• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎಸ್ಕೆ. ಶಾಮಸುಂದರ

By Staff
|

‘ಅಕ್ಕ’ ಅಧ್ಯಕ್ಷ ಅಮರನಾಥಗೌಡರೀಗ ಸಮಾಧಾನಿ, ಸುಖಿ ಹಾಗೂ ತೃಪ್ತ . ಸಮಾಧಾನ ಹಾಗೂ ಸುಖ ಋಣ ಸಂದಾಯದ ಕುರಿತಾದದ್ದು ; ತೃಪ್ತಿ ಫ್ಲಾರಿಡಾದ ‘ಅಕ್ಕ’ ವಿಶ್ವ ಕನ್ನಡ ಸಮ್ಮೇಳನಕ್ಕೆ ವ್ಯಕ್ತವಾಗುತ್ತಿರುವ ಉತ್ಸಾಹದ ಪ್ರತಿಕ್ರಿಯೆಯಿಂದಾಗಿ.

S.K.Shamasundara, Editorಎಸ್ಕೆ. ಶಾಮಸುಂದರ

An exclusive interview with AKKA President Amarnath Gowda‘ಅಕ್ಕ’ ಋಣಭಾರ ಇಳಿಸಿಕೊಳ್ಳಲು ಮುಂದಾಗಿದ್ದಾಳೆ !

ರಸಋಷಿ ಕುವೆಂಪು ಅವರ ಜನ್ಮಶತಮಾನೋತ್ಸವ ಸಂದರ್ಭದಲ್ಲಿ - ಕವಿಗೆ, ಕವಿಯ ಕೃತಿಗೆ ಹಾಗೂ ಕನ್ನಡ ವಿಶ್ವವಿದ್ಯಾಲಯಕ್ಕೆ ತನ್ನಿಂದ ಸಲ್ಲಬೇಕಾದ ಗೌರವ ಸಂದಾಯಕ್ಕೆ ‘ಅಕ್ಕ’ ಸಿದ್ಧಳಾಗಿದ್ದಾಳೆ.

ಫೆ.19ರ ಗುರುವಾರ ಸಂಜೆ www.thatskannada.com ನೊಂದಿಗೆ ಮಾತನಾಡಿದ ‘ಉತ್ತರ ಅಮೆರಿಕಾ ಕನ್ನಡ ಕೂಟಗಳ ಆಗರ’ (ಅಕ್ಕ)ದ ಅಧ್ಯಕ್ಷ ಅಮರನಾಥ್‌ಗೌಡರ ಮುಖದಲ್ಲಿ ಋಣ ಸಂದಾಯದ ನಿರುಮ್ಮಳ ತೃಪ್ತಿ ಹಾಗೂ ಸುಖ ಎದ್ದುಕಾಣುತ್ತಿತ್ತು . ಅದು ಎಂದಿದ್ದರೂ ಸಲ್ಲಲೇಬೇಕಾಗಿದ್ದ ಋಣ ಸಂದಾಯ, ಇಳಿಯಲೇಬೇಕಿದ್ದ ಭಾರ. ಋಣ ಸಂದಾಯಕ್ಕೆ ಸ್ವಲ್ಪ ತಡವಾಯಿತು ಎಂದು ಅಮರನಾಥ ಗೌಡರೂ ಒಪ್ಪಿಕೊಂಡರೆ. ಆದರೆ, ಸ್ವಲ್ಪ ತಡವಾಗಿಯಾದರೂ ಕವಿಗೆ ಹಾಗೂ ಕವಿಯ ಕೃತಿಗೆ ಗೌರವ ಸಂದಾಯವಾಗುತ್ತಿರುವ ಸಮಾಧಾನ ಅವರದು.

ಅಕ್ಕ ‘ಋಣ’ ಸಂದಾಯದ ಹಿನ್ನೆಲೆ ಹೀಗಿದೆ : ವಿಶ್ವಾಸಾರ್ಹತೆಯ ಕುರಿತು ಪ್ರಶ್ನೆಗಳೆದ್ದಿದ್ದು ಕುವೆಂಪು ಅವರ ಸಮಗ್ರ ಕಾವ್ಯದ ಎರಡು ಸಂಪುಟಗಳನ್ನು ಹಂಪಿಯ ಕನ್ನಡ ವಿವಿ ಪ್ರಕಟಿಸಿತ್ತು . ಈ ಬೃಹತ್‌ ಯೋಜನೆಯಲ್ಲಿ 10 ಲಕ್ಷ ರುಪಾಯಿಯನ್ನು ತಾನು ಭರಿಸುವುದಾಗಿ ‘ಅಕ್ಕ’ ಬಳಗ ಆಶ್ವಾಸನೆ ನೀಡಿತ್ತು . ಈ ಭರವಸೆ ನೆಚ್ಚಿಕೊಂಡ ಕನ್ನಡ ವಿವಿ ಕಾವ್ಯ ಸಂಪುಟಗಳನ್ನು ಪ್ರಕಟಿಸಿತು ; ಬರಬೇಕಾದ ದುಡ್ಡು ಮಾತ್ರ ಬರಲಿಲ್ಲ . ಈ ಸಂಬಂಧವಾಗಿ ಅಕ್ಕ ಮತ್ತು ಕನ್ನಡ ವಿವಿ ನಡುವೆ ಸಂವಹನದ ಕೊರತೆ ಉಂಟಾಗಿತ್ತು . ‘ಅಕ್ಕ’ ವಿಶ್ವಾಸಾರ್ಹತೆಯ ಕುರಿತು ಪ್ರಶ್ನೆಗಳೆದ್ದಿದ್ದು ಕೂಡ ಆಗಲೇ. ಈ ನಡುವೆ ‘ಅಕ್ಕ’ ಬಳಗದಲ್ಲಿ ಸಾಕಷ್ಟು ನೀರು ಹರಿದುಹೋಯಿತು !

ಹಳೆಯ ಘಟನೆಗಳೇನೇ ಇರಲಿ, ಸಂವಹನದ ಸಮಸ್ಯೆಗಳೇನೇ ಇರಲಿ, ಇನ್ನು ಮುಂದೆ ಇಂಥ ವೈಮನಸ್ಯ ಹಾಗೂ ಅಪಾರ್ಥಗಳು ಉಂಟಾಗಬಾರದು ಎನ್ನುವ ನಿಟ್ಟಿನಲ್ಲಿ ‘ಅಕ್ಕ’ ಈಗ ಮುಂದಡಿ ಇಡುತ್ತಿರುವುದಾಗಿ ಅಮರನಾಥಗೌಡ ಹೇಳಿದರು.

ಅಮರನಾಥಗೌಡರು ಹೇಳಿದ ಪ್ರಕಾರ -

  • ಕುವೆಂಪು ಸಮಗ್ರಕಾವ್ಯ ಸಂಪುಟಗಳ ಪ್ರಕಟಣೆಯ ಸಂಬಂಧ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ‘ಅಕ್ಕ’ ವತಿಯಿಂದ 7.5 ಲಕ್ಷ ರುಪಾಯಿ ಸಂದಾಯವಾಗಬೇಕಿದೆ.
  • ಡೆಟ್ರಾಯಿಟ್‌ ವಿಶ್ವ ಕನ್ನಡ ಸಮ್ಮೇಳನದ ಸ್ಮರಣ ಸಂಚಿಕೆಯ ಜಾಹಿರಾತುಗಳಿಂದ ಬರಬೇಕಿದ್ದ ಬಾಕಿಹಣ ಈಗ ಸಂಗ್ರಹವಾಗಿದೆ. ಈ ಹಣದ ಮೊತ್ತ 3.5 ಲಕ್ಷ ರುಪಾಯಿ. ಉಳಿದ ನಾಲ್ಕು ಲಕ್ಷ ರುಪಾಯಿಗಳನ್ನು ಅಕ್ಕ ಬಳಗದ ಗೆಳೆಯರು ಭರಿಸಿದ್ದಾರೆ. 12 ಗೆಳೆಯರು ಸ್ವಯಂಪ್ರೇರಣೆಯಿಂದ ತಲಾ ಇಷ್ಟಿಷ್ಟು ಮೊತ್ತವನ್ನು ಕನ್ನಡದ ಕೆಲಸಕ್ಕೆ ನೀಡಿದ್ದಾರೆ. ಕನ್ನಡ ವಿವಿಗೆ ನೀಡಲು ಒಟ್ಟು 7.5 ಲಕ್ಷ ರು. ಸಿದ್ಧವಿದೆ.
ಕನ್ನಡ ವಿವಿಗೆ ಸಲ್ಲಬೇಕಾದ ಹಣವನ್ನು ನೀಡುವ ಸಂಬಂಧ ಅಮರನಾಥಗೌಡರು ಈಗಾಗಲೇ ಹಂಪಿ ವಿವಿ ಕುಲಪತಿ ಡಾ.ಎಚ್‌.ಜೆ.ಲಕ್ಕಪ್ಪಗೌಡ ಹಾಗೂ ಕುಲಸಚಿವ ಡಾ. ಕೆ.ವಿ. ನಾರಾಯಣ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಕೊಟ್ಟ ಮಾತಿಗೆ ತಪ್ಪದ ‘ಅಕ್ಕ’ ನಿಲುವಿನ ಕುರಿತು ಲಕ್ಕಪ್ಪಗೌಡ ಹಾಗೂ ನಾರಾಯಣ ಸಂತೋಷ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಕನ್ನಡಭವನದ ನಯನ ಸಭಾಂಗಣದಲ್ಲಿ ಫೆ.25ರ ಬುಧವಾರ ಒಂದು ಪುಟ್ಟ ಸಮಾರಂಭ ನಡೆಯಲಿದ್ದು , ಈ ಸಮಾರಂಭದಲ್ಲಿ ‘ಅಕ್ಕ’ ಬಳಗ ಕನ್ನಡ ವಿವಿಗೆ ಸಲ್ಲಬೇಕಾದ ಋಣ ಸಂದಾಯ ಮಾಡುತ್ತಿದೆ. ರಾಷ್ಟ್ರಕವಿ ಕುವೆಂಪು ಅವರ ಜನ್ಮ ಶತಮಾನೋತ್ಸವ ಸಂದರ್ಭದಲ್ಲಿ ಈ ಕಾರ್ಯಕ್ರಮ ನಡೆಯುತ್ತಿರುವುದು ವಿಶೇಷ.

ಅದೋ ನೋಡು ಫ್ಲಾರಿಡಾ !

ಋಣ ಸಂದಾಯದ ಸಮಾಧಾನದ ಮಾತುಗಳಿಂದ ಅಮರನಾಥ ಗೌಡರ ಮಾತುಗಳು ಹೊರಳಿದ್ದು ಫ್ಲಾರಿಡಾ ವಿಶ್ವಕನ್ನಡ ಸಮ್ಮೇಳನದತ್ತ . ಸಮ್ಮೇಳನ ನಡೆಯಲಿಕ್ಕಿನ್ನೂ ಆರು ತಿಂಗಳು ಬಾಕಿಯಿದೆ. ಆದರೆ ಸಮ್ಮೇಳನಕ್ಕೆ ಈಗಾಗಲೇ ಕನ್ನಡಿಗರ ಉತ್ಸಾಹದ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದರು ಅಮರನಾಥಗೌಡ.

ಫ್ಲಾರಿಡಾ ಸಮ್ಮೇಳನದಲ್ಲಿ ಸುಮಾರು 4 ಸಾವಿರ ಪ್ರತಿನಿಧಿಗಳಿಗೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಸಮ್ಮೇಳನದ ಸಿದ್ಧತೆಗಳು ಭರದಿಂದ ನಡೆಯುತ್ತಿವೆ. ಸಮ್ಮೇಳನ 6 ತಿಂಗಳು ದೂರವಿರುವಾಗಲೇ, 250ಕ್ಕೂ ಹೆಚ್ಚು ಮಂದಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡಿದ್ದಾರೆ. ಡೆಟ್ರಾಯಿಟ್‌ ಸಮ್ಮೇಳನಕ್ಕಿಂತಲೂ ಈ ಬಾರಿ ಹೆಚ್ಚು ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದೊಂದು ಅಭೂತಪೂರ್ವ ಸಮ್ಮೇಳನವಾಗುವುದು ಖಚಿತ ಎಂದು ಅಮರನಾಥಗೌಡ ಆತ್ಮವಿಶ್ವಾಸ ವ್ಯಕ್ತಪಡಿಸಿದರು. ಅವರ ವಿಶ್ವಾಸ ಹುಸಿಯಾಗದಿರಲಿ. ಕನ್ನಡದ ತೇರನ್ನು ಎಳೆಯಲು ಹೊರಟಿರುವ ಅಮೆರಿಕನ್ನಡಿಗರ ಒಗ್ಗಟ್ಟು ಮತ್ತೆ ಮುಕ್ಕಾಗದಿರಲಿ.

ಅಂದಹಾಗೆ, ನೀವು ಫ್ಲಾರಿಡಾಕ್ಕೆ ಹೊರಟಿರಾ ?

Thank you for choosing Thatskannada.com

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more