ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಂದೂ ಧರ್ಮ ಅಂದ್ರೆ; ಜೀವನ ರೀತಿ, ಜೀವನ ಪ್ರೀತಿ!

By Staff
|
Google Oneindia Kannada News

ಹಿಂದೂ ಧರ್ಮ ಅಂದ್ರೆ; ಜೀವನ ರೀತಿ, ಜೀವನ ಪ್ರೀತಿ!
ವಾಣಿಜ್ಯ ನಗರಿ ದಾವಣಗೆರೆ ಬಗ್ಗೆ ಸಂಪಿಗೆ ಶ್ರೀನಿವಾಸ್‌ ಬರೆದ ಲೇಖನ, ಓದುಗರಲ್ಲಿನ ನೆನಪುಗಳ ಕೆಣಕಿದೆ. ಅಂತಹ ಕೆಲವು ಪತ್ರಗಳು...

ಮಾನ್ಯ ಸಂಪಿಗೆಯವರಿಗೆ ನಮಸ್ಕಾರಗಳು.

ತಮ್ಮ ‘ ಮಂಥನ ’ ಅಂಕಣದಲ್ಲಿ ಬರೆದ ಹಿಂದೂ ಧರ್ಮ ಮತ್ತು ಹಿಂದುತ್ವದ ಬಗೆಗಿನ ಈ ವಾರದ ಮಂಥನ ಒಂದು ಉತ್ತಮವಾದ ಲೇಖನ.

ತಾವು ಬಹಳ ಸಂಶೋಧನೆ ನಡೆಸಿ ಈ ವಿಚಾರಪೂರ್ಣ ಪ್ರಬಂಧವನ್ನು ಬರೆದಿದ್ದೀರಿ - ಎಂಬ ವಿಚಾರವು ಎಲ್ಲಾ ಓದುಗರಿಗೆ ಖಂಡಿತವಾಗಿ ವಿದಿತವಾಗುತ್ತದೆ. ತಾವು ಹೇಳಿದಂತೆ ಹಿಂದೂ ಧರ್ಮ ಅಥವಾ ಸನಾತನ ಧರ್ಮ ಒಂದು ಜೀವನ ರೀತಿ. ಇದು ಉತ್ತಮವಾದ ಜೀವನ ರೀತಿಯಾದುದಕ್ಕೇ ಇಂದಿಗೆ ಅಸ್ತಿತ್ವದಲ್ಲಿದೆ.

ಹಿಂದೂಗಳ ಮೇಲೆ ಇಂದು ಯಾವ ಧಾರ್ಮಿಕ ಕಡ್ಡಾಯವೂ ಇಲ್ಲ. ಆದರೂ, ಇದನ್ನು ನಮ್ಮ ದೇಶದಲ್ಲಿನ ಬಹುಪಾಲು ಜನರು ಪಾಲಿಸುತ್ತಿದ್ದಾರೆ. ಇದು ಹೆಮ್ಮೆಯ ವಿಚಾರ. ಹಿಂದುತ್ವ ಎಂಬ ಶಬ್ದವು ಈ ದಿನಗಳಲ್ಲಿ ಪ್ರಚಾರ ಮಾಧ್ಯಮದ ಪ್ರಭಾವದಿಂದಲೋ, ಅಥವಾ, ರಾಜಕೀಯ ಶಕ್ತಿಗಳ ಪ್ರಭಾವದಿಂದಲೋ, ‘ ಬೇರೆ ಅರ್ಥ ’ ಕೊಡುವ ರೀತಿಯಲ್ಲಿ ಬಳಸಲ್ಪಡುತ್ತಾ ಇದೆ. ಹಲವರು ಈ ಶಬ್ದವನ್ನು ಹಿಂದೂ ರ್ಯಾಡಿಕಲ್ಸ್‌ ಎಂಬ ಅರ್ಥದಲ್ಲಿ ಅರ್ಥೈಸಿಕೊಳ್ಳುತ್ತಾ ಇದ್ದಾರೆ. ಈ ಶಬ್ದವನ್ನು ನಿಜವಾದ ಹಿಂದೂಗಳು ಕೂಡಾ ಉಪಯೋಗಿಸಲು ಹಿಂಜರಿಯುವ ಪರಿಸ್ಥಿತಿ ಉಂಟಾಗಿದೆ. ಇದು ಶೋಚನೀಯ.

ಈ ರೀತಿಯ ಅರ್ಥವಿಲ್ಲದ ಹೊಸಾ ಕಳಂಕ ಭಾವವು ‘ ಹಿಂದುತ್ವ ’ ಎಂಬ ಶಬ್ದಕ್ಕೆ ತಗಲುತ್ತಿರುವ ಅಥವಾ ಈಗಾಗಲೇ ತಗಲಿರುವ ತಪ್ಪು ಅರ್ಥ ಕೊಡುವ ಭಾವನೆಗಳನ್ನು ಹೋಗಲಾಡಿಸಲಿ! - ಎಂದು ಒರ್ವ ಸಾಮಾನ್ಯ ಹಿಂದುವಾದ ನಾನು ಆಶಿಸುತ್ತೇನೆ. ಈ ದಿಸೆಯಲ್ಲಿ ತಮ್ಮಂತಹಾ ಬರಹಗಾರರ ಪ್ರಯತ್ನ ಮುಂದುವರಿಯಲಿ! - ಎಂದು ಹಾರೈಸುತ್ತೇನೆ.

ಉತ್ತಮ ಲೇಖನಕ್ಕೆ ವಂದನೆಗಳು.

ತಮ್ಮ ವಿಸ್ವಾಸಿ

- ಎಸ್‌. ಮಧುಸೂದನ ಪೆಜತ್ತಾಯ, ಬೆಂಗಳೂರು.

*

ಶ್ರೀನಿವಾಸ್‌ ಅವರೆ,

ನಿಮ್ಮ ಲೇಖನ ಓದಿದೆ. ಬಹಳ ಚೆನ್ನಾಗಿ ಮೂಡಿಬಂದಿದೆ. ಹಲವಾರು ವಿಷಯ ನಿಮ್ಮ ಲೇಖನದಿಂದ ತಿಳಿದುಕೊಂಡೆ.

ಧನ್ಯವಾದಗಳು

- ವಿ.ಎಸ್‌. ಎನ್‌. ಸಿಂಹ, ಬೆಂಗಳೂರು.

*

ಮಾನ್ಯರೇ,

ಹಿಂದುತ್ವದ ಅರ್ಥವೇ ಬದಲಾಗುವಂತೆ, ನಮ್ಮ ಸ್ವಯಂ ಘೋಷಿತ ಹಿಂದೂ ನಾಯಕರು ವರ್ತಿಸುತ್ತಿದ್ದಾರೆ. ಕೆಲವರು ಗುತ್ತಿಗೆ ಹಿಡಿದಿದ್ದಾರೆ! ಈ ಮಧ್ಯೆ ಮೂಡಿದ ಸಂಪಿಗೆ ಲೇಖನ ಹೊಸ ಚಿಂತನೆಗೆ ಗುರಿಪಡಿಸುವಂತಿದೆ.

- ಕೇಶವಸುತ, ಬೆಂಗಳೂರು.

*

ನಮಸ್ಕಾರ ಸಂಪಿಗೆಯವರೆ,

ನಿಮ್ಮ ಈ ವಾರದ ಅಂಕಣ ಬರಹ ನಮ್ಮ ಅಖಂಡ ಮತ್ತು ಸನಾತನ ಧರ್ಮವಾದ ಹಿಂದುತ್ವದ ಬಗ್ಗೆ ಸಮರ್ಪಕವಾಗಿದೆ ಮತ್ತು ಹೆಚ್ಚು ಸಾಂದರ್ಭಿಕವಾಗಿದೆ. ಅದಕ್ಕಾಗಿ ನಿಮಗೆ ತುಂಬು ಧನ್ಯವಾದಗಳು.

ನನಗೆ ಹಿಂದುತ್ವ ಎಂದ ತಕ್ಷಣ ನೆನಪಿಗೆ ಬರುವ ಹೆಸರು ನಮ್ಮ ದೇಶ ಮತ್ತು ವಿಶ್ವ ಕಂಡ ಸಿಂಹಸದೃಶ ವ್ಯಕ್ತಿತ್ವ ಹೊಂದಿದ ಮೇರು ಸನ್ಯಾಸಿ ಸ್ವಾಮಿ ವಿವೇಕಾನಂದರವರು. ಅವರೆ ಹೇಳಿರುವಂತೆ ನಮ್ಮ ಹಿಂದೂ ಧರ್ಮ ಪ್ರಪಂಚದ ಎಲ್ಲಾ ಧರ್ಮಗಳಿಗೆ ತಾಯಿ ಇದ್ದಂತೆ. ಜಗತ್ತಿನ ಪ್ರತಿಯೊಂದು ಧರ್ಮದ ಮೂಲ ಬೇರು ನಮ್ಮ ಹಿಂದೂ ಧರ್ಮದಲ್ಲಿದೆ. ಹೀಗೆ ವಿವೇಕಾನಂದರು ತಮ್ಮ ಚಿಕಾಗೋ ವಿಶ್ವ ಧರ್ಮ ಸಮ್ಮೇಳನದಲ್ಲಿ ಜಗಜ್ಜಾಹೀರು ಮಾಡಿ ಪ್ರಪಂಚದ ಎಲ್ಲಾ ಧರ್ಮ ಮುಖಂಡರುಗಳು ಸೇರಿದಂತೆ ಎಲ್ಲಾ ಜನರ ಗಮನವನ್ನು ನಮ್ಮ ಭಾರತದ ಕಡೆಗೆ ನೋಡುವಂತೆ ಮಾಡಿ ನಮಗೆಲ್ಲಾ ಉನ್ನತವಾದ ವೇದಿಕೆಯನ್ನು ಹಾಕಿಕೊಟ್ಟಿದ್ದಾರೆ.

ಸರ್ವಧರ್ಮ ಸಮನ್ವಯತೆಯನ್ನು ಬೋಧಿಸುವ ಧರ್ಮವೆಂದರೆ ಅದು ಹಿಂದೂ ಧರ್ಮ ಒಂದೆ. ಇಂಥ ಧರ್ಮದ ನಾಡಿನಲ್ಲಿ ಜನ್ಮ ತಾಳಿರುವ ನಾವೆಲ್ಲಾ ಧನ್ಯವೇ ಸರಿ.

ವಂದನೆಗಳೊಂದಿಗೆ

ನಿಮ್ಮವ

- ತಿಪ್ಪೇರುದ್ರ, ಬೆಂಗಳೂರು.

*

ನಮಸ್ಕಾರ ಸಂಪಿಗೆಯವರೆ,

ಹಿಂದೂ ಧರ್ಮ ಹಾಗೂ ಹಿಂದುತ್ವದ ಮೇಲೆ ಅದ್ಭುತವಾದ ಬೆಳಕು ಚೆಲ್ಲಿದ್ದೀರಿ. ಇದಕ್ಕಾಗಿ ನೀವು ಅಭಿನಂದನಾರ್ಹರು.

- ಆರ್‌.ಡಿ., ಬೆಂಗಳೂರು

*

Dear Sampige Shrinivas.

I read your article about Hindhu religion in thats kannada web site it is really good article. Please do keep writing similar articles.

With warm regards.

-Shridhar, UK.

*

Dear Srinivas,

Very good article. Excellent pointers. The threat for our beautiful and eternal values of our Dharma is not external. It is our own( I am ashamed to say) ignorant so called Hindus. No wonder our Rishis guarded this knowledge in Chnadus and gave it away carefully but freely to only deserving and capable adhikari regardless of caste or creed ( which are meaningless anyway).

Thanks for the eye opener anyway.

- Keshav, Place?

*

Namaskara Srinivas,

A big issue is bieng made due to involvment of Hindu organizations in changing the History text book of 6th grade here in California. Article appeared in outlook magazine for and against. The Argument of left is that Hindus religion did not originate in India and hence the argument of Right wing organizations like VHP and RSS that India belongs only to Hindus is wrong.

- Venkatesh

*

Hi, Srinivas,

I appreciate your article on Hindutva. Not too many people are interested in these things because it is very difficult to understand. Even if one really wants to uderstand, the chances of misunderstanding is more than understanding it. I wish I could have tried writing this in Kannada, Baraha but so far I am not successful in sending the emails. I have not seen anybody discussing these issues in kannada web pages.

Thank you for bringing the meaning of Hindutva. The importance of religion in Hinduism is not targetted at the society. It is solely for the individual and definitely not a collective thing. This is because each individual is so unique, the teachings can never be a common yardstick for all individuals. Again, this view is true to more or less for the present society or the so called present generation where it is very difficult to get away from the influence of technologies. We get up from the bed, use microwave for a coffee, use radio, television, cellphone, computer, drive car, drink beer, make love etc.. In every thing science is behind which means a condensed form of thinking. In its totality the trust with the mind is very immediate. So what I am saying is that mind or thinking is the yardstick of our life. The purpose of religion is to make an individual a spiritual person. In this direction, to make a person spiritual the only option is Meditation.

The biggest problem of modern India is that the religion is taught with the heart as the center and not mind. Devotion is the biggest path and the champions of human life say from north Kabir, Ramakrishna, Meera to Basavanna, Madhvacharya, Shankaracharya , purandara etc in the south have emphasised on Devotion. This is why there is so much confusion in India. We follow the principles set by these great people or scriptures which follows the heart (trust) but in reality we try to measure it by the mind (mis-trust) which takes you no where. But the opposite of this is not true. If you follow meditation you can understand what devotion is and can understand our religion better. I think this is the only way of life, a long and an arduous way.

Just to finish off where you left, even Muslims or Christians go to Mosques or church, there was no other Mohammad or Christ born all these years. As I said there is no meaning in doing some rituals without understanding them. What is the use of Sandhyavandanam we do, reciting some Sanskrit shlokas which we dont have a single clue what we are saying. Muslims protesting against Mohammad cartoon is just a mob mentality because there is no meaning for it. They do Namaz in Mosque where they pray in front of an empty wall. Praying in front of an empty wall has lot of significance but they have to move forward from there. Love for a relgion comes from inside and definitely not from outside. We are all a product of our religion but we can appreciate it only if yu can see the source from the stand point of meditation otherwise we cannot understand it. To make things worse we misunderstand it. Well, I appreciate your article, please write whenever you can because this is a noble cause. Thank you very much. Let me end this in one single line by Thyagarajas words.

Endaro Mahanubhavulu Andariki Na Vandanamu.

-Ram, Boston, US

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X