ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನರಸಿಂಗರಾಯ ಎಂಎಲ್ ಎ ಜೊತೆ ಇಂಗ್ಲಿಷಲ್ಲಿ ಮಾತಾಡಿದ್ದು...

By ಸ ರಘುನಾಥ, ಕೋಲಾರ
|
Google Oneindia Kannada News

ಗೆದ್ದ ಮೇಲೆ ಊರಿನತ್ತ ಮುಖ ಮಾಡದ ಎಂಎಲ್ ಎ, ತನ್ನ ಹಿಂಬಾಲಕ ಕಂಟ್ರಾಕ್ಟುದಾರನೊಬ್ಬನಿಗೆ ಊರ ಕೆರೆಯ ಹೂಳು ತೆಗೆಯುವ ಕಾಮಗಾರಿ ಕೊಡಿಸಿದ್ದರು. ಆ ಕಂಟ್ರಾಕ್ಟಿನವ ಜೆಸಿಬಿಯೊಂದಿಗೆ ಕೆರೆಗೆ ನುಗ್ಗದಾಗ, ನರಸಿಂಗರಾಯ ತನ್ನ ಗೆಳೆಯರು ಹಾಗು ಕೆಲವರು ಯುವಕರೊಂದಿಗೆ ಹೋಗಿ ವಿರೋಧಿಸಿದ. ಕೆರೆ ಆಳವಾಗುವುದು ಬೇಡವೆ ಎಂದು ಅವನು ಕೆಕ್ಕರಿಸಿ ಕೇಳಿದ. ಹೂಳು ತೆಗೆಯೋದು ಬೇಡವೆಂದಲ್ಲ. ಮೊದಲು ಒಂದು ಅಡಿಯಷ್ಟು ಪದರವಾಗಿ ತೆಗೆದು, ಒಂದು ಕಡೆ ಗುಡ್ಡೆ ಹಾಕಿ, ಆಮೇಲೆ ಹೂಳು ತೆಗೆದು, ಆ ಮಣ್ಣನ್ನು ಕೆರೆಯಲಿ ಹರಡಿ ಎಂದು ಗುಂಪು ವಾದಿಸಿತು. ಹಾಗೇಕೆ ಮಾಡುವುದೆಂದು ಅರ್ಥವಾಗದೆ ಅವನು ಏಕೆಂದು ಕೇಳಿದ. ಮೀನುಗಳ ಮೊಟ್ಟೆಗಳಂಥವು ನಾಶವಾಗದಿರಲು ಎಂದ ನರಸಿಂಗರಾಯ.

ಇಂಜಿನಿಯರ್ ಕೊಟ್ಟ ವರ್ಕ್ ಆಡರಿನಲ್ಲಿ ಹಾಗಿಲ್ಲ. ಎಂಎಲ್ ಎ ಹಾಗೆಂದು ಪ್ಲಾನ್ ಮಾಡಿಸಿಲ್ಲ. ಇಂಜಿನಿಯರ್ ‍ಗೆ ಹೇಳಿ ಚೇಂಜ್ ಮಾಡಿಸಿಕೊಂಡು ಬನ್ನಿ ಆಗ ನೋಡೋಣ ಎಂದು, 'ಇವರು ಬೇಕಾದ್ದು ಹೇಳಲಿ ನೀನು ಟ್ರಾಕ್ಟರುಗಳಿಗೆ ಮಣ್ಣು ತುಂಬಿಸೊ' ಎಂದು ಜೆಸಿಬಿ ಡ್ರೈವರ್ ಗೆ ಆರ್ಡರ್ ಮಾಡಿದ. ಆ ವೇಳೆಗೆ ವರ್ಕ್ ಇನ್ಸ್ ಪೆಕ್ಷನ್ ಗಾಗಿ ಇಂಜಿನಿಯರ್ ಅಲ್ಲಿಗೇ ಬಂದ. ಇವರ ಮಾತಿಗೆ ಅವನು ಕ್ಯಾರೇ ಅನ್ನದೆ, ಎಂಎಲ್ ಎಯಿಂದ ಒಂದು ಮಾತು ಹೇಳಿಸಿ ಎಂದು ಜಾರಿಕೊಂಡ.

ಲಾಸು ಮಾಡಿದ ಈರುಳ್ಳಿ; ಚಿಂತೆ ಬಿಡಿಸಿತು ಸೀಗೆಣಸುಲಾಸು ಮಾಡಿದ ಈರುಳ್ಳಿ; ಚಿಂತೆ ಬಿಡಿಸಿತು ಸೀಗೆಣಸು

ನರಸಿಂಗರಾಯನ ತಂಡ ಎಂಎಲ್ ಎ ಆಫೀಸಿಗೆ ಅಲ್ಲಿಂದಲೇ ಹೊರಟಿತು. ಆ ವೇಳೆಗಾಗಲೇ ಈ ಸುದ್ದಿ ಅವರ ಕಿವಿ ಮುಟ್ಟಿತ್ತು. ಬೇಕೆಂದೇ ಸುಮಾರು ಹೊತ್ತು ಸಾಹೇಬರು ಇವರತ್ತ ಗಮನ ಕೊಡಲಿಲ್ಲ. ಎಂಎಲ್ ಎ ಸಾಹೇಬರೇ ನಾವು ಬಂದಿದ್ದೇವೆ ಅಂದ ನರಸಿಂಗರಾಯ. ಅದಕ್ಕೆ ಆತ 'ಸೋ ವಾಟ್' ಎಂದರು.
ನರಸಿಂಗರಾಯನಿಗೆ ಪಿತ್ಥ ನೆತ್ತಿಗೇರಿತು.

Short Story Narasingaraya Speaks English With Mla

'ಲಿಜನ್ ಹಿಯರ್' ಎಂದ. ಹಳ್ಳಿಗನೊಬ್ಬ ತನ್ನೊಡನೆ ಜಬರ್ದಸ್ತಿನಿಂದ ಇಂಗ್ಲಿಷ್‍ನಲ್ಲಿ ಮೊದಲ ಸಲಕ್ಕೆ ಮಾತಾಡಿದ್ದು ಕೇಳಿ, ಕೊಂಚ ಅಸಮಾಧಾನಗೊಂಡು, ಬೇಸರವೂ ಪಟ್ಟರು. ಎಲ್ಲೋ ಅವಮಾನವೂ ಆದಂತಿತ್ತು. 'ಸರಿ, ಏನು?' ಎಂದರು. ಹೂಳೆತ್ತುವ ವಿಚಾರದಲ್ಲಿ ನಡೆದ ಮಾತುಗಳನ್ನು ಹೇಳಿದ. ಅದಕ್ಕವರು ಅದೆಲ್ಲ ಆಗೊಲ್ಲ ಅಂದರು. ಅದಕ್ಕೆ ನರಸಿಂಗರಾಯ, 'ವಾಟ್ ಯು ಥಿಂಕಿಂಗ್, ವಿ ನಾಟ್ ಥಿಂಕಿಂಗ್ ಸೇಂ.' ಅಂದ. ಹೀಗೆ ಮೊದಲ ಬಾರಿಗೆ ಇಂಗ್ಲಿಷ್‍ನಲ್ಲಿ ಮಾತಾಡಿದ ನರಸಿಂಗರಾಯ ನಾಚಿಕೊಂಡ. ಅದು ತಪ್ಪೇನೋ ಎಂದು ಅನಿಸಿದ್ದಕ್ಕಲ್ಲ, ಈ ಎಂಎಲ್ ಎ ಜೊತೆ ಸರಿಯಾಗಿ ಮಾತನಾಡಲು ಬರದ ಇಂಗ್ಲಿಷ್‍ನಲ್ಲಿ ಮಾತಾಡಬೇಕಾಗಿ ಬಂದ ಕರ್ಮಕ್ಕೆ.

 ನರಸಿಂಗರಾಯನೂ, ದೋಸ್ತರೂ ಇಂಗ್ಲಿಷ್ ಪಿಚ್ಚರ್ ‍ಗೆ ಹೋಗಿದ್ದು ನರಸಿಂಗರಾಯನೂ, ದೋಸ್ತರೂ ಇಂಗ್ಲಿಷ್ ಪಿಚ್ಚರ್ ‍ಗೆ ಹೋಗಿದ್ದು

ಈ ಮಾತಿನಿಂದ ಎಂಎಲ್ ಎ ತನ್ನತ್ತ ಗಮನ ಹರಿಸಿದ್ದರಾಗಿ ತನ್ನ ಮಾತಿನಲ್ಲಿನ ತಪ್ಪು ಒಪ್ಪುಗಳ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. 'ನಿಮ್ಮ ಯೋಚನೆಗಳಂತೆ ನಮ್ಮ ಯೋಚನೆಗಳಿಲ್ಲ' ಎಂದ. ಈಗ ಅವನ ಮನಸ್ಸಿಗೆ ಸಮಾಧಾನವಾಯಿತು. 'ನೀವು ಹೇಳಿದ್ದು ನಮಗೆ ಒಪ್ಪಿಗೆಯಿಲ್ಲ' ಅಂದ. ಈಗ ಮತ್ತೂ ಸಮಾಧಾನವಾಯಿತು. ಹಿಂದೆ ಆಡಿದ್ದು ತನ್ನ ಇಂಗ್ಲಿಷ್ ಮಾತಿನ ಅನುವಾದವಾಗಿತ್ತು. ಆದರೂ ಅದು ಸರಿಯಾದುದಲ್ಲ. ಇದು ಸರಿಯಾದುದು ಅನ್ನಿಸಿ ತನ್ನೊಳಗೇ ಖುಷಿಪಟ್ಟ. ಜೊತೆಯಲ್ಲಿದ್ದವರು ಇದನ್ನೂ ಇಂಗ್ಲಿಷಿನಲ್ಲಿ ಹೇಳಲು ಒತ್ತಾಯಿಸಿದರು.

'ವಾಟ್ ಯು ಟೋಲ್ಡ್ ವಿ ನಾಟ್ ಅಗ್ರಿ' ಅಂದ. ಥತ್ ಸರಿಯಿಲ್ಲ ಅನ್ನಿಸಿತು. ಹಾಗಾದರೆ ಸರಿ ಯಾವುದೆಂದು ಯೋಚಿಸುವ ಅವಕಾಶ ಕೊಡದೆ ಎಂಎಲ್ಎ, 'ವೈ' ಅಂದು ಹುಬ್ಬೇರಿಸಿದರು. ಅದಕ್ಕೆ ಇಂಗ್ಲಿಷ್ ಏನು ಹೇಳುವುದೆಂದು ತಿಳಿಯದೆ, ನಾವು ಬಯಸಿದ ಕೆರೆ ಹೂಳೆತ್ತಬೇಕು. ಜೊತೆಗೆ ಶಾಲೆಯನ್ನು ದುರಸ್ತಿ ಮಾಡಿಸಬೇಕು ಅಂದ. ಇಂಗ್ಲಿಷ್‍ನಲ್ಲಿ ಹೇಳಲಿಲ್ಲವೆಂದು ಜೊತೆಗಾರರಿಗೆ ಅಸಮಾಧಾನವಾಯಿತು. ಎಂಎಲ್ ಎ, ಅದಾಗದು. ಅದು ನಮ್ಮ ಕಾರ್ಯ ಯೋಜನೆಯಲ್ಲಿಲ್ಲ ಎಂದರು. ಜೊತೆಯವರು, ಅದಾಗಲ್ಲ, ಜನ ಈ ಮಾತನ್ನು ಕೇಳೊಲ್ಲ ಅಂತ ಇಂಗ್ಲೀಷಲ್ಲಿ ದಬಾಯ್ಸು ಅಂದರು. 'ದಟ್ ನಾಟ್ ಹ್ಯಾಪನ್ ಅಂದ್ರೆ ನಾಟ್ ಹ್ಯಾಪನ್. ಪೀಪಲ್ ನಾಟ್ ಲಿಸನಿಂಗ್' ಅಂದ. ಕಡೆಗೆ ಅವರ ಮೊಂಡುತನಕ್ಕೆ ಸೋತ ಎಂಎಲ್ ಎ ಸಾಹೇಬರು 'ಒಕೆ ನರಸಿಂಗರಾಯ ಐ ಚೇಂಜ್. ಡೂಯಿಂಗ್ ಟೂ' ಎಂದರು.

ತಾನು ಸದನದಲ್ಲಿ ಗಮನ ಸೆಳೆಯಲು ಮಾತನಾಡುವ ಇಂಗ್ಲಿಷ್‍ನಂತೆಯೇ ನರಸಿಂಗರಾಯನ ಇಂಗ್ಲಿಷ್ ಸಹ ಇದ್ದುದರಿಂದ ಎಂಎಲ್ ‍ಎ ಸಾಹೇಬರು ಖುಷಿಪಟ್ಟರು. ಆ ಖುಷಿಯಲ್ಲಿ ಎಲ್ಲರಿಗೂ ಟೀ ತರಿಸಿಕೊಟ್ಟರು.

English summary
Short story of Narasingaraya speaks enlish with mla for the first time in relaion to village problems,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X