• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಿಂದಿ ಸಿನಿಮಾದಿಂದ.. ಹುಣಸೂರುವರೆಗೆ..

By Super
|

ಹಿಂದಿ ಸಿನಿಮಾದಿಂದ.. ಹುಣಸೂರುವರೆಗೆ..

‘ಬಾಲಿವುಡ್‌ ಮತ್ತು ಕನ್ನಡ ಚಿತ್ರರಂಗ', ‘ಜನಪದ ಗೀತೆಗಳಲ್ಲಿ ನಾಡಿನ ಹಿರಿಮೆ', ‘ಹುಣಸೂರರು ಮತ್ತು ಭಕ್ತಕುಂಬಾರ' ಲೇಖನಕ್ಕೆ ಓದುಗರು ಅರ್ಥಪೂರ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ತಮ್ಮ ತಾತನ ಬಗ್ಗೆ ಬಂದ ಲೇಖನ ಕಂಡು, ಹುಣಸೂರು ಕೃಷ್ಣಮೂರ್ತಿ ಅವರ ಮೊಮ್ಮಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆ ಪತ್ರಗಳು ನಿಮ್ಮ ಮುಂದಿವೆ.

ಶ್ರೀನಿವಾಸ ಅವರೆ,

ನಾನು ಇದರ ಬಗ್ಗೆ ಸಾಕಷ್ಟು ಸಲ ತುಂಬ ಆಲೋಚನೆ ಮಾಡಿದ್ದೇನೆ. ನಮ್ಮ ಕನ್ನಡ ಚಿತ್ರದವರು ಬರೀ ಒಳಜಗಳದಲ್ಲಿ ಮುಳುಗಿರುತ್ತಾರೆ. ಉದಾಹರಣೆಗೆ ಉಡುಪಿಯಲ್ಲಿ ಹಿಂದಿ/ತಮಿಳು ಚಿತ್ರಗಳು ಒಂದೇ ದಿನ ಬಿಡುಗಡೆ ಮಾಡುತ್ತಾರೆ. ಆಮೇಲೆ ಇದನ್ನು ನೋಡುವವರು ಕನ್ನಡಿಗರೇ! ಕನ್ನಡ ಚಿತ್ರಗಳು ತುಂಬ ತಡವಾಗಿ ಎರಡು ವಾರದ ನಂತರ ಬಿಡುಗಡೆ ಮಾಡುತ್ತಾರೆ, ಅದೂ ಕೆಟ್ಟ ಚಿತ್ರಮಂದಿರದಲ್ಲಿ. ಒಳ್ಳೆಯ ಚಿತ್ರ ಮಂದಿರಗಳು ಹಿಂದಿ, ತಮಿಳು, ತೆಲುಗು ಚಿತ್ರಗಳಿಗೆ ಮಾತ್ರ ಮೀಸಲು! ಅಲ್ಲಿ ಎಲ್ಲಾ ಕಡೆ ಹಿಂದಿ, ತಮಿಳು, ತೆಲುಗು ಹಾಡುಗಳನ್ನು ಕೇಳುತ್ತಾರೆ. ಕನ್ನಡ/ತುಳು ಕೆಲವು ಕಡೆ ಕೇಳಬಹುದಷ್ಟೆ. ಇದನ್ನೆಲ್ಲಾ ನೋಡಿದಾಗ ತುಂಬ ಬೇಜಾರಾಗುತ್ತೆ. ಆದರೆ ನಮ್ಮ ಕನ್ನಡ ಚಿತ್ರರಂಗದವರು ತಮ್ಮ ತಮ್ಮಲ್ಲೇ ಜಗಳ ಮಾಡಿ, ಮೇಲಿನ ಅಂಶವನ್ನು ಪರಿಗಣಿಸದೆ ಇರುವುದನ್ನು ನೋಡಿ ಇನ್ನೂ ಬೇಜಾರಾಗುತ್ತೆ !

ಪ್ರಕಾಶ್‌ ಆಚಾರ್ಯ, ಊರು ?

ಸಾರ್‌,

ನಿಮ್ಮ ಲೇಖನಗಳು ತುಂಬ ಚೆನ್ನಾಗಿ ಇರುತ್ತೆ. ನೀವು ಕನ್ನಡದ ಬಗೆಗಿನ ಲೇಖನಗಳನ್ನು ತುಂಬ ಚೆನ್ನಾಗಿ ಬರೆಯುತ್ತೀರಿ. ನಿಮ್ಮ ಲೇಖನಗಳಲ್ಲಿ ಇರುವ ಸತ್ಯ ನಮ್ಮ ಜನ ತಿಳಿದುಕೊಂಡರೆ ಸಾಕು ನಾವು ಮುಂದೆ ಬರಬಹುದು. ಎಲ್ಲರಿಗೂ ಸಹಾಯ ಮಾಡಬಹುದು, ನಮ್ಮ ಕನ್ನಡವನ್ನು ಉಳಿಸಬಹುದು.

ದೀಪಕ್‌ಕುಮಾರ್‌, ಬೆಂಗಳೂರು.

ಸಂಪಿಗೆ ಅವರಿಗೆ,

ಬಾಲಿವುಡ್‌ ಬಗೆಗಿನ ಲೇಖನ ವಸ್ತುನಿಷ್ಠವಾಗಿ ಮೂಡಿ ಬಂದಿದೆ. ಆದರೆ ನಮ್ಮ ಕನ್ನಡಿಗರನ್ನು ಸರಿಪಡಿಸುವುದು ಕಷ್ಟ! ಮಸಾಲೆ ದೋಸೆ ಕಣ್ಣಿಗೆ ಕಾಣೋವಾಗ, ಮುದ್ದೆ ತಿನ್ನೋದಕ್ಕೆ ಈಗಿನ ಜನ ಮುಂದಾಗುವುದಿಲ್ಲ! ನಾವಾದರೂ ಮುದ್ದೆ ತಿಂದು ಗಟ್ಟಿಯಾಗೋಣ!

ನಟೇಶ್‌.ಹೆಚ್‌.ಸಿ, ಬೆಂಗಳೂರು

ಶ್ರೀನಿ,

ಲೇಖನ ಚೆನ್ನಾಗಿದೆ. ನೀನು ಸರಿಯಾದ ವಿಚಾರವನ್ನೇ ಹೇಳಿದ್ದೀಯ. ಆದರೆ ಬಾಗಲಕೋಟೆ, ಬಿಜಾಪುರಗಳಲ್ಲಿ ಕನ್ನಡ ಚಿತ್ರಗಳು ಚೆನ್ನಾಗಿ ಓಡುತ್ತವೆ. ಎಲ್ಲಾ ಒಳ್ಳೆಯ ಚಿತ್ರಗಳು ನೂರು ದಿನ ಪ್ರದರ್ಶನ ಆಗುತ್ತವೆ.

ಮಧುಸೂದನ್‌ ಜಂಭಾ, ಬೆಂಗಳೂರು

hai,

Really this article is super, Sampige keep it up.

Panditaradhya VH

Dear Sampige,

Excellent article on status of Hindi cinema and treatment metted out to Kannada cinema in Karnataka itself. If these anya bhashiyaru are not kicked out of Karnataka, not just out of Bangalore, it is very difficult to push Kannada cinema up in Karnataka. Believe it or not my brother and his friends went for hindi cinema in multiplex and spent more than 1000 rupees. These multiplexes are not just pushing Kannada cinema to the corner, they are nurturing ugly culture of extravagant spending for peanuts.

Regards,

- Prasad Naik, Bengalooru

*

ಜಾನಪದಗೀತೆಗಳಲ್ಲಿ ನಾಡಿನ ಸಿರಿ ಮತ್ತು ದೇವರ ಹಿರಿಮೆ ಲೇಖನಕ್ಕೆ ಬಂದ ಪ್ರತಿಕ್ರಿಯೆಗಳು

ಸಂಪಿಗೆ ಶ್ರೀನಿವಾಸ್‌,

ನಿಮ್ಮ ಲೇಖನ ಜಾನಪದ ಗೀತೆಗಳ ಕುರಿತಂತೆ ಬಹಳ ಚೆನ್ನಾಗಿದೆ. ಆದರೆ ನನಗೆ ಗೊತ್ತಿರುವ ಹಾಗೆ ಶ್ರೀಕೃಷ್ಣನ ಬಗ್ಗೆ ಜಾನಪದ ಗೀತೆಗಳು ಇಲ್ಲ ಎಂದು ಕಾಣುತ್ತದೆ. ಯಾಕೆಂದರೆ ನಾನು ಮೈಸೂರಿನವನಾಗಿ ನೀವು ತಿಳಿಸಿರುವಂಥ ಎಲ್ಲಾ ಜನಪದ ಗೀತೆಗಳನ್ನು ಕೇಳಿದ್ದೇನೆ. ಈ ಬಗ್ಗೆ ಸ್ಪಷ್ಟೀಕರಣ ನೀಡಿ.

ವಂದನೆಗಳು...

- ಎ.ಎಸ್‌.ಧರ್ಮೇಂದ್ರಕುಮಾರ್‌, ಬಹರೇನ್‌

ಸ್ಪಷ್ಟನೆ :

ಧರ್ಮೇಂದ್ರಕುಮಾರ್‌ ಅವರೆ,

ಖಂಡಿತ ಶ್ರೀಕೃಷ್ಣನ ಬಗ್ಗೆ ಜನಪದ ಗೀತೆಗಳಿವೆ. ನನ್ನ ಲೇಖನದಲ್ಲಿ ಪ್ರಸ್ತಾಪಿಸಿರುವ ‘ಬಾಗಿ ಬಾಗಿ ಬಂಗಾರ ತೂಗಿ' ಗೀತೆಯೇ ಇದಕ್ಕೆ ಉದಾಹರಣೆ. ಅಂಕಿತ ಪುಸ್ತಕ ಪ್ರಕಾಶನದವರು ಪ್ರಕಟಿಸಿರುವ ‘ಜನಪದ ಗೀತೆಗಳು' ಪುಸ್ತಕದಲ್ಲಿ ನೂರಾರು ಜನಪದ ಗೀತೆಗಳ ಸಾಹಿತ್ಯವನ್ನು ನೀವು ಓದಬಹುದು. ಅದರಲ್ಲೂ ಈ ಶ್ರೀಕೃಷ್ಣನ ಬಗೆಗಿನ ಜನಪದ ಗೀತೆಗಳಿವೆ ಅಥವಾ ಯಾವುದಾದರೂ ಜನಪ್ರಿಯ ಜನಪದ ಗೀತೆಗಳ ಧ್ವನಿಸುರುಳಿಯಲ್ಲೂ ಈ ಗೀತೆ ನಿಮಗೆ ಸಿಗಬಹುದು.

ವಂದನೆಗಳು...

- ಸಂಪಿಗೆ ಶ್ರೀನಿವಾಸ

*

ನಮಸ್ಕಾರ ಶ್ರೀನಿವಾಸ್‌ ಅವರಿಗೆ,

ಜಾನಪದ ಸಿರಿ-ಸೊಬಗಿನ ಇಂದಿನ ಲೇಖನ ಬಹಳ ಚೆನ್ನಾಗಿದೆ. ಪದಗಳಲ್ಲಿ ಬಂದಿರುವ ಸ್ಥಳಗಳ ವಿವರಣೆ ಚೆನ್ನಾಗಿದೆ. ಈ ಗೀತೆಗಳು ಎಲ್ಲರ ನಾಲಿಗೆಯಲ್ಲೂ ನಲಿವಂತಾಗಲಿ.

ವಿಶ್ವಾಸದಿಂದ...

- ವಾಣಿ, ಸಿಂಗಪುರ

*

ಸಂಪಿಗೆಯವರಿಗೆ ನಮಸ್ಕಾರ,

ಜನಪದ ಹಾಡುಗಳಲ್ಲಿ ಕನ್ನಡನಾಡಿನ ವೈಭವ, ಪ್ರಕೃತಿವರ್ಣನೆ ಕುರಿತಾದ ಲೇಖನ ಚೆನ್ನಾಗಿದೆ. ಹಾಡುಗಳ ಪೂರ್ಣಸಾಹಿತ್ಯವನ್ನು ನೀವು ಕೊಟ್ಟಿರುವುದನ್ನು ಓದುಗರು ಮೆಚ್ಚಿಕೊಳ್ಳುತ್ತಾರೆ!

ಇಂಥ ಸಂಗ್ರಹಯೋಗ್ಯ ಲೇಖನಗಳ ನಿರೀಕ್ಷೆಯಲ್ಲಿ...

- ಶ್ರೀವತ್ಸ ಜೋಶಿ, ಅಮೆರಿಕಾ

*

ಸಂಪಿಗೆಯವರೆ,

ನಿಮ್ಮ ಜಾನಪದ ಗೀತೆಗಳ ಕುರಿತ ಲೇಖನವನ್ನು ದಟ್ಸ್‌ಕನ್ನಡದಲ್ಲಿ ಓದಿದೆ. ಸೊಗಸಾಗಿ ನಿರೂಪಿಸಿದ್ದೀರಿ. ಜೊತೆಗೆ ಗೀತೆಗಳ ಸಾಹಿತ್ಯವನ್ನು ಒದಗಿಸಿ ತುಂಬ ಒಳ್ಳೆಯ ಕೆಲಸ ಮಾಡಿದ್ದೀರಿ. ಈ ವಿಚಾರದಲ್ಲಿ ಬಿ.ಕೆ.ಸುಮಿತ್ರಾ ಹಾಗೂ ಅವರ ತಂಡವನ್ನು ನಾವು ನೆನೆಯಲೇಬೇಕು. ಅವರು ಜಾನಪದ ಗೀತೆಗಳನ್ನು ಹೆಚ್ಚು ಜನಪ್ರಿಯಗೊಳಿಸಿದವರೆಂದರೆ ಅತಿಶಯೋಕ್ತಿ ಆಗಲಾರದು.

- ಗುರುಪ್ರಸಾದ್‌ ಸಿ.ಎಂ, ಬೆಂಗಳೂರು

*

ಸಂಪಿಗೆಯವರೆ,

ಲೇಖನ ತುಂಬ ಚೆನ್ನಾಗಿದೆ. ಇದೇ ರೀತಿ ಇನ್ನೂ ಅನೇಕ ಲೇಖನಗಳು ನಿಮ್ಮ ಲೇಖನಿಯಿಂದ ಹರಿದು ಬರುತ್ತಿರಲಿ. ಒಂದು ಸಣ್ಣ ತಿದ್ದುಪಡಿ: ಮದಗದ ಕೆರೆ ಚಿಕ್ಕಮಗಳೂರಿನಲ್ಲಿ ಇಲ್ಲ. ಅದು ಹಾವೇರಿ ಜಿಲ್ಲೆ ಹಿರೇಕೇರೂರು ತಾಲ್ಲೂಕಿನ ಮಾಸೂರು ಬಳಿ ಇದೆ. ಅದನ್ನು ಮದಗ-ಮಾಸೂರು ಕೆರೆ ಎಂದು ಕರೆಯುತ್ತಾರೆ.

ಧನ್ಯವಾದಗಳೊಂದಿಗೆ,

- ಗಿರೀಶ್‌ ಮೇಟ್‌ಗುಡ್‌ಮಠ್‌, ಬೆಂಗಳೂರು

*

ಶ್ರೀನಿ ಅವರೆ,

ಈ ವಿಷಯ ತುಂಬ ಚೆನ್ನಾಗಿದೆ. ನಮ್ಮ ಜನಪದ ಕಲೆ ಬಗ್ಗೆ ನಮಗೆ ಹೆಚ್ಚು ಗೊತ್ತಿರಲ್ಲ. ನಾನು ಇತ್ತೀಚೆಗೆ ಯಾವುದೋ ಡಾಕ್ಯುಮೆಂಟರಿ ನೋಡ್ತಾ ಇದ್ದೆ. ಅದರಲ್ಲಿ ನಮ್ಮ ಭಾರತದ ಜನಪದ ಕಲೆ ಬಗ್ಗೆ ಚೆನ್ನಾಗಿ ಹೇಳಿದ್ದಾರೆ. ಆಶ್ಚರ್ಯವೆಂದರೆ ಆ ಡಾಕ್ಯುಮೆಂಟರಿಯ ನಿರ್ದೇಶಕರು ಇಂಗ್ಲಿಷ್‌ನವನು!

- ಶ್ರೀ , ಯು.ಎಸ್‌.ಎ

*

Shri Sampige avare,

Our Kannada langauge has a rich culture. The songs (folksongs/Bhavageete etc.) are really very good. I keep telling my children to concentrate on the beautiful wordings and the meanings attached to it.

This is the reason I am sending to learn music from Shri Narahari Dixit who teaches all these types of songs.

Regards,

- Madhumathi, Bengalooru

*

Super Sampige,

These songs are so wonderfully written. The way tunes have been put in them is amazing.

As you rightly said, nobody knows who wrote them. They have passed from one person to another over the centuries. If possible please write a "sequel" to this article wherein we can let people know other ones like (these do not fall into God or Nature section, but they depict our village life and culture so well)

"bhaagyaada baLegaara hOgi baa tavareege"

"kudurEya taMdivni"

"yaatakke maLe hOdavO"

"kOlanna kole" (kOlaaTa padagaLu anEka ive)

"chennappa chennagowda kumbaara maaDida koDanavva"

- Pruthviraj.H.P, Canada

*

‘‘ಭಕ್ತ ಕುಂಬಾರದ ಹುಣಸೂರರು'' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳು

Hello Sir,

My name is Anitha Narahari. I am the daughter of Dr. H. K Narahari, the first son of Sri Hunsur Krishna Murthy.

I am writing this mail to you, to thank you for writing such a wonderful article about my grand father. I was really touched after reading the article, and felt very proud that someone wrote such a lovely article about him.

I am sure that if he was around, he would appriciate it as much as we all in the family did.

We were extremely grateful to you for this.

Thanks & Regards,

- Anitha Narahari, Bangalore

*

ಸಂಪಿಗೆ ಶ್ರೀನಿವಾಸ್‌,

ನಿಮ್ಮ ಲೇಖನ ತುಂಬಾ ಸರಳ ಮತ್ತು ಸುಂದರವಾಗಿ ಮೂಡಿಬಂದಿದೆ. ನೀವು ಬರೆದಿರುವುದು ಅಕ್ಷರಶ: ನಿಜ, ಇಂದಿನ ಕನ್ನಡ ಚಿತ್ರರಂಗದಲ್ಲಿ ಈ ರೀತಿಯ ಸಂದರ್ಭಕ್ಕೆ ತಕ್ಕಂತಹ ಹಾಡುಗಳು ಮತ್ತು ಸಂಭಾಷಣೆಗಳನ್ನು ಎದುರು ನೋಡುವುದು ತುಂಬ ಕಷ್ಟ. ಇಂತಹ ಅದ್ಭುತಗಳನ್ನು ರಚಿಸುವುದರಲ್ಲಿ ಹುಣಸೂರು ಅವರದು ಎತ್ತಿದ ಕೈ.

ಈ ಲೇಖನದಲ್ಲಿ ಅವರು ಬರೆದಿರುವ ‘ಭಕ್ತಕುಂಬಾರ' ಚಿತ್ರದ ಗೀತೆಗಳನ್ನು ನಮ್ಮ ಮುಂದಿಟ್ಟಿದ್ದೀರಿ. ಮತ್ತೆ ಆ ಚಿತ್ರದ ಹಾಡುಗಳ ದೃಶ್ಯಾವಳಿಗಳನ್ನು ಕಣ್ಣಮುಂದೆ ಒಡ್ಡಿದ್ದೀರಿ. ಅದಕ್ಕಾಗಿ ತುಂಬಾ ಧನ್ಯವಾದಗಳು.

ಈ ಹಾಡುಗಳನ್ನು ಓದಿದಾಗ ಎಂತಹ ಸುಂದರ ಮತ್ತು ಸುಲಲಿತ ಸಾಹಿತ್ಯದಿಂದ ಕೂಡಿದೆ ಅನ್ನಿಸದೆ ಇರಲಾರದು. ಭಕ್ತಿಯ ಪರಾಕಾಷ್ಠೆಗೆ ಒಯ್ಯುವುದರಲ್ಲಿ ಸಂಶಯವೇ ಇಲ್ಲ. ಅದರಲ್ಲೂ ನಂಗೆ ತುಂಬಾ ಇಷ್ಟವಾದ ‘ಕಂಡೇ ಹರಿಯ ಕಂಡೇ' ಹಾಡಿನ ದೃಶ್ಯಾವಳಿಯನ್ನು ನೋಡುತ್ತಾ ಇದ್ದರೆ ನಾನೂ ವೈಕುಂಠದಲ್ಲಿ ಆ ಪರಮಾತ್ಮನ ಲೀಲೆಗಳನ್ನು ನೋಡುತ್ತಿದ್ದೇನೇನೋ ಎನ್ನುವಷ್ಟು ಮಟ್ಟಿಗೆ ಭ್ರಮೆಗೆ ಒಳಗಾಗುತ್ತೇನೆ. ಆ ಹಾಡಿನ ಸಾಲುಗಳಂತೂ ನನ್ನ ನಾಲಿಗೆಯಲ್ಲಿ ಅಚ್ಚಾಗಿದೆ. ಇಷ್ಟು ಒಳ್ಳೆಯ ಚಿತ್ರದಲ್ಲಿ ‘ಜೋಡಿ ಬೇಡೋ ಕಾಲವಮ್ಮಾ ತುಂಬಿ ಬಂದಾ ಪ್ರಾಯವಮ್ಮಾ' ಅನ್ನೋ ಹಾಡು ಸಹ ಬರೆದು ಜನರ ಟೀಕೆಗೂ ಒಳಗಾಗಿದ್ದರು ಅಂತ ಕೇಳಿದ್ದೆ.

ಮತ್ತೆ ‘ಮಾನವಾ ದೇಹವೂ' ಹಾಡನ್ನು ಬರೆಯುವ ಸಂದರ್ಭದಲ್ಲಿ ಈ ಸನ್ನಿವೇಶಕ್ಕೆ ಏನು ಬರೆಯಬೇಕು ಎಂದು ಯೋಚಿಸುತ್ತಾ ಇದ್ದರಂತೆ ಆಗ ಅವರ ಕೈಯಲ್ಲಿ ಉರಿಯುತ್ತಿದ್ದ ಸಿಗರೇಟ್‌ ಕೈಯನ್ನು ಸುಟ್ಟಿತಂತೆ, ಆಗ ತಕ್ಷಣ ಈ ಹಾಡು ಅವರ ತಲೆಗೆ ಹೊಳಿಯಿತಂತೆ. ‘ಮಾನವಾ ಮೂಳೆ ಮಾಂಸದ ತಡಿಕೆ ತುಂಬಿದೆ ಒಳಗೆ ಕಾಮಾದಿ ಬಯಕೆ' ಎಂತಹ ಕಲ್ಪನಾ ಶಕ್ತಿ ಇತ್ತು ಅಂತ ಆಶ್ಚರ್ಯ ಆಗುತ್ತದೆ.

ಇನ್ನೊಂದು ನನಗೆ ಅತ್ಯಂತ ಮೆಚ್ಚಿಗೆಯಾದ ಗೀತೆ ‘ನಾನೂ ನೀನೂ ನೆಂಟರಯ್ಯಾ ನಮಗೆ ಭೇದಾ ಇಲ್ಲವಯ್ಯಾ ವಿಠಲಾ' ಅನ್ನೋ ಹಾಡು ಇಬ್ಬರೂ ಕುಂಬಾರರು ಒಬ್ಬ ಜೀವನೋಪಾಯಕ್ಕೆ ಮಡಿಕೆಯನ್ನು ಮಾಡುವವನಾದರೆ ಮತ್ತೊಬ್ಬ ತನ್ನ ಲೀಲೆಗಾಗಿ ಜೀವಿಗಳೆಂಬ ಬೊಂಬೆಯನ್ನು ಮಾಡುವವ. ಇಂತಹ ಕಲ್ಪನೆ ಇನ್ನ್ಯಾರಿಗೆ ಬರಲು ಸಾಧ್ಯ?

ಇವರು ಬರೆದ ಸಾಹಿತ್ಯ ನನಗೆ ತುಂಬಾ ಮೆಚ್ಚುಗೆ. ಅದರಲ್ಲೂ ‘ಬಬ್ರುವಾಹನ' ಚಿತ್ರದ ‘ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ' ಮತ್ತು ಶೃಂಗಾರ ರಸದಿಂದ ಕೂಡಿದ ‘ಆರಾಧಿಸುವೆ ಮದನಾರಿ' ಹಾಡು, ಮತ್ತು ಇಡೀ ಚಿತ್ರಕಥೆ, ಅದನ್ನು ಚಿತ್ರೀಕರಿಸಿರುವ ರೀತಿ ಅವರು ಬರೀ ಸಾಹಿತಿ ಮಾತ್ರವಲ್ಲ ಒಬ್ಬ ಸಮರ್ಥ ನಿರ್ದೇಶಕ ಅನ್ನುವುದೂ ಗೊತ್ತಾಗುತ್ತದೆ.

ಇನ್ನು ‘ಭಕ್ತಕನಕದಾಸ' ಚಿತ್ರದ 'ಶೃಂಗಾರ ಶೀಲ ಸಂಗೀತ ಲೋಲ' ಹಾಡನ್ನು ಮರೆಯಲು ಯಾರಿಗೆ ಸಾಧ್ಯ? ಅದೇ ರೀತಿಯ ‘ಕೃಷ್ಣಗಾರುಡಿ' ಚಿತ್ರದ ‘ಬೊಂಬೆಯಾಟವಯ್ಯಾ' , ಮತ್ತು ‘ಭಕ್ತ ಸಿರಿಯಾಳ' ಚಿತ್ರದ ಗೀತೆಗಳು. ‘ಸಂತ ತುಕಾರಾಮ್‌' ಚಿತ್ರದ ಗೀತೆಗಳು ಒಂದಕ್ಕಿಂತ ಒಂದು ಅತಿಶಯವಾದವುಗಳು.

ಇಂತಹ ಹಾಡುಗಳನ್ನ ನೋಡಿದಾಗ ಇವರು ಭಕ್ತಿರಸ ತುಂಬಿದ ಗೀತೆಗಳಿಗೆ ಆದ್ಯತೆ ಕೊಟ್ಟಿದ್ದಾರೆ ಎನ್ನಿಸುವುದು ಸಹಜ. ಆದರೆ ಇವರು ತುಂಟತನ, ರಸಿಕತೆ, ಸರಸ ದಾಂಪತ್ಯ ಇವುಗಳಿಗೆ ಸಂಬಂಧಿಸಿದ ಗೀತೆಗಳನ್ನೂ ರಚಿಸಿದ್ದಾರೆ. ಅದರಲ್ಲಿ ‘ಜಗಮೆಚ್ಚಿದ ಮಗ' ಚಿತ್ರದ ‘ಒಳಗಿನ ಆಸೆ ಹೇಳುವ ಭಾಷೆ ಕಣ್ಣಲಿ ಮೂಡಿ ನಿಂತಿದೆ' ಈ ಹಾಡಿನಲ್ಲಿರುವ ರಸಿಕತೆಯಂತೂ ಆಗಿನ ಪಡ್ಡೆಗಳ ಮನಸ್ಸಿಗೆ ಲಗ್ಗೆ ಇಟ್ಟಿರಬಹುದೇ? ಅನ್ನಿಸುತ್ತದೆ. ಇದರಲ್ಲಿ ಮುನಿದ ಹೆಣ್ಣನ್ನು ಒಲಿಸಿಕೊಳ್ಳುವ ಪ್ರಯತ್ನದಲ್ಲಿದ್ದರೆ ‘ಭಲೇಹುಚ್ಚ' ಚಿತ್ರದ ‘ಏನೇ ಸುಬ್ಬಿ ತುಂಬಾ ಕೊಬ್ಬಿ' ಹಾಡಿನಲ್ಲಿ ಚಿತ್ರ ವಿಚಿತ್ರವಾಗಿ ಫ್ಯಾಶನ್‌ ಮಾಡುವ ಹೆಂಗಳೆಯರ ಜನ್ಮವನ್ನೇ ಜಾಲಾಡಿದ್ದಾರೆ.

ಇನ್ನು ‘ರತ್ನಮಂಜರಿ' ಚಿತ್ರದ ‘ಗಿಲಿಗಿಲಿಗಿಲಿ ಗಿಲಕ್ಕು' ಹಾಡು ಮತ್ತು ‘ಸಂತ ತುಕಾರಾಮ್‌' ಚಿತ್ರದ ‘ಬೇಡಕೃಷ್ಣ ರಂಗಿನಾಟ' ‘ಸತ್ಯಹರಿಶ್ಚಂದ್ರ'ದ ‘ನನ್ನ ನೀನು ನಿನ್ನ ನಾನು ಕಾದುಕೊಂಡೂ ಕೂತುಕೊಂಡೆ' ಎಂಬ ಹಾಡುಗಳು ಒಂದೇ ಧಾಟಿಯಿಂದ ಕೂಡಿ ಅತ್ಯಂತ ಜನಪ್ರಿಯತೆಯನ್ನು ಪಡೆದಿದ್ದರೆ ‘ಮದುವೆ ಮಾಡಿ ನೋಡು' ಚಿತ್ರದ ‘ಮದುವೆ ಮಾಡಿಕೊಂಡು ಮನೆಯ ಹೂಡಿಕೊಂಡು ಮಡದಿಯ ಜೊತೆಯಲಿ ಇರಬೇಕು' ಎಂಬ ಸರಸಮಯ ಹಾಡನ್ನೂ ಅವರು ರಚಿಸಿದ್ದಾರೆ.

ಇವರು ಮತ್ತು ಹಂಸಲೇಖಾ ಅವರೊಂದಿಗೆ ಬರೆದ ‘ನೀನಾ ಭಗವಂತಾ ಜಗಕುಪಕರಿಸೀ ನನಗಪಕರಿಸೋ ಜಗದೋದ್ಧಾರಕ ನೀನೇನಾ?' ಅನ್ನೋ ಹಾಡು ಕೂಡ ತುಂಬಾ ಪ್ರಸಿದ್ದವಾಗಿತ್ತು.

ಹಿಂದಿನ ಪೌರಾಣಿಕ ಮತ್ತು ಐತಿಹಾಸಿಕ ಚಿತ್ರಗಳಿಗೆ ಇವರಿಂದಲೇ ಜೀವ ಮೂಡಿತ್ತು ಅನ್ನೋದರಲ್ಲಿ ಎರಡು ಮಾತಿಲ್ಲ. ಇನ್ನು ಎಷ್ಟು ಗೀತೆಗಳು ಹೇಳ ಹೆಸರಿಲ್ಲದಂತೆ ಮರೆಯಾಗಿವೆಯೋ ಗೊತ್ತಿಲ್ಲ. ಇಂತಹ ಮಹನೀಯರನ್ನು ನೀವು ‘ಪುರಂದರದಾಸ'ರಿಗೆ ಹೋಲಿಸುವುದರಲ್ಲಿ ಯಾವ ಅತಿಶಯೋಕ್ತಿಯೂ ಇಲ್ಲ. ಇಂತಹ ಮಹನೀಯರು ನಮ್ಮ ಕನ್ನಡನಾಡಲ್ಲಿ ಹುಟ್ಟಿ ಕಲಾಸೇವೆಯನ್ನು ಮಾಡಿ ಇಷ್ಟು ಸುಂದರವಾದ ಸಾಹಿತ್ಯವನ್ನು ಬರೆದು ನಮಗೆ ಹೆಕ್ಕಿಕೊಳ್ಳುವಂತೆ ಮಾಡಿದ್ದಾರೆ. ಇಂತಹ ಹುಣಸೂರು ಕೃಷ್ಣಮೂರ್ತಿಯವರಿಗೆ ನನ್ನ ಅನಂತ ನಮನಗಳು.

ಈ ಮಹನೀಯರ ಬಗ್ಗೆ ಲೇಖನವನ್ನು ಬರೆದು ಮತ್ತೊಮ್ಮೆ ಅವರ ಹೆಸರನ್ನು ಮತ್ತು ಅವರು ಬರೆದ ಗೀತೆಗಳನ್ನು ನೆನೆಸಿಕೊಳ್ಳುವಂತೆ ಮಾಡಿದ ನಿಮಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು.

- ಮೀರಾ ಕೃಷ್ಣ, ಅಮೆರಿಕಾ

*

ನಮಸ್ಕಾರ ಸಂಪಿಗೆ,

‘ಭಕ್ತ ಕುಂಬಾರ' ಕಥೆ, ಸಾಹಿತ್ಯ, ಸಂಗೀತ, ಅಭಿನಯ, ನಿರ್ದೇಶನಗಳ ಅಪೂರ್ವ ಸಂಗಮ! ಆ ಮಟ್ಟದ ಚಿತ್ರಗಳು ಮುಂದೆ ಬರಲು ಸಾಧ್ಯವೆ? ‘ನನಗೆ ತುಂಬ ತೃಪ್ತಿ ಕೊಟ್ಟ ಪಾತ್ರ ಅದು' ಎಂದು ಅಣ್ಣಾವ್ರು ಅನೇಕ ಕಡೆ ಹೇಳಿದ್ದಾರೆ. ಕೆಲವು ಸನ್ನಿವೇಶಗಳಂತೂ ಮೈ ಜುಮ್‌ ಎನ್ನಿಸುವಂತಿವೆ! ರಾಜ್‌ಕುಮಾರ್‌, ಲೀಲಾವತಿ ಮಗುವನ್ನು ಕಳೆದುಕೊಂಡು ಗೋಳಾಡುವ ದೃಶ್ಯವಂತೂ ಕಣ್ಣಲ್ಲಿ ನೀರು ತರಿಸುತ್ತದೆ. ಇಂತಹ ಚಿತ್ರಗಳನ್ನು ನೋಡಿದಾಗಲೆಲ್ಲಾ ರಾಜ್‌ಕುಮಾರ್‌ ಈಗ ನಮ್ಮ ಜೊತೆ ಇಲ್ಲವಲ್ಲ ಅಂತ ಸಂಕಟವಾಗುತ್ತದೆ.

- ಶೇಷಾದ್ರಿವಾಸು, ಅಮೆರಿಕಾ

*

ಸಂಪಿಗೆಯವರೇ,

ನಿಮ್ಮ ಅಂಕಣ ಹಳೆಯ ಹಾಡುಗಳು, ಚಿತ್ರಗಳು, ನಿರ್ದೇಶಕರ ಮಾಹಿತಿಯೊಡನೆ ಸುಂದರವಾಗಿ ಮೂಡಿಬರುತ್ತಿದೆ. ದಿವಂಗತ ಕರೀಂಖಾನ್‌, ಅಯ್ಯರ್‌, ಮುಂತಾದವರು ನಿಮ್ಮ ಲೇಖನಿಯ ಮೂಲಕ ಮತ್ತೊಮ್ಮೆ ಜೀವ ತಳೆಯಲಿ.

- ತ್ರಿವೇಣಿ, ಇಲಿನಾಯ್‌ು, ಅಮೆರಿಕಾ

*

ಸಂಪಿಗೆಯವರೆ,

ನಿಮ್ಮ ಭಕ್ತ ಕುಂಬಾರ ಲೇಖನ ಬಹಳ ಚೆನ್ನಾಗಿತ್ತು. ನನ್ನನ್ನು ಒಮ್ಮೆ ಯಾವುದೋ ಲೋಕಕ್ಕೆ ಅಂದರೆ ಭಕ್ತ ಕುಂಬಾರನ ಕಾಲಕ್ಕೆ ಅಣ್ಣಾವ್ರ ಜೊತೆ ಕರೆದು ಕೊಂಡು ಹೋದಂತೆ ಭಾಸವಾಯಿತು.

ಬಹಳ ಧನ್ಯವಾಗಳು

- ಮಧು, ಬೆಂಗಳೂರು

*

Good article about Hunasooru Krishna Murthy.

What can I say? I too am a very passionate fan of Dr. Rajkumar. I love the songs sung by P B Srinivas for him and I have a collection of his songs. This article was like a rewind...thank you...

With Regards,

- Purushotham, Bengalooru

*

Sampige,

It is really a wonder. Yesterday I thought of listening music at work after a long time and after some kannada songs I went straight to bhaktha kumbara.

huNasooru krishnamurthy avara kArya ShlAganeeya. His movies are a class and more importantly neat. But you forgot to give credit to PB Srinivas, who sung those songs so well that they reverberate in our ears still.

- Pruthviraj H.P, Canada

ಸ್ಪಷ್ಟನೆ :

ನಾನು ಈ ಲೇಖನ ಬರೆದ ಮೇಲೆ ಈ ಚಿತ್ರದ ಹಾಡುಗಳನ್ನು ಹಾಡಿರುವ ಪಿ.ಬಿ.ಶ್ರೀನಿವಾಸ್‌ ಅವರ ಬಗ್ಗೆ ಬರೆಯಲು ಮರೆತೆ ಎಂಬುದು ತಿಳಿಯಿತು. ಇದನ್ನು ಓದುಗರು ಯಾರಾದರೂ ಗಮನಿಸುತ್ತಾರೆ ಎಂದು ಕೊಂಡಿದ್ದೆ. ಇದನ್ನು ನೀವು ಗಮನಿಸಿ ತಿಳಿಸಿದ್ದಕ್ಕೆ ನನ್ನ ಧನ್ಯವಾದಗಳು. ಮುಂದೆ ಯಾವಾಗಲಾದರೂ ಪಿ.ಬಿ ಯವರ ಬಗ್ಗೆಯೇ ಒಂದು ಲೇಖನ ಬರೆದು ಅರ್ಪಿಸುತ್ತೇನೆ.

ನಿಮ್ಮ,

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Manthana-25 : Thatskannada Columnist Sampige Srinivasa writes about Basavannas Vachanas.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more