ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊರಟರು ರಾಯರು ಸಿಂಗಾರವಾಗಿ...

By ಸ ರಘುನಾಥ
|
Google Oneindia Kannada News

ಹಾರ್ಮೋನಿಯಂ ಮುಂದೆ ಕುಳಿತು ಶ್ರುತಿ ಹಿಡಿಯುತ್ತ ಕುಳಿತಿದ್ದ ನರಸಿಂಗರಾಯ ತಲೆಯೆತ್ತಿ ನೋಡಿದ. ಅಪ್ಪ ರೂಮಿನಿಂದ ಹೊರಬರುತ್ತಿದ್ದ. ಕೂಡಲೇ ವರಾಳಿರಾಗದಲ್ಲಿ ನುಡಿಸತೊಡಗಿದ,

ನೋಡಿರಿ ರಾಯರನ- ಹೊರಟಿಹ ರೀತಿಯನ
ತಲೆಯಲಿ ಪೇಟ- ಕಪ್ಪನೆ ಕೋಟು,
ಕೊಡೆ ಕೈಯಲ್ಲಿ- ಧರಿಸಿದ ರಾಯರನ,
ನೋಡಿರೆ.....'

ಸುನಂದಾಳ ನಿರ್ಗಮನದಿಂದ ಬಿಮ್ಮೆಂದ ಮನಸುಗಳುಸುನಂದಾಳ ನಿರ್ಗಮನದಿಂದ ಬಿಮ್ಮೆಂದ ಮನಸುಗಳು

ಅಪ್ಪ ಮುಗುಳು ನಗೆಯಲ್ಲಿ ಹುಸಿಮುನಿಸು ತೋರಿ, ಸಾಕೋ ಕೀಟಲೆ, ಕತ್ತೆ ಭಡವ ಎಂದರು. ಅಮ್ಮ ಕೊಟ್ಟ ತುಂಡು ಬೆಲ್ಲವನ್ನು ಬಾಯಿಗೆ ಹಾಕಿಕೊಂಡು, ತಾಮ್ರದ ತಂಬಿಗೆಯಲ್ಲಿ ತಂದ ನೀರಿನಲ್ಲಿ ಎರಡು ಗುಟುಕು ಕುಡಿದ. ಅಮ್ಮ ಬಾಗಿಲವರೆಗೆ ಹೋಗಿ ಬಂದಳು. ಮುಖ್ಯ ಕೆಲಸದ ಮೇಲೆ ಯಾರೇ ಮನೆಯಿಂದ ಹೊರಡಲಿ ಅಮ್ಮ ಕೂಡಲೆ ಬಾಗಿಲು ಹಾಕುತ್ತಿರಲಿಲ್ಲ. ಯಾವುದೋ ಮುಖ್ಯ ಕೆಲಸವಿದ್ದೀತು ಅಂದುಕೊಂಡ ನರಸಿಂಗರಾಯ. 'ಪತಿರಾಯರ ಪಯಣವೆತ್ತಲೆ ಭಾಮೆ' ಎಂದು ನುಡಿಸಿದ. ಅಮ್ಮ ಹಾರ್ಮೋನಿಯಂ ಎಳೆದುಕೊಂಡು 'ಕೋತಿಯಾಟವಂತೊ ಪೆಂಗೆ, ನೋಡಿ ಬರುತಾರಂತೊ' ಎಂದು ನುಡಿಸಿದಳು. ಇಬ್ಬರೂ ನಕ್ಕರು.

Narasingaraya Starts Playing Harmonium With Songs

ಕಳೆದ ಸಂಜೆ ಹುಣಿಸೆ ತೋಪಿನಲ್ಲಿ ಕುಳತು ಸದಾರಮೆ ನಾಟಕದ ಕಳ್ಳನ ಪಾತ್ರ ಕುರಿತು ಆಲೋಚಿಸುತ್ತಿದ್ದಾಗ ಮನಸ್ಸಿಗೆ ಬಂದ,

ಜಲಜಾಕ್ಷಿ ಪೇಳೆ ಮನದ ಚಿಂತೆಯೇನೆ
ಸುರಪಾರಿಜಾತ ತರಲೆ ಮುಡಿಗೆ
ಅಕ್ಕಸಾಲಿ ಮನೆಗೆ ಕನ್ನವಿಕ್ಕಿ
ಚಿಂತಾಕುಪದಕ ತರಲೆ

ದಾಸರ ಪದಗಳು ನಲಿದವು ಸುನಂದಾಳ ನಾಲಿಗೆ ಮೇಲೆ...ದಾಸರ ಪದಗಳು ನಲಿದವು ಸುನಂದಾಳ ನಾಲಿಗೆ ಮೇಲೆ...

ಪದ್ಯಕ್ಕೆ ಯಾವ ರಾಗ ಹಾಕುವುದೆಂದು ಚಿಂತಿಸುತ್ತ ಕುಳಿತ. ಹಲವು ರಾಗಗಳು ಮನಸ್ಸಿಗೆ ಬಂದವು. ಅವುಗಳಲ್ಲಿ ನಾದನಾಮಕ್ರಿಯ ಸರಿಯೆನಿಸಿತು. ನುಡಿಸಿ ನೋಡಿದ. ಸಮಾಧಾನವಾಯಿತು. ಅಮ್ಮನನ್ನು ಕರೆದು ಹೇಳಿ ನುಡಿಸಿ ಕೇಳಿಸಿದ. ಅವಳು ತಲೆ ನೇವರಿಸಿದಳು. ಇನ್ನೊಂದೆರಡು ಮೂರು ನುಡಿ ಸೇರಿಸಿದರೆ ಹೇಗೆ ಎಂದ. ಕಳ್ಳನ ಪಾತ್ರದ ಹಾಡುಗಳು ಚುಟುಕವಾಗಿದ್ದರೆ ಚೆನ್ನ. ಇಷ್ಟು ಸಾಕು. ಒಂದು ಸಲ ಅಪ್ಪನ ಮುಂದೆ ಹಾಡಿ ಏನು ಹೇಳುವರೊ ಕೇಳು ಎಂದಳು. ಸದಾರಮೆ ಅಸಹ್ಯ, ಅಸಹನೆಯಿಂದ ಕಳ್ಳನನ್ನು ನಿಂದಿಸುವ ಸನ್ನಿವೇಶದಲ್ಲಿ ಕಳ್ಳನಿಗೆ ಹಾಡೇ, ಪದ್ಯವೇ ಎಂಬ ಚಿಂತೆಗೆ ಬಿದ್ದ. ಪದ್ಯವೇ ಸೂಕ್ತವೆನ್ನಿಸಿತು. ಕುಳಿತಲ್ಲೆ ಅಮ್ಮನಿಗೆ ಕೇಳಿಸುವಂತೆ ಹೇಳಿದ. ಹಾಡೇಕೊ? ಪದ್ಯವೇ ಇರಲಿ ಎಂದಳು. ಆಗಲೇ ಮುನೆಕ್ಕನ ಅಂದಿನ ಮೊದಲ ಹಾಜರಿಯಾಯಿತು. ಅಮ್ಮ ಅಡುಗೆ ಮನೆಗೆ ಕರೆದು, ನರಸಿಂಗನಿಗೆ ಕಾಫಿ ಕೊಟ್ಟು ನೀನೂ ಕುಡಿ ಎಂದಳು. ಮುನೆಕ್ಕ ತಂದುಕೊಟ್ಟು ತನ್ನ ಲೋಟ ಹಿಡಿದು ಕುಳಿತಳು.

ಮುನೆಕ್ಕನ ಮನವ ಕವಿಯಿತು ನಾಟಕದ ಮಾಯೆಮುನೆಕ್ಕನ ಮನವ ಕವಿಯಿತು ನಾಟಕದ ಮಾಯೆ

ನರಸಿಂಗರಾಯ ಅವಳಿಗೂ ಪದ್ಯವನ್ನು ಹಾಡಿ ಕೇಳಿಸಿದ. ಅಪ್ಪನ ಗರಡಿ. ಚೆನ್ನಾಗಿರದಿದ್ದೀತಾ ಎಂದು ರಾಗ ಎಳೆದವಳು, ಸದಾರಮೆ ರಾಣಿಯ ಕೊರಳ ಮಣಿಯಷ್ಟು ಸುಂದರಿಯಲ್ಲವ ಎಂದಳು. ಕೂಡಲೇ ನರಸಿಂಗರಾಯ ಆಹಾ ಮುನೆಕ್ಕ ಎಂದವನೆ ಅವಳ ಕೆನ್ನೆಗೆ ಮುತ್ತು ಕೊಟ್ಟ. ಅವಳು ತಬ್ಬಿಬ್ಬುಗೊಂಡಳು. ಅವನು ಕಣ್ಣು ಮುಚ್ಚಿ,

ನಾರೀ ರಾಣಿ ಕೊರಳ ಮಣಿ ಭಾಮಾಮಣಿ
ಮಾರ ಸುಕುಮಾರ ಸುರ ಸುಂದರನ
ಅರಸರೆದೆಗಳ ಗಡಗಡ ನಡುಗಿಪನ
ದೆವ್ವ ಭೂತ ಪಿಶಾಚಿ ಅನುವುದೇನು ಚೆನ್ನ, ಚಿನ್ನ
ಇದು ತರವೆ, ಸರಿಯೆ ಸರಸಿಜಾಕ್ಷಿ ಒಲಿಯೆ

ಎಂದು ಹಾಡಿ, ಹೇಗಿದೆ ಎಂದ. ಚೆನ್ನಾಗಿದೆ ಎಂದು ದೂರ ಸರಿದು ಕುಳಿತಳು. ಹತ್ತಿರದಿಂದ ಚೆನ್ನಾಗಿದೆ ಎಂದು ಹೇಳಲು ಭಯವಾಗತ್ತೆ ಎಂದು ನಕ್ಕಳು.

English summary
Narasingaraya who is playing harmonium saw his father going outside. He started to sing a song on him with harmonium music
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X