• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎಸ್ಕೆ. ಶಾಮಸುಂದರ

By Staff
|
ಅಮೇರಿಕನ್ನಡಿಗರನ್ನು ಬೇಕೂಫರನ್ನಾಗಿ ಮಾಡಲಾಗುತ್ತಿದೆಯೇ?
  • ಕೃಷ್ಣಕುಮಾರ್‌, ಕ್ಯಾಲಿಫೋರ್ನಿಯಾ

krishnakumarjg@yahoo.com

ಅಮೇರಿಕೆಯಲ್ಲಿನ ವಾಕ್‌ ಸ್ವಾತಂತ್ರ್ಯ ಎಷ್ಟು ಇದೆಯೋ ಅಷ್ಟೇ ಲೇಖನಾ ಸ್ವಾತಂತ್ರ್ಯವೂ ಅಷ್ಟೇ ಇದೆ. ಹಾಗೆಂದು ಇಲ್ಲಿ ಅದನ್ನು ದುರುಪಯೋಗ ಪಡಿಸಿಕೊಂಡು ಒಬ್ಬರ ಮೇಲೆ ಒಬ್ಬರು ಬರೆದಾಡುವ ಲೇಖನಗಳು ಚುನಾವಣೆಯ ಸಂದರ್ಭಗಳಲ್ಲಿ ಕಂಡು ಬಂದರೂ ತಮ್ಮಲ್ಲಿ ಪುರಾವೆ ಇಲ್ಲದೆ ಬರೆಯಲು ಹಿಂದೆ ಮುಂದೆ ನೋಡುತ್ತಾರೆ. ಯಾಕೆಂದರೆ ತಮ್ಮ ಮೇಲೆ ಮಾನನಷ್ಟ ಮೊಕದ್ದಮೆ ಎಲ್ಲಿ ಬೀಳುತ್ತದೋ ಎಂದು. ಆದರೆ ಇಲ್ಲಿ ನಮ್ಮ ಕನ್ನಡಿಗರ ಉದ್ಧಾರಕ್ಕೆಂದೇ ಹೊರಟ US-kannada ಎಂಬ ಒಂದು Yahoo Group, ಹೇಗೆ ಜನಗಳ ಮಾನನಷ್ಟ ಮಾಡುತ್ತಿದ್ದಾರೆ ನೋಡೋಣ.

ಪ್ರಾರಂಭದಲ್ಲಿ US-kannada ಎಲ್ಲರಿಗೂ E-Mail ಕಳುಹಿಸಿ ಒಪ್ಪಿಗೆ ಪಡೆದಿದ್ದು ಕನ್ನಡದ ಅಮೇರಿಕೆಯಲ್ಲಿನ ಒಂದು E-Mail Network ಗಾಗಿ. ಎಲ್ಲರೂ ತಿಳಿದಿದ್ದು ಕನ್ನಡದ ಕೆಲಸ ಎಂದೇ. ಅಂತಹ ಒಳ್ಳೆಯ ಕಾರ್ಯಕ್ಕೆ ಬೇಡ ಎನ್ನಬೇಕೆ ? ಎಲ್ಲರೂ ಒಪ್ಪಿಗೆ ಕೊಟ್ಟಾಯಿತು. ನಂತರದ ದಿನಗಳಲ್ಲಿ ನಡೆದದ್ದೇ ಬೇರೆ. ಈ ಜಾಲದ ಮೂಲಕ ‘ಅಕ್ಕ’ ಬಿಕ್ಕಟ್ಟಿಗೆ ಸಂಬಂಧಿಸಿದ ಇ-ಮೇಲ್‌ಗಳು ಎಲ್ಲೆಡೆ ಹರಿದಾಡಿದವು. ಇವರಿಗೆ ಇ-ಮೇಲ್‌ಗಳು ಎಲ್ಲಿಂದ ಸಿಕ್ಕವು? ಆಗ ಇದ್ದದ್ದು ಒಂದೇ ‘ಅಕ್ಕ’! ಅಂದರೆ, ಇದ್ದ ಒಂದೇ ‘ಅಕ್ಕ’ದ ಕೆಲವರು ಇ-ಮೇಲ್‌ಗಳನ್ನು ಯುಎಸ್‌-ಕನ್ನಡ ಜಾಲದ ಮೂಲಕ ಬಯಲು ಮಾಡಿ ವಿವಾದವನ್ನು ಪೋಷಿಸಿದರು.

US-kannada ಗುಂಪಿನ ಉದ್ದೇಶವೇನೆಂಬುದರ ಬಗ್ಗೆ ಆಗಾಗ್ಗೆ ತನ್ನ ಪತ್ರಗಳಲ್ಲಿ ಈ ರೀತಿ ತಿಳಿಸಿದೆ:

The purpose of the group is to bring the Kannadigas together to work for promoting, preserving the Kannada Culture and Heritage. It also provides an opportunity for Kannadigas of US to air their feelings. To some extent also functions as a platform for Kannadigas for a oublic debate.
All publications in this group are subject to the review and approval of the moderator of the group.

‘Letters received directly to USKannada@yahoogroups normaly are published in the order they are received provided they conform to the policy of the USKannada and the larger interest of the Kannadiga community. However some letters may be delayed based on the other priorities. Since only one or two letters are published on any day persons who have sent the letters to the group need to wait. If the purpose of the letter is already met with or normaly more than seven days old usually they are deleted. Letters written to the author usually directly goes to the addressee but will not be published untill otherwise decided by the editorial group. Editorial Board reserves the right to edit the letters. All letters are moderated. Thanks for your understanding.
The porpose of USkannada is to bring the Kannadigas together.

ಮೊದ ಮೊದಲು ಬರುತ್ತಿದ್ದ ಪತ್ರಗಳೆಲ್ಲಾ ಅಲ್ಲಿ ಇಲ್ಲಿ ನಡೆಯುವ ಕಾರ್ಯಕ್ರಮದ ಬಗ್ಗೆ ಇರುತ್ತಿದ್ದವು. ಬರ ಬರುತ್ತಾ ಬಂದಿತು ಅಕ್ಕಳ ಸುದ್ದಿ. ಬಿಸಿಬಿಸಿ ಸುದ್ದಿಗಳು. ಎಲ್ಲರಿಗೂ ಜ್ಯೂಸಿ ಸಮಾಚಾರಗಳು. ಯಾರಿಗೆ ಇಷ್ಟ ಇಲ್ಲ ಹೇಳಿ ಗಾಸಿಪ್‌ ಓದಲು. ಹಾಗೆಂದು ಎಷ್ಟು ದಿವಸ ಇದೇ ಸುದ್ದಿ ಓದಲು ಇಷ್ಟ . ಸುದ್ದಿಗಳೆಲ್ಲಾ ಹಳಸುತ್ತಾ ಬಂತು. ಸರಿ ಇನ್ನೇನಾದರೂ ಬೇಕಲ್ಲ ! ಈ ಇ-ಮೇಲ್‌ ಗುಂಪಿನ ವ್ಯವಸ್ಥಾಪಕರು ಹುಡುಕುತ್ತಿದ್ದುದು ಬರೀ ಜ್ಯೂಸಿ ಸಮಾಚಾರಗಳನ್ನೇ.

ಇವರ ಬರುವ ಪತ್ರಗಳನ್ನೆಲ್ಲಾ ಒಂದು ರಿಸರ್ಚ್‌ ಮಾಡಿ ಇಲ್ಲಿ ಲೆಕ್ಕ ಇಟ್ಟಿದ್ದೇನೆ. ನೀವೇ ನೋಡಿ:

2001ರಿಂದ ಇಲ್ಲಿಯವರೆವಿಗೆ ಬಂದ ಸಂಚಿಕೆಗಳ ಸಂಖ್ಯೆ: ಸುಮಾರು 500
ಇದರಲ್ಲಿ ಬಂದ ಪತ್ರಗಳ ಸಂಖ್ಯೆ : ಸುಮಾರು 800
AKKA ಗೆ ಸಂಬಂಧಪಟ್ಟ ಪತ್ರಗಳು : ಸುಮಾರು 350
Controversy ಪತ್ರಗಳು : ಸುಮಾರು 240
ಸ್ಥಳೀಯ ಸಮಾಚಾರ : ಸುಮಾರು 27
ವಿಷಯ ತಿಳಿದುಕೊಳ್ಳಲು ಕಳುಹಿಸಿದ ಪತ್ರಗಳು : ಸುಮಾರು 120
ಸಂಬಂಧವಲ್ಲದ ವಿಷಯಗಳು : ಸುಮಾರು 25
ಒಟ್ಟು : ಸುಮಾರು 800


ಮೇಲಿನ ಲೆಕ್ಕಾಚಾರ ನೋಡಿದರೆ ಏನನ್ನಿಸುತ್ತದೆ ? ಅಕ್ಕ ಇಲ್ಲ ಯಾವುದಾದರೂ ಕಾಲುಕೆರೆಯುವ ವಿಷಯದ ಪತ್ರಗಳೇ ಇಲ್ಲಿ ಜಾಸ್ತಿ. ಹಾಗೆಂದು ಅಲ್ಲಿಗೆ ಬೇರೇ ಇನ್ನೇನು ಕಾಗದಪತ್ರಗಳು ಬರುವುದಿಲ್ಲವೇ ಎನ್ನಬೇಡಿ. ಬರುತ್ತವೆ. ಆದರೆ ಈ ಮುಸುಕಿನ ಮಾಡರೇಟರ್‌ ಅದನ್ನು ಪ್ರಕಟಿಸುವುದಿಲ್ಲ ಅಷ್ಟೆ.

ವಿಷಯಗಳನ್ನು ಹೇಗೆ ತೆಗೆದುಕೊಳ್ಳುತ್ತಾರೆ? ಅದು ಅಕ್ಕ ವಿಷಯ ಆಗಿರಬೇಕು ಅಥವಾ ಏನಾದರೂ ಜಗಳದ ವಿಷಯವಿರಬೇಕು. ಇಲ್ಲಿ ಆ ಮುಸುಕಿನ ಮಾಡರೇಟರಿಗೆ ಜನಪ್ರಿಯರಾಗುವ ವಿಷಯ ಇರಬೇಕು. ಬೇರೊಬ್ಬರು ಜನಪ್ರಿಯ ಕೆಲಸ ಮಾಡಿದರೆ ಹಾಕುವ ಗೋಜಿಗೇ ಹೋಗುವುದಿಲ್ಲ. ಉದಾಹರಣೆಗೆ ಅರಿಜೋನಾನಲ್ಲಿನ ಡಾ।। ರಾಮಕೃಷ್ಣ ಅವರು ಮಾಡಿದಂತಹ ಮಾನವೀಯತೆಯ ಕೆಲಸ ನಾನು ಇದೇ ಗುಂಪಿಗೆ ಕಳುಹಿಸಿದೆ. ಅದರ ಪ್ರಕಟಣೆಯೇ ಆಗಲಿಲ್ಲ. ಅವರು ಮಾಡಿದ ಕೆಲಸ ಈ ರೀತಿ ಇದೆ. ಅವರು ಅಮೇರಿಕೆಯಿಂದ ಪ್ರತಿ ವರ್ಷ ಕೆಲವು ನರ್ಸ್‌ಗಳನ್ನು ಕರೆದುಕೊಂಡು ಸ್ವತಹ ಖರ್ಚಿನಿಂದ ಕರ್ನಾಟಕಕ್ಕೆ ಹೋಗಿ ಉಚಿತವಾಗಿ ಬಡವರಿಗೆ ಮೊಳಕಾಲಿನ ಚಿಕಿತ್ಸೆ ಮಾಡುತ್ತಾರೆ. ಪ್ರತಿವರ್ಷ 600 ಜನ ಬಡ ಅಮೇರಿಕನ್ನರಿಗೆ ಡಾ।। ರಾಮಕೃಷ್ಣ ದಂಪತಿಗಳು Thanks Giving Day ದಿವಸ ಉಚಿತ ಊಟ ಹಾಕುತ್ತಾರೆ. ಇಂತಹ ಕನ್ನಡದ ದಾನಿಗಳು ಬಹಳಷ್ಟು ಮಂದಿ ಅಮೇರಿಕೆಯಲ್ಲಿ ಇದ್ದಾರೆ. ಇಂತಹ ಸುದ್ದಿಗಳನ್ನೇಕೆ ಪ್ರಕಟಿಸುವುದಿಲ್ಲ. ಏಕೆಂದರೆ, ಇವುಗಳಲ್ಲಿ AKKA ವಿಚಾರವಿಲ್ಲ ! ಅಥವಾ ಅದರಲ್ಲಿ ಏನೂ ಕಾಲುಕೆರೆಯುವ ಕೆಲಸ ಇಲ್ಲವೆಂದೋ ಏನೋ ?

ಡಾ।।ರಾಮಕೃಷ್ಣರ ಒಳ್ಳೆಯ ಕೆಲಸದ ಬಗ್ಗೆ ಬರೆಯದವರು ಕುರುಬರ ಸಂಘದ ಬಗ್ಗೆ ಬರೆದರು. ಇದು ಕಾಲು ಕೆರೆಯುವ ಕೆಲಸವಲ್ಲವೇ?

ವಿವಾದಕ್ಕೆ ಎಡೆಕೊಡುವ ವಿಷಯಗಳನ್ನೇ ತೆಗೆದುಕೊಳ್ಳುವುದು ಯುಎಸ್‌-ಕನ್ನಡದ ಜಾಯಮಾನ. ಉದಾಹರಣೆಗೆ ಪ್ರಕಟಿಸಿದ ಕೆಲವು ಪತ್ರಗಳ ವಿಷಯಗಳನ್ನು ತೆಗೆದುಕೊಳ್ಳಿ. ಕುರುಬರ ಸಂಘ, ಕನ್ನಡದ Fontಗಳು, ವಿಷ್ವವಿದ್ಯಾಲಯದಲ್ಲಿ ಕನ್ನಡದ ಪೀಠ, ಇತ್ಯಾದಿ. ಕುರುಬರ ಸಂಘದ ವಿಷಯದ ಬಗ್ಗೆ ಭುಗಿಲೆದ್ದ ಈ ಗುಂಪು (ದಿನಾಂಕ 9/4/2002 ಮತ್ತು ದಿನಾಂಕ 10/20/2002) ಮಾಧ್ವ ಸಂಘದ ಬಗ್ಗೆ ಪ್ರಕಟಿಸಿದಾಗ ಏಕೆ ಚಕಾರ ಎತ್ತಲಿಲ್ಲ. ಹಾಗಾದರೆ ಈ ಮುಸುಕಿನ ಮಾಡರೇಟರ್‌ ಬ್ರಾಹ್ಮಣಪ್ರಿಯರೇ? ಕುರುಬ ದ್ವೇಷಿಗಳೇ?

ಅಂದಹಾಗೆ, ಈ ಮುಸುಕಿನ ಮಾಡರೇಟರ್‌ ಯಾರು? ತಿಳಿದುಕೊಳ್ಳುವುದು ಸುಲಭ. ನಾನು ಈ ಗುಂಪಿನ ಸದಸ್ಯ. ಅದರಂತೆ yahoo ಗುಂಪಿನ website ಗೆ ಹೋಗಿ ಅಲ್ಲಿರುವ message ಗಳನ್ನೆಲ್ಲಾ ನೋಡಿದೆ. ಅದರಲ್ಲಿ ಮುಂಚೆ ಒಬ್ಬ ವಿವಾದಾತ್ಮಕ ವ್ಯಕ್ತಿಯಿಂದ ಬರುತ್ತಿದ್ದ ಪತ್ರಗಳು ಇದ್ದವು. ಮಿಕ್ಕ ಪತ್ರಗಳೆಲ್ಲಾ indiavoice@yahoo.com ನಿಂದ ಬಂದಿವೆ. ಅದನ್ನು yahoo members site ಗೆ ಹೋಗಿ ನೋಡಿದರೆ ನಿಮಗೇ ಗೊತ್ತಾಗುತ್ತದೆ ಯಾರು ಈ ವ್ಯಕ್ತಿ ಎಂದು?

ಪತ್ರಿಕಾ ಸ್ವಾತಂತ್ರ್ಯವನ್ನಾಗಲಿ ವಾಕ್‌ಸ್ವಾತಂತ್ರ್ಯವನ್ನಾಗಲಿ ಒಬ್ಬರ ಒಳಿತಿಗೆ ಉಪಯೋಗಿಸಬೇಕೆ ವಿನಹ ಅನ್ಯಥಾ ಅವಹೇಳನಕ್ಕಾಗಲ್ಲ. ನನ್ನ ಮನವಿ ಇಷ್ಟೇ- ಕನ್ನಡಿಗರನ್ನು ಒಂದು ಮಾಡಿ. ಒಡೆಯುವ ಕೆಲಸ ಬೇಡ ; ಮನೆ ಹಾಳು ಕೆಲಸ ಬೇಡವೇ ಬೇಡ.

ಓ ಕನ್ನಡ ತಾಯೆ, ಮುಸುಕಿನ ಮಾಡರೇಟರ್‌ ಹಾಗೂ ಆ ರೀತಿಯ ಸಂತತಿಗೆ ಬುದ್ಧಿ ಕೊಡುವ ಮೂಲಕ ಕನ್ನಡ ಕುಲವ ಕಾಯೆ...

Thank you for choosing Thatskannada.com

shami.sk@greynium.com

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more