ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮರೆಯಾದ, ಮರೆಯಲಾಗದ ಗಾನಗಂಧರ್ವವರು!

By Staff
|
Google Oneindia Kannada News

ಮರೆಯಾದ, ಮರೆಯಲಾಗದ ಗಾನಗಂಧರ್ವವರು!
ಎಂದೂ ಮರೆಯಲಾಗದ ರಾಜನ್‌-ನಾಗೇಂದ್ರ ಹಾಗೂ ಭಾವಗಂಧರ್ವ ಮೈಸೂರು ಅನಂತಸ್ವಾಮಿಯವರ ಹಾಡುಗಳು ಮತ್ತೆ ಮತ್ತೆ ಗುನುಗುವಂತೆ ಮಾಡುತ್ತದೆ.ಈ ಮಹನೀಯರಿಗೂ ಇವರ ಬಗ್ಗೆ ಬರೆದವರಿಗೂ ಧನ್ಯವಾದಗಳ ಸುರಿಮಳೆ...

ಶ್ರೀಮಾನ್‌ ಸಂಪಿಗೆ ಶ್ರೀನಿವಾಸರಿಗೆ ಗೌರವಿತ ನಮಸ್ಕಾರಗಳು

ನಿಮ್ಮ ಅತಿ ಸೊಗಸಾದ ಲೇಖನ ‘ಭಾವಸಂಗಮ : ಕನ್ನಡ ಭಾವಗೀತೆಗಳ ಜನಪ್ರಿಯ ಸಂಗ್ರಹ’ ಓದಿ ನನಗೆ ಬಹಳ ಹಿತವಾದ ಮನೋಭಾವದುದ್ರೇಕ ಉಕ್ಕಿತು. ಮಾಹಾಕವಿಗಳ ಉನ್ನತ ಕೃತಿಗಳನ್ನು ಕುರಿತು ವರ್ಣಿಸಿರುವ ನಿಮ್ಮ ವಿಮರ್ಶೆಯ ಪ್ರಯತ್ನ, ನಿಮ್ಮ ಸೊಗಸಾದ ಸವಿಗನ್ನಡಭಾಷೆಯ ಸುಂದರ ರಚನೆ ನನಗೆ ವಿವಿಧ ರೀತಿಯಲ್ಲಿ ಒಪ್ಪಿ ಅಪ್ಪಿತು.

ಕೆಲವು ಜನರು, ಅತಿ ಸಾಮಾನ್ಯರಾದವರು ತೋರುವ ಮೆಚ್ಚುಗೆಯ ರೀತಿ ‘ಅದನ್ನು ನೋಡು, ಎಷ್ಟು ಚೆನ್ನಾಗಿದೆ. ಅದನ್ನು ಕೇಳು ಎಷ್ಟು ರಮ್ಯವಾಗಿದೆ!’ ಎಂದು ತಿಳಿಸುವ ಕೆಲವು ಮಾತುಗಳೆರಡು ಮಾತ್ರ. ಆಗವರಿಗೆ ತಮ್ಮ ಮನದಲ್ಲಿ ಉಂಟಾಗುವ ಸವಿಭಾವನೆಯನ್ನು ಸೂಕ್ತವಾದ ನುಡಿಗಳನ್ನು ಕೂಡಿಸಿ ವರ್ಣಿಸಲು ಅಶಕ್ತರಾಗುವರು. ಈಗ ನನಗೂ ಹಾಗನ್ನಿಸುತ್ತಿದೆ- ನಿಮ್ಮ ಬಲು ಭವ್ಯವಾದ ವಿಮರ್ಶೆಯ ಪ್ರಬಂಧವನ್ನು ವಾಚಿಸಿ. ನಿಮ್ಮ ಕನ್ನಡ ಓದಲು ಮೊದಲು ಕನ್ನಡ ಪ್ರೇಮಿಯಾದ ನನಗೆ ಮನವಿಡಿಸುವುದು. ನಮ್ಮ ಕನ್ನಡವನ್ನು ಸವಿಗನ್ನಡ, ಅಚ್ಚಕನ್ನಡ, ಸ್ವಚ್ಚಕನ್ನಡ, ಶುದ್ಧಕನ್ನಡ ಎಂದು ಮೊದಲಾಗಿ ಹೇಳುತ ಮೆಚ್ಚುಗೆಪಡಿಸಬೇಕೆನಿಸುವುದು.

ನಾನು ದಶವರುಷಗಳಿಂದಲೂ ಪರದೇಶಿಯಾಗಿ ನನ್ನ ಕನ್ನಡ ಮನದಿಂದಳಿಸಿ ಸವೆದಿದೆ. ಆದರೆ ನನಗೆ ಗೊತ್ತು. ಕನ್ನಡವು ಒಂದು ಮಾಹಾಭಾಷೆ! ಬಲು ಸುಂದರವಾದ ಭಾಷೆ! ಕನ್ನಡದಲ್ಲಿ ಇನ್ನೆಲ್ಲಾ ಭಾವನೆಗಳನ್ನು ಹೊರತರಬಹುದು. ಅದು ನನಗೆ ಅಸಾಧ್ಯ. ಸಾಮಾನ್ಯರಿಗಂತೂ ಬಲು ಕಷ್ಟ ಅಹುದು. ಆದರೆ ಕನ್ನಡನಾಡಿನಲ್ಲಿ ಹುಟ್ಟಿ ಬೆಳೆದವರಿಗೆ, ಪದವೀಧರರಿಗೆ, ಬರೆವ ಪಂಡಿತರಿಗೆ, ಕನ್ನಡ ಲೇಖಕರಿಗೆ, ಅಚ್ಚಕನ್ನಡಪ್ರೇಮವಿರಬೇಕು, ಶುದ್ಧಗನ್ನಡ ಸಾಧನೆಯ ತಾಕತ್ತಿರಬೇಕು. ಇಲ್ಲವೆಂದರೆ ಕನ್ನಡವು ಇನ್ನೂ ಹೆಚ್ಚಾಗಿ ಹಾಳಾಗುವುದು. ಕನ್ನಡಕ್ಕೆ ಈಗ ಆಗಿರುವ ಕುಂದು, ಅನಾಹುತ, ಕಿರುಕುಳ, ಹೀನಾಯತೆ. ಈಗಾಗಲೇ ತಡೆಯಲಾರದಷ್ಟು, ಸಹಿಸಲಾರದಷ್ಟು ನಡೆದಿದೆ. ಕನ್ನಡವ ಕನ್ನಡ ನಾಡಿನಲ್ಲಿ ಕಾಪಾಡಬೇಕು, ರಕ್ಷಿಸಬೇಕು, ಎಚ್ಚರಿಕೆುಂದ, ಪ್ರೇಮದಿಂದ ನೋಡಿಕೊಳ್ಳಬೇಕು.

ನೋಡಿ! ಇತರೆಲ್ಲಾ ದೇಶಗಳಲ್ಲಿ ತಮ್ಮ ತಮ್ಮ ಮಾತೃ ಭಾಷೆಯನ್ನು ಎಲ್ಲಾ ಕಡೆ ಎಲ್ಲಾ ವಿಧದಲ್ಲಿ ಬಳಸುತ್ತಾರೆ. ಆದರೆ ಕನ್ನಡದೇಶದಲ್ಲಿ ಮಾತ್ರ ಅದು ನಡೆಯುತ್ತಿಲ್ಲ.

ಅಂದರೆ ನಾನಿಲ್ಲಿ ಪರಭಾಷೆಯ ದ್ವೇಷಿಯಂತೆ ಚರ್ಚಿಸುತ್ತಿಲ್ಲ. ನನಗಂತೂ ಇತರ ಭಾಷೆಗಳ ಪ್ರೇಮವೂ ಬಹಳ ಹೆಚ್ಚಾಗಿದೆ. ಭಾರತದಲ್ಲೇ ನಾನಾಗ ಇತರ ಭಾಷೆಗಳ ಪಾಂಡಿತ್ಯ ಪಡೆಯಲಾಗಲಿಲ್ಲವೆಂದು ಈಗ ಕೊರಗುವ ಮನವಾಗುವುದು.

ನಿಮ್ಮ ವಿಶ್ವಾಸಿ

ಮಹೇಂದ್ರ, ಜರ್ಮನಿ

*

ನಮಸ್ಕಾರ ಶ್ರೀನಿವಾಸ್‌ ಅವರೆ,

ನಾನು ಸುನಿತಾ, ಮೈಸೂರು ಅನಂತಸ್ವಾಮಿ ಅವರ ಎರಡನೇ ಪುತ್ರಿ. ನಿಮ್ಮ ಲೇಖನ ಓದಿ ಬಹಳ ಸಂತೋಷವಾಯಿತು. ನಿಮ್ಮ ವಿಮರ್ಶೆ ಬಹಳ ಚೆನ್ನಾಗಿದೆ.

ಧನ್ಯವಾದಗಳೊಂದಿಗೆ,

ಸುನಿತಾ, ಮಿಚಿಗನ್‌, ಯು.ಎಸ್‌.ಎ

*

ಪ್ರೀತಿಯ ಶ್ರೀನಿವಾಸ್‌,

ಅತ್ಯಮೋಘವಾಗಿ ಬರೆದಿದ್ದೀರಿ. ನೀವು ಉಲ್ಲೇಖಿಸಿರುವ ಎಲ್ಲಾ ಕವನಗಳನ್ನು ಕೇಳಿದ್ದೀನಿ. ಸೊಗಸಾಗಿದೆ ಅನಂತಸ್ವಾಮಿಯವರ ಸಂಗೀತ. ಇನ್ನೊಮ್ಮೆ ಕೇಳುವ ಆಸೆ ಚಿಗುರಿಸಿ ಬಿಟ್ಟಿರಿ.

ರಮೇಶ, ಫ್ರಾನ್ಸ್‌

*

ಪ್ರಿಯ ಸಂಪಿಗೆಯವರೆ,

ನಿಮ್ಮ ಈ ವಾರದ ಲೇಖನ ಎಂದೂ ಮರೆಯಲಾರದ ಗಾನಗಂಧರ್ವ ‘ಮೈಸೂರು ಅನಂತಸ್ವಾಮಿಯವರ’ ಸಂಗೀತ ಸಂಯೋಜನೆಯ ಹಾಡುಗಳ ಮೆಲುಕು ಪುನಃ ನಮ್ಮನ್ನು ಯಾವುದೋ ಲೋಕಕ್ಕೆ ಕರೆದುಕೊಂಡು ಹೋಯಿತು. ಎದೆ ತುಂಬಿ ಹಾಡಿ, ಹಾಡುವುದು ಕರ್ಮ ಎಂದು ನಿರೂಪಿಸಿದ್ದಾರೆ ಅವರು. ಎಲ್ಲಾ ಪ್ರಮುಖ ಕನ್ನಡ ಕವಿಗಳ ಕವಿತೆಗಳನ್ನು ಜನ ಸಾಮಾನ್ಯರ ಬಳಿಗೆ ಕೊಂಡು ಹೋಗಿದ್ದಕ್ಕೆ ನಾವೆಲ್ಲಾ ಅನಂತಸ್ವಾಮಿಯವರಿಗೆ ಚಿರಋಣಿಗಳಾಗಿರಬೇಕು.

ನಿಮ್ಮ ಈ ನುಡಿನಮನಕ್ಕೆ ನಮ್ಮೆಲ್ಲರ ಪರವಾಗಿ ನಿಮಗೆ ತುಂಬು ಹೃದಯದ ಧನ್ಯವಾದಗಳು.

ನಿಮ್ಮವ

ತಿಪ್ಪೇರುದ್ರ, ಬೆಂಗಳೂರು

*

ಸಂಪಿಗೆ,

ನಿಮ್ಮ ಎಲ್ಲಾ ಲೇಖನಗಳು ತುಂಬಾ ಚೆನ್ನಾಗಿ ಮೂಡಿಬರುತ್ತಿವೆ. ನಿಜವಾಗ್ಲೂ ಇಷ್ಟು ಚೆನ್ನಾಗಿ ಲೇಖನಗಳನ್ನು ಬರೆಯುತ್ತೀರಾ ಎಂದು ಅಂದು ಕೊಂಡಿರಲಿಲ್ಲ ನಾನು.

ಸತೀಶ್‌ ಗೌಡ, ಬೆಂಗಳೂರು

*

ಶ್ರೀ ಸಂಪಿಗೆ ಶ್ರೀನಿವಾಸರೆ,

ದಟ್ಸ್‌ಕನ್ನಡ.ಕಾಮ್‌ನಲ್ಲಿ ಭಾವಸಂಗಮ ಧ್ವನಿಸುರುಳಿಯ ಬಗ್ಗೆ ಬರೆದು, ಅದನ್ನು ಕೊಳ್ಳಲೇ ಬೇಕು ಎಂಬ ಆಸೆ ಹುಟ್ಟಿಸಿದ್ದೀರಿ.

ತುಂಬಾ ಧನ್ಯವಾದಗಳು

ಮಲ್ಲಿಕಾರ್ಜುನ ಎಸ್‌.ಜೆ, ಇಂಟೆಲ್‌, ಬೆಂಗಳೂರು

*

ಸಹೃದಯ ಸ್ನೇಹಿತರೆ,

ರಾಜನ್‌-ನಾಗೇಂದ್ರ ಲೇಖನದಲ್ಲಿ ಎರಡು ತಪ್ಪುಗಳಿವೆ ಎಂದು ಸಹೃದಯ ಓದುಗರು ತಿಳಿಸಿಕೊಟ್ಟಿದ್ದಾರೆ.

1. ‘ಇದೇನ ಸಭ್ಯತೆ... ಇದೇನ ಸಂಸ್ಕೃತಿ’ ಗೀತೆ ಮೇಯರ್‌ ಮುತ್ತಣ್ಣ ಚಿತ್ರದ್ದು ಎಂದು ತಪ್ಪಾಗಿ ಬರೆದಿದ್ದೆ. ಆದರೆ ಇದು ಮಣ್ಣಿನ ಮಗ ಚಿತ್ರದ್ದು ಮತ್ತು ಇದಕ್ಕೆ ಸಂಗೀತ ನೀಡಿದವರು ವಿಜಯಭಾಸ್ಕರ್‌ ಅವರೆಂದು ಓದುಗರು ತಿಳಿಸಿಕೊಟ್ಟಿದ್ದಾರೆ.

2. ಪ್ರಣಯರಾಜ ಶ್ರೀನಾಥ ಅಭಿನಯದ ‘ಬೆಸುಗೆ’ ಚಿತ್ರಕ್ಕೆ ಸಂಗೀತ ನೀಡಿದವರು ದಿವಂಗತ ವಿಜಯಭಾಸ್ಕರ್‌ ಎಂದು ನಮ್ಮ ಓದುಗರು ತಿಳಿಸಿದ್ದಾರೆ. ‘ಬೆಸುಗೆ..ಬೆಸುಗೆ..’ ಹಾಡಿನ ಸಂಗೀತ ರಾಜನ್‌-ನಾಗೇಂದ್ರ ಶೈಲಿಯಲ್ಲಿ ಇರುವುದರಿಂದ ಸ್ವಲ್ಪ ಗೊಂದಲವಾಯಿತು.

(ಈ ಲೇಖನವನ್ನು ಓದಿ, ಪ್ರತಿಕ್ರಿಯಿಸಿ, ತಪ್ಪುಗಳನ್ನು ತಿಳಿಸಿ ಸರಿಪಡಿಸಿದ್ದಕ್ಕೆ ಓದುಗ ಮಿತ್ರರಿಗೆ ಆತ್ಮೀಯ ಧನ್ಯವಾದಗಳನ್ನು ಅರ್ಪಿಸುತ್ತೇನೆ. - ಸಂಪಿಗೆ ಶ್ರೀನಿವಾಸ)

*

ಸಂಪಿಗೆಯವರೆ,

ಬರೀ ಹಾಡಿನ ಸಾಲುಗಳಿಂದ ಕೂಡಿರುವ ನಿಮ್ಮ ಈ ಬಾರಿಯ ಅಂಕಣ ಇಷ್ಟವಾಯಿತು. ರಾಜನ್‌-ನಾಗೇಂದ್ರ ಚಿತ್ರಸಂಗೀತ ಕ್ಷೇತ್ರದಲ್ಲಿ ಮಹಾನ್‌ ಮೋಡಿ ಮಾಡಿದ ಜೋಡಿ! ಅವರು ಸಂಯೋಜಿಸಿರುವ ಮಧುರ ಗೀತೆಗಳ ದೊಡ್ಡದೊಂದು ಪಟ್ಟಿಯೇ ಇದೆ.

ಇಷ್ಟೊಂದು ಒಳ್ಳೆಯ ಹಾಡುಗಳನ್ನು ನೀಡಿದ್ದರೂ ಅವರು ನಮ್ಮಿಂದ ಪಡೆದಿರುವುದು ಮಾತ್ರ ಏನೂ ಇಲ್ಲ.

ದಿವಂಗತ ನಾಗೇಂದ್ರ ಅವರ ಕಷ್ಟದ ದಿನಗಳು, ಈಗಲೂ ಅವರ ಕುಟುಂಬ ಪಡುತ್ತಿರುವ ಬವಣೆ... ಎಲ್ಲಾ ನೆನಪಾಯಿತು!

ತ್ರಿವೇಣಿ, ಇಲಿನಾಯ್‌ು, ಅಮೆರಿಕಾ

*

ಸಂಪಿಗೆ ಶ್ರೀನಿವಾಸ್‌ ಅವರಿಗೆ ನಮಸ್ಕಾರಗಳು.

ನೀವು ರಾಜನ್‌-ನಾಗೇಂದ್ರ ಅವರ ಮೇಲೆ ಬರೆದ ಲೇಖನ ದಟ್ಸ್‌ಕನ್ನಡದಲ್ಲಿ ಓದಿದೆ. ತುಂಬಾ ಚೆನ್ನಾಗಿ ಬರೆದಿದ್ದೀರಿ. ಆದರೆ ನೀವು ಬರೆದಂತೆ ಶ್ರೀನಾಥ ಅಭಿನಯದ ‘ಬೆಸುಗೆ’ ಚಿತ್ರಕ್ಕೆ ಸಂಗೀತ ನಿರ್ದೇಶಿಸಿದವರು ಇವರಲ್ಲ ಬದಲು ‘ವಿಜಯಭಾಸ್ಕರ್‌’ ಅವರು.

ಮೀರಾ ಕೃಷ್ಣಮೂರ್ತಿ, ಯು.ಎಸ್‌

*

ಆತ್ಮೀಯ ಸಂಪಿಗೆ,

ರಾಜನ್‌-ನಾಗೇಂದ್ರ ಲೇಖನ ತುಂಬಾ ಚೆನ್ನಾಗಿ ಬಂದಿದೆ. ಗತಕಾಲದ ವೈಭವಕ್ಕೆ, ಹಳೇ ಹಾಡಿನ ಗುಂಗಿಗೆ ನನ್ನನ್ನು ಕರೆದೊಯ್ದಿರಿ.

ಪ್ರಸಾದ ನಾಯಿಕ, ಬೆಂಗಳೂರು

*

ನಮಸ್ಕಾರ ಸಂಪಿಗೆಯವರಿಗೆ,

ನಿಮ್ಮ ಈ ಲೇಖನವು ನಮ್ಮ ಒಲವಿನ ಸಂಗೀತ ನಿರ್ದೇಶಕರಾದ ರಾಜನ್‌-ನಾಗೇಂದ್ರರವರ ಸುಮಧುರ ಹಾಗೂ ಎಂದೂ ಮರೆಯಲಾರದ ಹಾಡುಗಳ ಬಗ್ಗೆ ನೀವು ಅತ್ಯುತ್ತಮವಾದ ವಿಷಯಪೂರಿತ ವಿಷಯಗಳನ್ನು ತಿಳಿಸುವುದರ ಮೂಲಕ ಪುನಃ ಮತ್ತೊಮ್ಮೆ ನಾವೆಲ್ಲಾ ಆ ದಿನಗಳ ನೆನಪಿಗೆ ಜಾರಿದೆವು. ನಮ್ಮ ಚಿತ್ರರಂಗ ಕಂಡ ಅಪರೂಪದ ಜೋಡಿ ರಾಜನ್‌-ನಾಗೇಂದ್ರರವರು. ನಮ್ಮ ಕನ್ನಡಿಗರ ಮನ ಸಂಗೀತದ ರಸದೂಟವನ್ನು ಚಿರಕಾಲ ನೆನಪಿನಲ್ಲಿ ಇಟ್ಟುಕೊಳ್ಳುವಂತ ಹಾಡುಗಳ ಸಾಲು ಸಾಲುಗಳನ್ನೇ ನೀಡಿ, ನಮ್ಮ ಕನ್ನಡಮ್ಮನ ಮಡಿಲನ್ನು ಮತ್ತಷ್ಟು ಶ್ರೀಮಂತಗೊಳಿಸಿದ್ದಾರೆ. ಅವರ ಬಗ್ಗೆ ನಿಮ್ಮ ಎಲ್ಲಾ ನುಡಿಗಳು ನಮ್ಮ ಮನವನ್ನು ಗೆದ್ದಿತು. ನಿಮಗೆ ನನ್ನ ತುಂಬು ಹೃದಯದ ಧನ್ಯವಾದಗಳು, ಈ ಲೇಖನದ ಮೂಲಕ ನಮಗೆಲ್ಲಾ ನೆನಪಿಸಿಕೊಟ್ಟಿದ್ದಕ್ಕೆ.

ತಿಪ್ಪೇರುದ್ರ, ಬೆಂಗಳೂರು

*

ನಮಸ್ಕಾರ ಶ್ರೀನಿಯವರಿಗೆ,

ರಾಜನ್‌-ನಾಗೇಂದ್ರ ಅವರ ಬಗೆಗಿನ ನಿಮ್ಮ ಲೇಖನ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ನಾನು ಅಣ್ಣಾವ್ರ ಅಭಿಮಾನಿಯಾಗಿ, ರಾಜನ್‌-ನಾಗೇಂದ್ರ ಅವರ ಹಾಡುಗಳನ್ನು ಕೇಳುತ್ತಾ ಬೆಳೆದವನು. ನಿಮ್ಮ ಎಲ್ಲಾ ಲೇಖನಗಳನ್ನು ನಾನು ತಪ್ಪದೇ ಓದುತ್ತೇನೆ. ನನಗೆ ಅತ್ಯಂತ ಖುಷಿ ಕೊಟ್ಟ ಲೇಖನ ಇದೆಂದು ಮನಸಾರೆ ಹೇಳಲು ಇಚ್ಚಿಸುತ್ತೇನೆ. ನಿಮ್ಮ ಕೆಲಸ ಹೀಗೆ ಯಶಸ್ವಿಯಾಗಿ ಸಾಗಲಿ.

ಧನ್ಯವಾದಗಳೊಂದಿಗೆ

ರಾಮ್‌ ಅಗರ, ಬೆಂಗಳೂರು

*

ಶ್ರೀನಿವಾಸರವರಿಗೆ ನಮಸ್ಕಾರ,

ನಿಮ್ಮ ರಾಜನ್‌-ನಾಗೇಂದ್ರ ಲೇಖನ ಬಲು ಸೊಗಸಾಗಿದೆ. ನಿಮ್ಮ ಎಲ್ಲಾ ಲೇಖನಗಳು, ಜಾಗೃತಿ ಹುಟ್ಟಿಸುವ ಅಂಕಿ-ಅಂಶಗಳು, ಸ್ಥಿತಿ-ಗತಿ ಎಲ್ಲವೂ ತಿಳಿದುಕೊಳ್ಳುವಂತೆ ಮಾಡುತ್ತವೆ, ಮಾಡುತ್ತಿವೆ. ಧನ್ಯವಾದಗಳು.

ನಿಮ್ಮ ಕಡೆಯಿಂದ ನಮ್ಮೆಲ್ಲರ ಕನ್ನಡ ತಾಯಿಯ ಸೇವೆ ಹೀಗೆ ಸಾಗಲಿ, ಬರೆಯುತ್ತಿರಿ. ನಾವು ಖಂಡಿತ ಓದುತ್ತೇವೆ, ಒಳ್ಳೆಯದನ್ನು ಅನುಸರಿಸುತ್ತೇವೆ, ಗ್ರಹಿಸುತ್ತೇವೆ.

ನಿಮ್ಮವನಾದ ಕರುನಾಡ ಗೆಳೆಯ
ಮಧುಕರ, ಕೊರಟಗೆರೆ

*

ನಮಸ್ಕಾರ ಸಂಪಿಗೆಯವರಿಗೆ,

ಉತ್ತಮವಾದ ಲೇಖನ. ಮಣ್ಣಿನ ಸೊಗಡು ಅವರು ನೀಡಿದ ಸಂಗೀತದಲ್ಲಿ ಇತ್ತು.

ಪ್ರವೀಣ್‌, ಊರು?

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X