ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್ಕೆ. ಶಾಮಸುಂದರ

By Staff
|
Google Oneindia Kannada News

ಬೆಂಗಳೂರು ಮಹಾನಗರ ಪಾಲಿಕೆಯ ಜಾತಕದಲ್ಲೀಗ ಶನಿ ಎಂಟನೇ ಮನೆಯಲ್ಲಿ ಕೂತಿದ್ದಾನೆ. ಹಾಗಾಗಿಯೇ ಅಜ್ಜಂದಿರು ನೂತಿಟ್ಟ ಆಸ್ತಿಯನ್ನು ಕರಗಿಸುವ ಮೊಮ್ಮಕ್ಕಳಂತೆ, ತನ್ನ ಒಡೆತನದ ಬೃಹತ್‌ ಕಟ್ಟಡಗಳನ್ನು ಪಾಲಿಕೆ ಮಾರಾಟಕ್ಕಿದೆ. ಅಂದಹಾಗೆ, ಪಾಲಿಕೆಗಿಂಥ ದುಸ್ಥಿತಿ ಬರಲು ಕಾರಣಗಳೇನು ಗೊತ್ತಾ ....

S.K.Shamasundara, Editor ಎಸ್ಕೆ. ಶಾಮಸುಂದರ
[email protected]

PUB for sale : Contact P.R. Ramesh, Mayor of Bangalore ಆಸ್ತಿ ಪಾಸ್ತಿ , ಬಂಗಾರ ಬೆಳ್ಳಿ , ಭೂಮಿ-ಕಾಣಿ ಮಾಡಿ ಕೂಡಿಟ್ಟುಕೊಂಡಿದ್ದರೆ ಯಾವತ್ತಿಗಾದರೂ ಸಹಾಯಕ್ಕೆ ಬರತ್ತೆ. ಕಷ್ಟ ಬಂದ ಕಾಲಕ್ಕೆ ಕರೆದು ಮಾರಬಹುದು!

ಬೆಂಗಳೂರು ಮಹಾನಗರ ಪಾಲಿಕೆಗೆ ಈ ಹೊತ್ತು ಇಂಥ ಸ್ಥಿತಿ ಬಂದೊದಗಿದೆ. ತನ್ನ ಪೂರ್ವಿಕರು ಮಾಡಿಟ್ಟ ಆಸ್ತಿಯನ್ನು ಮಾರಿ ಜೀವನ ಸಾಗಿಸುವ ಸಂದರ್ಭವನ್ನು ತಂದುಕೊಂಡಿರುವ ಪಾಲಿಕೆ , ಪ್ರೆೃಂ ಲೊಕ್ಯಾಲಿಟಿಯಲ್ಲಿರುವ ತನ್ನ ಅನೇಕ ಕಟ್ಟಡ, ಮಳಿಗೆಯನ್ನು ಬಿಕರಿಗಿಟ್ಟಿದೆ. ನೀವು ಕೊಳ್ಳುವಿರಾ ?

ಮನೆ - ಮಳಿಗೆ ಮಾರಾಟಕ್ಕಿಡುವ ಪರಿಸ್ಥಿತಿ ಪಾಲಿಕೆಗೆ ಯಾಕಾದರೂ ಬಂತು? ಹಳೆ ಕೃಷ್ಣರಾಜ ಮಾರುಕಟ್ಟೆ ಮಾತ್ರ ಬಲ್ಲ ಜನಕ್ಕೆ ಆಧುನಿಕ ಬೆಂಗಳೂರಿನ ಪರಿಚಾರಿಕೆ ಮಾಡುವ ಪಾಲಿಕೆಯ ಸಾಹಸ-ದುಸ್ಸಾಹಸಗಳ ಕಥೆ ಗೊತ್ತಿರಲಿಕ್ಕಿಲ್ಲ. ಬೆಂಗಳೂರು ಬೆಳೆದಂತೆ, ಹಿಗ್ಗಿದಂತೆ, ಮೈಚಾಚಿಕೊಂಡಾಗಲೆಲ್ಲ ಬಡಾವಣೆಗಳಲ್ಲಿ ಮಾರುಕಟ್ಟೆಗಳನ್ನು ಕಟ್ಟಿ ವ್ಯಾಪಾರಸ್ಥರಿಗೆ ಅನುಕೂಲ ಮಾಡಿಕೊಡುವ ಪರಿಪಾಠವನ್ನು ಪಾಲಿಕೆ ರೂಢಿಸಿಕೊಂಡಿತು. ತನ್ಮೂಲಕ ಬಾಡಿಕೆ ಬಂಕ ಗಿಟ್ಟಿಸಿಕೊಂಡು ಹಣಕಾಸು ಸ್ಥಿತಿಯನ್ನು ತೂಗಿಸಿಕೊಳ್ಳುವ ಇರಾದೆ ಪಾಲಿಕೆಗಿತ್ತು. ಅದರಂತೆ, ಜಯನಗರ, ರಾಜಾಜಿನಗರ, ಇಂದಿರಾನಗರ, ಕೋರಮಂಗಲ ಮುಂತಾದ ಪ್ರದೇಶಗಳಲ್ಲಿ ಶಾಪಿಂಗ್‌ ಕಾಂಪ್ಲೆಕ್ಸ್‌ಗಳು ಕಣ್ಣು ತೆರೆದವು. ಆದರೆ, ಅನೇಕ ಕಾಂಪ್ಲೆಕ್ಸ್‌ಗಳಲ್ಲಿ ಲಾಭದಾಯಕ ವ್ಯಾಪಾರ ಖೋತಾ ಆಗಿ ಬಹುಕೋಟಿ ವೆಚ್ಚದಲ್ಲಿ ನಿರ್ಮಿಸಿದ ಕಟ್ಟಡಗಳು ನಷ್ಟದ ಬಾಬತ್ತಾಗಿ ರೂಪುಗೊಂಡವು. ಸದಾ ಜನಗಳಿಂದ , ಗಿರಾಕಿಗಳಿಂದ ಗಿಜಗುಟ್ಟುವ ಜಯನಗರ ಕಾಂಪ್ಲೆಕ್ಸ್‌ ಇವತ್ತು ಸಂಪಾದಿಸುತ್ತಿರುವ ದುಡ್ಡು , ಜುಜೂಬಿ ಇಲೆಕ್ಟ್ರಿಕ್‌ ಬಿಲ್‌ ಕಟ್ಟುವುದಕ್ಕೇ ಸಾಕಾಗುವುದಿಲ್ಲ . ಅಂದಮೇಲೆ, ಕ್ಯಾರೇ ಎನ್ನುವುವರಿಲ್ಲದ ರಾಜಾಜಿನಗರ ಕಾಂಪ್ಲೆಕ್ಸ್‌ನಿಂದ ಇನ್ನೇನು ಸಂಪಾದನೆ ಆದೀತು ? ಅಲ್ಲದೆ, ಇತ್ತೀಚೆಗೆ ಅಪಾರ ಹಣ ವೆಚ್ಚ ಮಾಡಿ ನವೀಕರಿಸಿದ ಸಿಟಿ ಮಾರ್ಕೆಟ್‌ ಮತ್ತು ಮಡಿವಾಳ ಮಾರ್ಕೆಟ್‌ನಿಂದ ಬರುವ ಆದಾಯ ಅಷ್ಟಕಷ್ಟೆ.

ಅದಕ್ಕೋಸ್ಕರವೇ ಪಾಲಿಕೆ ಇವತ್ತು ಮನೆ-ಮಳಿಗೆ-ಮಾಳಿಗೆ ಮಾರಾಟ ಮಾಡುವುದಾಗಿ ಡಂಗುರ ಹೊರಡಿಸಿದೆ. ಅದು ಮಾರಾಟಕ್ಕಿಟ್ಟಿರುವ ಕಟ್ಟಡಗಳಲ್ಲಿ ಮಹಾತ್ಮ ಗಾಂಧೀ ರಸ್ತೆಯ ಪ್ರತಿಷ್ಠಿತ ಗಗನಚುಂಬಿ ಪಬ್ಲಿಕ್‌ ಯುಟಿಲಿಟಿ ಬಿಲ್ಡಿಂಗ್‌ ಎದ್ದು ಕಾಣುತ್ತಿದೆ.

ಬೆಂಗಳೂರಿನ ಈ ಬಾರಿಯ ಮೇಯರ್‌ ಹೆಸರು ರಮೇಶ್‌ ಅಂತ. ಬೆಂಗಳೂರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಅದನ್ನು ನಿಭಾಯಿಸಲು ಹೆಣಗುತ್ತಿರುವ ಪಾಲಿಕೆಯನ್ನು ಹೇಗಾದರೂ ಮಾಡಿ ಸಂಕಷ್ಟದಿಂದ ಪಾರುಮಾಡುವ ಪ್ಲಾನ್‌ ಅವರಿಗೆ ಹೊಳೆದಿದೆ. ರಮೇಶ್‌ ಹೇಳುತ್ತಾರೆ :

  • ಪಾಲಿಕೆಯ ಆಸ್ತಿ ಮಾರುವುದರಿಂದ ಎರಡು ರೀತಿಯ ಅನುಕೂಲ ಆಗುತ್ತದೆ. ಒಂದನೆಯದು ಏನಪ್ಪಾ ಅಂದರೆ ಪಾಲಿಕೆಗೆ ಏಕಾಏಕಿ ದೊಡ್ಡ ಗಂಟು ಸಿಗುತ್ತದೆ. ಕಟ್ಟಡಗಳನ್ನು ಯಾರಾದರೂ ಖರೀದಿಸಲಿ, ಅವರು ಆಸ್ತಿ ತೆರಿಗೆ ಕಟ್ಟಲೇ ಬೇಕಲ್ಲ ! ಆ ದುಡ್ಡೂ ಪಾಲಿಕೆಯ ಜೇಬಿಗೇ ಬಂದು ಬೀಳುತ್ತದೆ.
  • ಮಾರಾಟ ಮಾಡುವುದಕ್ಕೆ ಇನ್ನೊಂದು ಕಾರಣ ಎಂದರೆ, ಸದ್ಯ ಇರುವ ಬಾಡಿಗೆ ದರ ಏರಿಸುವುದು ಕಷ್ಟ. ಜಾಸ್ತಿ ಕೊಡಿ ಎಂದು ಕೇಳಿದರೆ ವ್ಯಾಪಾರಸ್ಥರು ತಿರುಗಿ ಬೀಳುತ್ತಾರೆ.
  • ( 20 ಬೈ 20 ಜಾಗವನ್ನು ಹಿಡಕೊಂಡಿರುವ ವ್ಯಾಪಾರಸ್ಥರು ಈಗಲೂ 100 ರೂಪಾಯಿ ಬಾಡಿಗೆ ಕೊಡುತ್ತಿದ್ದಾರೆ! ಅಂಥವರನ್ನು ಹೊರಹಾಕುವುದು ಪಾಲಿಕೆಗೆ ಕಷ್ಟ . ಯಾಕೆಂದರೆ ಅದೊಂದು ಮಾಫಿಯಾ)
  • ಬೆಂಗಳೂರಿನಲ್ಲಿ ಒಟ್ಟು 4000 ಕಿಲೋಮೀಟರ್‌ಗಳಷ್ಟು ಉದ್ದದ ರಸ್ತೆಯಿದೆ. ಅದರ ಕೆನ್ನೆತುಂಬಾ ಗುಳಿ ಬಿದ್ದಿವೆ. ಅದನ್ನೆಲ್ಲ ರಿಪೇರಿ ಮಾಡಿ ಸಾರ್ವಜನಿಕರ ಜೀವನ ಮಟ್ಟವನ್ನು ಸುಧಾರಿಸುವ ಉದ್ದೇಶ ಮೇಯರ್‌ ರಮೇಶ್‌ ಅವರಿಗಿದೆ. ಅದಕ್ಕೆ ದುಡ್ಡು ಬೇಕು. ನಾವಾದರೂ ಎಷ್ಟೂ ಅಂತ ಸಾಲ ಮಾಡಿ ಸಾರ್ವಜನಿಕ ಸೇವೆ ಮಾಡುವುದು ? ಕಾರಣ, ಕಟ್ಟಡ ಮಾರಾಟಕ್ಕಿಟ್ಟಿದ್ದೇವೆ, ತೊಗೋತೀರಾ? ಅಂತ ಕೇಳುತ್ತಿದ್ದಾರೆ.
***

ಸರಕಾರಿ ಸ್ವಾಮ್ಯದ ಆಸ್ತಿ ಪಾಸ್ತಿಯ ಹಣೆಬರಹ ಇವತ್ತು ಹೀಗಿದೆ. ಬೆಂಗಳೂರಿನಲ್ಲಿ ಖಾಸಗಿಯವರು ನಿರ್ಮಿಸಿಕೊಂಡ ಸಾವಿರಕ್ಕೂ ಹೆಚ್ಚು ಪಟ್ಟು ಶಾಪಿಂಗ್‌ ಕಾಂಪ್ಲೆಕ್ಸ್‌ ಗಳಲ್ಲಿ ವ್ಯಾಪಾರ ವಹಿವಾಟು ಮಸ್ತಾಗಿ ನಡೆಯುತ್ತಿವೆ. ಯಾಕೆ ಹೀಗಾಗುತ್ತದೆ?

ಓಬಿರಾಯನ ಕಾಲದ ಕಾನೂನುಗಳು, ನೌಕರಶಾಹಿಯ ಜಡತ್ವ, ಲಂಚ-ರುಷವತ್ತು ತಾಂಡವವಾಡುವುದರಿಂದ ಸರಕಾರಿ ಒಡೆತನದ ಬಿಸಿನೆಸ್‌ ಸೊಂಟ ಮುರಕೊಂಡು ಬಿದ್ದಿದೆ. ಇದೇ ಕಾರಣದಿಂದಾಗಿ ಖಾಸಗಿ ವಲಯ ಬೆಂಗಳೂರಿನಾದ್ಯಂತ, ದೇಶಾದ್ಯಂತ, ವಿಶ್ವದಾದ್ಯಂತ ಪ್ರಬಲವಾಗಿದೆ. ಇದು ನಮ್ಮ ಮೇಯರ್‌ಗೆ ಗೊತ್ತಿದೆ . ಆದರೆ ಒಪ್ಪಿಕೊಳ್ಳಲು ಅವರಿಗೆ ಮನಸ್ಸಿಲ್ಲ. ಓ...ಮನಸೇ..!

Thank you for choosing Thatskannada.com
[email protected]


ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X