ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ತೀರ್ಥಹಳ್ಳಿ ಸುತ್ತಮುತ್ತ’ ಲೇಖನಕ್ಕೆ ಬಂದ ಪ್ರತಿಕ್ರಿಯೆಗಳು

By Staff
|
Google Oneindia Kannada News

‘ತೀರ್ಥಹಳ್ಳಿ ಸುತ್ತಮುತ್ತ’ ಲೇಖನಕ್ಕೆ ಬಂದ ಪ್ರತಿಕ್ರಿಯೆಗಳು
ಮಲೆನಾಡಿನ ಸೆರಗಲ್ಲಿರುವ ತೀರ್ಥಹಳ್ಳಿಯ ಸೊಬಗನ್ನುಕಂಡು ಹಿರಿಹಿರಿ ಹಿಗ್ಗಿದವರು!

ಆತ್ಮೀಯ ಸಂಪಿಗೆ,

ನಿಮ್ಮ ತೀರ್ಥಹಳ್ಳಿಯ ಬರಹ ಹೊಟ್ಟೆಕಿಚ್ಚು ಬರಿಸುವಂತಿದೆ. ಇಲ್ಲಿಯವರೆಗೆ ಆ ಸೊಬಗನ್ನು ಸವಿಯಲಾಗಿಲ್ಲ. ಅಲ್ಲಿಗೆ ಹೋಗುವ ತವಕ ಹುಟ್ಟಿಸುವಂತಿದೆ ನಿಮ್ಮ ಲೇಖನ.

- ಪ್ರಸಾದ ನಾಯಿಕ, ಬೆಂಗಳೂರು

*

ಸಂಪಿಗೆಯವರೆ,

ನಿಮ್ಮ ಲೇಖನ ಅದ್ಭುತವಾಗಿದೆ. ನಮ್ಮ ಮಲೆನಾಡನ್ನು ತುಂಬ ಸೊಗಸಾಗಿ ವರ್ಣಿಸಿದ್ದೀರಿ. ಲೇಖನ ಓದಿದಾಗ ನಮ್ಮ ಊರೆಲ್ಲಾ ಸುತ್ತಾಡಿದ ಹಾಗೆ ಆಯ್ತು. ಕುಪ್ಪಳ್ಳಿ ನನಗೆ ಪವಿತ್ರ ಸ್ಥಳ. ಅದು ಸರಸ್ವತಿಯ ದೇಗುಲ. ನಮ್ಮ ಮನೆ ಕುಪ್ಪಳ್ಳಿಯಿಂದ ಆರು ಮೈಲು ದೂರದಲ್ಲಿ ಇದೆ. ಊರಿಗೆ ಹೋದಾಗಲೆಲ್ಲಾ ನಾನು ಒಂದು ಸಂಜೆ ಅಲ್ಲಿ ಕಳೆಯುತ್ತೇನೆ. ತೀರ್ಥಹಳ್ಳಿ ಸೊಬಗು ಸವಿಯಲು ಆಗಸ್ಟ್‌ - ಸೆಪ್ಟಂಬರ್‌ ತಿಂಗಳುಗಳು ತುಂಬ ಸೂಕ್ತ. ಆಗತಾನೆ ಮಳೆಗಾಲ ಮುಗಿದಿರುತ್ತೆ. ಎಲ್ಲಾ ಹಚ್ಚಹಸಿರಾಗಿ ಕಂಗೊಳಿಸುತ್ತಾ ಇರುತ್ತದೆ.

- ಅನಿಲ್‌ ಎಮ್‌. , ಬೆಂಗಳೂರು

*

ಸುಂದರ ಪ್ರವಾಸ ಕಥನ! ನಿಮ್ಮ ಲೇಖನದಲ್ಲಿ ನಮ್ಮೂರಿನ ಹೆಸರನ್ನು ನೋಡಿ ಖುಷಿಯಾಯಿತು.

- ತ್ರಿವೇಣಿ ಶ್ರೀನಿವಾಸರಾವ್‌, ಇಲಿನಾಯ್‌ು, ಅಮೆರಿಕ

*

ಸಂಪಿಗೆ ಶ್ರೀನಿಯವರೆ,

ನಿಮ್ಮ ಪ್ರವಾಸ ಕಥನದೊಂದಿಗೆ ನನ್ನನ್ನು ಮತ್ತೊಮ್ಮೆ ನಮ್ಮ ಊರೆಲ್ಲಾ ಸುತ್ತಿಸಿದ್ದಕ್ಕೆ ನಿಮಗೆ ಅನಂತ ವಂದನೆಗಳು. ನಾವು ಕೂಡ ತೀರ್ಥಹಳ್ಳಿಯವರೆ. ಆದರೆ ನಮ್ಮ ತಂದೆಯ ಕಾಲಕ್ಕೆ ನಮ್ಮ ಕುಟುಂಬ ಶಿವಮೊಗ್ಗಕ್ಕೆ ಬಂದು ನೆಲೆಸಿ ಅಗಿತ್ತು. ಆದರು ಯಾರಾದ್ರು ತೀರ್ಥಹಳ್ಳಿ ಅಂದರೆ ಸಾಕು ನನ್ನ ಕಿವಿ ನೆಟ್ಟಗೆ ಆಗುತ್ತೆ. ಸುಮಾರು ಸಲ ಹೋಗಿ ತುಂಗಾ ತೀರದ ಭೀಮನ ಕಟ್ಟೆಯಲ್ಲಿ ಕೂತು ಬಿಸಿಬೇಳೆ ಹುಳಿಯನ್ನ ಮೊಸರನ್ನ ಊಟ ಮಾಡಿದ ನೆನಪುಗಳು ಮನದಲ್ಲಿ ಹಚ್ಚಹಸಿರು.

ಫೋಟೋಸ್‌ ಅಂತೂ ತುಂಬ ಚೆನ್ನಾಗಿದೆ. ನಿಮ್ಮ ಪ್ರಯಾಣ ಮತ್ತು ಅಲ್ಲಿ ನೋಡಿದ ಜಾಗಗಳ ವರ್ಣನೆಯಂತೂ ತುಂಬ ಇಷ್ಟವಾಯಿತು. ಮತ್ತೊಮ್ಮೆ ಎಲ್ಲವನ್ನು ನೋಡಿದಂತೆ ಅನಿಸಿತು. ನಾನು ತೀರ್ಥಹಳ್ಳಿಗೆ ಹೋದಾಗ ಕುವೆಂಪು ಅವರ ಮನೆಯನ್ನ ಏನೂ ಮಾಡಿರಲಿಲ್ಲ. ತೋಟದೊಳಗಿನ ಹಳೆಯ ಮನೆ ಮಾತ್ರ ಇತ್ತು. ನಿಮ್ಮ ಲೇಖನ ಓದಿದ ಮೇಲೆ ಮತ್ತೊಮ್ಮೆ ಅಲ್ಲಿಗೆ ಹೋಗುವ ಆಸೆ. ಇವತ್ತಿಗೂ ನನ್ನ ಮನಸ್ಸು ಮಲೆನಾಡು ಎಂಬ ಒಂದು ಶಬ್ದಕ್ಕೆ ನವಿರಾಗುತ್ತೆ. ಕಣ್ಣು ತುಂಬುತ್ತದೆ.

ನೀವು ಕೆಮ್ಮಣ್ಣುಗುಂಡಿ ನೋಡಿದ್ದೀರ, ಅಲ್ಲಿಗೆ ಹೋಗುವಾಗಲೂ ತರೀಕೆರೆ ಮೇಲೆ ಹೋಗಬೇಕು. ಲಿಂಗದಹಳ್ಳಿ ಇಂದಾನೂ ಹೋಗಬಹುದು. ನನಗೆ ಈಗಲೂ ನೆನಪಿದೆ. ನಾನು ಭದ್ರಾವತಿ ಬಿಟ್ಟು ಬೆಂಗಳೂರಿಗೆ ಬರುವಾಗ ಆ ಜಾಗವನ್ನು ಬಿಡಲಾರದೆ ಅಳುತ್ತಾ ಬಂದಿದ್ದೆ. ಎಂ.ಕೆ.ಇಂದಿರಾ ಅವರ ಕಾದಂಬರಿಗಳು ನನಗೆ ಅದಕ್ಕಾಗಿಯೇ ತುಂಬ ಮೆಚ್ಚುಗೆ. ಅವರ ಕಥೆಯಲ್ಲಿ ಬರುವ ಪಾತ್ರಗಳೊಂದಿಗೆ ಆ ತಾಣಗಳಲ್ಲಿ ಓಡಾಡುವುದೆಂದರೆ ನನಗೆ ತುಂಬ ಇಷ್ಟ. ಒಟ್ಟಿನಲ್ಲಿ ನಿಮ್ಮ ಲೇಖನ ನನ್ನ ಹಳೇ ನೆನೆಪುಗಳನ್ನ ಬಡಿದೆಬ್ಬಿಸಿತು.

ಧನ್ಯವಾದಗಳು.

- ಮೀರಾ ಕೃಷ್ಣ, ಯೂ.ಎಸ್‌.ಎ

*

ಶ್ರೀನಿವಾಸ ಅವರೆ,

ನಿಮ್ಮ ಲೇಖನ ಓದಿ ತುಂಬ ಖುಶಿಯಾಯಿತು. ನಾನು ತೀರ್ಥಹಳ್ಳಿಯವನು. ಅಲ್ಲೇ ಹುಟ್ಟಿ ಬೆಳೆದು ನನ್ನ ಎರಡನೇ ಪಿ.ಯು ವರೆಗಿನ ವಿದ್ಯಾಭ್ಯಾಸ ಅಲ್ಲೇ ಮುಗಿಸಿದವನು. ನಿಮ್ಮ ಲೇಖನ, ಜೊತೆಗಿದ್ದ ಫೋಟೋಗಳು ನಮ್ಮೂರಿನ ನೆನಪುಗಳನ್ನು ಮತ್ತೊಮ್ಮೆ ಮನಸ್ಸಿಗೆ ತಂದಿಟ್ಟು ಮುದ ನೀಡಿದವು.

ತೀರ್ಥಹಳ್ಳಿಯ ಕಮಾನು ಸೇತುವೆ, ರಾಮೇಶ್ವರ ದೇವಸ್ಥಾನ, ಹೊಳೆಯ ದಂಡೆ, ರಾಮ ಮಂಟಪ,

ಆನಂದಗಿರಿ, ಸಿದ್ಧೇಶ್ವರ ಬೆಟ್ಟ ಇವುಗಳ ಬಗ್ಗೆಯೂ ಉಲ್ಲೇಖಿಸಿದ್ದರೆ ನಮ್ಮೂರಿನ ಸಮಗ್ರ ಚಿತ್ರಣ ನೀಡಿದಂತಾಗುತ್ತಿತ್ತು.

- ಶರತ್‌, ಮಿಚಿಗನ್‌, ಯೂ.ಎಸ್‌.ಎ

*

ಸಂಪಿಗೆಯವರೆ ಮಲೆನಾಡಿನ ಸೊಬಗನ್ನು ತುಂಬ ಚೆನ್ನಾಗಿ ವರ್ಣಿಸಿದ್ದೀರಿ.

ನಾನು ಪಕ್ಕಾ ಮಲೆನಾಡಿನವನಲ್ಲದಿದ್ದರೂ(ನನ್ನದು ಭದ್ರಾವತಿ) ಅದೇ ಜಿಲ್ಲೆಗೆ ಸೇರಿದ್ದರಿಂದ ಮಲೆನಾಡಿನ ಸೊಬಗನ್ನು ಬಹಳ ಸವಿದಿದ್ದೇನೆ. ಅದರಲ್ಲೂ ತೀರ್ಥಹಳ್ಳಿಗಂತೂ ಬಹಳ ಸಾರಿ ಭೇಟಿ ಕೊಟ್ಟಿದ್ದೇನೆ. ತುಂಬ ಸುಂದರವಾದ ಜಾಗ. ಅದರಲ್ಲೂ ತುಂಗಾ ನದಿಯ ಮಧ್ಯೆ ಇರುವ ಬಂಡೆಗಲ್ಲುಗಳ ಮೇಲೆ ಕುಳಿತು ಕೊಂಡು ಊಟ ಮಾಡಿದ್ದು ಮರೆಯಲಾಗುತ್ತಿಲ್ಲ. ತುಂಬ ಧನ್ಯವಾದಗಳು ಇದನ್ನೆಲ್ಲಾ ಮತ್ತೆ ಪರಿಚಯ ಮಾಡಿಕೊಟ್ಟಿದ್ದಕ್ಕೆ.

- ಬಾಲರಾಜ ಎಂ.ಎಲ್‌, ವಿಯೆನ್ನಾ, ಆಷ್ಟ್ರಿಯಾ

*

ಮಲೆನಾಡಿನ ಸೊಬಗಿನ ಸಿರಿ ಪರಿಚಯಿಸುವ ಸಂಪಿಗೆ ಶ್ರೀನಿವಾಸ್‌, ಲೇಖನ ಚೆನ್ನಾಗಿದೆ!

- ಶ್ರೀವತ್ಸ ಜೋಷಿ, ಯೂ.ಎಸ್‌.ಎ

*

ನಾನು ಪ್ರತಿ ವರ್ಷ ತೀರ್ಥಹಳ್ಳಿಗೆ ಹೋಗ್ತಾ ಇದ್ದೆ. ಅಲ್ಲಿ ಬಾಳೇಬೈಲಿನಲ್ಲಿ ನಮ್ಮ

ದೊಡ್ಡಮ್ಮನ ಮನೆ ಇದೆ. ಒಂದು ತಿಂಗಳು ಅಲ್ಲೇ ಠಿಕಾಣಿ. ಆದ್ರೂ ಸಂಪಿಗೆಯವರೆ ನೀವು ನೋಡಿದಷ್ಟು ಜಾಗ ನೋಡಿಲ್ಲ. ಪ್ರವಾಸ ಕಥನ ತುಂಬಾನೆ ಇಷ್ಟ ಆಯ್ತು. ಮತ್ತೆ ತೀರ್ಥಹಳ್ಳಿ ಸುತ್ತಾಡಿ ಬಂದ ಹಾಗಾಯ್ತು.

- ವಿಕ್ರಮ್‌ ಹತ್ವಾರ, ಯೂ.ಎಸ್‌.ಎ

*

ನಮಸ್ಕಾರ ಸಂಪಿಗೆಯವರಿಗೆ,

ನಿಮ್ಮ ಪ್ರವಾಸ ಕಥನವನ್ನು ಓದಿ ತುಂಬ ಸಂತೋಷವಾಯಿತು. ನಮ್ಮ ರಾಷ್ಟ್ರಕವಿಯ ತವರನ್ನು ನೋಡಬೇಕು ಎಂಬುದು ಬಹುದಿನದ ನನ್ನ ಕನಸು. ಕನ್ನಡ ಕಂಡ ಮೇರುಕವಿ ಶ್ರೇಷ್ಟರಾದ ಕುವೆಂಪುರವರು ಇಡೀ ಕನ್ನಡ ಜನತೆಯೇ ಹೆಮ್ಮೆ ಪಡುವ ರಸಋಷಿ. ಅವರ ತವರು ಪರಿಚಯಿಸಿದ್ದಕ್ಕೆ ಧನ್ಯವಾದ.

ನಿಮ್ಮ ಈ ಸುಂದರ ಲೇಖನಕ್ಕೆ ನನ್ನ ಅಭಿನಂದನೆಗಳು.

ವಂದನೆಗಳೊಂದಿಗೆ.

- ತಿಪ್ಪೇರುದ್ರ, ಬೆಂಗಳೂರು

*

ಲೇಖನ ಓದಿದೆ ತುಂಬ ಚೆನ್ನಾಗಿದೆ. ನಾನು ಸಹ ಈ ಸ್ಥಳಕ್ಕೆ ಹೋಗಬೇಕೆಂದಿದ್ದೇನೆ.

ಧನ್ಯವಾದಗಳು.

- ಶರತ್‌ ಕೆ, ಬೆಂಗಳೂರು

*

Hi Srinivas,

Thanks for taking me back on the journey through thirthahalli. My parents are a native of thirthahalli and hosanagara. I have spent many of my summer holidays with my relatives and cousins in these areas.

Despite so many visits, I have not yet been to Sringeri, Kuppalli or Kundadri. Maybe this time when I visit India in May, I will be able to tour these places.

Vishwatheja, Raleigh, NC, USA

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X