ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಸರು ಮಾತ್ರ ಪುಟ್ಟಣ್ಣ; ಸಿನಿಮಾ ಪ್ರಪಂಚದಲ್ಲಿ ಹಿರಿಯಣ್ಣ!

By Staff
|
Google Oneindia Kannada News

ಹೆಸರು ಮಾತ್ರ ಪುಟ್ಟಣ್ಣ; ಸಿನಿಮಾ ಪ್ರಪಂಚದಲ್ಲಿ ಹಿರಿಯಣ್ಣ!
(‘ಕನ್ನಡನಾಡಿನ ಕರಾವಳಿ’ ಗೀತೆ ‘ಮಸಣದ ಹೂವು’ ಚಿತ್ರದ್ದು ಎಂದು ಬಹಳಷ್ಟು ಓದುಗರು ತಿಳಿಸಿದ್ದಾರೆ. ಈ ಗೀತೆ ‘ಅಮೃತಘಳಿಗೆ’ ಚಿತ್ರದ್ದು ಎಂದು ತಪ್ಪಾಗಿ ಬರೆದಿದ್ದಕ್ಕೆ ಕ್ಷಮೆಕೋರುತ್ತೇನೆ. ಲೇಖನವನ್ನು ಓದಿ ಪ್ರತಿಕ್ರಿಯಿಸಿದ ಎಲ್ಲ ಓದುಗ ಮಿತ್ರರಿಗೂ ನನ್ನ ಆತ್ಮೀಯ ಧನ್ಯವಾದಗಳು. - ಸಂಪಿಗೆ ಶ್ರೀನಿವಾಸ)

ಸಂಪಿಗೆಯವರಿಗೆ ನಮಸ್ಕಾರ.

ನಿಗದಿತ ವೆಚ್ಚದಲ್ಲಿ, ಅಚ್ಚುಕಟ್ಟಾಗಿ, ಮನೆಮಂದಿಯೆಲ್ಲ ಮತ್ತೆ ಮತ್ತೆ ನೋಡುವಂತಹ ಸುಂದರ ಚಿತ್ರಗಳನ್ನು ಕೊಟ್ಟಿರುವ ಪುಟ್ಟಣ್ಣ ಕಣಗಾಲ್‌ ಕನ್ನಡದ ಹೆಮ್ಮೆಯ ನಿರ್ದೇಶಕ. ಸಿನಿಮಾಗಳಿಗೆ ಕೋಟಿಗಟ್ಟಲೆ ಹಣ ಸುರಿಯುತ್ತಿರುವ ಈ ಕಾಲದಲ್ಲಿ ಪುಟ್ಟಣ್ಣ ಇದ್ದಿದ್ದರೆ, ಇನ್ನೂ ಏನೆಲ್ಲ ಅದ್ಭುತಗಳನ್ನು ಸೃಷ್ಟಿಸಿರುತ್ತಿದ್ದರೋ!!

ಪುಟ್ಟಣ್ಣನವರು ತಮ್ಮ ಚಿತ್ರಗಳಲ್ಲಿ ಕರ್ನಾಟಕದ ನಿಸರ್ಗವನ್ನು ಸೊಗಸಾಗಿ ಚಿತ್ರೀಕರಿಸಿದ್ದಾರೆ. ಈಗಲೂ ಅವರ ಚಿತ್ರದ ಹಾಡುಗಳನ್ನು ನೆನೆದರೆ, ಜೊತೆಗೆ ಆ ಪರಿಸರವೂ ಕಣ್ಮುಂದೆ ಬರುತ್ತದೆ. ಎಲ್ಲಾ ಚಿತ್ರಗಳನ್ನೂ, ಚಿತ್ರೀಕರಣಗೊಂಡ ಸ್ಥಳಗಳನ್ನೂ ವಿವರವಾಗಿ ಬರೆದಿರುವ ನೀವು ಇನ್ನೂ ಕೆಲವು ಚಿತ್ರಗಳನ್ನು ಮರೆತಿದ್ದೀರಿ ಅನ್ನಿಸಿತು. ಶುಭಮಂಗಳ - ಕರಾವಳಿಯಲ್ಲಿ ಚಿತ್ರೀಕರಣ ನಡೆದಿದೆ. ನಾಕೊಂದ್ಲ ನಾಕು - ಈ ಹಾಡನ್ನು ಹಾಡುವುದು ಸೇಂಟ್‌ ಮೇರಿ ದ್ವೀಪದಲ್ಲಿ ಅಲ್ಲವೇ? ‘ಧರಣಿ ಮಂಡಲ ಮಧ್ಯದೊಳಗೆ’ ಈ ಚಿತ್ರ ಪೂರ್ತಿ ಚಿತ್ರೀಕರಣಗೊಂಡಿರುವುದು ಸೂಪಾ ಅಣೆಕಟ್ಟೆಯ ಸುತ್ತಮುತ್ತ.

ಉತ್ತಮ ಲೇಖನಕ್ಕೆ ಅಭಿನಂದನೆಗಳು.

- ತ್ರಿವೇಣಿ, ಇಲಿನಾಯ್‌ು

*

ಶ್ರೀನಿವಾಸ್‌ ಅವರಿಗೆ ನಮಸ್ಕಾರ,

ಪುಟ್ಟಣ್ಣನವರ ಚಿತ್ರಗಳ ಗೀತೆಗಳ ಉಲ್ಲೇಖನದ ನಿಮ್ಮ ಲೇಖನ ಹಲವು ಹಾಡುಗಳನ್ನು ಮತ್ತೆ ಗುನುಗುವಂತೆ ಮಾಡಿತು. ಅವರ ಚಿತ್ರಗಳಲ್ಲಿ ಮೂಡಿ ಬರುತ್ತಿದ್ದ ಪ್ರಕೃತಿ, ಪ್ರೇಮ, ನೋವು, ನಲಿವಿನ ಸೊಬಗಿನ ಹಾಡುಗಳು, ಎಲ್ಲೆ ಮೀರದ ಪ್ರಣಯ ದೃಶ್ಯಗಳ ನೆನಪು ಮತ್ತೆ ಮರುಕಳಿಸಿತು. ಮತ್ತೆ ಮನೆಮಂದಿಯಲ್ಲೇ ಒಟ್ಟಿಗೆ ಕುಳಿತು ಆನಂದಿಸುವ ಶುಭಮಂಗಳ, ಬೆಳ್ಳಿಮೋಡ, ಕಥಾಸಂಗಮ, ರಂಗನಾಯಕಿಯಂಥ ಉತ್ತಮ ಚಿತ್ರಗಳು ಮೂಡಿ ಬರಲಿ ಎಂಬ ಆಶಯವಿದೆ.

ವಿಶ್ವಾಸದಿಂದ

- ವಾಣಿ, ಸಿಂಗಪುರ್‌

*

ಸಂಪಿಗೆಯವರೆ ನಮಸ್ಕಾರ,

ಪುಟ್ಟಣ್ಣನವರ ಬಗೆಗಿನ ಲೇಖನ ಓದಿದೆ. ಓದುವಾಗ ಹಾಡುಗಳನ್ನು ನೆನೆಸಿಕೊಂಡರೆ ನಿಜವಾಗಲೂ ರೋಮಾಂಚನವಾಗುತ್ತೆ. ನಿಮ್ಮ ಲೇಖನ ಸಂಗ್ರಹಯೋಗ್ಯ.

ಧನ್ಯವಾದಗಳು

- ಸತೀಶ್‌ ಬಿ.ಎನ್‌, ಬೆಂಗಳೂರು

*

ಶ್ರೀನಿವಾಸ್‌ ಅವರಿಗೆ ನಮಸ್ಕಾರ,

ನಾನು ರಾಜಭಕ್ಷಿ ಬೆಂಗಳೂರಿಂದ. ನಾನು ನಿಮ್ಮ ಬರಹಗಳನ್ನು ತಪ್ಪದೇ ದಟ್ಸ್‌ಕನ್ನಡ.ಕಾಮ್‌ನಲ್ಲಿ ಓದುತ್ತೇನೆ. ನಿಮ್ಮ ಲೇಖನಗಳು ಕನ್ನಡನಾಡು, ನುಡಿಯ ಬಗ್ಗೆ ಬಹಳ ಪರಿಣಾಮಕಾರಿಯಾಗಿ ಇರುತ್ತವೆ.

‘ಪುಟ್ಟಣ್ಣನವರ ಚಿತ್ರಗೀತೆಗಳಲ್ಲಿ ಕರುನಾಡಿನ ಐಸಿರಿ’ ಲೇಖನ ತುಂಬ ಚೆನ್ನಾಗಿತ್ತು. ಎಲ್ಲಾ ಚಿತ್ರದ ಹಾಡುಗಳನ್ನು ನೆನಪಿಸಿದ್ದೀರಿ. ಧನ್ಯವಾದಗಳು.

‘ಕನ್ನಡನಾಡಿನ ಕರಾವಳಿ.. ಕನ್ನಡದೇವಿಯ ಪ್ರಭಾವಳಿ..’ ಗೀತೆ ಅಮೃತಘಳಿಗೆ ಚಿತ್ರದಲ್ಲ. ಇದು ಪುಟ್ಟಣ್ಣನವರ ಕೊನೆಯ ಚಿತ್ರ ಮಸಣದ ಹೂವು ಚಿತ್ರದ್ದು. ಈ ಚಿತ್ರವನ್ನು ಪುಟ್ಟಣ್ಣನವರು ಪೂರ್ತಿಯಾಗಿ ಮಾಡಲಾಗಲಿಲ್ಲ. ಈ ಚಿತ್ರ ಅರ್ಧ ಚಿತ್ರೀಕರಣವಾದ ನಂತರ ಪ್ಯಟ್ಟಣ್ಣನವರು ವಿಧಿವಶರಾದರು.

ಧನ್ಯವಾದಗಳೊಂದಿಗೆ

- ರಾಜಭಕ್ಷಿ, ಬೆಂಗಳೂರು

*

ನಮಸ್ಕಾರ ಸಂಪಿಗೆಯವರೆ,

ಪುಟ್ಟಣ್ಣನವರ ಕನ್ನಡ ಅಭಿಮಾನದ ಬಗ್ಗೆ ಲೇಖನ ದಟ್ಸ್‌ಕನ್ನಡದಲ್ಲಿ ಓದಿದೆ. ತುಂಬ ಚೆನ್ನಾಗಿದೆ. ಇದನ್ನರಿತು ನಮ್ಮ ಕನ್ನಡ ಚಿತ್ರರಂಗ ನಾಡುನುಡಿಯ ಕಾಳಜಿ ತೋರಿಸಬೇಕಷ್ಟೆ.

- ನಾಗರಾಜ ಎಂ, ಬೆಂಗಳೂರು

*

ಪುಟ್ಟಣ್ಣನವರ ಚಿತ್ರಗೀತೆಗಳಲ್ಲಿ ಕರುನಾಡಿನ ಐಸಿರಿ ಲೇಖನ ಚೆನ್ನಾಗಿ ಮೂಡಿಬಂದಿದೆ. ಪುಟ್ಟಣ್ಣನವರು ತೋರಿಸಿರುವ ಸಿರಿಯನ್ನು ಮತ್ತೊಮ್ಮೆ ಕಣ್ಣಮುಂದೆ ಬರುವಂತೆ ಮಾಡಿದ್ದೀರಿ. ಅದಕ್ಕಾಗಿ ಧನ್ಯವಾದಗಳು.

ಒಂದೇ ಒಂದು ಸಣ್ಣ ತಪ್ಪು ‘ಕನ್ನಡನಾಡಿನ ಕರಾವಳಿ...’ ಹಾಡು ಮಸಣದ ಹೂವು ಚಿತ್ರದ್ದು, ನೀವು ತಿಳಿಸಿರುವ ಹಾಗೆ ಅಮೃತಘಳಿಗೆ ಚಿತ್ರದಲ್ಲ.

ಭಾರತದ ಪ್ರತಿಭಾನ್ವಿತ ಶ್ರೇಷ್ಠ ನಿರ್ದೇಶಕರಾದರು, ಅವರ ಚಿತ್ರಗಳು ಬೇರೆ ಭಾಷೆಗಳಲ್ಲಿ ರೀಮೇಕ್‌ ಆದರೂ ಸಹ ರಾಷ್ಟ್ರಮಟ್ಟದಲ್ಲಿ ಅವರಿಗಾಗಿ ಸರಿಯಾದ ಗೌರವ ಸಿಕ್ಕಿಲ್ಲವೆಂದೇ ನನ್ನ ಭಾವನೆ. ಇಂತಹ ಮಹನೀಯರನ್ನು ಪಡೆದ ಭಾರತೀಯ ಚಿತ್ರರಂಗ ಧನ್ಯ.

ಧನ್ಯವಾದಗಳು

- ಅರುಣ್‌ಕುಮಾರ್‌, ಊರು?

*

ಶ್ರೀನಿ ಸರ್‌,

ನಿಮ್ಮ ಆರ್ಟಿಕಲ್‌ ಸೊಗಸಾಗಿ ಮೂಡಿಬಂದಿದೆ.

- ದೀಪಕ ಗೌಡ, ಬೆಂಗಳೂರು

*

ಸಂಪಿಗೆ ಶ್ರೀನಿವಾಸ್‌,

ದಟ್ಸ್‌ ಕನ್ನಡದಲ್ಲಿ ಬಂದ ಪುಟ್ಟಣ್ಣ ಕಣಗಾಲ್‌ ಅವರ ಚಿತ್ರಗಳಲ್ಲಿ ಕರುನಾಡ ಐಸಿರಿ ಎಂಬ ಲೇಖನ ತುಂಬಾ ಚೆನ್ನಾಗಿದೆ, ಅದರಲ್ಲಿ ಪುಟ್ಟಣ್ಣನವರು ನಮ್ಮ ಕನ್ನಡನಾಡಿನ ಬಗ್ಗೆ ಗೀತೆಗಳನ್ನು ಬರೆಯಿಸಿ ಅದನ್ನ ಅದ್ಭುತವಾಗಿ ಚಿತ್ರೀಕರಿಸಿರುವ ರೀತಿ ನಿಜಕ್ಕೂ ಶ್ಲಾಘನೀಯ. ಅದನ್ನ ಬರೀ ಮಾತಿನಲ್ಲಿ ಹೇಳಲು ಸಾಧ್ಯವಿಲ್ಲ. ಸನ್ನಿವೇಶಕ್ಕೆ ತಕ್ಕಂತಹ ಗೀತೆಗಳನ್ನು ಹುಡುಕಿ ಅದಕ್ಕೆ ಸುಂದರ ರಾಗ ಸಂಯೋಜನೆಯಿಂದ ಅಲಂಕರಿಸಿ ನಂತರ ಸುಂದರ ತಾಣಗಳಲ್ಲಿ ಅದನ್ನ ಚಿತ್ರೀಕರಿಸುವ ರೀತಿ ಎಷ್ಟು ಹಿತ ನೀಡುತ್ತಿತ್ತು.

ಅದರಲ್ಲೂ ನನ್ನ ಅಚ್ಚುಮೆಚ್ಚಿನ ಗೀತೆಯಾದ ವರಕವಿ ದ.ರಾ.ಬೇಂದ್ರೆಯವರ ಕವನವಾದ ‘ಮೂಡಲಮನೆಯಾ ಮುತ್ತಿನ ನೀರಿನ’ ಹಾಡಿನ ರಾಗ ಸಂಯೋಜನೆ ಮತ್ತು ಅದನ್ನ ಚಿತ್ರದಲ್ಲಿ ಅಳವಡಿಸಿರುವ ರೀತಿ ಅಂತು ಬರೀ ಮಾತಿನಲ್ಲಿ ವರ್ಣಿಸಲು ಸಾಧ್ಯವಿಲ್ಲ. ಅದೇ ರೀತಿ ಶರಪಂಜರ ಚಿತ್ರದ ‘ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ’ ಕೂಡ ಒಂದು ಪ್ರೇಮಗೀತೆ ಎನ್ನುವುದಕ್ಕಿಂತ ಅದನ್ನೂ ಪ್ರಕೃತಿಯನ್ನು ಕುರಿತೇ ಬರೆದಂತಿದೆ.

ಈ ಲೇಖನ ಪುಟ್ಟಣ್ಣನವರ ಕರುನಾಡ ಐಸಿರಿ ಕುರಿತಾಗಿರದೆ ಬರೀ ಅವರ ಚಿತ್ರದ ಗೀತೆಗಳು ಮತ್ತು ಅದನ್ನು ಚಿತ್ರೀಕರಿಸಿರುವ ರೀತಿಯನ್ನು ಕುರಿತಾಗಿದಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು. ಯಾಕೆಂದರೆ ಅವರ ಚಿತ್ರಗಳಲ್ಲಿನ ಗೀತೆಗಳಂತೂ ಅತೀ ಸುಂದರತೆಯಿಂದ ಕೂಡಿರುತ್ತಿತ್ತು. ಅವರು ತಮ್ಮ ಗೀತೆಗಳ ಚಿತ್ರೀಕರಣಕ್ಕೆ ಬಹುಶ: ಕರುನಾಡನ್ನು ಬಿಟ್ಟು ಅದರಲ್ಲೂ ನಮ್ಮ ಮಲೆನಾಡನ್ನು ಬಿಟ್ಟು ಬೇರೆ ಕಡೆ ಹೋಗುತ್ತಲೇ ಇರಲಿಲ್ಲ ಎನ್ನಿಸುತ್ತದೆ.

ಅವರ ಚಿತ್ರದಲ್ಲಿ ಗೀತೆಗಳು ಚಿತ್ರಕ್ಕೆ ಪೂರಕವಾಗೇ ಇರುತ್ತಿದ್ದವು. ಅದು ‘ಈ ಸಂಭಾಷಣೇ ನಮ್ಮ ಈ ಪ್ರೇಮ ಸಂಭಾಷಣೆ ಅತಿ ನವ್ಯ ರಸ ಕಾವ್ಯ ಮಧುರಾ ಮಧುರಾ ಮಧುರಾ’ ಅನ್ನುವ ಪ್ರಣಯಗೀತೆ ಆಗಿರಬಹುದು, ‘ಮೂಕ ಹಕ್ಕಿಯು ಹಾಡುತಿದೇ’ ಎನ್ನುವ ಶೋಕ ಗೀತೆಯಾಗಿರಬಹುದು, ‘ಶರಣೆಂಬೆನಾ ಶಶಿಭೂಷಣಾ’ ಅನ್ನುವ ಭಕ್ತಿ ಗೀತೆಯಾಗಿಬಹುದು. ಒಟ್ಟಿನಲ್ಲಿ ಸುಮ್ಮನೆ ತುರುಕಿದ್ದಾರೆ ಅನ್ನುವಂತೆಯೇ ಇಲ್ಲ.

ಇನ್ನು ಪುಟ್ಟಣ್ಣನಂತಹ ನಿರ್ದೇಶಕರು ಸಿಗಲು ಸಾಧ್ಯವೇ ಇಲ್ಲ. ಅವರ ಎಲ್ಲಾ ಚಿತ್ರಗೀತೆಗಳಿಗೆ ಜೀವ ನೀಡುತ್ತಿದ್ದ ವಿಜಯಭಾಸ್ಕರ್‌ ಕೂಡ ಇಲ್ಲ.

ಮತೊಮ್ಮೆ ನಿಮ್ಮ ಲೇಖನದಿಂದ ಅವರ ಗೀತೆಗಳಿಗೆ ಮರುಹುಟ್ಟು ನೀಡಿದ್ದೀರಿ ಅನ್ನಿಸುತ್ತಿದೆ.

ವಾಣಿ ರಾಮದಾಸ್‌ ಬರೆದ ‘ಪುಟ್ಟಣ್ಣ ಮತ್ತೊಮ್ಮೆ ಹುಟ್ಟಿಬಾರಣ್ಣ’ ಲೇಖನ ಓದುತ್ತಿದ್ದ ಬೆನ್ನಲ್ಲೇ ಬಂದ ನಿಮ್ಮ ಈ ಲೇಖನ ಕನ್ನಡಿಗರ ಮನದಲ್ಲಿ ಅವರ ಹೆಸರನ್ನ ಮತ್ತು ನೆನಪನ್ನ ತಾಜಾಗೊಳಿಸಿದೆ. ಇಂಥ ಸುಂದರ ಲೇಖನಕ್ಕಾಗಿ ನಿಮಗೆ ಅನಂತ ಧನ್ಯವಾದಗಳು.

- ಮೀರಾ ಕೃಷ್ಣ, ಯೂ.ಎಸ್‌.ಎ

*

Hi,

An excellent (but unfortunately, not full) article. There are so many other things, too.

It was the only movie in whole of Asia, perhaps, for that matter any film world, where-in a song is picturised with "slow motion & normal motion" in the same frame!!! Instance: Naagahaavu...baare, baare.... Credit to Puttanna & Camera man , Chittibabu. Yaavurava, iva yaavurava.... sung by S.Janaki in "EDakallu GuDDada Mele" (lyrics by M.Narendra Babu?) gives a complete list of taluks of MaDikeri!! Another, "GunDina mattE gammattu...." on Sharapanjara Shivram is an equally good song.

"Phalitaamsha" movie has been picturised inside GoL Gumbaz!!! The climax is of course inside a studio set.

"PaDuvaaraLLi PaanDavaru" film has songs written as kavana by Kayyara KinJYanna Rai. "HaaDomme HaaDabEku...", "Bahishkaara, yaarige nimma bahishkaara..."

He IS still of course the only Director in Kannada who literally breathed and in turn made us breathe Kannada in Karnataka thro movies. Hats off to him. There is so much to write about Puttanna.

Keep writing.

p.s.: Aricle on Daasaru was equally good. Of course your observation is correct. Its only these Tamil musicians who refuse to sing any of his RachanegaLu.

- Subbu, Chennai

*

SS thanks for the good summary of kannada/karnataka in PKs works, especially about the places mentioned.

- Sridhar Rajanna, USA

*

Sir,

Very informative article Srinivas avare. Keep writing such articles.

- Kiran K., Bengalooru


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X