ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ ರಘುನಾಥ ಅಂಕಣ; ವಸ್ತಾ ವಟ್ಟಿದೆ ಪೋತಾ ವಟ್ಟಿದೆ ಬಾಧಯೆಂದುಕಂಟಾ?

By ಸ ರಘುನಾಥ, ಕೋಲಾರ
|
Google Oneindia Kannada News

ಸೋಮೇಶನ ಸಮಾಧಿಗೆ ಹಾಲು ಹಾಕುವ ಮೂರನೆಯ ದಿನದ ಶಾಸ್ತ್ರ ಮುಗಿಸಿಕೊಂಡು ತಂದೆ ಮಗ ಮನೆಗೆ ಮರಳುವ ಹೊತ್ತಿಗೆ ಕಡಪದ ಅಚಲ ಮಠದಿಂದ ಸಿದ್ದಯ್ಯದಾಸ ಬಂದು ತಿಂಡಿ ತಿನ್ನುತ್ತಿದ್ದ. ಹೀಗೆ ವರ್ಷಕ್ಕೊಂದಾವರ್ತಿಯಾದರೂ ಆತ ಬರುತ್ತಿದ್ದ. ಬರುವ ದಾರಿಯಲ್ಲೇ ಬೀರಣ್ಣನ ಮಗನ ಮರಣದ ವಾರ್ತೆ ಕೇಳಿದ್ದ.

ಅವನು ಊರಿಗೆ ಬಂದರೂ ಅಪ್ಪಯ್ಯನ ಮನೆ ಬಿಟ್ಟು ಇನ್ನೊಬ್ಬರ ಮನೆಗೆ ಹೋಗುತ್ತಿರಲಿಲ್ಲ. ರಚ್ಚೆಯ ಮೇಲೆ ಕುಳಿತೋ, ದೇವಸ್ಥಾನದ ಜಗುಲಿಯಲ್ಲಿ ಕುಳಿತೋ ತತ್ವಪದಗಳನ್ನು ಹಾಡುತ್ತ, ಯಾರಾದರು ಕೊಟ್ಟಿದ್ದನ್ನು ಸ್ವೀಕರಿಸಿ ಹೋಗಿಬಿಡುತ್ತಿದ್ದ. ಅದಕ್ಕೆ ತಕ್ಕಂತೆ 'ವಸ್ತಾ ವಟ್ಟಿದೆ ಪೋತಾ ವಟ್ಟಿದೆ ಬಾಧಯೆಂದುಕಂಟಾ...' (ಬರುತಾ ಬರಿದೆ ಹೋಗುತ ಬರಿದೆ ಬಾಧೆ ಏತಕಂತೆ) ಅಂದ.

ಸ ರಘುನಾಥ ಅಂಕಣ; ಸೂರ್ಯ ಹುಟ್ಟಿದ, ಆದರೆ ಸೋಮೇಶ ಏಳಲೇ ಇಲ್ಲ...ಸ ರಘುನಾಥ ಅಂಕಣ; ಸೂರ್ಯ ಹುಟ್ಟಿದ, ಆದರೆ ಸೋಮೇಶ ಏಳಲೇ ಇಲ್ಲ...

ಸಂಸಾರಿಗಳು ಹಾಗಂದುಕೊಂಡರೆ ಲೋಕ ನಡೆದೀತ ಸಿದ್ದಯ್ಯ? ಅಂದ ಅಪ್ಪಯ್ಯ. ಸಂಸಾರಿಗೆ ಆಸೆಯೂ ಇರಬೇಕು, ತತ್ವವೂ ತಿಳಿದಿರಬೇಕು. ಗುರುಗಳು ನಿರಾಸೆಯನ್ನು ಹೇಳೊಲ್ಲ ಅಪ್ಪಯ್ಯ. ಬದುಕಿನ ತತ್ವ ತಿಳಿಸುತ್ತಾರೆ. ಇದು ನಿನಗೂ ಗೊತ್ತು. ಮುಂದೆ ಏನು ಹೇಳಿದ್ದಾರೆ ಕೇಳು. 'ಮಾಡಿದ ಧರ್ಮವು ಕೆಡದ ಪದಾರ್ಥವು ಬರುವುದು ನಮ ಹಿಂದೆ' ನಿಜ ಅಲ್ಲವಾ ಎಂದ. ಸ್ವಲ್ಪ ಹೊತ್ತಿದ್ದು ತಂಬೂರಿ ಎತ್ತಿಕೊಳ್ಳುತ್ತ, ಹೋಗುವಾಗ ಆದರೆ ಮಾತಾಡಿಸಿಕೊಂಡು ಹೋಗುತ್ತೇನೆ ಎಂದು ಹೇಳಿ ಹೊರಟವನು ಹೋದದ್ದು ಬೀರಣ್ಣನ ಮನೆಗೆ.

Siddaiah Sung Spiritual Song In Beeranna Home

ಅಲ್ಲಿ ಸುಮಾರು ಹೊತ್ತು ಇದ್ದನಂತೆ. ಬೀರಣ್ಣ ದಾಸೋಹಕ್ಕೆ ದವಸ ಕೊಟ್ಟು ಗಾಡಿ ಕಟ್ಟಿದ್ದರಿಂದ ಹೊರಟುಬಿಟ್ಟನಂತೆ. ಹೊರಟು ನಿಂತು ಅವನು ಹಾಡಿದ ಪದವನ್ನು ಮನೆಗೆ ಬಂದ ಬೋಡೆಪ್ಪ ನೆನಪಿಸಿಕೊಳ್ಳುತ್ತ ನೆನಪಿದ್ದಷ್ಟನ್ನು ಹಾಡಿದ.

ಸ ರಘುನಾಥ ಅಂಕಣ; ರಾತ್ರಿಯ ನಿಚ್ಚಳ ಆಕಾಶದಲ್ಲಿ ಚುಕ್ಕಿಗಳು, ಬೆಳದಿಂಗಳು, ತಂಗಾಳಿ ಬರುತ್ತೆ ಕಂದ...ಸ ರಘುನಾಥ ಅಂಕಣ; ರಾತ್ರಿಯ ನಿಚ್ಚಳ ಆಕಾಶದಲ್ಲಿ ಚುಕ್ಕಿಗಳು, ಬೆಳದಿಂಗಳು, ತಂಗಾಳಿ ಬರುತ್ತೆ ಕಂದ...

ಏನೋ ಆಸೆಯ ಪಡುವುದು ಜೀವ ಏಸೋ ಆಸೆಯ ಪಡೆಯದು ಜೀವ
ಬಿಡೆ ಎನುವಾಗಲೆ ಬಿಡುವುದು ಉಚಿತ ಬಿಡೆ ನಾನೆಂದರೆ ದುಃಖವು ಖಚಿತ
ಆಟವಲ್ಲವೆನೋ ಈ ಜಗ ನಿನ್ನಾಟವಲ್ಲವೇನೋ ಶಿವ
ಹಗಲಿಗೊಂದಾಟವೋ ನಿನ್ನದು ಇರುಳಿಗೊಂದಾವೋ ಶಿವ

ಇದೆ ಎಂದಾಡಿದೆ ಸಂಸಾರದಲಿ ಇಲ್ಲೆಂದಾಡಿದೆ ಯೋಗದಲಿ
ನಿನ್ನಾಟವೆ ಅಲ್ಲವೆ ಸಂಸಾರ ನಿನ್ನದೇ ಆಟವು ವೈರಾಗ್ಯ
ತಿಳಿಯೋ ವ್ಯಾಳ್ಯಕೆ ಇಲ್ಲಿರ ಜೀವ
ಏನೇನಾಟವೊ ನಿನ್ನದು ಶಿವ ಶಿವಾ

ಸಿದ್ದಯ್ಯದಾಸರು ಬೀರಣ್ಣನ ಮನೆಗೆ ಹೋದುದು ಒಳ್ಳೆಯದೆ ಆಯ್ತಲ್ಲ? ಅಂದಳು ಅಮ್ಮಯ್ಯ. ಒಳ್ಳೆಯದೇ. ಆದರೆ ಪುತ್ರಶೋಕ ಒಂದೆರಡು ದಿನಕ್ಕೆ ದೂರ ಆಗುದಲ್ಲ ಅಲ್ಲವೆ ಅಂದ ಅಪ್ಪಯ್ಯ, ಸೋಮೇಶ ಅಷ್ಟು ಹೊತ್ತಲ್ಲಿ ಹುಲ್ಲು ವಾಮೆ (ಬಣವೆ)ಗೆ ಹೋದದ್ದು ಯಾಕಂತೊ ಬೋಡ? ಹುಲ್ಲು ತರಲಂತೂ ಹೋಗಿರಲಾರ. ಯಾಕಂದ್ರೆ ಅದಕ್ಕೆ ಆಳಿದ್ದ ಎಂದು ಕೇಳಿದ.

ಗುಟ್ಟು ಏನಂದ್ರೆ, ಬರ್ರಿಗಳ ಮುನೀನ ಕರಕೊಡು ಹೋಗಿದ್ನಂತೆ ಅಂದ ಬೋಡೆಪ್ಪ. ಕೂಡಲೆ ನರಸಿಂಗರಾಯ, ಬೋಡ ಈ ವಿಷಯದಲ್ಲಿ ನಿನ್ನ ಬಾಯಿಗೆ ಬೀಗ ಬೀಳಲಿ ಅಂದ. ಆಗಲೆ ಬಂದ ಮುನೆಕ್ಕ, ವಿಲೇಜು ಸೆಕ್ರೇಟ್ರಿ (ಗ್ರಾಮ ಲೆಕ್ಕಿಗ) ಬೀರಣ್ಣನ ಮನೆಗೆ ಹೋಗಿ, ಹೊಲಕ್ಕೆ ಕಾವಲು ಹೋಗಿದ್ದಾಗ ಹಾವು ಕಚ್ಚಿದ್ದು ಅಂತ ಸರ್ಟಿಫಿಕೆಟ್ ಕೊಡ್ತೀನಿ. ಸರ್ಕಾರದಿಂದ ದುಡ್ಡು ಬರುತ್ತೆ. ಡಾಕ್ಟರ ಸರ್ಟಿಫಿಕೆಟ್ಟುದೂ ಇದೂ ನಾನು ನೋಡಿಕೊಂತೀನಿ. ಒಂದಷ್ಟು ಖರ್ಚಾಗುತ್ತೆ. ಅದನ್ನು ನೀನು ನೋಡಿಕೊಂಡ್ರಾಯ್ತು ಅಂದನಂತೆ. ಅದಕ್ಕೆ ಬೀರಣ್ಣ, ನನ್ನ ಮನೇದೇ ಬಂಗಾರ ಆಗಿರ್ಲಿಲ್ಲ, ಅದರ ಹೆಸರಲ್ಲಿ ಅನ್ಯಾಯದ ದುಡ್ಡು ಯಾಕೆ ಅಂದ್ನಂತೆ ಎಂದು ಹೇಳಿದಳು. ಈ ಕಾಲದಲ್ಲೂ ಬೀರಣ್ಣ ನಿಯತ್ವಂತ ಅಂದಳು ಅಮ್ಮಯ್ಯ.

English summary
Siddaiah went to the beeranna home and sung a song for the death of somesh
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X