಿಂದ ಮೃದುಭಾಷಿ ಮಧುಕಾಂತ್‌.

Thank you for choosing Thatskannada.com

shami.sk@greynium.com

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more