• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನರಸಿಂಗರಾಯನಿಗೆ ಒಕ್ಕಣ್ಣ ಗೋಪಾಲ ಹೇಳಿದ ಖಾಸಗಿ ಪ್ರೇಮ ಪಾಠ

By ಸ ರಘುನಾಥ, ಕೋಲಾರ
|

ನರಸಿಂಗರಾಯನ ಕಥೆಗಳ ಸರಣಿಯನ್ನು ಸ. ರಘುನಾಥ ಆರಂಭ ಮಾಡಿದ್ದಾರೆ. ಪುಟ್ಟ-ಪುಟ್ಟ ಕಥೆಗಳು ಅದ್ಭುತವಾಗಿರುತ್ತವೆ. ಸರಣಿಯಾಗಿಯೂ ಓದಬಹುದು, ಬಿಡಿ ಬಿಡಿಯಾಗಿಯೂ ಓದಿಕೊಳ್ಳಬಹುದು. ರಸಾಸ್ವಾದಕ್ಕೆ ಯಾವ ಭಂಗವನ್ನೂ ಇವು ತರುವುದಿಲ್ಲ. ಕಥೆಗಳು ಹೇಗಿವೆ ಎಂಬ ನಿಮ್ಮ ಅಭಿಪ್ರಾಯವನ್ನು ತಿಳಿಸಿ. -ಸಂಪಾದಕ

***

ಹತ್ತನೆಯ ತರಗತಿಯಲ್ಲಿ ಡುಂಕಿ ಹೊಡೆದು, ಸಪ್ಲಿಮೆಂಟರಿ ಪರೀಕ್ಷೆಗೆ ಕಸರತ್ತು ನಡೆಸಿ, ಪಾಸಾಗಿ, ಅಬ್ಬಾ ಎಂದು ಅಂದು, ನಿಟ್ಟುಸಿರಿಟ್ಟ ನರಸಿಂಗರಾಯ, ದಮ್ಮಯ್ಯ ಅಂದರೂ ಹೈಯರ್ ಸೆಕಂಡಿರಿ ಓದಲು ಒಂದು ಹೆಜ್ಜೆಯನ್ನೂ ಇಡೆನೆಂದರೆ ಇಡೆನೆಂದು ಭೀಷ್ಮಪ್ರತಿಜ್ಞೆ ಮಾಡಿಯೇ ಬಿಟ್ಟ.

ಕಬ್ಬಾಳ ಪಾಪಯ್ಯನ ಹೆಂಡತಿ ಪ್ರೀತಿ ಮುಂದೆ 'ಕಳ್ಳು' ಆಸೆಯೂ ಕನಿಷ್ಠ

ನೇಗಿಲಿಗೆ ಕೈಯಿಡುವ ಮೊದಲು ದನ ಕಾಯಲು ಹೊರಟ. ಮೊದಮೊದಲು ಒಂಟಿಯಾಗಿ ಹೋಗಿ, ದನಗಳನ್ನು ಮೇಯಲು ಬಿಟ್ಟು, ಎನ್.ನರಸಿಂಹಯ್ಯನವರ ಪತ್ತೆದಾರಿ ಕಾದಂಬರಿಗಳಿಂದ ಪ್ರಾರಂಭಿಸಿ, ಅನಕೃ, ಬೀಚಿ, ತ್ರಿವೇಣಿ, ಕಟ್ಟಿಮನಿ, ನಾಡಿಗೇರ ಕೃಷ್ಣರಾಯರ ಕಾದಂಬರಿಗಳನ್ನು ಓದಿ, ಶಿವರಾಮ ಕಾರಂತ, ಕುವೆಂಪು ಕಾದಂಬರಿಗಳವರೆಗೆ ಬಂದ.

ನಂತರ ಬೇರೆಬೇರೆ ಅನುಭವಕ್ಕಾಗಿ ದನಕಾಯುವವರ ಸಹವಾಸ ಮಾಡತೊಡಗಿದ. ಹಾಗೆ ಮೊದಲಿಗೆ ಜೊತೆಯಾದವನು ಒಕ್ಕಣ್ಣಿನ ಗುಡ್ಡಿಗೋಪಾಲ. ಅವನು ಒಕ್ಕಣ್ಣನಾದರೂ ಚೆಲುವನೆಂಬುದು ನರಸಿಂಗರಾಯನ ಅಭಿಪ್ರಾಯ. ಇಲ್ಲವೆಂದರೆ ಅವನಿಗೆ ಮೂರು ಜನ ಪ್ರೇಯಸಿಯರೆಲ್ಲಿ ಇರುತ್ತಿದ್ದರು!

ಎಲ್ಲದಕ್ಕೂ ಗುರುಗಳಿರುತ್ತಾರೆ. ಆದರೆ ಇದಕ್ಕಿರೊಲ್ಲ ನೋಡು ನರಸಿಂಗ ಎಂಬ ಓನಾಮ ವಾಕ್ಯವನ್ನುಲಿದಿದ್ದ ಗೋಪಾಲ. ಯಾವುದಕ್ಕೆ ಅಂದಾಗ, ಪ್ರೇಮ ಮಾಡೋಕೆ. ಪ್ರೇಮ ಮಾಡೋದನ್ನ ವಯಸಿನ ಬಯಕೆ, ಮನಸು ಕಲಿಸುತ್ತೆ. ಹುಡುಗಿ ಜೊತೆಯಾಗೋದೇ ಅದಕ್ಕೆ ಟ್ರೈನಿಂಗ್.

ಒಂದು ಪೋಸ್ಟ್ ಕಾರ್ಡಿನಲ್ಲಿ ಸಿಕ್ಕ ಇತಿಹಾಸ, ಭೂಗೋಳ ಹಾಗೂ ಸಮಾಜ ವಿಜ್ಞಾನ

ನನಗೆ ಗಿಡ್ಡಪ್ಪನ ಮಗಳು ಗೌರಿ ಜೊತೆ ಆ ಟ್ರೈನಿಂಗ್ ಆಯ್ತು. ಟ್ರೈನಿಂಗ್ ಆದ್ಮೇಲೆ ಡ್ರೈವಿಂಗು. ನನ್ನೀ ಡ್ರೈವಿಂಗ್ ಗೆ ಮೂರುಜನ ಇದ್ದಾರೆ. ನೀನು ಡ್ರೈವರ್ ಆಗಿಬಿಡು. ಹೇಳೋದನ್ನ ಸರಿಯಾಗಿ ಕೇಳಿಸಿಕೊ ಎಂದು, ಗೌರಿಯ ಅಂದವನ್ನು ಹಸಿಹಸಿಯಾಗಿ ಬಣ್ಣಿಸಿದ. ಬಾಗಿಯ ಮೈಸಿರಿಯನ್ನು ಕಣ್ಣಿಗೆ ಕಟ್ಟಿದ. ತುಳಸಿಯನ್ನು ಬಣ್ಣಿಸುವಾಗಲಂತೂ ಊರವರು ಸದಾರಮೆ ನಾಟಕವಾಡುವಾಗ ಆ ಪಾತ್ರಕ್ಕಾಗಿ ಮದನಪಲ್ಲಿಯಿಂದ ಕರೆಸಿದ್ದ ಶಿವರಂಜನಿಗೆ ಹೋಲಿಸಿದ್ದ.

ಆ ಕನಸು ಕೂಡ ದೋಚಿಕೊಳುವ ದೊರೆಗಳೇತಕೆ?

ಅದಕ್ಕೇ ಇರಬೇಕು ರಾಜಮಾರ್ತಾಂಡನ ಪಾರ್ಟು ಮಾಡಿದ್ದ ಗೋವಿಂದಪ್ಪ ಅವಳ ಹಿಂದೆ ಓಡಿ ಹೋಗಿದ್ದು ಅಂದುಕೊಂಡ. ಶಿವರಂಜನಿಯ ಚೆಲುವಿನ ವರ್ಣನೆ ಕೇಳಿದ ನರಸಿಂಗರಾಯನ ಮನಸ್ಸಿಗೆ ಹತ್ತನೆಯ ತರಗತಿಯಲ್ಲಿ ಸಂಸ್ಕೃತದ ಮೇಷ್ಟ್ರು ಪ್ರಸ್ತಾಪಿಸಿದ್ದ ಶಕುಂತಲೆ ಬಂದಳು.

ಜೇನಾಗಿ ನಿನ್ನ ಬಳಿ ಬರುವೆನೆಂಬ ಮಾತು ಒಪ್ಪಿ ಬೆಪ್ಪನಾದೆನೇ ಶಕುಂತಲಾ!

ನಾಟಕದ ಮೇಷ್ಟ್ರಾಗಿದ್ದ ಅಪ್ಪನ ಪೆಟ್ಟಿಯಲ್ಲಿದ್ದ ಶಕುಂತಲಾ ನಾಟಕವನ್ನು ಹುಡುಕಿ, ದನ ಕಾಯಲು ಯಾರ ಜೊತೆಗೂ ಸೇರದೆ ಒಂಟಿಯಾಗಿ ಹೋಗಿ ಎರಡು ದಿನಗಳು ಅದನ್ನು ಓದಿ ಮುಗಿಸಿದ ಅವನು, ಊರಿನಲ್ಲಿ ಶಕುಂತಲೆಯನ್ನು ಹೋಲುವವರು ಇದ್ದಾರೆಯೆ ಎಂದು ತನ್ನೂರಿನ ಹರೆಯದ ಹುಡುಗಿಯರನ್ನು ತನ್ನ ಮನಸ್ಸಿನಲ್ಲಿ ಸಾಲಾಗಿ ನಿಲ್ಲಿಸಿಕೊಂಡ.

English summary
Narasingaraya's short stories series first episode of love training of single eye Gopala. He explains women beauty and love in tempting way.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X