ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ ರಘುನಾಥ ಅಂಕಣ; ಗಾಳಕ್ಕೆ ಬಿದ್ದ ಮೀನುಗಳು...

By ಸ ರಘುನಾಥ, ಕೋಲಾರ
|
Google Oneindia Kannada News

ಪಾತ್ರಧಾರಿಗಳನ್ನು ಮುಂದಿಟ್ಟುಕೊಂಡು ಪಾತ್ರ ನಿಷ್ಕರ್ಶೆ ಮಾಡುವುದು ಬೇಡವೆಂಬ ಇಂಗಿತ ಅನುಭವಿ ಅಪ್ಪಯ್ಯ, ಮೋಟಪ್ಪರದಾಗಿತ್ತು. ಇದಕ್ಕೆ ನರಸಿಂಗರಾಯನ ಆಕ್ಷೇಪಣೆಯಿರಲಿಲ್ಲ.

Recommended Video

30% ಕೊರೋನಾಗೆ ಖರ್ಚಾಗಿದೆ ಇನ್ನೂ 800 ಕೋಟಿ ಇದ್ಯಂತೆ | BC Patil | Oneindia Kannada

ರಾಜಕಂಠೀರವನ ಪಾತ್ರ ನಾರಾಯಣಪ್ಪನದು, ಮಂತ್ರಿಯ ಪಾತ್ರ ಮುನಿಕೃಷ್ಣಪ್ಪನದು ಎಂದಾಗಿಬಿಟ್ಟಿದ್ದರಿಂದ ಅವರನ್ನು ಕರೆಯಬಹುದು. ನಾರಾಯಣಪ್ಪ ಕೊಂಚ ಅತ್ತ ಇತ್ತ ತೂಗುವ ಮನುಷ್ಯ. ಯಾರನ್ನಾದರೂ ಎತ್ತಿಕಟ್ಟಬಹುದು. ಅದನ್ನು ತಪ್ಪಿಸಿದಂತಾಗುತ್ತದೆ ಎಂಬ ನರಸಿಂಗರಾಯನ ಅಭಿಪ್ರಾಯ ಒಪ್ಪಿತವಾಯಿತು. ಅರ್ಜೆಂಟಾಗಿ ದಾಸಪ್ಪನ ತೋಪಿಗೆ ಬರಬೇಕೆಂಬುದಾಗಿ ಅಪ್ಪಯ್ಯ ಪಿಲ್ಲಣ್ಣನ ಮೂಲಕ ಆ ಇಬ್ಬರಿಗೆ ಹೇಳಿ ಕಳುಹಿಸಿ, ನಾನು ಮೊದಲು ಹೋಗಿರುತ್ತೇನೆ. ಸ್ವಲ್ಪ ಹೊತ್ತಿನ ನಂತರ ನೀವು ಬನ್ನಿ ಎಂದು ಹೊರಟ.

ಸ ರಘುನಾಥ ಅಂಕಣ; ಚಿಗುರ ನಗೆ ಕಾಣುವ ಕಣ್ಣಿಗೆ ಹಗೆಯ ಹೊಗೆ ಏಕೆ?ಸ ರಘುನಾಥ ಅಂಕಣ; ಚಿಗುರ ನಗೆ ಕಾಣುವ ಕಣ್ಣಿಗೆ ಹಗೆಯ ಹೊಗೆ ಏಕೆ?

ಮೋಟಪ್ಪ ದೋಟಿಕೋಲು ಹಿಡಿದು ಮೇಕೆಗಳಿಗೆ ಸೊಪ್ಪು ತರಲು ಹೊರಟವನಂತೆ ಹೊರಟರೆ, ನರಸಿಂಗರಾಯ ಮಚ್ಚು ಹಗ್ಗ ಹಿಡಿದು ಸೌದೆಗಾಗಿ ಹೊರಟಂತೆ ನಡೆದ. ಮೂವರೂ ಜುವ್ವಿಮರದಡಿ ಕೂತರೊ ಇಲ್ಲವೊ ನಾರಾಯಣಪ್ಪನನ್ನು ಹಿಂಬಾಲಿಸಿಕೊಂಡು ಮುನಿಕೃಷ್ಣಪ್ಪ, ಅವನ ಬೆನ್ನಲ್ಲೆ ಬೋಡೆಪ್ಪ, ಪಿಲ್ಲಣ್ಣ ಬಂದರು. ಈ ಇಬ್ಬರ ಹಾಜರಿಗೆ ಯಾರ ತಕರಾರೂ ಇರಲಿಲ್ಲ. ಮೊದಲೇ ಮಾತಾಡಿಕೊಂಡಂತೆ ತನಗೇ ಆದ್ಯತೆಯೇನೋ ಎಂದು ನಾರಾಯಣಪ್ಪ ಭಾವಿಸುವಂತೆ, ಮುನಿಕೃಷ್ಣಪ್ಪನೂ ಮುಖ್ಯನೆಂದುಕೊಳ್ಳುವಂತೆ ಮೋಟಪ್ಪ ಮಾತು ಆರಂಭಿಸಿದ.

Narasingaraya Shared Drama Parts To Others

ಅಪ್ಪಯ್ಯ, ನರಸಿಂಗರಾಯ ನೀಡಿದ್ದ ಮುನ್ಸೂಚನೆಯಂತೆ ಸದಾರಮೆ, ರಾಜಮಾರ್ಥಾಂಡನ ಪಾತ್ರಗಳ ವಿಷಯಕ್ಕೆ ಬರದೆ ಮೋಟಪ್ಪ ಇಂತಿಂಥ ಪಾತ್ರ ಇಂತಿಂತಹವರಿಗೆ ಎಂದು ಹೇಳುತ್ತ, ತೀಮಾನಿಸಿದ್ದನ್ನು, ಈಗ ತೀಮಾನಿಸಲೆಂಬಂತೆ ಹೇಳುತ್ತ, ಮಧ್ಯೆ ಮಧ್ಯೆ ಆದೀತ ನಾರಾಯಣಪ್ಪ, ಆಗಬಹುದ ಮುನಿಕೃಷ್ಣಪ್ಪ ಎಂದು ಕೇಳುತ್ತ, ಕೂಡಲೇ ನೀವು ಒಪ್ಪದ ಮೇಲೆ ಆಯ್ತು ಬಿಡಿ ಎಂದು ವ್ಯವಹಾರ ಚತುರತೆಯನ್ನು ಪ್ರದರ್ಶಿಸಿದ.

ಸ ರಘುನಾಥ ಅಂಕಣ; ಮಳೆಯು ಬಂದಿತು ನೆಲವು ನೀರನು ಕುಡಿಯಿತುಸ ರಘುನಾಥ ಅಂಕಣ; ಮಳೆಯು ಬಂದಿತು ನೆಲವು ನೀರನು ಕುಡಿಯಿತು

ಹೆಸರು, ಅದರ ಮುಂದೆ ಪಾತ್ರದ ಹೆಸರನ್ನು ಬರೆದುಕೊಳ್ಳುತ್ತಿದ್ದ ನರಸಿಂಗರಾಯ ಆ ಇಬ್ಬರಿಗೂ ಮಾತನಾಡಲು ಅವಕಾಶ ಕೊಡದೆ 'ಈ ಎರಡು ಹಾಳೆಗಳಲ್ಲಿ ಬರೆದಿದ್ದೇನೆ. ಎಲ್ಲರಿಗೂ ತಿಳಿಯುಂತೆ ನೀನು ಓದು ನಾರಾಯಣಪ್ಪ. ನೀನು ಚೆಕ್ಕು ಮಾಡಿಕೊಳ್ಳುತ್ತ ಹೋಗು ಮುನಿಕೃಷ್ಣಪ್ಪ' ಎಂದು ಇಬ್ಬರ ಕೈಗೂ ಒಂದೊಂದು ಪಟ್ಟಿಕೊಟ್ಟ. ನಾರಾಯಣಪ್ಪ ಓದಿ ಮುಗಿಸಿದ ಕೂಡಲೇ ಅಪ್ಪಯ್ಯ ಸರಿಯೋ, ಒಪ್ಪಿಗೆಯೋ ಎಂದ. ಕೂಡಲೇ ಮೋಟಪ್ಪ, 'ನೀವಿಬ್ಬರೂ ಎಲ್ಲರಿಗೂ ವಿಷಯ ತಿಳಿಸಿ, ಸಾಯಂಕಾಲಕ್ಕೆ ಚಲ್ಲಾಪುರಮ್ಮನ ಗುಡಿಗೆ ಬರೋಕೆ ಹೇಳಿಬಿಡಿ. ಅಲ್ಲಿ ಮುಂದಿನದು ನಿಮ್ಮಿಂದಲೆ ಆಗಲಿ' ಎಂದ.

Narasingaraya Shared Drama Parts To Others

ಅವರು ಮನಸ್ಸಿನಲ್ಲೇ ಉಬ್ಬಿದರು. 'ಸರಿ ಇರದೀರ ಏನು? ಸಾಯಂಕಾಲ ಸೇರೋಣ' ಅಂದ ನಾರಾಯಣಪ್ಪ. 'ಎಲ್ಲಾ ಸರಿಯಾಗೇನೊ ಇದೆ. ರಾಜಮಾರ್ತಾಂಡ, ಕಲಹಂಸ, ಸದಾರಮೆ ಪಾರ್ಟು...' ಅಂದ ಮುನಿಕೃಷ್ಣಪ್ಪ. 'ಅದನ ನನಗೆ ಬಿಡ್ರಿ' ಅಂದ ಮೋಟಪ್ಪ. 'ಸರಿ ಹಾಗಾದರೆ ನಾವಿನ್ನು ಬರಬೋದ? ಇವರನೆಲ್ಲ ಕಾಣಬೇಕಲ್ಲ' ಅನ್ನುತ್ತ ಅವರಿಬ್ಬರು ಎದ್ದರು. ಸ್ವಲ್ಪ ಇರಿ, ಮುನೆಕ್ಕ ಏನೋ ತರ್ತಿದ್ದಾಳೆ ನೋಡೋಣ ಅಂದ ನರಸಿಂಗರಾಯ. ಮುನೆಕ್ಕ ತಂದ ಉಪ್ಪಿಟ್ಟು, ಕೇಸರಿಬಾತನ್ನು ತಿಂದು ಆ ಇಬ್ಬರು ಖುಷಿಯಿಂದ ಹೊರಟರು. ಉಳಿದವರು ಉಳಿದ ಮೂರು ಪಾತ್ರ, ಪಾತ್ರಧಾರಿಗಳ ಕುರಿತ ಮಾತಿಗೆ ತೊಡಗಿದರು.

English summary
Narasingaraya discussed and shared drama parts to narayanappa, munikrishna and others
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X