ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಸಂತ ನಿಜ ಹೇಳಲೆ? ಕೇಳುವ ಬದಲು ಮುತ್ತು ಕೊಡಬಾರದಿತ್ತೆ?

|
Google Oneindia Kannada News

ವಸಂತ ವಸಂತ ನನ್ನ ವಸಂತ,

ನಿನ್ನ ಮುನಿಸು ಕಾರಣವಾಗಿ ನಾನು ತಂದೆಯೊಂದಿಗೆ ನಿಮ್ಮ ಊರಿಗೆ ಬಂದು ಅಂದು ಮತ್ತು ಮರುದಿನವೂ ನಿಮ್ಮ ಮನೆಯಲ್ಲಿ ಉಳಿದು, ಆ ಮರುದಿನ ಬೆಳಗಿನ ರೈಲಿಗೆ ಹೊರಟು ನಿಂತಾಗ ಅಮ್ಮ ಕೇಳಿದರು, ಏನೇ ಹುಡುಗಿ ನಮ್ಮ ವಸಂತ ಹೇಗೆ? ಈಗ ಏನಂತಿ?

ಅಪ್ಪ ನಿನ್ನ ಪರ ನಿಂತರು. ನಮ್ಮ ವಸಂತ ಅಪರಂಜಿಯಂತಹ ಅಳಿಯ. ಕೂಡಲೆ ಅಪ್ಪ(ಮಾವ) ನಮ್ಮ ಶಕುಂತಲೆ ಮುತ್ತಿನಂಥ ಸೊಸೆ. ನನ್ನ ಹಿಂದೆಯೇ ನಿಂತಿದ್ದ ನೀನು ಮೆಲ್ಲನುಸಿರಿದೆ ಮುತ್ತಲ್ಲ, ಮುತ್ತುಕಳ್ಳಿ.. ಆ ಮಾತಿಗೆ ನಾನು ಮೈಮರೆತು ನಿಂತಿದ್ದೆ. ಅಪ್ಪ, ಹೊರಡುವವಳೋ, ಇಲ್ಲೇ ಇದ್ದು ಬಿಡುವವಳೊ? ಅಂದಾಗಲೇ ನನಗೆ ಊರಿಗೆ ಹೋಗಬೇಕಿದೆ ಅನ್ನಿಸಿದ್ದು.

ವಸಂತ ಈಗ ಕೇಳುತ್ತಿದ್ದೇನೆ, ಮುತ್ತು ಕದ್ದವನು ನೀನೋ ನಾನೊ? ನಿನ್ನ ಕಳ್ಳ ಮರೆವಿಗೆ ನೆನಪಿಸುತ್ತಿದ್ದೇನೆ: ಮುಸುಕುಜೋಳದ ತೋಟಕ್ಕೆ ಕರೆದುಕೊಂಡು ಹೋದೆಯಲ್ಲ. ಹುಡುಕಿ ಹುಡುಕಿ ಹಾಲು ಹಿಡಿದ ತೆನೆಯನ್ನು ಕಿತ್ತು ತಂದು ತಿನ್ನಲು ಕೊಟ್ಟೆ. ನಾನು ಕಡಿದು ಕಚ್ಚಿ ತಿನ್ನುವಾಗ ಅದರ ಹಾಲು ತುಟಿಯಂಚಿನಲ್ಲಿ ಜಿನುಗಿತ್ತು. ಆಗ ನೀನು ಮಾಡಿದ್ದೇನು!

Two beautiful birds singing the love song

ಅಲ್ಲಿಗೆ ಮುತ್ತುಕೊಟ್ಟೆ. ಆ ಅನಿರೀಕ್ಷಿತ (ರೋಮಾಂಚನ) ಕ್ಷಣ ಕಳೆದ ಕೂಡಲೇ ನಾನು ಸಿಡುಕಿದೆ. ಆಗ ನೀನು ನಾನು ಮುತ್ತು ಕೊಟ್ಟಿದ್ದು ಆ ಹಾಲಿನ ಹನಿಗೆ ಎಂದು ಹೇಳಿದೆ. ಕೂಡಲೇ ತೆಲುಗಿನ ಹಾಡೊಂದರ ಸಾಲನ್ನು ಕನ್ನಡದಲ್ಲಿ ಹೇಳಿದೆ, ಹೆಂಗಸರ ಮಾತುಗಳಿಗೆ ಅರ್ಥಗಳೇ ಬೇರೆಯೇ/ ಹೌದೆಂದರೆ ಅಲ್ಲೆಂದು ಅಲ್ಲೆಂದರೆ ಹೌದೆಂದು ನಿಜ ಅನ್ನಿಸಿತು. ಆದರೆ ಹೇಳಿಬಿಟ್ಟರೆ ನೀನು ಮುತ್ತಿನ ಮಳೆಯನ್ನೇ ಕರೆದುಬಿಡುವಿಯೆಂದು ಸಿಡುಕನ್ನು ಮುನಿಸಾಗಿಸಿಕೊಂಡೆ.

ಆ ಮೇಲೆ ನೀನು ಹಸಿಹಸಿಯಾದ ಎರಡು ತೆನೆಗಳನ್ನು ತಂದು ಕಿಚ್ಚು ಹೊತ್ತಿಸಿ, ಮುಸುಕು ಸುಲಿಯದೆಯೇ ಸುಟ್ಟು ಕೊಟ್ಟೆ. ಅಂಥದನ್ನು ಎಂದೂ ತಿಂದಿರಲಿಲ್ಲ. ತುಟಿ ಸುಡುವ ಬಿಸಿಬಿಸಿ. ನನ್ನ ಕೆಂದುಟಿ ಮತ್ತೂ ಕೆಂಪೇರಿತು. ನೀನು ಬಿಸಿಯಾಯಿತೆ ಎಂದೆ. ನಾನು ಹೂಂ ಎಂದೆ. ನೀನು ನನ್ನ ತುಟ್ಟಿಯಿಂದ ತಂಪು ಮಾಡಲೇ ಎಂದೆ. ಗಾಳಿ ತಣ್ಣಗಿದೆ. ಅದು ತಣ್ಣಗೆ ಮಾಡುತ್ತೆ ಎಂದೆ. ಅದೇ ಭಾಗ್ಯಶಾಲಿ ಎಂದು ಕೈಗಳನ್ನು ಎತ್ತಿ ಗಾಳಿ ನನ್ನ ತುಟಿ ಬಳಿ ಸುಳಿಯದಂತೆ ಓಡಿಸುವಂತೆ ಆಡಿಸಿದೆ. ವಸಂತ ನಿಜ ಹೇಳಲೆ? ಕೇಳುವ ಬದಲು ಮುತ್ತು ಕೊಟ್ಟುಬಿಡಬಾರೆ ಅನಿಸಿತ್ತು. ಆ ಕವಿ ಯಾರೋ ಹೆಂಗಸರ ಮಾತುಗಳಿಗೆ ಅರ್ಥಗಳೇ ಬೇರೆಯೇ/ ಹೌದೆಂದರೆ ಅಲ್ಲೆಂದು ಅಲ್ಲೆಂದರೆ ಹೌದೆಂದು ಹೇಳಿದ್ದು ನಿಜ.

Two beautiful birds singing the love song

ಆಮೇಲೆ ನೀನು ಬದುವಿನ ಮೇಲಿನ ಮಲ್ಲಿಗೆ ಗಿಡವನ್ನು ತೋರಿಸಿದೆ. ನಾನು ಪುಳಕಿತಳಾಗಿ ಅದರ ಹತ್ತಿರ ಹೋಗಿ ಬಾಹುಗಳಿಂದ ಬಳಸಿ ಅದಕ್ಕೆ ಮುತ್ತು ಕೊಟ್ಟೆ. ನೀನು ಆ ಗಿಡವನ್ನು ಕಿತ್ತು ಹಾಕುವುದಾಗಿ ಹೇಳಿದೆ. ನನ್ನ ನೋಟದಲ್ಲಿ ಏಕೆಂಬ ಬೆರಗಿನ ಪ್ರಶ್ನೆಯಿತ್ತು. ಅದಿಲ್ಲದೆ ಹೋಗಿದ್ದರೆ ನೀನು ನನ್ನನ್ನೇ ಅಪ್ಪಿಕೊಳ್ಳುತ್ತಿದೆಯೇನೊ ಎಂದೆ. ಮನಸ್ಸು ಬಾ ಅಪ್ಪಿಕೋ ಎಂದಿತು. ಅದು ನಿನಗೆ ಕೇಳಿಸಲಿಲ್ಲ. ಹುರುಪಿಗೆ ನೆರೆ ಬಂದಂತೆ ನೀನೊಂದು ನನಗೆ ಹಾಡಲು ಬಾರದ ಯುಗಳಗೀತೆ ಒಂದನ್ನು ಹಾಡಿದೆ.
Two beautiful birds singing the love song

ಮೋಡದಿ ಏನುಂಟು ನನ್ನ - ಮನದಲಿ ಏನುಂಟು?
ಮೋಡದಿ ಕಣ್ಣೀರು ನಿನ್ನ - ಮನದಲಿ ಪನ್ನೀರು

ತೋಟದಿ ಏನುಂಟು ನನ್ನ - ಮಾತಲಿ ಏನುಂಟು?
ತೋಟದಿ ಮಲ್ಲಿಗೆಯು ನಿನ್ನ - ಮಾತಲಿ ಸವಿಜೇನು

ಹೊಲದಲಿ ಏನುಂಟು ನನ್ನ - ಮೈಯಲಿ ಏನುಂಟು?
ಹೊಲದಲಿ ಬಂಗಾರ ನಿನ್ನ - ಮೈಯಲಿ ಸಿಂಗಾರ

ನದಿಯಲಿ ಏನುಂಟು ನನ್ನ - ಹಾಡಲಿ ಏನುಂಟು?
ನದಿಯಲಿ ಗಲಗಲವು ನಿನ್ನ - ಹಾಡಲಿ ಸರಿಗಮವು

ನನ್ನಲಿ ಏನುಂಟು - ನಿನ್ನಲಿ ಏನುಂಟು?
ನನ್ನಲಿ ನೀನುಂಟು - ನಿನ್ನಲಿ ನಾನುಂಟು.

Two beautiful birds singing the love song

ನಾನು, ಅದು ನಿನ್ನದಲ್ಲ, ತೆಲುಗಿನಿಂದ ಕದ್ದಿದ್ದು ಎಂದು ಹೇಳಿ ಕಿಸಕ್ಕೆಂದು ನಕ್ಕೆ. ಅದಕ್ಕೆ ನೀನು, ಪ್ರೇಮಿಗಳು ಕೃತಿಚೌರ್ಯದ ಆಪರಾಧ ಮುಕ್ತರು ಎಂದು ಹೇಳಿದ್ದು ಈಗ ನಿಜ ಅನ್ನಿಸುತ್ತಿದೆ. ಈ ಮಧುರ ನೆನಪುಗಳಲ್ಲಿ ಮುಳುಗಿರುವ ರೈಲು ನಮ್ಮೂರನ್ನು ತಲುಪಿತ್ತು. ಇಷ್ಟು ಬೇಗ ಬಂದುಬಿಟ್ಟಿತೆ ಅಪ್ಪ? ಅಂದದ್ದಕ್ಕೆ ಅಪ್ಪ ನಕ್ಕು ಮನೆಗೆ ಹೋದ ಮೇಲೆ ಹೇಳುತ್ತೇನೆ, ನಡಿ ಅಂದರು.

English summary
Two beautiful birds singing the love song. Heart touching love story by Sa Raghunatha, Kolar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X