• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ಕರ್ನಾಟಕ ಸಂಗೀತಕ್ಕೆ ಕರ್ನಾಟಕದಲ್ಲಿ ಮನ್ನಣೆ ಸಿಗಲಿ’

By Staff
|

‘ಕರ್ನಾಟಕ ಸಂಗೀತಕ್ಕೆ ಕರ್ನಾಟಕದಲ್ಲಿ ಮನ್ನಣೆ ಸಿಗಲಿ’

ಸಂಪಿಗೆಯವರೆ,

ಬಹಳ ಒಳ್ಳೇಯ ಲೇಖನ ಬರೆದಿದ್ದೀರಿ. ಇದಕ್ಕೆ ಪೂರಕವಾಗಿ ಕೆಲವು ಮಾಹಿತಿ ಇಲ್ಲಿದೆ. http://baraha.com/anakru/udayavani_may_14_2006.pdf

- ಶೇಷಾದ್ರಿ ವಾಸು, ಯು.ಎಸ್‌

*

ಮಾನ್ಯ ಸಂಪಿಗೆ ಅವರಿಗೆ ನಮಸ್ಕಾರಗಳು,

ನಿಮ್ಮ ಲೇಖನವನ್ನು ಓದಿ ಬೇಜಾರಾಯಿತು. ಯಾಕೆಂದರೆ ಇದು ವಾಸ್ತವ ಜಗತ್ತಿನ ನಿಜ ಚಿತ್ರಣ. ಕಳೆದ ವಾರವಷ್ಟೇ ಸುಧಾ ರಘುನಾಥನ್‌ ಅವರ ಸಂಗೀತ ಕಚೇರಿಗೆ ಹೋಗಿದ್ದೆ. ಅವರು ಹೆಸರಾಂತ ಗಾಯಕಿಯೊಬ್ಬರಾದ ಎಂ.ಎಲ್‌.ವಸಂತಕುಮಾರಿ ಅವರೊಂದಿಗೆ ಸಹಗಾಯಕಿಯಾಗಿ ಬಹಳ ವರುಷ ಹಾಡಿದ್ದರು. ಪುರಂದರದಾಸ, ಕನಕದಾಸರ ಕೃತಿಗಳನ್ನು ಜನಪ್ರಿಯಗೊಳಿಸಿದವರೇ ವಸಂತಕುಮಾರಿಯವರೆಂದರೆ ತಪ್ಪಾಗಲಾರದು.

ಅವರ ಶಿಷ್ಯೆಯಾಗಿ ಸುಧಾರವರು ನಮ್ಮ ಕೋರಿಕೆಯ ಮೇರೆಗೆ ‘ನಾರಾಯಣ ನಿನ್ನ ನಾಮದ..’ ಪುರಂದರದಾಸರ ದೇವರನಾಮವನ್ನು ಕಚೇರಿಯ ಮೊದಲ ಭಾಗದಲ್ಲೇ ಅಚ್ಚುಕಟ್ಟಾಗಿ ಹಾಡಿ ನಮ್ಮನ್ನು ಸಂತೋಷ ಪಡಿಸಿದರು. ಆದರೆ ನಮ್ಮ ಕನ್ನಡದವರು ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಿ ನೆರೆದಿರಲಿಲ್ಲ. ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿದ್ದವರು ತಮಿಳಿನವರು.

ಆಕೆಯೂ ತಮಿಳಿನವರಾದ್ದರಿಂದ ತಮಿಳಿನ ಜ್ಯೇಷ್ಠ ರಚನೆಗಳನ್ನೇ ಹಾಡಿದರು. ತ್ಯಾಗರಾಜರು ಮತ್ತು ಮುತ್ತುಸ್ವಾಮಿ ದೀಕ್ಷಿತರ ಕೀರ್ತನೆಗಳನ್ನು ಸಹ ಹಾಡಿದರು. ಅದೇ ಆರ್‌.ಕೆ.ಶ್ರೀಕಂಠನ್‌ ಅವರು ಬಂದಾಗ ಹೆಚ್ಚು ಕನ್ನಡದ ದೇವರನಾಮಗಳನ್ನು, ಮೈಸೂರು ಮಹಾರಾಜರ ಕನ್ನಡ ಕೃತಿಗಳನ್ನು ಹಾಡಿದರು. ಜನ ಯಾವ ಭಾಷೆಯವರು, ಅವರ ಅಭಿರುಚಿಗಳನ್ನು ಗಮನದಲ್ಲಿಟ್ಟುಕೊಂಡು ಕಲಾವಿದರು ಹಾಡುತ್ತಾರೆ.

ಇನ್ನು ಕನ್ನಡದ ಜನ ಬಹಳ ಜುಗ್ಗರು. ಕಲಾವಿದರ ಗಾನಮುದ್ರಿಕೆಗಳನ್ನು ಕಂಡ ಕಂಡವರಿಂದ ಎರವಲು ತಂದು ತಮ್ಮ ಸಂಗ್ರಹಕ್ಕೆ ಕಾಪಿ ಮಾಡಿಕೊಳ್ಳುತ್ತಾರೆ. ಹಣಕೊಟ್ಟು ಕೊಳ್ಳುವುದು ಕಡಿಮೆ. ಹೀಗಾಗಿ ಮಾರುಕಟ್ಟೆಯಲ್ಲಿ ಉತ್ತಮವಾದ ದ್ವನಿಸುರುಳಿಗಳು ಸಾಕಷ್ಟು ನಮಗೆ ಲಭ್ಯವಿಲ್ಲ. ಕನ್ನಡದವರು ಕನ್ನಡವನ್ನು ಪ್ರ್ರೇತ್ಸಾಹಿಸುವುದಿಲ್ಲ ಎಂದು ತಿಳಿಸಲು ಇದೂ ಒಂದು ಉದಾಹರಣೆ. ನಮ್ಮ ಕಲೆ ಅಭಿವೃದ್ಧಿಯಾಗಲು ಪ್ರೋತ್ಸಾಹ ಅತಿ ಮುಖ್ಯವಾಗಿದೆ. ಇಲ್ಲದಿದ್ದಲ್ಲಿ ಕಲೆ ನಶಿಸಿ ಹೋಗುವ ಸಂಭವವಿದೆ.

ಧನ್ಯವಾದಗಳು

- ಅನುರಾಧ ಅರುಣ್‌, ಚಿಕಾಗೊ, ಅಮೆರಿಕ

*

ನಮಸ್ಕಾರ ಸಂಪಿಗೆ ಅವರೆ,

ನೀವು ಪ್ರತಿಸಾರಿ thatskannada.comನಲ್ಲಿ ಬರೆದಾಗಲೂ, ನಿಮಗೆ ಕರ್ನಾಟಕದ ಸಾಹಿತ್ಯ, ಇತಿಹಾಸ್‌, ಕಲೆಯು ಬಗ್ಗೆ ಇರುವ ಜ್ಞಾನ ಮತ್ತು ಅಭಿಮಾನ ನೋಡಿ ಬಹಳ ಹೆಮ್ಮೆ ಅನ್ನಿಸತ್ತೆ. ಇದನ್ನು ಹೀಗೆ ಮುಂದುವರೆಸಿ.

- ಪೃಥ್ವಿ, ಬೆಂಗಳೂರು

*

ಶ್ರೀನಿವಾಸ್‌,

ನಿಮ್ಮ ಲೇಖನ ಬಹಳ ಚೆನ್ನಾಗಿ ಮೂಡಿ ಬಂದಿದೆ. ನಾನು ಇದನ್ನೇ ಅನೇಕರ ಹತ್ತಿರ ಹೇಳಿದ್ದೆ. ಬಹಳ ಚೆನ್ನಾಗಿ ಬರೆದಿದ್ದೀರಿ. ನಮ್ಮ ಶಾಸ್ತ್ರೀಯ ಸಂಗೀತ ಪಂಡಿತರು, ಶ್ರೋತೃಗಳು ಹೇಗೆ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಾರೆ ನೋಡೋಣ.

- ವೆಂಕಟೇಶ್‌ ಪ್ರಸಾದ್‌, ಯು.ಎಸ್‌.ಎ

*

ಸಂಪಿಗೆ ಅವರೆ,

ನಿಮ್ಮ ಕರ್ನಾಟಕ ಸಂಗೀತ ಕುರಿತ ಲೇಖನ ಅತ್ಯುತ್ತಮವಾಗಿದೆ.

- ವಿಜಯ್‌ು ಆರ್‌.ಕೆ, ಮೈಸೂರು

*

ಇದು ಕಣ್ಣು ತೆರೆಸುವಂತಹ ಲೇಖನ. ನನಗೆ ಇಷ್ಟೊಂದು ವಿಷಯ ಗೊತ್ತಿರಲಿಲ್ಲ. ಕೆಲವರು ನನಗೆ ಕರ್ನಾಟಕ ಸಂಗೀತಕ್ಕೂ ಕನ್ನಡಕ್ಕೂ ಏನು ಸಂಬಂಧವೇ ಇಲ್ಲ ಅಂಥ ಹೇಳ್ತಾರೆ. ಮತ್ತೊಮ್ಮೆ ತುಂಬ ಧನ್ಯವಾದಗಳು

ಇಂಥ ಒಳ್ಳೆಯ ಲೇಖನ ಬರೆದಿದ್ದಕ್ಕೆ.

- ಪ್ರಕಾಶ್‌ ಆಚಾರ್ಯ, ಬೆಂಗಳೂರು

*

ಶ್ರೀನಿವಾಸ್‌,

ನಿಮ್ಮ ಕರ್ನಾಟಕ ಸಂಗೀತದ ಬಗೆಗಿನ ಲೇಖನ ಬಹಳ ಚೆನ್ನಾಗಿತ್ತು. ಇದು ನಮ್ಮ ಕರ್ನಾಟಕದಲ್ಲಿಕರ್ನಾಟಕ ಸಂಗೀತದ ಪರಿಸ್ಥಿತಿಗೆ ಕನ್ನಡಿ ಹಿಡಿದಂತೆ ಇತ್ತು. ಇದಕ್ಕೆ ನಮ್ಮ ಸರ್ಕಾರ ಮತ್ತು ಬೆಂಗಳೂರಿನ ಕೆಲವು ಸಂಗೀತ ಸಭೆಗಳೇ ಕಾರಣ. ಸರ್ಕಾರವು ಪುರಂದರದಾಸರು ಹಾಗು ಕನಕದಾಸರ ಹೆಸರಿನಲ್ಲಿ ಒಂದು ಪ್ರಶಸ್ತಿಯನ್ನು ಕೊಡುತ್ತಿದೆ ವಿನಹ ಇನ್ನೇನನ್ನೂ ಮಾಡಿಲ್ಲ. ಇನ್ನು ಶೇಷಾದ್ರಿಪುರ ಹಾಗು ಕೋಟೆ ಪ್ರೌಡಶಾಲೆ ಸಂಗೀತ ಸಭೆಗಳು ಬರಿ ಹೊರರಾಜ್ಯದ ಸಂಗೀತಗಾರರಿಗೆ ಅವಕಾಶ ಕೊಡುತ್ತದೆ ಹೊರತು ರಾಜ್ಯದ ಸಂಗೀತಗಾರರಿಗೆ ಕೇವಲ ತೋರಿಕೆಗೆ ಮಾತ್ರ ಅವಕಾಶ ಕೊಡುತ್ತದೆ.

ಆದರೆ ದಾಸರ ಕೃತಿಗಳನ್ನೇ ಹಾಡಿ ಕಚೇರಿ ಮಾಡುವ ಕೆಲವು ವಿದ್ವಾಂಸರು ಇದ್ದಾರೆ. ಉದಾಹರಣೆಗೆ ವಿದ್ಯಾಭೂಷಣ, ಎಂ.ಎಸ್‌.ಶೀಲಾ, ಸುಕನ್ಯ ಪ್ರಭಾಕರ್‌, ಆರ್‌.ಕೆ.ಶ್ರೀಕಂಠನ್‌, ಆರ್‌.ಕೆ.ಪದ್ಮನಾಭ, ಪಿ.ರಮಾ, ಆರ್‌. ಚಂದ್ರಿಕ ಇತ್ಯಾದಿ. ಇಂತಹವರು ಇನ್ನೂ ಹೆಚ್ಚು ಬರಬೇಕು. ಪುತ್ತೂರು ನರಸಿಂಹ ನಾಯಕ್‌ ಅವರು ದಾಸರ ಕೃತಿಗಳ ದ್ವನಿಸುರುಳಿ ಮೂಲಕ ಒಂದು ಹೊಸ ಕೇಳುಗ ಸಮೂಹವನ್ನೇ ಸೃಷ್ಟಿ ಮಾಡಿಕೊಂಡಿದ್ದಾರೆ.

ಇನ್ನು ಒಂದು ಸಂತೋಷದ ವಿಷಯವೆಂದರೆ ನನ್ನ ಪ್ರಕಾರ ಮೇಲೆ ಹೇಳಿದ ವಿದ್ವಾಂಸರ ಕಚೇರಿಗಳಿಗೆ ಬರುವಷ್ಟು ಜನಸಮೂಹ ಶುದ್ಧ ಶಾಸ್ತ್ರೀಯ ಸಂಗೀತ ಹೇಳುವ ವಿದ್ವಾಂಸರ ಕಚೇರಿಗಳಿಗೆ ಇರುವುದಿಲ್ಲ. ಇದರಿಂದ ನಾವು ತಿಳಿದುಕೊಳ್ಳಬೇಕಾಗಿದ್ದೇನೆಂದರೆ ಜನರು ತಮಗೆ ಅರ್ಥವಾಗುವ ಸಂಗೀತವನ್ನು ಇಷ್ಟ ಪಡುತ್ತಾರೆ ವಿನಹ ಬಹಳ ಶಾಸ್ತ್ರೀಯ ಆಗಿರುವ ಸಂಗೀತವನ್ನಲ್ಲ. ಆದ್ದರಿಂದಲೇ ವಿದ್ಯಾಭೂಷಣ ಅವರ ಕಚೇರಿಗೆ ಬರುವಷ್ಟು ಜನ ಯಾವುದೇ ದೊಡ್ಡ ವಿದ್ವಾಂಸರ ಕಚೇರಿಗೆ ಇರುವುದಿಲ್ಲ. ಅವರು ಸಾಹಿತ್ಯಕ್ಕೆ ಹೆಚ್ಚು ಒತ್ತು ಕೊಡುತ್ತಾರೆ. ದಾಸ ಸಾಹಿತ್ಯದ ವಿಷಯದಲ್ಲಿ ಇದು ಬಹಳ ಮುಖ್ಯವಾಗುತ್ತದೆ.

ನಿಮ್ಮಿಂದ ಹೀಗೆ ಇನ್ನೂ ಹೆಚ್ಚು ಹೆಚ್ಚು ವಿಚಾರಪೂರ್ಣ ಲೇಖನಗಳು ಹೊರಬರಲಿ.

- ರಾಜೇಶ್‌ ಆರ್‌, ಬೆಂಗಳೂರು

*

ಹೌದು ನಮ್ಮವರು ತ್ಯಾಗರಾಜರ ಆರಾಧನೆ ಮಾಡೋದ್ರಲ್ಲಿ ಹಿಂದೆ ಬೀಳುವುದಿಲ್ಲ. ಆದರೆ ಆಂದ್ರದಲ್ಲಿ/ತಮಿಳುನಾಡಿನಲ್ಲಿ ಯಾರು ಪುರಂದರದಾಸ/ಕನಕದಾಸರ ಆರಾಧನೆ ಮಾಡುತ್ತಾರೆ? ಪ್ರತಿ ಕಚೇರಿಯಲ್ಲೂ ಪಂಚರತ್ನ ಕೃತಿಗಳನ್ನು ಹಾಡುತ್ತಾರೆ. ಹಾಗೇ ಪುರಂದರದಾಸರ ಕೀರ್ತನೆಯನ್ನೇಕೆ ಹಾಡೊಲ್ಲ ಅರ್ಥ ಆಗೊಲ್ಲ.

- ಕಿರಣ್‌ ಕೆ, ಬೆಂಗಳೂರು

ಲೇಖಕರ ಉತ್ತರ : ತ್ಯಾಗರಾಜರ ಪಂಚರತ್ನ ಕೃತಿಗಳಂತೆ ಪುರಂದರದಾಸರ ನವರತ್ನಮಾಲಿಕೆಯೂ ಅಷ್ಟೇ ಸೊಗಸಾಗಿದೆ. ಟೈಮ್ಸ್‌ ಮ್ಯೂಸಿಕ್‌ನವರು ಇದರ ಧ್ವನಿಸುರುಳಿ ಮತ್ತು ಸಿ.ಡಿಗಳನ್ನು ಕೆಲವು ವರ್ಷಗಳ ಹಿಂದೆ ಮಾರುಕಟ್ಟೆಗೆ ಬಿಟ್ಟಿದ್ದರು. ಈಗಲೂ ಇದು ಅಂಗಡಿಗಳಲ್ಲಿ ಸಿಗುತ್ತದೆ. ಕೊಂಡು ಕೇಳಿ ಆನಂದಿಸಿ.

*

ಲೇಖನ ಚೆನ್ನಾಗಿದೆ. ದ್ವನಿಸುರುಳಿ ಬರೋದೇ ಇಲ್ವೋ ಅಥವಾ ಅಂಗಡಿಗಳಲ್ಲಿ ದ್ವನಿಸುರುಳಿ ಉಪಲಬ್ಧತೆ ಕಡಿಮೇನೋ ಗೊತ್ತಿಲ್ಲ.

- ಜಯಶ್ರೀ ಟಿ.ಎಸ್‌, ಯು.ಎಸ್‌.ಎ

*

Hello,

I think you might be interested in reading my 1-page article. "Why Karnataka in Karnataka Shaastriya Sangeeta?" You can use this to answer anybody who has any sort of doubts.

http://www.comp.nus.edu.sg/~sridhark/download/

Regards

- Sridhar

*

Hi,

This is an excellent piece of article, the author has rightly brought out the plight of musicians of Karnataka and Kannada devaranamas.

Thanks,

- Rajesh

*

Srinivas,

I read the article and its superb. My mother who is a professional classical singer liked it very much as well. She was very happy.

- Sudhi

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more