ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ. ರಘುನಾಥ ಅಂಕಣ: ‘ವಾತ್ಸ್ಯಾಯನ ಕಾಮಸೂತ್ರ’ ಪುಸ್ತಕದ ಕಥೆ

By ಸ. ರಘುನಾಥ
|
Google Oneindia Kannada News

ಬೆಂಗಳೂರಿನ ಸಾಹಿತ್ಯ ಭಂಡಾರದ ಮ. ಗೋವಿಂದರಾಯರು ಎಸ್.ಎಲ್. ಭೈರಪ್ಪನವರ ಕಾದಂಬರಿಗಳ ಜೊತೆ ಮ. ಶ್ರೀಧರಮೂರ್ತಿಯವರ ವಾತ್ಸ್ಯಾಯನ ಕಾಮಸೂತ್ರವನ್ನೂ ಸೇರಿಸಿದ್ದರು. ಶಾಲಾ ಕಾರ್ಯಗಳ ನಡುವೆ ಬಿಡುವಿರದೆ ಕಾದಂಬರಿಗಳನ್ನು ರಾತ್ರಿಯ ವೇಳೆ ಓದುತ್ತಿದ್ದೆ.

ವಾತ್ಸ್ಯಾಯನ ಕಾಮಸೂತ್ರಕ್ಕೆ ಬರೆದಿದ್ದ ದೀರ್ಘ ಪೀಠಕೆಯನ್ನಷ್ಟೇ ಓದಿದ್ದೆ. ನನ್ನ ಬಳಿ ಈ ಪುಸ್ತಕವನ್ನು ನೋಡಿದ ಸಹೋದ್ಯೋಗಿ ಎಸ್.ಎಂ. ನಾರಾಯಣಪ್ಪ, 'ಛೀ.. ಇಂಥದನ್ನು ನೀನು ಓದುವುದೇ? ಸರಿಯಲ್ಲ ಎಂದು ಆಕ್ಷೇಪಿಸಿದ್ದರು. ಅವರಿಗೆ ಅದರ ಕುರಿತು ಎಷ್ಟೇ ಹೇಳಿದರೂ ಅದು ನನ್ನಲ್ಲಿರುವುದನ್ನು ಅವರು ಸಮ್ಮತಿಸಲಿಲ್ಲ. ಸುಮ್ಮನಾದೆ. ಮುಂದೆ ನಾನು 'ಭರತೇಶ ವೈಭವ' ಕಾವ್ಯವನ್ನು ಓದಲು ಕಾರಣವಾದುದು ಈ ಪೀಠಿಕೆಯೇ.

ಗಡಿಯಲ್ಲಿ ಮಕ್ಕಳಿಗೆ ಕನ್ನಡ ವ್ಯಾಕರಣ ಕಲಿಸುವುದು ಮುಖ್ಯ
ಕಾದಂಬರಿಗಳನ್ನು ಓದಿ ಮುಗಿಸುವಾಗ್ಗೆ ನನಗೆ ಅಡ್ಡಗಲ್ಲಿನಿಂದ ಗೌನಿಪಲ್ಲಿಗೆ (1982, ಜೂನ್) ವರ್ಗವಾಯಿತು. ಅಲ್ಲಿ ಪರಿಚಯವಾದ ವ್ಯಕ್ತಿ, ವ್ಯವಸಾಯೋತ್ಪನ್ನ ಸಹಕಾರ ಸಂಘದ ಕಾರ್ಯದರ್ಶಿ ಜಯರಾಂ. ಆ ಕಾಲಕ್ಕೆ ಆಂಧ್ರದ ಗಡಿಗ್ರಾಮಗಳಲ್ಲಿ ನಾನು 'ಕನ್ನಡ ಮೇಷ್ಟ್ರು' ಎಂದು ಪರಿಚಿತನಾಗಿದ್ದೆ. ಕಾರಣ ನಾನು ಮೂರನೆಯ ಇಯತ್ತೆಯಿಂದ ಏಳನೆಯ ಇಯತ್ತೆಯವರೆಗೆ ಪಾಠ ಮಾಡುತ್ತಿದ್ದುದು ಕನ್ನಡ ವಿಷಯವನ್ನೇ. ಗಡಿಯಲ್ಲಿ ಮಕ್ಕಳಿಗೆ ಕನ್ನಡ ವ್ಯಾಕರಣ ಕಲಿಸುವುದು ಮುಖ್ಯವೆಂದು ಮುಖ್ಯೋಪಾಧ್ಯಾಯರಾಗಿದ್ದ ರಮೇಶ್, ನನಗೆ ಬೇರೊಂದು ವಿಷಯವನ್ನೂ ಬೋಧಿಸಲು ಕೊಡುತ್ತಿರಲಿಲ್ಲ.

Sa Raghunatha Column: The Story Of The Vatsyayana Kamasutra Book

ಕನ್ನಡವೆಂದರೆ ಅಭಿಮಾನ ಜಾಸ್ತಿ
ಒಂದು ದಿನ ಜಯರಾಂ ಮನೆಗೆ ಬಂದರು. ಪುಸ್ತಕಗಳನ್ನು ನೋಡಿ, ಇಷ್ಟೊಂದು ಪುಸ್ತಕಗಳೆ! ಇಲ್ಲಿ ಯಾರ ಬಳಿಯಲ್ಲೂ ನೋಡಿಲ್ಲ. ಎಲ್ಲ ಕನ್ನಡದವೇ ಅಂದರು. ಮಕ್ಕಾಲು ಭಾಗ ಅಂದೆ. ಉಳಿದವು? ಅಂದರು. ತೆಲುಗಿನವು ಅಂದೆ. ನನ್ನ ಮಾತೃಭಾಷೆ ತೆಲುಗು. ಆದರೆ ಕನ್ನಡವೆಂದರೆ ಅಭಿಮಾನ ಜಾಸ್ತಿ ಎಂದು ನನ್ನಲ್ಲಿ ಹಿಗ್ಗು ತಂದರು. ನಾನೂ ತಮಿಳುನಾಡಿನ ಗಡಿಯಾದ ಮಾಲೂರು ತಾಲುಕಿನವನೇ ಅನ್ನುವುದನ್ನು ಮರೆತು, ಈ ಪ್ರದೇಶದ ಜನ ನಿಮ್ಮಂತೆಯೇ ಅಂದೆ. ಅವರು ಖುಷಿಯಾದರು. ಅವರು ಖುಷಿಯಾಗುವುದು ನನಗೆ ಮುಖ್ಯವಾಗಿತ್ತು. ಏಕೆಂದರೆ ಆಗತಾನೆ 'ನಮ್ಮ ಮಕ್ಕಳು' ಅಂಬೆಗಾಲಿಟ್ಟಿತ್ತು. ಅದಕ್ಕೆ ಅವರ ಸಹಾಯ ಬೇಕಿತ್ತು. ನಮ್ಮ ಮಕ್ಕಳು ಕುಟುಂಬಕ್ಕೆ ಅವರಿಂದ ಮುಫತ್ತು ಆಹಾರ ಧಾನ್ಯ ಸಿಗಬೇಕಿತ್ತು.

ರಾತ್ರಿ ಹೊತ್ತು ಒಬ್ಬನೆ ಇದ್ದಾಗ ಓದಬೇಕು
ಜಯರಾಂ ಕಣ್ಣು, ಮೇಜಿನ ಮೇಲಿದ್ದ ವಾತ್ಸ್ಯಾಯನ ಕಾಮಸೂತ್ರದ ಮೇಲೆ ಬಿತ್ತು. ಥಟ್ಟನೆ ಕೈಗೆತ್ತಿಕೊಂಡು 'ಓದಿ ಕೊಡುವೆ' ಅಂದರು. ನಾನು ಓದುತ್ತಿರುವೆನೆಂದು ಸುಳ್ಳು ಹೇಳಿದೆ. ನಿಮಗೆ ಓದಲು ಬೇಕಾದಷ್ಟಿದೆ, ಓದಿ. ಇದನ್ನು ಯಾವಾಗೆಂದರೆ ಆವಾಗ ಓದುವಂತಿಲ್ಲ. ರಾತ್ರಿ ಹೊತ್ತು ಒಬ್ಬನೆ ಇದ್ದಾಗ ಓದಬೇಕು. ಕೊಂಡ ಲೇಟಾಗುತ್ತೆ ಎಂದು, ಬನಿಯನ್ ಒಳಗೆ ಸೇರಿಸಿಕೊಂಡರು.
ತಿಂಗಳಾಯಿತು, ಆರು ತಿಂಗಳುಗಳು ಕಳೆದವು. ವರುಷವೂ ಆಯಿತು. ಪುಸ್ತಕ ನನ್ನ ಕೈಸೇರಲಿಲ್ಲ. ನಾನು ಕೇಳುವುದು, ಅವರು ಕೊಡುತ್ತೇನೆ ಅನ್ನುವುದು ಮುಂದುವರೆಯಿತು. ಗಟ್ಟಿಯಾಗಿ ಕೇಳುವಂತಿರಲಿಲ್ಲ. ನಿಷ್ಟುರವಾಗಿ ಕೇಳುವುದು ಸಾಧ್ಯವಿರಲಿಲ್ಲ. ಕೇಳಿದರೆ ನೆರವು ನಿಲ್ಲಬಹುದಿತ್ತು. ಮಾತಿಗೆಂಬಂತೆ ಕೇಳುತ್ತಿದೆನಷ್ಟೆ.

ಸಾರ್, ಕ್ಷಮಿಸಿ. ಪುಸ್ತಕ ಇಲ್ಲ
ಬರೆಯುತ್ತಿದ್ದ ಲೇಖನವೊಂದಕ್ಕೆ ಆ ಪುಸ್ತಕದ ನೆರವು ಬೇಕಿತ್ತು, ಅದನ್ನೂ ಹೇಳಿದೆ. 'ಸಾರ್, ಕ್ಷಮಿಸಿ. ಪುಸ್ತಕ ಇಲ್ಲ' ಅಂದರು. ಏಕೆ, ಏನಾಯತು ಅಂದೆ. ಬೇಸರ ಬಂದು ಹರಿದು ಹಾಕಿದೆ ಅಂದರು. ಆ ಮಾತಿನಿಂದ ನಾನು ಸಿಟ್ಟಾದರೂ ನೆರವು ನಿಂತೀತೆಂದು ತೋರಿಕೊಳ್ಳಲಿಲ್ಲ. ಕಾರಣ ಕೇಳಿದೆ. ಅದರಲ್ಲಿ 'ಅಂಥದು' ಒಂದೂ ಇರಲಿಲ್ಲ. ಬೇಸರದಲ್ಲಿ ಅದು ನನ್ನದಲ್ಲ ಅನ್ನೋದು ನೆನಪಾಗಲಿಲ್ಲ. 'ಬೇಕಿದ್ದರೆ' ಅದರ ಹಣ ಎಷ್ಟು ಹೇಳಿ, ಕೊಡ್ತೀನಿ ಅಂದರು. ಹೋಗಲಿ ಬಿಡಿ ಎಂದೆ. ಇದು ಯಾವ ಮುಹೂರ್ತದಲ್ಲಿ ಆಯಿತೋ ನನಗೆ ಮತ್ತೆ ಅದನ್ನು ತಂದು ಓದಲಾಗಲೇ ಇಲ್ಲ. ಇದಕ್ಕೆ ನಾರಾಯಣಪ್ಪನವರ ಪ್ರತಿಕ್ರಿಯೆ ಏನಿದ್ದೀತು ಎಂದು ಕುತೂಹಲದಿಂದ ಇಡೀ ಪ್ರಸಂಗವನ್ನು ಅವರಿಗೆ ಹೇಳಿದೆ. ಹೋಗಲಿ ಬಿಡಿ, ಪೀಡೆ ತೊಲಗಿತು ಎಂದು ಸಂತೋಷಪಟ್ಟರು.

English summary
Bengaluru literary library's Govindaraya was With the SL Bhairappa's Novels He also included Sridharamoorthy's Vatsyayana Kamasutra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X