• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕವಿತೆ ಕಳಿಸೋದು ಹೇಗೆ ? ದಟ್ಸ್‌ಕನ್ನಡಕ್ಕೆ ನನ್ನ ಬರಹಗಳನ್ನು ಕಳುಹಿಸಬಹುದಾ ? ನಿಮ್ಮ ವಿಳಾಸ ಯಾವುದು? - ಈ ಪರಿಯ ಸಂದೇಹಗಳನ್ನು ಹೊತ್ತ ಇ-ಮೇಲ್‌ಗಳು ದಟ್ಸ್‌ಕನ್ನಡ ಕಚೇರಿಯನ್ನು ನಿತ್ಯ ಎಡತಾಕುತ್ತಲೇ ಇರುತ್ತವೆ. ಈ ಪ್ರಶ್ನೆಗಳಿಗೆ ಉತ್ತರಿಸುವ ಹಾಗೂ ನಮ್ಮ ಬಗ್ಗೆ ನಾವು ಬರೆದುಕೊಂಡ ಕೆಲವು ನಿವೇದನೆಗಳು ಇಲ್ಲಿವೆ, ಇವೆಲ್ಲ ನಮ್ಮ- ನಿಮ್ಮ ಪ್ರಯೋಜನಕ್ಕಾಗಿ :

By Staff
|

ಕವಿತೆ ಕಳಿಸೋದು ಹೇಗೆ ? ದಟ್ಸ್‌ಕನ್ನಡಕ್ಕೆ ನನ್ನ ಬರಹಗಳನ್ನು ಕಳುಹಿಸಬಹುದಾ ? ನಿಮ್ಮ ವಿಳಾಸ ಯಾವುದು? - ಈ ಪರಿಯ ಸಂದೇಹಗಳನ್ನು ಹೊತ್ತ ಇ-ಮೇಲ್‌ಗಳು ದಟ್ಸ್‌ಕನ್ನಡ ಕಚೇರಿಯನ್ನು ನಿತ್ಯ ಎಡತಾಕುತ್ತಲೇ ಇರುತ್ತವೆ. ಈ ಪ್ರಶ್ನೆಗಳಿಗೆ ಉತ್ತರಿಸುವ ಹಾಗೂ ನಮ್ಮ ಬಗ್ಗೆ ನಾವು ಬರೆದುಕೊಂಡ ಕೆಲವು ನಿವೇದನೆಗಳು ಇಲ್ಲಿವೆ, ಇವೆಲ್ಲ ನಮ್ಮ- ನಿಮ್ಮ ಪ್ರಯೋಜನಕ್ಕಾಗಿ :

About Thatskannadaಪ್ರಿಯ ಓದುಗ,

ನಮಸ್ಕಾರ

ಕಳೆದ ಐದು ವರ್ಷಗಳಿಂದ ಅಂತರ್‌ಜಾಲ ತಾಣದಲ್ಲಿ ಅನವರತ ಕಾರ್ಯನಿರತವಾಗಿರುವ ನಮ್ಮ ಆನ್‌ಲೈನ್‌ ಪತ್ರಿಕಾ ಬಳಗದ ವತಿಯಿಂದ ನಿಮಗೆಲ್ಲ ಹಾರ್ದಿಕ ಶುಭಕಾಮನೆಗಳು. ಕರ್ನಾಟಕದ ಬಗ್ಗೆ ಅದಮ್ಯ ಅಭಿಮಾನ, ಸಮಸ್ತ ಕನ್ನಡಿಗರಲ್ಲಿ ನಿಷ್ಕಳಂಕ ಪ್ರೀತಿ, ಕನ್ನಡ ಭಾಷೆ ಪರಂಪರೆ ಸಂಸ್ಕೃತಿಯ ಬಗ್ಗೆ ಸಕಾರಣ ಹೆಮ್ಮೆ, ನಾಡು ಮತ್ತು ನುಡಿಯ ಸರ್ವತೋಮುಖ ಏಳಿಗೆಗೆ ದುಡಿಯುವುದು ನಮ್ಮ ಪತ್ರಿಕೆಯ ಒಲವು ಹಾಗೂ ನಿಲುವು.

ನಮ್ಮ ಬಗ್ಗೆ ನಾವು ಬರೆದುಕೊಂಡ ಕೆಲವು ನಿವೇದನೆಗಳು ಇಲ್ಲಿವೆ, ಇವೆಲ್ಲ ನಮ್ಮ-ನಿಮ್ಮ ಪ್ರಯೋಜನಕ್ಕಾಗಿ:

ನಮ್ಮ ವಿಳಾಸ :

ThatsKannada

17/1, Shantishree Industrial Complex, 5th floor

Rupena Agrahara, Hosur Road,

Bangalore, 560068, India.

Telephone : 91-80-25180800

Fax : 91-80-25180801

ಕನ್ನಡ ಕುಲಬಾಂಧವರೆಲ್ಲರನ್ನೂ ತನ್ನೊಳಗೊಂದಾಗಿ ಮಾಡಿಕೊಳ್ಳುವ ಇನ್ನೊಬ್ಬ ಕನ್ನಡ ಸೇವಕನ ಮನೆಗೆ ನಿಮಗೆ ಹೃತ್ಪೂರ್ವಕ ಸ್ವಾಗತ. ನಮ್ಮ ಪತ್ರಿಕೆಯನ್ನು ಓದುವುದರಷ್ಟರಲ್ಲೇ ತೃಪ್ತಿ ಕಾಣದೆ ನೀವು ನಮ್ಮೊಂದಿಗೆ ಸಹವರ್ತಿಗಳಾಗಿ, ಸಹಭಾಗಿಗಳಾಗಿ ಜತೆಗೆ ಹೆಜ್ಜೆ ಹಾಕಬೇಕೆನ್ನುವುದು ನಿಮ್ಮಲ್ಲಿ ನಾವು ಮಾಡಿಕೊಳ್ಳುತ್ತಿರುವ ಮೊದಲ ಕೋರಿಕೆ. ಪ್ರೀತಿಪೂರ್ವಕ ಆಗ್ರಹ ಎಂದು ಭಾವಿಸಿದರೂ ಆದೀತು. ನೀವು ನಮಗೆ ಬರೆಯಬಹುದು, ಸಲಹೆ ಸೂಚನೆ ಕೊಡಬಹುದು. ಅಂತರ್‌ಜಾಲದಲ್ಲಿ ಕನ್ನಡ ಹೊಳೆ ಹರಿಯುವುದರಿಂದ ಏನು ಪ್ರಯೋಜನ ? ಕಣ್ಣು ಮುಚ್ಚಿ ಒಂದು ಕ್ಷಣ ಆಲೋಚಿಸಬಹುದು. ನಿಮ್ಮದೇ ಆಗಿರುವ ಈ ವಾಹಿನಿ ಸ್ವಾವಲಂಬಿಯಾಗಲು ನೀವೇನು ಮಾಡಬಹುದು ? ದೀಪವು ನಿನ್ನದೆ, ಗಾಳಿಯು ನಿನ್ನದೆ, ಆರದಿರಲಿ ಬೆಳಕು.

ನೀವು ನಮ್ಮ ಪತ್ರಿಕೆಗೆ ಸುದ್ದಿ, ಲೇಖನ, ಕವನ, ಹರಟೆ, ಪ್ರವಾಸ ಕಥನ, ಸುಖ, ದುಖಃ...ಏನೆಲ್ಲ ಬರೆಯಬಹುದು. ನಿತ್ಯ ಒಂದಿಷ್ಟಾದರೂ ಕನ್ನಡದಲ್ಲಿ ಓದಬೇಕು. ಕನ್ನಡದಲ್ಲಿ ಬರೆಯಲು ಮರೆತವರು ಮತ್ತೆ ಕಲಿಯಬೇಕು. ಕೆಲವರಿಗೆ ‘ಬರೆಯಲು ಆಸೆ. ಆದರೆ, ತಪ್ಪಾಗಿ ಬರೆದುಬಿಟ್ಟರೆ’ ಎಂಬ ಅಂಜಿಕೆ ಇರುತ್ತದೆ. ಅಂಥ ಅಂಜಿಕೆ ಅಥವಾ ಮುಜುಗರದಿಂದ ಈಚೆ ಬರಬೇಕು. ಬರಹಗಳು ನಿಮ್ಮ ಸ್ವಂತ ಅನುಭವಗಳ ಬೆಳಕಲ್ಲಿ ಸಮಾಜದ ಒಂದು ಮುಖದ ದರ್ಶನ ಮಾಡಿಸುವಂತಾಗಬೇಕು. ನಿಮ್ಮ ಅನಿಸಿಕೆಗಳನ್ನು ಓದಿದ ಯಾವೊಬ್ಬ ಕನ್ನಡಿಗನ ಕಣ್ಣಲ್ಲಿ ಒಂದು ಹನಿ ನೀರು ಒಸರಿದರೆ ಅಥವಾ ತುಟಿಯಂಚಿನಲ್ಲಿ ಮುಗುಳುನಗೆ ಮಿಂಚಿ ಮಾಯವಾದರೆ ನಿಮ್ಮ ಬರವಣಿಗೆ ಸಾರ್ಥಕ ಎಂದು ಭಾವಿಸಬೇಕು. ಬರಹಗಾರರ ಒಳನೋಟಗಳ ಸಾಲು ದೀಪ ಆಕಾಶ ಮಾರ್ಗದಲ್ಲಿ ಸಂಚರಿಸುತ್ತಿರಬೇಕು!

ನಿಮ್ಮ ಬರಹಗಳಲ್ಲಿ ಆಕಸ್ಮಾತ್‌ ತಲೆದೋರುವ ಕಾಗುಣಿತ ದೋಷ ತಿದ್ದುವುದು, ವಾಕ್ಯರಚನೆಯನ್ನು ಸುಸೂತ್ರ ಓದಿಗೆ ಅನುವುಗೊಳಿಸುವುದು ನಮ್ಮ ಕೆಲಸ. ಮುಖ್ಯವಾಗಿ ಯಾವುದೇ ಬರಹಕ್ಕೆ ಒಂದು ಆಶಯ ಇರುತ್ತದೆ, ಇರಬೇಕು. ಬರವಣಿಗೆಯ ಉದ್ದೇಶ ಪರಿಣಾಮಕಾರಿಯಾಗಿಸುವ ನಿಟ್ಟಿನಲ್ಲಿ ಲೇಖನಗಳಿಗೆ ‘ಧ್ವನಿ’ಯನ್ನು ಲೇಪಿಸುವ ಜವಾಬ್ದಾರಿಯೂ ನಮ್ಮ ಪಾಲಿಗಿರುತ್ತದೆ.

ನಿಮ್ಮ ಕನ್ನಡ ಬರಹ ಮತ್ತಿತರ ಪ್ರಕಟಣೆಯ ಸಾಮಗ್ರಿಯನ್ನು ಇ-ಮೇಲ್‌ ಮೂಲಕ ಕಳುಹಿಸಬಯಸುವವರು ಈ ಕೆಳಕಂಡ ವಿಳಾಸವನ್ನು ಬಳಸಿರಿ.

S.K. Shama Sundara, Editor

shami.sk@greynium.com

ಲೇಖಕರು ಶ್ರೀಲಿಪಿ ಅಥವಾ ಉಚಿತ ಕನ್ನಡ ತತ್ರಾಂಶ ಬರಹದಲ್ಲಿ ಬರೆದು e-mail attachment ಮೂಲಕ ರವಾನಿಸಬೇಕು. ಇಂಗ್ಲಿಷ್‌ನಲ್ಲಿ ಕಳಿಸಲಾಗುವ ಸಾಮಗ್ರಿಗಳನ್ನು ‘ಕಾರ್ಯಕ್ರಮ ಸೂಚಿ’ ಆಗಿದ್ದರೆ NRI Calendar ಅಂಕಣದಲ್ಲಿ ಪ್ರಕಟಿಸಲಾಗುವುದು. ನಿಮ್ಮ ಬರಹ ಕನ್ನಡದಲ್ಲಿದ್ದರೆ ಅಲ್ಲಲ್ಲಿ ಏನೇನು ಅಥವಾ ಸಾಹಿತ್ಯ-ಸಂಸ್ಕೃತಿ ವಿಭಾಗದಲ್ಲಿ ಪ್ರಕಟಿಸಲಾಗುವುದು. ವಿಶೇಷ ಸಂದರ್ಭಗಳಲ್ಲಿ ಇಂಗ್ಲಿಷ್‌ನಲ್ಲಿನ ಬರಹಗಳನ್ನು ಕನ್ನಡಕ್ಕೆ ಅನುವಾದ ಮಾಡಿ ಪ್ರಕಟಿಸಲಾಗುವುದು. ನಿಮ್ಮ ಬರಹಗಳ ಜತೆ ಬರವಣಿಗೆಗೆ ಒಪ್ಪುವ ಚಿತ್ರಗಳಲ್ಲದೆ, ನಿಮ್ಮ ( ಲೇಖಕ ಅಥವಾ ಲೇಖಕಿ) ಭಾವಚಿತ್ರ ಲಗತ್ತಿಸಲು ಮರೆಯಬಾರದು. ‘ನನಗೆ ಪ್ರಚಾರ ಬೇಡ’ ಎನ್ನುವ ಭಾವಚಿತ್ರ ಸಂಕೋಚಿಗಳು ತಮಗೆ ತೋಚಿದ ಹಾಗೆ ಮಾಡಬಹುದು!

ಕನ್ನಡ ದಿನಪತ್ರಿಕೆ ‘ವಿಜಯ ಕರ್ನಾಟಕ ’ ಮತ್ತು ‘ ಹಾಯ್‌! ಬೆಂಗಳೂರು’ ವಾರಪತ್ರಿಕೆಯ ಜತೆ ದಟ್ಸ್‌ಕನ್ನಡ.ಕಾಂ ವಿಷಯ ವಿನಿಮಯ ಮೈತ್ರಿಯನ್ನು ಹೊಂದಿರುತ್ತದೆ. ಈ ಒಡಂಬಡಿಕೆಯ ಅನ್ವಯ ನಮ್ಮಲ್ಲಿ ಪ್ರಕಟವಾದ ವಿದೇಶೀ ಕನ್ನಡಿಗರ ಆಯ್ದ ಲೇಖನಗಳು ವಿಜಯ ಕರ್ನಾಟಕ ಪತ್ರಿಕೆಯ ಭಾನುವಾರದ ಅಂಕಣ ‘ NRI ಕಾಲಂ ’ ನಲ್ಲಿ ಬೆಳಕು ಕಾಣುತ್ತದೆ. ಆಯ್ಕೆಯ ಸ್ವಾತಂತ್ರ್ಯ ಆಯಾ ಪತ್ರಿಕೆಯ ಸಂಪಾದಕರಿಗೆ ಬಿಟ್ಟದ್ದು.

ವಿಶೇಷ ಸೂಚನೆ : ನಮ್ಮ ಪತ್ರಿಕೆಗೆ ಬರೆಯ ಬಯಸುವವರು ತಮ್ಮ ಬರಹ ಕಾಣಿಕೆಗಳನ್ನು ದಟ್ಸ್‌ಕನ್ನಡ.ಕಾಂಗೆ ಮಾತ್ರ ಎಂದು ಪರಿಭಾವಿಸಿಕೊಂಡು ಅಂತೆಯೇ ವರ್ತಿಸುವುದು ಲೇಸು. ಹೀಗೆ ಯೋಚಿಸಿ, ಯೋಚಿಸಿದಂತೆ ಕಾರ್ಯೋನ್ಮುಖವಾಗುವ ಬರಹಗಾರರ ಸುದ್ದಿ-ಸಮಾಚಾರಗಳನ್ನು ಆದ್ಯತೆಯ ಮೇರೆಗೆ ನಮ್ಮಲ್ಲಿ ಪ್ರಕಟಿಸಲಾಗುವುದು. ದೂರದೃಷ್ಟಿಯ Informed Readers ಅನ್ನು ತಲುಪುವ ಉದ್ದೇಶದಿಂದ ನಿಮ್ಮ ಬರಹಗಳು ನಮ್ಮ ಪತ್ರಿಕೆಯಲ್ಲಿ ಬೆಳಗಲಿ ಎನ್ನುವುದು ನಮ್ಮ ಅಭಿಲಾಷೆ.

ನಮ್ಮ ಪೋರ್ಟ್‌ಲ್‌ನಲ್ಲಿ ಪ್ರಕಟವಾದ ಸುದ್ದಿ ಮಾಹಿತಿಗಳಿಗೆ ‘ ಓದುಗರ ಪತ್ರ/ ಪ್ರತಿಕ್ರಿಯೆ ’ ಬರೆಯುವವರುfeedback@thatskannada.com ವಿಳಾಸಕ್ಕೆ ಕಳಿಸಬೇಕು. ಮಾನ್ಯ ಓದುಗರು ತಮ್ಮ ಪ್ರತಿಕ್ರಿಯೆಗಳ ಜತೆಗೆ ಹೆಸರು, ಊರು ಬರೆಯಲು ಮರೆಯಬಾರದು. ಓದುಗರ ಪತ್ರಗಳು ಸಿಹಿ ಆಗಿರಲೀ, ಕಹಿ ಆಗಿರಲೀ ಅವುಗಳನ್ನು ಚಾಚೂ ತಪ್ಪದೆ ಪ್ರಕಟಿಸುವ ನಿಷ್ಠುರ ಧೈರ್ಯ ನಮ್ಮ ಪತ್ರಿಕೆಯ ಅನೇಕ ಹೆಮ್ಮೆಗಳಲ್ಲಿ ಒಂದಾಗಿರುತ್ತದೆ. ಪತ್ರಗಳನ್ನು ಓದುಗರ ಓಲೆ ಅಂಕಣದಲ್ಲಿ ಪ್ರಕಟಿಸಲಾಗುವುದು. ನಮ್ಮಲ್ಲಿ ಒಟ್ಟು ಎಂಟು ಅಂಕಣಗಳು ಪ್ರಕಟವಾಗುತ್ತವೆ. ಅಂಕಣ ಬರಹಗಳಿಗೆ ಬರುವ ಪತ್ರಗಳನ್ನು ಆಯಾ ಅಂಕಣಕಾರರ ಪುಟಗಳಲ್ಲಿ ಪ್ರಕಟಿಸಲಾಗುವುದು.

ಓದುಗರ ಪ್ರತಿಕ್ರಿಯೆ ಅಥವಾ ಅನಿಸಿಕೆಗಳು ಕೆಲವೊಮ್ಮೆ Independent Article ಮಾದರಿಯಲ್ಲಿ ಕಾಣಿಸಿಕೊಳ್ಳುತ್ತವೆ. ಇಂಥ ಅನಿಸಿಕೆಗಳು ಇಂಗ್ಲಿಷ್‌ನಲ್ಲಿದ್ದರೆ ಇಂಗ್ಲಿಷ್‌ನಲ್ಲಿ ಕನ್ನಡದಲ್ಲಿದ್ದರೆ ಕನ್ನಡದಲ್ಲಿ ಪ್ರಕಟಿಸಲಾಗುವುದು. ಈ ಬಗೆಯ ಪತ್ರಗಳು ಈ ಹಿಂದಿನ ಅನೇಕ ಸಂದರ್ಭಗಳಲ್ಲಿ ಚರ್ಚೆ, ಚಕ್ರಗೋಷ್ಠಿ, ವಾಗ್ವಾದ, ಮಾತಿನ ಮಂಟಪವಾಗಿ ಪರಿವರ್ತನೆಗೊಂಡು ವಿಷಯ ಗ್ರಹಣದ ವ್ಯಾಪ್ತಿ ಮತ್ತು ಉಪಯೋಗಗಳ ಗಡಿಯನ್ನು ವಿಸ್ತರಿಸಿದೆ. ವಿಶ್ವದಾದ್ಯಂತ ಹಂಚಿಹೋಗಿರುವ ಕನ್ನಡಿಗರಲ್ಲಿ ‘ನಾವು-ನಮ್ಮದು’ ಎಂಬ ಆರೋಗ್ಯಕರ ಭಾವನೆಗಳನ್ನು ಎಡಬಿಡದೆ ಮೀಟುತ್ತಿದೆ. ಅವಿಭಕ್ತ ಕುಟುಂಬ ಕೊಡುವ ಸಂತೋಷ , ಇದು.

ನಮ್ಮ ಪತ್ರಿಕೆ ಯಾವುದೇ ರಾಜಕೀಯ ಪಕ್ಷ, ಗುಂಪಿನ ಜತೆ ಗುರುತಿಸಿಕೊಂಡಿಲ್ಲ ಎನ್ನುವುದನ್ನು ಸ್ಪಷ್ಟಪಡಿಸುತ್ತೇವೆ. ಕನ್ನಡ ಅಕ್ಷರಗಳ ಒಡನಾಟದಲ್ಲಿ ದೈನಂದಿನ ಬದುಕನ್ನು ಕಿರಿಕಿರಿ ಮುಕ್ತಗೊಳಿಸಲು ಸದಾ ಶ್ರಮಿಸುವುದು ನಮ್ಮ ಧ್ಯೇಯವಾಕ್ಯ. ಕನ್ನಡ ನಾಡಿನ ಭವ್ಯ ಇತಿಹಾಸ-ಪರಂಪರೆಯನ್ನು ಬೆನ್ನಿಗೆ ಕಟ್ಟಿಕೊಂಡು ಹೊಸ ಆಲೋಚನೆ, ಹೊಸ ವಿಚಾರಗಳತ್ತ ಹೊರಳುವುದು ನಮ್ಮ ಆಸೆ. ದಿನದಿನದ ಸುದ್ದಿ, ಮನರಂಜನೆಯ ಹೂರಣಗಳ ಜತೆಗೆ ಕರ್ನಾಟಕ ಮಣ್ಣಿನ ಮಕ್ಕಳ ಸಂತಸ-ಸಂಕಟಗಳಲ್ಲಿ ಭಾಗಿಯಾಗುತ್ತಾ, ಅವರ ಆಶೋತ್ತರಗಳಿಗೆ ನಿತ್ಯ ಸ್ಪಂದಿಸುವುದು ನಮ್ಮ ಪತ್ರಿಕೆಯ ಸಂಕಲ್ಪ.

ಜಾಹಿರಾತು

ಕನ್ನಡ ವಿಶ್ವಕ್ಕೊಂದು ಬೆಳಕಿಂಡಿ ThatsKannada ಪತ್ರಿಕೆಗೆ ನೀವು ಜಾಹಿರಾತು ಕೊಡಬಹುದು. ವಿಶ್ವದ ಮೂಲೆಮೂಲೆಗಳಲ್ಲಿ ನೆಲೆಸಿರುವ ಕನ್ನಡಿಗರ ಗಮನ ಸೆಳೆಯಲು ಆಸಕ್ತಿ ಇರುವವರಿಗೆ ನಮ್ಮ ಪತ್ರಿಕೆ ಜಾಹಿರಾತು ಮಾಧ್ಯಮದ ಮೂಲಕ ನೆರವಾಗಲು ಮುಂದಾಗುತ್ತದೆ.

ಆಸಕ್ತ ಓದುಗರು, ಸಂಘಸಂಸ್ಥೆಗಳು, ಕನ್ನಡ ಕೂಟಗಳು ಹೆಚ್ಚಿನ ವಿವರಗಳಿಗಾಗಿ ಈ ಕೆಳಕಂಡ ವಿಳಾಸಗಳಿಗೆ ಬರೆಯಿರಿ.

sriram.hebbar@greynium.com, shami.sk@greynium.com

ಕನ್ನಡಿಗರು ನಡೆಸುವ ಕಾರ್ಯಕ್ರಮ, ಕನ್ನಡ ಕಲೆ, ಸಾಹಿತ್ಯ, ಸಂಗೀತ, ನೃತ್ಯ ಮುಂತಾದ ಲಲಿತ ಕಲೆಗಳನ್ನು ಕಲಿಸುವ ಶಾಲೆಗಳು ತಮ್ಮ ಸಂಸ್ಥೆಯ ಕಾರ್ಯ ಚಟುವಟಿಕೆಗಳನ್ನು ಪ್ರಚಾರ ಮಾಡಬಹುದು. ಕನ್ನಡ ಕೂಟಗಳ ಸಂಕ್ಷಿಪ್ತ ಪರಿಚಯ, ಪದಾಧಿಕಾರಿಗಳ ವಿವರ, ಕಾಲಕಾಲಕ್ಕೆ ಕೂಟಗಳು ಹಮ್ಮಿಕೊಳ್ಳುವ ಸಾಂಸ್ಥಿಕ, ಧಾರ್ಮಿಕ, ಸಾಹಿತ್ಯಿಕ ಚಟುವಟಿಕೆಗಳನ್ನು ಜಗತ್ತಿನ ಮುಂದೆ ತೆರೆದಿಡಬಹುದು.

ಮಾರುವವರು ಮತ್ತು ಕೊಳ್ಳುವವರನ್ನು ಮುಖಾಮುಖಿಯಾಗಿಸುವ product promotion platform ಕಲ್ಪಿಸಿಕೊಡಲಾಗುವುದು. ಈ ಅಂಗಳದಿಂದ ನಿಮ್ಮ ಉದ್ದಿಮೆ ಮತ್ತು ವಹಿವಾಟಿಗೆ Tangible and Intangible benefit ಏಕಕಾಲಕ್ಕೆ ದೊರಕುವುದು. ರೇಟ್‌ ಕಾರ್ಡಿಗೆ ಬರೆಯಿರಿ.

ಖಾಸಗಿ ಜಾಹಿರಾತುಗಳನ್ನೂ ನಾವು ಸ್ವೀಕರಿಸುವೆವು. ನಿಮ್ಮ ಕುಟುಂಬ, ಗೆಳೆಯರ ಗುಂಪು ಇಷ್ಟಪಡುವ ಕೌಟುಂಬಿಕ ಮತ್ತು ಸ್ನೇಹಪರ ಕಾರ್ಯಕ್ರಮಗಳಿಗೆ ವೇದಿಕೆ ಕಲ್ಪಿಸಲಾಗುತ್ತದೆ. ‘ನಮಗೆ ಜಾಹಿರಾತಿನ ಅಗತ್ಯವಿಲ್ಲ , ಆದರೆ ನಮ್ಮ ಮೆಚ್ಚಿನ ಪತ್ರಿಕೆ ThatsKannada ’ ನ Business-Friendship-Gratitude ಅಂದರೆ, ‘ದಟ್ಸ್‌ ಕನ್ನಡಕ್ಕೆ ಸಮ್ಮಿಲನ’ ಉತ್ಸವದಲ್ಲಿ ಸ್ವಯಂಪ್ರೇರಿತರಾಗಿ ಭಾಗಿಯಾಗಲು ಇಷ್ಟಪಡುತ್ತೇವೆ ಎನ್ನುವವರು ‘ದಟ್ಸ್‌ಕನ್ನಡಕ್ಕೆ ಶುಭಾಶಯ’ ಜಾಹಿರಾತುಗಳನ್ನು ನೀಡಿ ಪರಸ್ಪರ ಸಂತೋಷಗಳನ್ನು ಇಮ್ಮಡಿಗೊಳಿಸಿಕೊಳ್ಳಬಹುದು.

ವಿವರಗಳಿಗೆ ಬರೆಯಿರಿ.

sriram.hebbar@greynium.com, shami.sk@greynium.com

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more