ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್‌.ಕೆ. ಶಾಮಸುಂದರ

By Staff
|
Google Oneindia Kannada News

ಎಸ್‌.ಕೆ. ಶಾಮಸುಂದರ
[email protected]
Happy browsing Municipality websites!! ಒಂದು ಊರಿಗೆ ಮುನಿಸಿಪಾಲ್ಟಿ ತುಂಬ ಮುಖ್ಯವಾಗುತ್ತದೆ. ಅಗತ್ಯ ಸೌಲಭ್ಯಗಳನ್ನು ಸೃಷ್ಟಿಸುವುದು, ಸೃಷ್ಟಿಸಿದ್ದನ್ನು ಕೆಟ್ಟು ಹೋಗದಂತೆ ಕೇರ್‌ ತೆಗೆದುಕೊಳ್ಳುವುದು ಮುನ್ಸಿಪಾಲ್ಟಿ ಅಥವಾ ನಗರಸಭೆಯ ಆದ್ಯ ಕರ್ತವ್ಯ. ಈ ಸಂಸ್ಥೆಗಳ ಕಾರ್ಯಕ್ಷಮತೆಯ ಮೇಲೆ ಆ ಊರಿನಲ್ಲಿ ಬದುಕುವವರ ಕಷ್ಟ ಸುಖ ಅವಲಂಬಿತವಾಗಿರುತ್ತದೆ. ಅನುಮಾನವೇ ಇಲ್ಲ.

ಇತ್ತೀಚೆಗೆ ಗ್ರಾಮಾಂತರ, ಪಟ್ಟಣಪ್ರದೇಶಗಳ ಬಗ್ಗೆ ಹೆಚ್ಚು ತಿಳಿಯಬಯಸುವವರ ಸಂಖ್ಯೆ ಬೆಳೆಯುತ್ತಿದೆ. ಲೋಕಲ್‌ ಪೇಪರ್‌ಗಳು ಬರೀ ರಾಜಕೀಯ ಮತ್ತು ಸಾಮಾಜಿಕ ಜವಾಬ್ದಾರಿರಹಿತ ಹಣ ಸಂಪಾದನೆಗೆ ತಮ್ಮ ಬುದ್ಧಿಶಕ್ತಿಯನ್ನು ಮುಡಿಪಾಗಿಟ್ಟಿರುವುದರಿಂದ ತೀರ ಅತ್ಯಗತ್ಯವಾದ ಸ್ಥಳೀಯ ಮಾಹಿತಿ ದೊರಕುವುದು ದುಸ್ತರವಾಗಿದೆ. ಸ್ಥಳೀಯ ಆಡಳಿತದ ಲೋಪದೋಷಗಳ ಬಗ್ಗೆ ಜನತೆಯ ಧ್ವನಿಯಾಗಿ ಬಗ್ಗೆ ಕೆಲಸ ಮಾಡಲು ಯಾರಿಗೂ ಪುರುಸೊತ್ತು ಮತ್ತು ವ್ಯವಧಾನ ಇಲ್ಲವಾದ್ದರಿಂದ ಪಟ್ಟಣಪ್ರದೇಶಗಳಲ್ಲಿ ವಾಸಿಸುವುದು ಕಿರಿಕಿರಿಯಾಗಿದೆ. ಕರ್ನಾಟಕದ ಎಷ್ಟೋ ಊರು-ಪಟ್ಟಣಗಳು ನಿಂತಲ್ಲೇ ನಿಂತಿವೆ.

ಈ ಕೊರತೆ ತುಂಬಲು ಸ್ವಯಂಪ್ರೇರಿತವಾಗಿ, ಲಾಭರಹಿತ ಉದ್ದೇಶದಿಂದ ಕಾರ್ಯೋನ್ಮುಖವಾಗಿರುವ ಸಂಸ್ಥೆ ಇ-ಗವರ್‌ನೆನ್ಸ್‌. ಕರ್ನಾಟಕ ಸರಕಾರದ ಜತೆಯಲ್ಲಿ ಒಂದು ಸಣ್ಣ ಹೆಜ್ಜೆ ಇಟ್ಟಿದೆ. ನಂದನ್‌ ನಿಲೇಖಣಿ ಅವರ ಮುಂದಾಳತ್ವದಲ್ಲಿ ಇ-ಗವರ್‌ನೆನ್ಸ್‌ ತಂಡ ಶ್ರಮವಹಿಸಿ ಪ್ರತಿಯಾಂದು ನಗರಸಭೆಗೂ ಒಂದು ವೆಬ್‌ಸೈಟ್‌ ಕಟ್ಟಿಕೊಡಲು ಮುಂದಾಗಿದೆ. ಈ ಮೂಲಕ ಜನರು ತಮಗೆ ಬೇಕಾದಾಗ ಸ್ಥಳೀಯ ಮಾಹಿತಿ ಪಡೆದುಕೊಳ್ಳಬಹುದು. ಮೇಜಿನಿಂದ ಮೇಜಿಗೆ ಅಲೆಯುವ ತೊಂದರೆ ಅಷ್ಟರಮಟ್ಟಿಗೆ ತಪ್ಪುವ ಸಾಧ್ಯತೆಗಳಿವೆ.

ಈ ದಿಕ್ಕಿನಲ್ಲಿ ನಿನ್ನೆ, ಅಂದರೆ ಜೂಲೈ ಒಂದನೇ ತಾರೀಖು ಮಹತ್ವದ ದಿನ. ಮೈಸೂರು ಮಹಾನಗರಪಾಲಿಕೆ, ವಿಜಾಪುರ, ಹಾಸನ, ಉಡುಪಿ, ಮಹಾದೇವಪುರ, ಗೋಕಾಕ್‌ ಹಾಗೂ ರಾಯಚೂರು ನಗರಸಭೆಗಳ ಅಧಿಕೃತ ವೆಬ್‌ಸೈಟುಗಳನ್ನು ಜನಪ್ರೇಮಿಗಳು ಜನತೆಗೆ ಅರ್ಪಿಸಿದ ದಿನ. ಕೇಂದ್ರ ಮುಂಗಡಪತ್ರದಲ್ಲಿ ಅರ್ಥಸಚಿವ ಚಿದಂಬರಂ ಹೇಳಿದಂತೆ ಗ್ರಾಮೀಣ ಸಂಪರ್ಕಕ್ಕೆ ಒತ್ತುಕೊಟ್ಟ ದಿನ.

ಮೇಲ್ಕಂಡ ವೆಬ್‌ಸೈಟುಗಳನ್ನು ಶುಕ್ರವಾರ ನಗರಾಭಿವೃದ್ಧಿ ಮಂತ್ರ ಎಸ್‌. ಆರ್‌. ಮೋರೆ ಉದ್ಘಾಟಿಸಿದರು. ಈ ಇಂಟರ್‌ನೆಟ್‌ ತಾಣಗಳ ಮೂಲಕ ನಾಗರಿಕರು ದೂರು ದಾಖಲಿಸಬಹುದು, ಸಮಸ್ಯೆಗಳಿಗೆ ಉತ್ತರ ಪಡೆಯಬಹುದು, ನಗರಸಭೆ ಕುರಿತ ಅನೇಕ ಮಾಹಿತಿ, ಜನನ-ಮರಣ ಪ್ರಮಾಣ ಪತ್ರ, ಊರಿನ ಜನಸಂಖ್ಯೆ, ಹವಾಮಾನ, ಸಂಪರ್ಕ-ಸಾರಿಗೆ, ಸ್ಥಳ ಮಹಾತ್ಮೆ, ಕಂದಾಯ , ಕಟ್ಟಳೆ ಮುಂತಾದ ವಿವರಗಳನ್ನು ಕಂಪ್ಯೂಟರ್‌ ಮೂಲಕ ಪಡೆಯಬಹುದು. ನಿಮ್ಮೂರು ಈಗ ನಿಮ್ಮ ಅಂಗೈಯಲ್ಲಿ!

ಬರಲಿರುವ ತಿಂಗಳುಗಳಲ್ಲಿ ರಾಜ್ಯದ ಇನ್ನಿತರ 57 ನಗರಸಭೆಗಳನ್ನು ಇಂಟರ್‌ನೆಟ್‌ ವ್ಯಾಪ್ತಿಗೆ ತರಲಾಗುವುದು ಎಂದು ಮಂತ್ರಿಗಳು ಭರವಸೆಕೊಟ್ಟಿದ್ದಾರೆ.

ನಿಮ್ಮ ಮನೆ ನಲ್ಲಿಯಲ್ಲಿ ನೀರು ಬರುತ್ತಿಲ್ಲವೇ? ನಿಮ್ಮ ನಿವೇಶನವನ್ನು ಯಾವನೋ ಒತ್ತುವರಿ ಮಾಡಿಕೊಂಡನೇ? ರಸ್ತೆಯಲ್ಲಿ ನಾಯಿ ಸತ್ತು ಬಿದ್ದು ಹತ್ತುದಿವಸವಾದರೂ ಯಾರೂ ಹೆಣ ಎತ್ತಕ್ಕೆ ಬಂದಿಲ್ಲವೇ? ನಗರಸಭೆಗೆ ಇ-ಮೇಲ್‌ ಮಾಡಿ, ಕೆಲಸ ಮಾಡಿಸಿಕೊಳ್ಳಿ. ಶುಭವಾಗಲಿ.

ಸದ್ಯಕ್ಕೆ ಲಭ್ಯವಿರುವ ವೆಬ್‌ಸೈಟ್‌ ವಿವರಗಳು :

www.hassancity.gov.in
www.mahadevapuracity.gov.in
www.udupicity.gov.in
www.raichurcity.gov.in
www.mysorecity.gov.in
www.bijapurcity.gov.in
www.gokakcity.gov.in
visit: www.egovernments.org

Happy Using Municipality websites!!

ವಿ.ಸೂ : ಈ ಮೇಲ್ಕಂಡ ವೆಬ್‌ಸೈಟ್‌ಗಳಲ್ಲಿ ಯುನಿಕೋಡ್‌ ಅನ್ನು ಬಳಸಲಾಗಿದ್ದು, ವಿಂಡೋಸ್‌ ಎಕ್ಸ್‌ಪಿ ಆಪರೇಟಿಂಗ್‌ ಸಿಸ್ಟಮ್‌ನಲ್ಲಿ ಈ ವೆಬ್‌ಸೈಟ್‌ಗಳನ್ನು ವೀಕ್ಷಿಸಬಹುದು.

Thank you for choosing Thatskannada.com
[email protected]


ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X